Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪರಿಪರಿಯಾಗಿ
ಮೊರೆ ಹೋದರೂ
ಮನ ಕರಗದ
ದೇವರಂತೆ ಅನಿಸುವ ನೀನು ,,..
ವಿಧ ವಿಧವಾಗಿ ಅರಳುವ
ಮನ ಸೂರುವ
ಹೂಗಳಲಿ
ಪ್ರತ್ಯಕ್ಷವಾಗಿ ವರವನೀವನೊ ನೀನೇ .
...ಭಾರತಿ
- Bharavi
15 Dec 2016, 09:40 am
ನಿನ್ನ ಕಣ್ಣ ಕನ್ನಡಿಯಲಿ ಪ್ರತಿಪಾಲಿಸಲು,
ನಾ ಕಾಯುವೇನು ಹಗಲಿರುಳು
ನೀ ಎದುರಾಗೊ ಸಮಯವನು..
ನೀ ಕಂಡ ಕ್ಷಣದಲಿ
ಧ್ವನಿ ಬರದೆ ಹೋಗಲು
ಮೌನ ರಾಗದಿ ನಿವೇದಿಸುವೆ
ನನ್ನ ಪ್ರೀತಿಯ ನಿನ್ನೆದುರಲಿ...
- ಬಾನು ಅಡಿಗಾರ್
15 Dec 2016, 09:39 am
ಅಡಿಗಡಿಗು ರಂಗನು ಚೆಲ್ಲುತಾ
ಉಲ್ಲಾಸದಿ ನಕ್ಕ ಬಾನಂಗಳದಿ
ಕೈ ನೀಡಿದ ನೇಸರ ಜೊತೆಗೂಡಲು
ಹೊಸ ಪುಟವ ತೆರದು ಬಾಳಲಿ...
- Indushekar Chinivar
15 Dec 2016, 05:45 am
ಬರಗೆಟ್ಟೆನ್ನ ತಲೆಗೂದಲಿಗೆ ತೈಲವೆರೆದು
ಕ್ರಾಪು ತೆಗೆದೆನ್ನ ನೊಸಲಿಗೆ ಸಿಂಧೂರವಿಟ್ಟು
ಅರಳುವೆನ್ನ ಕಂಗಳನು ತನ್ನ ಕರಗಳಿಂದ
ದೃಷ್ಟಿ ತೆಗೆಯಲು ಅವ ಬಿಡಲೆ ಇಲ್ಲ....
ಹಸಿದೊಡಲ ತಡವಿ ತನ್ನೊಡಲಪಾಲನ್ನೂ
ನನ್ನೊಡಲಿಗೇ ಸುರುವಿ ,ನನ್ನವ್ವ ತನ್ಮನದ
ನಗುವ ಹಸನುಗೊಳಿಸಲು ಚಂದ್ರನ
ವೃದ್ದಿಸಲವ ಬಿಡಲೇ ಇಲ್ಲ.....
ದಿನದ ಬದುಕ ಸಣ್ಣ ಸಣ್ಣ ಖುಷಿಯ
ಅನುಭವಿಸಲು,ಹುಸಿಗೋಪದಿ
ಮುಂಗುರುಳ ಮೊಟಕಿ ಮನದ ಹರುಷದ
ಕಡಲನುಕ್ಕಿಸಲೆನ್ನವ್ವನಿಗವಕಾಶವೇ ಇಲ್ಲ....
ನಾ..ಅಸಯ್ಯ ನುಡಿದಾಗ ನನ್ನ ನಾಲೀಗೆಯ
ತಿದ್ದಲು ,ಅನ್ಯರ ಮುಂದೆ ಅಂಗೈ ಚಾಚದಂತೆ
ಸ್ವಾಭಿಮಾನದ ಮುದ್ರೆ ಸ್ಪಷ್ಟವಾಗಿ ಕಾಣಲು
ತಲೆ ನೇವರಿಸಿ ,ಎದೆಯುಬ್ಬಿಸಿ ನಡೆವುದ..
ನನ್ನವ್ವ ........ಇದನೆಲ್ಲ ಮಾಡಲು ಆ...ಅವನೆನ್ನುವ ಅವನಾ.... ದೇವರೆಂದೇಗೆ ಕರೆಯಲಿ.....?
- ಜಿ. ಶಿವಪ್ಪ ನಾಯಕ
14 Dec 2016, 10:52 pm
ಹಳೆಯ ಹಳೆಯ ನೆನಪುಗಳ
ಹೊಳೆಯ ಹರಿಸಿ ಹೊರಟವಳು!!
ಕಣ್ಣೆದುರು ಬಾರದೇನೇ
ಕಲ್ಪನೆಯಲಿ ನಿಲ್ಲುವಳು!!
ಇವಳೇ ಅವಳು ನನ್ನವಳು
ಕಿರುಬೆರಳ ಹಿಡಿದು ನಡೆದವಳು!!
ನೊಂದು ಬೆಂದ ಮನಸಿನ ಮೇಲೆ
ವಿರಹದೋಲೆ ಬರೆದವಳು!!
ಸಾಗಿ ಬಂದ ಹೆಜ್ಜೆಗುರುತ
ನೆನಪ ಉಳಿಸಿ ಹೋದವಳು!!
ಕಣ್ಣಿನಲ್ಲಿ ಕರಗದೇನೇ
ದಿನವೂ ನನ್ನ ಕಾಡುವಳು!!
ಜೊತೆಯಲಿರುವೆನೆಂದು ನುಡಿದ
ನನ್ನ ಪ್ರೀತಿ ಸತಿ ಅವಳು!!
ಹೇಳದೇನೇ ಕೇಳದೇನೇ
ನನ್ನ ಅಗಲಿ ಹೋದವಳು!!
- ಪಿ.ಜಿ.ಜ್ಯೋತಿ
14 Dec 2016, 09:01 pm
ಪ್ರತಿ ಕ್ಷಣ ಒಂದೊಂದು ಅಕ್ಷರ
ಪ್ರತಿ ದಿನ ಒಂದೊಂದು ಸಾಲು
ಸೇರಿ ಸಾಲಾಗಿ ಮೂಡಿ ಬಂದ..
ಜೀವನವೆಂಬ ಸುಂದರ ಅಧ್ಯಾಯ
ಪುಟ ತಿರುವಿದಂತೆ ಸಾಗುತ್ತ ಹೋಗುವ ಜೀವನ
ಪುಟಗಳೆಷ್ಟೋ ಅಧ್ಯಾಯಗಳೆಷ್ಟೋ..
ಈ ಪುಸ್ತಕ ಕಲಿಸುವ ಪಾಠಗಳೆಷ್ಟೋ.
ಹುಟ್ಟೆಂಬ ಮುನ್ನುಡಿ..
ಸಾವೆಂಬ ಹಿನ್ನುಡಿ
ಉಸಿರಾಡುವ ವರೆಗೂ ಬದುಕಿನ ಹಾಳೆಗಳಲ್ಲಿ..
ನಮ್ಮ ಪರಿವಿಡಿ.
ರವೀಂದ್ರ ಬಿ ಅರ್
- ರವೀಂದ್ರ
14 Dec 2016, 08:39 pm
ಈ ಕ್ಷಣ ,
ಕವಿತೆ ಹುಟ್ಟದು
ಕವಿತೆ ಕರಗಿ
ಭಾವಗಳು ರಸವಾಗುವ ಹೊತ್ತು..
ಈ ಕ್ಷಣ ,
ಮಾತು ಹುಟ್ಟದು
ಮಾತು ಮೌನವಾಗಿ
ಹೃದಯ ರಾಗ ಹಾಡುವ ಹೊತ್ತು..
ಈ ಕ್ಷಣ ,
ಸೇಡು ಹುಟ್ಟದು
ಸೇಡು ಮರೆತು
ಸ್ನೇಹ ಅರಳುವ ಹೊತ್ತು..
ಈ ಕ್ಷಣ ,
ಬೆಳಗ ಬೀಳ್ಕೊಟ್ಟು
ಸಂಧ್ಯೆ
ನಾಚಿ ಕೆಂಪಾಗುವ ಹೊತ್ತು...
- Indushekar Chinivar
14 Dec 2016, 06:19 pm
ಮುಂಗಾರಿನ ಮಳೆ ಸುರಿವುದೋ...? ಸುರಿಯದೋ....?
ಹೊಲ ಉತ್ತಾಗಿದೆ; ಬೀಜ ಬಿತ್ತಾಗಿದೆ.
ದುಂಬಿ ತಾ ಇತ್ತ ಸುಳಿವುದೋ...? ಸುಳಿಯದೋ...?
ಹೂ ಮಾತ್ರ ತಾನು ಅರಳಿ ನಗುತಿದೆ.
ಹುಡುಗ, ನೀ ಬರುವೆಯೋ...? ಬಾರೆಯೋ..?
ಮನದಲಿ ಬಯಕೆ ಕೆರಳಿ ನಿಂತಿದೆ.
- Ugnil
14 Dec 2016, 05:19 pm
ನಮ್ಮ ಗುರುದೇವರೇ ನಮ್ಮ ಪ್ರಾಣ,
ನಮ್ಮ ಉಸಿರು, ಮತ್ತು ತ್ರಾಣ,
ಆತನೇ ನಮ್ಮ ಹೃದಯದ ಮಿಡಿತ
ಸದಾ ಎನ್ನಲ್ಲಿರಲಿ ಈ ತುಡಿತ!
" ಧ್ಯಾನ ದಾತನು ನೀನೆ
ಧ್ಯಾನ ಪ್ರಕ್ರಿಯೆ ನೀನೆ
ನನ್ನ ಹೃದಯದಲಿ ಕುಳಿತು
ಧ್ಯಾನ ಮಾಡುವವ ನೀನೆ
ಧ್ಯಾನ ಕೊಡುವವ ನೀನೆ
ಧ್ಯಾನ ಪಡೆವವ ನೀನೆ
ನೀನೀಡುವ ಈ ಧ್ಯಾನದ
ಪೂಣ೯ಫಲವೂ ನೀನೆ
ಹೃದಯದಲಿ ಕುಳಿತಿರುವ
ನಿನ್ನನ್ನೇ ನೋಡುವೆ,
ಧ್ಯಾನದಲಿ ಸದಾ
ನಿನ್ನನ್ನೇ ಸ್ಮರಿಸುವೆ,
ನಿನ್ನ ಪ್ರೇಮದಲಿ ನನ್ನನ್ನು
ಕರಗಿಹೋಗಿಸು ತಂದೆ,
ನಿನ್ನ ಸ್ವರೂಪದಲಿ ನನ್ನನ್ನು
ಐಕ್ಯಮಾಡಿಕೊ ಇಂದೇ!
ಸಾಕಿನ್ನು ಪ್ರಶ್ನೆ, ಸಾಕು ಚಚೆ೯,
ಸಾಕು ಓದುವದಿನ್ನು,
ಸಾಕು ತಿಳುವಳಿಕೆ, ಜ್ಞಾನ
ಸಾಕು ತೋರಿಕೆಯ ಧ್ಯಾನ
ಒಪ್ಪಿಕೋ ನನ್ನನ್ನು
ಅಪ್ಪಿಕೋ ನನ್ನನ್ನು
ಸೆಳೆದುಕೋ ನನ್ನನ್ನು
ನಿನ್ನ ಹೃದಯಾಂತರಾಳದಲಿ
- PRADEEP PURANIK
14 Dec 2016, 02:54 pm
ಮನಸೊಂದು ಸೇಲ್ಗಿದೆ ಬೇಕಾ
ಪೈಸಾಗಿಂತ ಕಮ್ಮಿ ಬೆಲೆ ಸಾಕಾ
ಕಣ್ ಮಾತು ಕೇಳಿ
ಒಳಗೊಳಗೆ ಹೇಳಿ
ಆಗೇ ಈಗೇ ಪರದಾಡೋ
ಉಳುಕು ಮನಸಾ ಬೇಕಾ
ಪೈಸಾಗಿಂತ ಕಮ್ಮಿ ಬೆಲೆ ಸಾಕಾ
ಆಸೆ ಕಟ್ಟಿ ಹಾರಾಡಿ
ಸಿಗದೇ ಇದ್ದಾಗ ತುರಾಡಿ
ಒಳಗೊಳಗೆ ಉರಾಳಾಡೋ
ಪೆದ್ದು ಮನಸ್ಸು ಬೇಕಾ
ಪೈಸಾಗಿಂತ ಕಮ್ಮಿ ಬೆಲೆ ಸಾಕಾ
ಬೇರೆಯವರ ಬಗೆ ಮಾತಾಡಿ
ತನ್ನ ಬಗಗೆನೆ ಕೊಂಡಾಡಿ
ಅಲ್ಲಿ ಇಲ್ಲಿ ಸುತಾಡೋ
ಮುದ್ದು ಮನಸ್ಸು ಬೇಕಾ
ಪೈಸಾಗಿಂತ ಕಮ್ಮಿ ಬೆಲೆ ಸಾಕಾ
- ವೆಂಕಟೇಶ್ ದೈಶಿ ವೇಮಗಲ್
14 Dec 2016, 01:56 pm