Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತೇರ್ಗಡೆ .

ಹಸಿರು, ಹೂವು , ಎಲೆ
ನೀನೊಂದು ಪಾಠಶಾಲೆ
ದಿನಕೊಂದು ಕಲಿಕೆ ..
ಬದುಕುವ ಕಲೆ
ನಿನ್ನಿಂದ ಕಲಿಯಲಿದೆ ...
ಇದ್ದು . ಇಲ್ಲವಾಗುವಲೆ
ಹಸಿರ ಹಸನು ಬಾಳ್ವೆ ,
ಇರುವ ಇಲ್ಲದಿರ ನಡುವೆ
ಹಸನ್ಮುಖದ ಸ್ಥಿತಪ್ರಜ್ಞೆ ..
ಇದನೆ ಇವೆಲ್ಲವನೆ
ಕಲಿಸಿ ಮಾಡಿಬಿಡು ನನ್ನ ತೇರ್ಗಡೆ ...

---ಭಾರತಿ

- Bharavi

18 Dec 2016, 08:02 am

ನಿರೀಕ್ಷೆ

ನೀ ಮನದೊಳಗೆ ಬಂದ
ಆ ಘಳಿಗೆಗೆ ನಿನ್ನದೇ ಹೆಸರಿಡುವೆ
ನಿನ್ನದೆ ಬಿಂಬವ ಪ್ರತಿಬಿಂಬಿಸುವೆ...
ಹ್ರುದಯ ತುಂಬಿದ ಪ್ರೀತಿಯ ನಿನ್ನೊಲವಿಗೆ
ಬರೆಯುವೆ..ನನುಸಿರಿನ ಉಸಿರೊಳಗೆ, ನಿನ್ನೆಸರ ಹೆಸರೊಳಗೆ ನಾ ಸೇರಲು
ಸಮ್ಮತಿಸುವೆ...ಯಾ?

- Rashu

17 Dec 2016, 09:33 pm

ಕವನ

ಮನದ ತುಂಬಾ ಕವನ
ಮನನವಾಗಿದೆ ಕವನ
ಶ್ರಂಗರಿಸಿದೆ ಭಾವನೆಯ ತನನ
ಹೊಸ ರೂಪ ಪಡೆದಿದೆ ಜೀವನ
ಅದಕ್ಕೆ ಸ್ಪಷ್ಟ ಕಾರಣ,
ನಾ ಬರೆಯುವ ಕವನ.......

-ಚಿನ್ನು ಎಸ್ ರಾಗಿ ಸವಣೂರ

- ಚಿನ್ನು ಎಸ್. ರಾಗಿ

17 Dec 2016, 08:12 pm

ನನ್ನವ್ವ

ಅಮ್ಮನ ಒಡಲು
ಸ್ವರ್ಗದ ಮಡಿಲು
ನನ್ನವ್ವನ ನಾ ಕಾಣಲು
ಅದುವೇ ನನಗೆ ಹರುಶದ ಹೊನಲು

ಯುವಾ ಗೌಡ

- ಯಶ್ ಗೌಡ - S.B

17 Dec 2016, 01:44 pm

ಭರವಸೆಯ ಪ್ರೀತಿ

ಕಡಲಿನ ಅಲೆಯಲ್ಲಿ
ಮರೆಯಾಗಿ ನೀನಿರಲು
ಭರವಸೆಯ ಬಲೆ ಹಾಸಿ
ಕಾದಿರುವೆ ದಡದಲ್ಲಿ!!

ನಿಶ್ಯಬ್ಧವಾದ ಪ್ರೀತಿ ಮೋಡಿ
ಕೊಂಡು ಬಂತು ನನ್ನನು ಇಲ್ಲಿ
ಏಕಾಂಗಿಯಾಗಿ ಕಾದು ಕುಳಿತೆ
ನಿನ್ನನು ನಾ ಇಲ್ಲಿ!!

ಸುರಿದು ಬಂತು ನನ್ನ ಎದುರು
ಒಂಟಿತನದ ಜಡಿ ಮಳೆಯು
ಕೊಡೆಯ ಹಿಡಿಯೋ ಕರಗಳದು
ಕಡಲ ಒಡಲಲಿ ಅವಿತಿಹುದು!!

ಏಕಾಂತದ ಈ ಮೌನ
ಪ್ರತಿಧ್ವನಿಸುತ್ತಿದೆ ಈ ಸಂಜೆ
ನೊಂದು ಬೇಡಿದೆ ಅಲೆಗಳ ನಾ
ಮರಳಿ ಕೊಂಡು ಬಾ ನನ್ನವಳ!!

- ಪಿ.ಜಿ.ಜ್ಯೋತಿ

17 Dec 2016, 12:03 pm

ನೆನಪು

ಕಾಡುತಿರುವ
ನಿನ್ನ ನೆನಪುಗಳಿಗೆ
ಇನ್ನೆಲ್ಲಿ ನೀಡಲಿ
ನಾ ಜಾಗವನು...

ಹೃದಯವಂತೂ
ಸುಟ್ಟು ಬೂದಿಯಾಗಿದೆ
ಉರಿಯುತಿರುವ ನಿನ್ನ
ನೆನಪುಗಳು ಕಾರಣ...

✍ಆ...C.

- Ashik

17 Dec 2016, 11:02 am

ಕಾವ್ಯ ಕನ್ನಿಕೆ

ಸ್ನಿಗ್ಧ ರೂಪಿನ ಚೆಲುವೆ
ಹಾಡಲೆ ನಿನಗೆ ಭಾವಗೀತೆ ..
ಸೂಜಿಗಲ್ಲಿನ ನಿನ್ನ ಸೆಳೆತಕೆ
ಹಾಡಬೇಕೆನಿಸಿದೆ ಮಧುರಗೀತೆ..
ಸುಶ್ರಾವ್ಯ ಸುಪ್ತ ಸ್ವರಕೆ
ಗುಣುಗುಣಿಸಿದೆ ಹೃದಯಗೀತೆ..
ಕಾವ್ಯ ಕನ್ನಿಕೆ ನೀನೇ
ನನ್ನಂತರಂಗದ ಮೌನ ಗೀತೆ ...

_ಭಾರತಿ

- Bharavi

17 Dec 2016, 07:14 am

ನೆನಪು

ನೆನಪ್ಪಿನ ಮನೆ ಕಟ್ಟಿರುವೆ..
ನಿನ್ನ ಜೋತೆಗಿನ ಮಧುರಕ್ಷಣಗಳೊಂದಿಂಗೆ
ನೀ ಸಿಕ್ಕರೂ ಸಿಗದಿದ್ದರೂ
ನೀನೇ ನನ್ನ ಉಸಿರೂ!!

- Ranganath KS

17 Dec 2016, 07:10 am

ದೇವರ..? ಯಾತನೆ-ಯಾಚನೆ..!

ನಾನು ಶಿವ..,ಶಿವ
ನಾನೇ ವಿಷ್ಣು, ನಾನೇ ಬ್ರಹ್ಮ
ಮಹಾಗ್ರಂಥ,ಕಾವ್ಯ,ವೇದಗಳೆಂಬ
ಪಹಣಿ-ಪಟ್ಟಗಳಲ್ಲಿ
ದಾಖಲಾಗಿರುವೆನು ನಾನು
ನಾಮಾಕವಾಸ್ತೆಗೆ ಜಗದೊಡೆಯನೆಂದು..


ಹೊನ್ನ ಕಳಸವ ಹೊತ್ತ,
ಬಂಗಾರದ ಬಾಗಿಲಿನ
ಕತ್ತಲ ಕೋಣೆಯ ಒಳಗೆ(ಗರ್ಭಗುಡಿ)
ಕೂಡಿ ಹಾಕಿರುವರು ನನ್ನ,
ಬದುಕಲಾರೆನು ನಾನು, ಇಲ್ಲಿ
ಹೊರಗೆ ತನ್ನಿರಿ ಬೇಗ,
ಯಾಚಿಸುವೆನು ನಿಮ್ಮ.

ಧೂಪ-ದೀಪ,ಅಗರಬತ್ತಿಗಳ ಕೆಟ್ಟ ಹೊಗೆ
ಕುಡಿದು ಅಸ್ತಮವಾಗಿದೆ ನನಗೆ.
ಶಂಖ-ಜಾಗಟೆಗಳ ಶಬ್ದಗಳಲ್ಲದೆ
ಬೇರೆ ಕೇಳಿಸದು ಕಿವಿಗೆ,
ಅಭಿಷೇಕಗಳಲ್ಲಿ ಮುಳುಗಿದ್ದರಿಂದ ಶೀತ,ಚರ್ಮರೋಗ.
ಸಿಹಿಯಡುಗೆ ನೈವೇದ್ಯವ ಉಂಡು ಡಯಾಬಿಟಿಸು,
ವಡೆ,ಕಡುಬು,ಮೊದಕಗಳ ತಿಂದು,
ಅಂಡು ದೊಡ್ಡದಾಗಿದೆ ನಡೆಯಲಾಗುತ್ತಿಲ್ಲ.

ನಿಮ್ಮ ಪರಿಚಿಯದ ವಿಳಾಸ ಕೊಡಿ
ಬದುಕಲಾರೆನು ನಾನು ಇಲ್ಲಿ,
ಹೊರಗೆ ತನ್ನಿರಿ ಬೇಗ,
ಯಾಚಿಸುವೆನು ನಿಮ್ಮ.

ಉದಯಿಸುವ,ಮುಳುಗವ ಸೂರ್ಯನ ನೋಡಬೇಕಿದೆ ನಾನು.
ಹಕ್ಕಿಗಳೊಂದಿಗೆ ಸೇರಿ ಲೋಕ ಸಂಚರಿಸಬೇಕಿದೆ ನಾನು.
ಮಕ್ಕಳೊಂದಿಗೆ ನಕ್ಕು- ನಲಿದು ಆಟವಾಡಬೇಕಿದೆ ನಾನು.
ಅಳುವ ನನ್ನವರ ಕಣ್ಣ ಒರೆಸಬೇಕಿದೆ,
ಬಡವನುಣ್ಣುವ ಅನ್ನದೊಳಗೆ ಅಡಗಿ ಕುಳಿತು ಹಸಿವ ತಣಿಸಬೇಕಿದೆ ನಾನು.

ಬದುಕಲಾರೆನು ಇಲ್ಲಿ,
ಹೊರಗೆ ತನ್ನಿರಿ ಬೇಗ,
ಯಾಚಿಸುವೆನು ನಿಮ್ಮ.

ಬನ್ನಿ,ಬನ್ನಿರಿ ಬೇಗ,
ಮಡಿ-ಮೈಲಿಗೆಗಳಿಗೆ ಕಿವಿಗೊಟ್ಟು,
ಅಸ್ಪೃಷ್ಯನಂತೆ ನೋಡ ಬೇಡಿರಿ ನನ್ನ.
ಕೈಮುಗಿದು ಬೇಡುವೆನು.
ಸ್ವೀಕರಿಸಿ ನನ್ನ ನಿಮ್ಮ ಮನದೊಳಗೆ.

ನಾನು ಶಿವ...ಶಿವ
ನಾನೇ ವಿಷ್ಣು, ನಾನೇ ಬ್ರಹ್ಮ.
ಬದುಕಲಾರೆನು ನಾನು ಇಲ್ಲಿ
ಬದುಕಿಸ ಬನ್ನಿರಿ ನನ್ನ.
ಹೊರಗೆ ತನ್ನಿರಿ ಬೇಗ.
ಯಾಚಿಸುವೆನು ನಿಮ್ಮ...



ಪ್ರವೀಣ್ ವಿಪ್ರ

- ವಿಪ್ರ

16 Dec 2016, 11:40 pm

ವಿಪರ್ಯಾಸ

ಏನಿದೀ ವಿಪರ್ಯಾಸ..
ಕಾವೇರಿ ತಾಯಿಗೆ ಸಾಲು ಸಾಲಿನ ಸಂಕಟ..

ಬೇಧ- ಭಾವಗಳ ಸುಳಿವಿರಬಾರದೆಂದು
ನ್ಯಾಯ ದೇವತೆಯು ತನ್ನ ಕಣ್ಣ
ಬಟ್ಟೆಯೊಳಗೆ ಸೆರೆ ಮಾಡಿಕೊಂಡಳು...
ನ್ಯಾಯಕ್ಕೆ ಮುಸುಕು ಹಾಕಿಹರಿಲ್ಲಿ,
ಅನ್ಯಾಯಕ್ಕೆ ಗೆಲುವ ಉಣಬಡಿಸಲು..

ಏನಿದೀ ವಿಪರ್ಯಾಸ,
ಕಾವೇರಿಗೇ ಕೇಸಾ???

ಬತ್ತಿ ಹೋಗುತಿದೆ,
ಕಾವೇರಿಯ ಒಡಲು...
ಸತ್ತು ಬರಿದಾಗುತಿದೆ,
ಕಾವೇರಿಯ ಮಡಿಲು..

ಆದರೂ ಕರುಣೆಯಿಲ್ಲ,
ಸರಕಾರವು ಮಿಡಿಯಲೇ ಇಲ್ಲ.. //2//

ಶಾಂತಿಯ ಪಾಲಿಸಿದರೆ ನ್ಯಾಯದ ಕೊಲೆ,
ಪೈಪೋಟಿಗೆ ನಿಂತರಲ್ಲೇ ರಕುತದಾ ಹೊಳೆ..

ಕಾವೇರಿ ಮಡಿಲು ಬರದೊಳ ಬೀಳುತಿದೆ..

ಬೇಡದ ಮನಸಿನಲ್ಲಿ ಕಾವೇರಿ,
ಕೆ.ಆರ್.ಎಸ್ ಗೆ ವಿ.ಆರ್.ಎಸ್
ಕೊಡುವ ಸಂಭವ ಮೂಡಿದೆ.

ಯಾರೋ ದೋಚುತಿಹರು
ಕನ್ನಡದ ಆಸ್ತಿಯಾ..
ಸುಮ್ಮನೆ ಬಿಡಬೇಕೆ
ಈ ದುರಾಸೆಯಾ..

ಕಾವೇರಿ ಬೆಡಗು ಸೊರಗಿ ಹೋಯಿತಿನ್ನು,
ಮರುಕವೇ ಬಾರದೆ!! ನರಕವೇ ರೈತರಿಗಿನ್ನು..

- ವಿ.ತ್ರಿವೇಣಿ ಪಾಂಡವಪುರ

- ವಿ. ತ್ರಿವೇಣಿ ಪಾಂಡವಪುರ

16 Dec 2016, 11:31 pm