Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಏನ ಬರೆಯಲಿ ಎಲ್ಲ ಬರೆದಾಗಿದೆ,
ಮುಂದಿನ ಕೋಟಿ ಯುಗಕ್ಕಾಗುವಷ್ಟು,
ಬರೆದದ್ದು ಓದದೇ.................... ಹೋಗಿಬಿಟ್ಟರೆ,
ಜೀವಂತ ಹಡೆದರೂ ಹೋದ ಮಗುವಿನಂತೆ,
ಅರ್ಥಗಳೆಲ್ಲಾ ಅನರ್ಥ, ಅನರ್ಥಗಳೇ ಸಹಿಷ್ಣುವಾಗಿ,
ಬರೆದವನಿಗೂ ಪಾಠಕನಿಗೂ ಹಿಂಸೆ,
ಹಾಗೆಂದು ಸುಮ್ಮನಿರಲು ಭಾಷೆ ಬಿಡದಲ್ಲಾ,
ವಿಚಾರಗಳ ಸಂತೆಯಲಿ,
ಬಡಬಡಿಕೆಯ ವ್ಯಾಪಾರ,
ಮೌನವಂತೂ ಬಹು ತುಟ್ಟಿ,
ಅದಕ್ಕೇ ಬರೆದೇ'ಬಿಡು'ವೆ, ನೀ ಓದಿ 'ಬಿಡು,'
ಇಬ್ಬರೂ ಬಿಟ್ಟು ನೋಡೋಣ
ಭಾಷೆ ಹೇಗೆ ಓಡುತ್ತದೆಂದು,
ಕೊನೆಗೆ ನೀನೂ ಬರೆದು ’ಬಿಡು’
ನಾನೂ ಓದಿ ’ಬಿಡುವೆ’.
ಬಿಟ್ಟು ಹಿಡಿದು ಬಿಟ್ಟು ಹಾರಿಸುವ
ಕನ್ನಡದ ಬಾವುಟ,
ಜೈ ಭಾರತ ಜನನಿಯ ತನುಜಾತೆ,
ಜೈ ಹೇ ಕರ್ನಾಟಕ ಮಾತೆ.
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
16 Dec 2016, 11:27 pm
ಪ್ರತಿ ಕ್ಷಣವೂ ಹುಟ್ಟು
ಜೊತೆಗೆ
ಸುಖ-ದುಃಖ
ಕಷ್ಟ-ಸುಲಭ
ನೋವು-ನಲಿವು
ದ್ವಂದಗಳಾಚೆ
ಬೆಳೆವುದೇ
ಜೀವನ
ಆಜೀವನದೊಡತಿ/ಒಡೆಯ
ನೀನಾಗು
- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ
16 Dec 2016, 11:22 pm
ಮುದ್ದಾಗಿ ನಾ ಕರೆಯುವೆ ನಿನ್ನ ಫಾತಿಮಾ
ನೀ ನನ್ನ ಅರಿತು ಮುದ್ದು ಮಾಡು ನನ್ನ ಪ್ರತಿಮಾ
ನೀನೇ ಕನಸು , ನೀನೇ ಮನಸು
ದಯಮಾಡಿ ನನ್ನ ಪ್ರೀತಿಸು....
- Ranganath KS
16 Dec 2016, 10:10 pm
ನಿನ್ನ ಕಂಡ ಆ ಕ್ಷಣ
ತನಿದು ಕುನಿಯಿತು ನನ್ನ ಮನ
ಅರಿಯದೆ ಹೋದೆ ನಿ ನನ್ನ ಪ್ರೀತಿಯನ್ನ
ನಿನಗಾಗಿ ಹಂಬಲಿಸುತ್ತಿದೆ ಈ ಮನ
ನಿನ್ನದೇ ನೆನಪು ಪ್ರತಿ ಕ್ಷಣ
- ಯಶ್ ಗೌಡ - S.B
16 Dec 2016, 09:20 pm
ದೇಹ ಸುಕ್ಕಾಗಿಹ
ಈ ಇಳಿ ವಯಸ್ಸಿನಲ್ಲಿ
ಉರುಗೋಲ ಹಿಡಿದು
ನಾ ನಡೆವುದೆಲ್ಲಿ!!
ಗಡಗಡನೆ ನಡುಗುವ
ಈ ದೇಹದೊಡಲಲ್ಲಿ
ಮಿಡಿಯುತಿಹುದು ಹೃದಯ
ನವ ಉಲ್ಲಾಸ ಚೆಲ್ಲಿ!!
ಸಂಸಾರ ಸಾಗರವ
ಈಜಿ ದಡ ಸೇರಿದ ಮೇಲೆ
ಕೊನೆಯ ಹಂತದ ಪಯಣ
ನಿನ್ನ ಜೊತೆಯಲ್ಲಿ!!
ಹರೆಯದಲಿ ಉದಿಯಾದ
ಮೊದಲನೆಯ ಪ್ರೇಮವದು
ಬಲಿಯಾಯಿತು ಅಂದು
ಜಾತಿಗೆ ಅಂಜಿ!!
ತಡೆಯುವರು ಯಾರಿಹರು
ಈ ನಮ್ಮ ಮಿಲನವನ್ನು
ಇಂದು ಸಂದಿಸುವೆ ನಿನ್ನ
ಬಂದು ಸೇರಿಕೊ ನನ್ನ!!
ಉರುಗೋಲ ಬದಿಗೆಸೆದು
ಕರದಲ್ಲಿ ನಿನ್ನ ಹಿಡಿದು
ನನ್ನ ಎದೆಗೊಮ್ಮೆ ಒರಗಿಸಿ
ಬಿಡಲು ಒಲ್ಲೆ!!
ಇಂದು ತಳೆಯಲಿದೆ
ಪ್ರೀತಿಯು ಮರುಜನ್ಮ
ಎಂದು ಬರುತಲಿದೆ
ಮತ್ತೆ ಚಿಗುರಿದ ಪ್ರೀತಿ!!
- ಪಿ.ಜಿ.ಜ್ಯೋತಿ
16 Dec 2016, 06:34 pm
ಒಲವೆ..
ಎದೆಯಲಿ ಮಿಂದ
ಭಾವ ಕುಂಚವು
ಮನದ ಭಿತ್ತಿಯಲಿ
ನಿನ್ನ ಚಿತ್ತಾರ ಬಿಡಿಸಿ
ಕಾತರದಿ ಕಾದಿದೆ
ಇಳಿ ಸಂಜೆಯಲಿ...
- Indushekar Chinivar
16 Dec 2016, 06:29 pm
ನಾ ಬರೆಯುವೆ ಕವಿತೆ
ಕವಿತೆಯಲ್ಲಿರುವುದೇ ಜೀವನದ ಹಣತೆ
ದಾರಿ ದೀಪವಾಗಲಿ ಈ ಬೆಳಕಿನ ಹಣತೆ
ಸದಾ ನೆನಪಾಗಲಿ ಹಣತೆ-ಕವಿತೆ!!
----ಪ್ರಸನ್ನರಾಮನಗರಂ.
- ಪ್ರಸನ್ನರಾಮನಗರಂ
16 Dec 2016, 05:51 pm
ಓ ಶ್ವೇತಕನ್ಯೆ ಕಲಿಸುವೆನು ಬಾರೆ ಶೃಂಗಾರ ಪಾಠವನು
ಮನಧನ್ಯೆ ಅರಿಯೇ ನನ್ನೆದೆಯ ಪ್ರೇಮದಾಟವನ್ನು
ಜಗವೆ ಸಾಗುತಿದೆ ನೊಡು ಪ್ರೀತಿಯ ದಾರಿಯಲಿ
ನೀ ನೋಡು ಬಂದು ಪ್ರೀತಿಯ ಅಂದರದಲಿ
ಲೇಖನಿಯು ನಾನು ಸ್ವಚ್ಛ ಬಿಳಿ ಹಾಳಿ ನೀನು
ಒಲವಿನ ಶಹರಿಯಲಿ ಬರೆಯೋಣ ಪ್ರೇಮ ಕವನ
ಸಮ್ಮಿಲನದ ಛಾಯೇ ಸಂಮೋಹನದ ಹೂವೇ
ಹೃದಯ ಮಂದಿರದೊಳು ನಲಿದಾಡು ಬಾರೆ ನವಿಲೆ
ಅಲ್ಲೆಲ್ಲು ನಿಂತು ಹುಡುಕಾಡದಿ ಒಲವೇ
ಸಿಗಲಾರದೆಂದು ನನ್ನೆದೆಯ ಚಿಲುಮೇ
ಬಳಿ ಬಾರೆ ಸಖಿಯೇ ತೊರುವೇನು ಮನವೇ
ನನ್ನಂತರಾಳದ ಒಲವುಕ್ಕುವ ಕುಲುಮೇ
ಬದುಕೊಂದು ಕದನ ನಿನ್ನಲ್ಲಿ ಸುದಿನ
ಹೊರಾಡಿ ಪಡೆವೇ ಸಮ್ಮತಿಯ ಕವನ
ಬದುಕೆಂಬ ಬರಡು ನನ್ನಲ್ಲಿ ಇವುದು
ಒಲವಿನ ಪನ್ನಿರ ತಂದು ಮಿಂಚನ್ನು ಸುರಿಯೇ
ಮುಸ್ಸಂಜೆಯ ಸಮಯ ಭಾನೆಲ್ಲಾ ರಂಗಾಯಣ
ಕಂಡೆ ನಿನ್ನ ನಾ ಅಲ್ಲೆ, ಆ ದಿನ ನನ್ನೆಗೆ ರಿಂಗಣ
ಒಲವೆಂಬ ವೀಣಿ ನೀ ಮಿಟು ಮದನೆ
ಶೃಂಗಾರ ಕವನ ಹೊಮ್ಮುವುದು ಕೇಳೆ
ನಾನಿಲ್ಲಿ ಕಾಯುವೆನು ನಿನ್ನಾಗಮನದ ಕ್ಷಣಕೆ
ಬದುಕೆಂಬ ಗುಡಿಯ ದೇವತೆಯ ಮನಕೆ
ನೀ ಅಲ್ಲಿ ನನ್ನಾತ್ಮದೊಲುಮೆ ನಿನ್ನಲ್ಲಿ
ನಾ ಇಲ್ಲಿ ಮೂಕ ವಿಸ್ಮಯ ನಿನ್ನಾಗಮನದಿ ನಾ ತನ್ಮಯ...
-ಸಿದ್ದುಯಾದವ್ ಚಿರಿಬಿ...,
- ಸಿದ್ದುಯಾದವ್ ಚಿರಿಬಿ
16 Dec 2016, 03:41 pm
ಎಳೆ ಬಿಸಿಲೆ
ಸುಡು ಬಿಸಿಲೆ
ಹೊಂಬಿಸಿಲೆ
ಚುಂಬಿಸಲೆ ನಾ
ಚಿಗುರ ನೀ ಚುಂಬಿಸುವ ಮುನ್ನ
- Rashu
16 Dec 2016, 12:01 pm
ನೀನೊಂದು ಕುಂಚವಿರದೆ
ಮೂಡಿದ ಅದ್ಭುತ ಚಿತ್ರ ಕಲೆ
ನೀನೊಂದು ಉಳಿಯಿರದೆ
ಮೂಡಿದ ಶ್ರೇಷ್ಟ ಶಿಲ್ಪ ಕಲೆ ,
ಹೂವ ನೋಡಿದೊಡನೆ ಎಂದಿತು ಕಣ್ಗಳು
ನನ್ನಂಗಳದಿ ಪನ್ನೀರ ಚಿಮುಕಿಸಿ
ಚೆಂದದ ಚಿತ್ತಾರ ಬಿಡಿಸಿ
ಶ್ರೇಷ್ಟ ಭಾವನೆಗಳ ಸ್ಪುರಿಸಿ
ಬಾಳ ಬೆಳಗುವ ನೀನು
ನನ್ನ ಪಾಲಿನ ಭಾಗ್ಯ ದೇವತೆ
ಎಂದು ಕಣ್ಣ ಮುಚ್ಚಿ ಹೂವಿಗೆ
ಕೃತಘ್ನತೆ ಅರ್ಪಿಸಿತು ಒಳ ಮನಸ್ಸು ...
---ಭಾರತಿ
- Bharavi
16 Dec 2016, 09:03 am