ಈ ಚಳಿಯು ದಾಳಿ ಮಾಡುತಿದೆ ನಲ್ಲ
ಜರ್ಜರಿತವಾಗಿದೆ ಈ ನುಣುಪು ದೇಹ
ಮೈ ಕೊರೆಯುತ ಸಾಗುವ ಅವನೆದೆಗೆ
ನಿನ್ನಪ್ಪುಗೆಯ ಬಾಣವನು ಬೀಡು ಬಾ ಒಡೆಯ
ನಲುಗಬೇಕಿದೆ ನಾ ನಿನ್ನ ತೆಕ್ಕೆಯೋಳಗೆ
ಚಳಿಯ ಚಂಡಮಾರುತದ ಮೂರ್ತದೆಡೆಗೆ
ಮಗ್ಗಲು ಬದಲಿಸುವ ಮುನ್ನ ಗೆಳೆಯ
ಅವರಿಸು ಬಾ ಇನಿಯ, ತಳಲಾರೆ ನಾ ವಿರಹ ಧಗೆಯ..,
ಎಷ್ಟು ಬೇಗ ಬೆಸೆಯಿತಲ್ಲ
ಹರೆಯ ಲತೆಯ ಜಾಜು ಪ್ರೀತಿ
ಚೈತ್ರದಿರುಳ ಮರುಳುಮಾಡಿ
ಮಿಂಚುಮಿನಿಗಿದಂತ ಪ್ರೀತಿ
ಹೂವ ಲತೆಯ ಬಳ್ಳಿಯಲ್ಲಿ
ಬಳುಕಿ ನಲಿಯುವಂತೆ ಪ್ರೀತಿ
ಪ್ರೇಮವೆಂಬ ಒಲವಿನಲ್ಲಿ
ಒರತೆ ತುಂಬಿದಂತ ಪ್ರೀತಿ
'ನಲ್ಲೆ ನಿನ್ನ ಹಾಲ್ಗೆನ್ನೆಯಲ್ಲಿ
ಕೆನೆಗಟ್ಟಿದ ಮುನಿಸು ಪ್ರೀತಿ'
ನಿನ್ನ ನಯನದಂಚಿನಲ್ಲಿ
ಮಿಂಚುತಿರುವ ಹರೆಯ ಪ್ರೀತಿ
ನೀಲಿ ಸೀರೆ ನೆರಿಗೆಯಲ್ಲಿ
ಕುಸುರಿ ಮಾಡಿದಂತ ಪ್ರೀತಿ
ನಗುವ ಸ್ವರದ ಮಾಧುರ್ಯದಲ್ಲಿ
ಪ್ರೇಮದೊಲವ ಕೊಟ್ಟ ಪ್ರೀತಿ
ದೇಹ ಬೆಸೆದು ತುಟಿಯು ಕಲೆತು
ಎದುರುಸಿರಿಗೆ ಎರಗಿದಂತ ಪ್ರೀತಿ
ಆದರಗಳದರ ಸೋಕಿದಾಗ
ಮೈ ಬಿಗಿತ ಬಿಗಿದ ಪ್ರೀತಿ
ಬಿಳಿಯ ಹಾಳೆ ಕಪ್ಪು ಮಸಿಯು
ಬೆರೆತು ಕವಿತೆಯಾದ ಪ್ರೀತಿ
ಭಾವಮಳೆಗೆ ಅರಳಿನಿಂತು
ಮನದ ಮಡಿಲ ತುಂಬು ಪ್ರೀತಿ
ಇರುಳ ಮುಸುಕ ಹರಿದು ಸರಿಸಿ
ಹುಣ್ಣಿಮೆ ಬೆಳಕ ತಂದ ಪ್ರೀತಿ
'ವಿಧಿಯ ಭಾಗ್ಯ ಲಿಖಿತದಲ್ಲಿ
ನುಸುಳಿ ಬೆಳೆದ ಸಖಿಯ ಪ್ರೀತಿ'
ಋತುಗಳೆದೆಯ ಬಗೆದು ಬಸಿದು
ಹಸಿರನುಟ್ಟು ಚಿಗುರೊ ಪ್ರೀತಿ
ತಾರೆಗುಚ್ಚ ಕಚ್ಚಿ ಕಡಿದು ಮಿಡಿದ
ಸುಪ್ರಕಾಶಮಾನ ಪ್ರೀತಿ
ಸೂರ್ಯ-ಚಂದ್ರರಿರುವವರೆಗೆ
ಅಜರಾಮರ ನಮ್ಮ ಪ್ರೀತಿ...,
ಮರಳಿ ಬಾರದಷ್ಟು ದೂರಕ್ಕೆ ಬಂದಿರುವೆ
ಮತ್ತೆ ಕೂಗದಿರು ನಲ್ಮೆಯ ಒಲವೇ
ತಿರುಗು ಬರಲಾರೆ ನಾ ಆ ನಿನ್ನ ತೆಕ್ಕೆಗೆ;
ಮನಸನೊಪ್ಪಿಸಿದೆ ಸಾಕೆನ್ನಲಿಲ್ಲ
ಮೈಯನೊಪ್ಪಿಸಿದೆ ದಾಹ ತಿರಲಿಲ್ಲ
ಬದುಕನ್ನೊಪ್ಪಿಸಿದೆ ಬೇಡವೆಂದು ಎಂದು ಹೇಳಲಿಲ್ಲ
ಎಲ್ಲವು ನಿನಗೊಪ್ಪಿಸಿ ನಿರ್ಲಿಪ್ತ ನೆರಳು
ಮೌನದ ನೋವಿನ ಕಣಿವೆಯಲಿ ಸಾಗುತಿದೆ
ಎಲ್ಲರನು ದೂರವಿರಿಸಿದೆ ಮೊದಲು
ಕೊನೆಗೆ ನಡು ನೀರಿನಲ್ಲಿ ಕೈಬಿಟ್ಟ ಛಲವೇ,
ಮತ್ತೇಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬಾರಲಾರೆ ನಾ ಆ ನಿನ್ನ ತೆಕ್ಕೆಗೆ;
ಏಕಾಂಗಿ ಪಯಣ ಸಾಕೆನಿಗೆ
ನಿನ್ನ ಮಧುರ ನೆನಪಿನ ಗಾನ
ಅಂತರಂಗದ ಕುಲುಮೆಯೋಳಗೆ
ಸೋಲೆಂಬ ಜ್ವಾಲಾಮುಖಿಯ ಸಂಗಮ
ಸಂಗಾತಿ ಸಂಪ್ರಿತಿ ಸಂಕೋಲೆಯ ಸುಪುತ್ರಿ
ಏ ಒಲವೇ ನೀನೆಷ್ಟು ಕ್ರೂರಿ ನನ್ನೊಳಗೆ
ಸಾಕು ಮಾಡಿನ್ನು ಹೃದಯ ಹೊಡೆಯುವ ಪಾಠ
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;
ಮನದ ಮಹಲನು ಕೊಳ್ಳೆಯೊಡೆದ ಮೂಹಿನಿ
ಬದುಕನ್ನು ನರಕವಾಗಿಸಿದ ಯಾಮಿನಿ
ಪ್ರೇಮದ ಮುಖವಾಡವನೊತ್ತ ಅಂತರ್ಯಾಮಿ
ಯುವ ಮನಸುಗಳ ಕೊಂದ ನೋವಿನ ಧಮನಿ
ಮತ್ತೆ ಹೂ ಅರಳುವುದೆಂದು ಹಂಬಲಿಸದಿರು
ಮರುಭೂಮಿಯಲಿ ಸಿಡಿಲೊಡೆದು ಒಣಗಿ ನಿಂತ
ಏಕಾಂಗಿ ಮರ ನಾನು ಬಯಸದಿರು ಮತ್ತೆಂದು
ಮತ್ತೆಂದು ಕೂಗದಿರು ನಲ್ಮೆಯ ಒಲವೇ
ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ;
ಸಾವಿರ ಕನಸುಗಳನು ಕೂಡಿಸಿಟ್ಟಿ ಅಂದು
ಎಲ್ಲವನು ಕೊಂದು ಹೊರಟೊದೆ ಇಂದು
ಜೀವ ಪಡೆಯಲು ನೀನಗ್ಯಾವ ಅಧಿಕಾರವಿಲ್ಲ
ಇದನ್ನೆಂದು ನಾ ನಿನ್ನ ಪಾಲಾಗಲು ಬಿಡುವುದಿಲ್ಲ
ನೆನಪುಗಳ ಜೋಳಿಗೆಗೆ ದಾಸನಾಗಿರುವೇ ಅಷ್ಟೇ;
ಯುವ ಮನಸುಗಳ ತೆಕ್ಕೆಯಲಿ ಮಗ್ಗಲು ಬದಲಿಸುವ
ವ್ಯೆಬಿಚಾರವನ್ನೆ ಅಧಿಕಾರವೆನ್ನುವ ವ್ಯೆಶ್ಯೆಯೇ
ಮತ್ತೆ ಕೂಗದಿರು ನಲ್ಮೆಯ ಒಲವೇ
ಮತ್ತೆಂದು ತಿರುಗಿ ಬರಲಾರೆ ನಾ ಆ ನಿನ್ನ ತೆಕ್ಕೆಗೆ
ನಿನ್ನಿಂದ ಪಡೆದ ನೆನಪುಗಳನೆ ಹೂತು
ಕವಿತೆಗಳ ಫಲ ಪಡೆದು ನಿನ್ನದೇ ಹೆಸರಿಡುವೇ
ಸ್ತಬ್ಧವಾದ ನನ್ನೆದೆಯ ಹೃದಯ ವೀಣೆಗೆ ಕಲಿಸಿ
ಒಲವೇ ನಿನ್ನ ರಂಗ ಮಂದಿರದ ಲೀಲೆಗಳನು
ಜಗತ್ತಿನ ಮುಂದೆ ವೈಣಿಕನಾಗಿ ಫಲಿಕಿಸುವೆ
ನವಬಾವದಲಿ ನವೂದಯದ ಕಿರಣವನ್ನು
ಮತ್ತೊಮ್ಮೆ ತೆರೆದಿಡುವೆ ಕೆಂಬಣ್ಣದೊಕಳಿಯಲ್ಲಿ
ಕರೆದರು ಕೇಳಿಸದಂತೆ ಸಾಗುವೇನು ಬಿಮ್ಮನೆ
ನಡೆಯಲಾರದು ಇನ್ನು ನಿನ್ನಾಟ ಮುಗಿಸಿಬೀಡು ಸುಮ್ಮನೆ...,
ಹೋಗಿಬಿಟ್ಟಳವಳು ತಿರುಗಿ ನೋಡದೆ
ಕನಸುಗಳ ರಾಶಿಗೆ ಬೆಂಕಿಯ ಸುರಿದು
ಧಗಧಗನೆ ಹತ್ತಿ ಉರಿಯುತಿವೆ ಜ್ವಾಲೆಯಲಿ;
'ನನ್ನ ಅಂತಿಮ ಯಾತ್ರೆಯ ದಾರಿಯಲಿ'
'ಹೂಗಳ ಚಲ್ಲಿರಿ, ಅವಳು ಬಂದರು ಬರಬಹುದು'
ಬೂದಿಯಾಗುವ ಭಾವನೆಗಳ
ಅಂತಿಮ ಸಂಸ್ಕಾರದ
ಕೊನೆಯ ಕಾರ್ಯಕ್ಕೆ...,