ಕಲ್ಲು ಮಣ್ಣಿನಲ್ಲಿ ದೇವರ ಕಂಡವರು ನಾವು
ನಿರ್ಜಿವ ವಸ್ತುವಿನಲ್ಲಿ ದೇವರ ಕಂಡವರು ನಾವು
ತಮ್ಮ ಕೆಲಸದಲ್ಲಿ ದೇವರ ಕಂಡವರು ನಾವು
ಆದರೆ ಹೆಣ್ಣೆಂಬ ನಿಜ ದೇವರ ಮರೆತವರು ನಾವು
-ಅಪ್ಪಣ್ಣಗೌಡ ಇಡಕನಹಳ್ಳಿ
ಅಂದಗಾತಿ ಚೆಲುವಮ್ಮ ನಗುವಿನೋಡತಿ ನೀನಮ್ಮ
ನಿನ್ನ ಅಂದ ಹೋಗಳುವ ಸಂತ ನಾನಮ್ಮ
ಅಂದಗಾತಿ ಚೆಲುವಮ್ಮ ಚಂದ್ರಮುಖಿ ನೀನಮ್ಮ
ನನ್ನ ಪ್ರೇಮ ಹೃದಯದ ಗುಡಿಗೆ ಕಳಸ ನೀನಮ್ಮ
ಅರಳಿ ನಿಂತ ಗುಲಾಬಿಯಲಿ ನಿನ್ನ ನಗುವ ಕಂಡೆನಮ್ಮ
ಪನ್ನಿರಿನಭಿಷೇಕದ ಮಕರಂದಕೆ ಲಜ್ಜೆ ನೀನಮ್ಮ
ಅರಳೊ ಮಲ್ಲಿಗೆಗೆ, ಮೀನುಗೊ ತಾರೆಗೆ
ಸುರಿಯೋ ಝರಿಮಳೆ ಹನಿಗೆ ನಿನ್ನ ಹೆಸರೇ ಚಂದವಮ್ಮ
ನಯನಗಳಲಿ ನಲಿಯುತಿರುವ ಮುಂಜಾವಿನಲ್ಲಿ
ನಿನ್ನ ಗಲ್ಲದ ಕೆಂಬಣ್ಣಕೆ ರಂಗೊಲಿಯ ಚಿತ್ರಾವಳಿ ಅಲ್ಲಿ
ವೀಣೆಯು ಫಲುನಿಕಿದೆ ನೀ ನುಡಿಯುತಿರಲು
ಕಾಲ್ಗೆಜ್ಜೆಯ ಗಲಿರು ಗಲಿರು ನಾದ ನೀ ನಡೆದಾಡುತಿರಲು
ಶಶಿಧರನ ನಾಡಿನಲಿ ತಾರೆಗಳೆ ಇಲ್ಲ
ನಿನ್ನ ಕಾಲ್ಗೆಜ್ಜೆಯಲಿ ಸೇರಿ ಸಪ್ತಸ್ವರ ಹೊಮ್ಮುತಿವೆಯಲ್ಲ
ಪಾದವನಿಟ್ಟೊಡೆ ಪುಳಕಿತ ವಸುಂಧರೆಯ ತನು ಮನ
ಸ್ಪರ್ಷದ ಪರಿಯೇನು ಇದು ಝೇಲ್ಲನೆ ಜೈಂಕಾರ ಗಾನ
ಕೈ ಬಳೆಯಲ್ಲವದು ಗಂಧರ್ವ ಲೋಕದ ಲಹರಿ
ಹಂಸದ ನಡಿಗೆಯ ಬಳುಕುವ ನವಿಲಿನ ಕುವರಿ
ಕಲರವದೊಳು ನದಿಯು ಅರಿಯುತಿದೆ ಕಂಡು
ಇವಳೊಲವಿನ ಮಾಘ ಮಾಸದ ಚಿತ್ರಾವಳಿಯ ಹಿಂಡು
ಮನಸೇ ನೀನೇಕೆ ಹೀಗೆ
ಕನಸುಗಳ ಮೂಟೆಯ ಹೊತ್ತು ನಿಂತಿಹೇ ನಾನು
ನೋವಲಿ ನಿಂತು ಕನಸುಗಳ ಕಮರಿಸುತಿಹೆ ನೀನು
ದೂರಾದ ಮನಸು ಕನಸುಗಳು ಕಾಡುತಿಹುದೇನು?
ನನ್ನಲಿ ಮೂಡುತಿರುವ ನವ ಕನಸುಗಳಿಗೆ ಹೇಗೆ ಉತ್ತರಿಸಲಿ ನಾನು.
ದೂರ ಸರಿದು ನಿಂತ ಮನಸು ಕನಸುಗಳ ಹಂಗೇತಕೆ ನಿನಗೆ
ನೆಮ್ಮದಿ ಬೇಡವೆ ನನಗೆ ನನ್ನಳೊಗೊಂದು ಸ್ಥಾನವ ಕೊಟ್ಟಿಹೆನು ನಿನಗೆ
ಕೊಡುವೆಯ ಒಂದಿಷ್ಟು ಜಾಗ ನನ್ನಲಿ ಮೂಡುತಿಹ ಹೊಸ ಜೀವನ ಅಲೆಗೆ
ನೀ ನನಗೆ ಬೇಡವೆಂದು ದೂರ ತಳ್ಳಿದರೂ ಬಂದು ಕಾಡುವೆ ಏಕೆ ನನಗೆ
ನಿನ್ನೊಳಗಲ್ಲ ನಾನು, ನನ್ನೊಳಗೆ ನೀನು
ಕೊಡದಿದ್ದರೆ ಬಿಡೆನು, ಬಿಟ್ಟು ಸೋಲಲಾರೆನು
ದೂರ ಸರಿದ ಮನಸು ಕನಸುಗಳ ಹಂಗನು ಬೇಡೆನು ನಾನು
ಅವುಗಳ ನೋವಿನಲಿ ಬಾಡುತಿಹೆವು ನಾನು ನೀನು
ಹೊಸತು ಜೀವ ಸೆಲೆಗೆ ಜೊತೆಗಾರನು ನಾನು
ಕನಸುಗಳ ಗೆದ್ದು ತೋರಿಸುವೆ ನಾನು , ನೋಡುತಿರು ನೀನು
ಅಂದೆ ನೋವು ಬಂಧನದ ಬಿಡುಗಡೆ ನಿನಗೆ
ನವ ಕನಸು ಮನಸುಗಳೊಂದಿಗೆ ಪ್ರೀತಿಯ ಭಾವ ಬಂಧನ ನನಗೆ
ಯಾರ ಬಯವು ಇಲ್ಲದೆ ಹಾರುವ ಹಕ್ಕಿಯನು
ಕಲ್ಲು ಬಿಸದೆ ಬಡಿದುರುಳಿಸಿದಂತೆ ನನ್ನ ಬಾಳು
ನೆಲಕೆ ಬಿದ್ದು ನರಳುವಾಗ ಕನಿಕರವು ಬರಲಿಲ್ಲವೆ?
ಕಾಲಿನಲ್ಲಿ ತುಳಿಯುವುದು ಹೆಣ್ಣೆ ನಿನಗೆ ತರವೇ?
ಕಣ್ಣೀರಿಗೆ ಬೆಲೆ ಇಲ್ಲ ನನಗೂ ತಿಳಿಯುತಿದೆ ಈಗ
ಕೊಳ್ಳುವವರಿಲ್ಲ ಅದನಾರು ಇಲ್ಲಿ ಎಂದು
ಆದರು ಜಾರುತಿವೆ ನಿನ್ನನೊಮ್ಮೆ ಕಾಣಲೆಂದು
ವಿರಹದೂರಿನ ಹಂತ್ಯ ದಾರಿ ತಿರುವಿನಲ್ಲಿ
ನೆನಪುಗಳ ನೋವಿನ ಮೆರವಣಿಗೆ
ಸಾಗುತಿದೆ ಸ್ಮಶಾನದಾರಿ ಸ್ತಬ್ದ ಸ್ತಬ್ದ
ನೀ ಬಳಸಿ ಹೋದ ಹೃದಯ ವೀಣೆ
ಮಿಡಿಹದಿನ್ನು ಪ್ರೇಮ ವೀಣೆ ನಿನ್ನ ಹಾಣೆ
ಯಾವ ಜನ್ಮದ ಸೇಡು ನಿನ್ನದೇಳು
ಯಾವ ಜನ್ಮದ ಪಾಪ ನನ್ನದೇಳು
ಮಿಂಚಿನಂತೆ ಬಂದು ಸಿಡಿಲಾಗಿ ಎರಗಿದವಳೆ
ಹೆಣ್ಣು ಮಾಯೆ ಎಂಬುವುದನು ಧೃಡಪಡಿಸಲೆಂದೆ ಬಂದೆಯಾ?
ಹೋಗುದೊದೆ ಹಿಡಿ ಮಣ್ಣನ್ನಾದು ಹಾಕಿ ಹೋಗು
ಅಂತ್ಯಸಂಸ್ಕಾರದಲ್ಲಿ ನೆನಪುಗಳನ್ನು ಊತು ಹೋಗು
ಘೋರಿ ಕಟ್ಟಬೇಕು ನೀನು, ಅದರ ಮೇಲೆ ನಿನ್ನ ಹೆಸರು
ನೀನೆ ಬರೆಯಬೇಕು ಪ್ರೀಯೇ, ನನ್ನ ನಿನ್ನ ಪ್ರೇಮ ಕಥೆಯ
ಬಂದವರಿಗೆ ಹೇಳಬೇಕು, ಪ್ರೀತಿಯ ಆಳ ಎಷ್ಟೆಂಬುವುದನು...,