Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನನ್ನೆಲ್ಲಾ ಭಾವಗಳೂ
ಪರವನೆಲ್ಲ ತ್ಯಜಿಸಿ
ನಿನ್ನಲ್ಲೇ ಲೀನಗೊಂಢು
ತನ್ನೆಲ್ಲಾ ಜಗವು ನೀನೇ-
-ಎಂಬ ಪರವಶತೆಯಲಿ ಬದುಕುತಿದೆ
ಆದರೆ ನೀನೇಕೆ ವಂಚಿಸುತ
ಪ್ರೇಮಭಾವದಿ ಸುಳ್ಳ ಸಾಧಿಸುತ
ಎನ್ನ ಭಾವದ ಬಲಿಗೆ
ಸದಾ ಹೊಂಚಿರುವೆಯಲ್ಲ.....
...............-ಗರಿಮಾಮ
- Prasanna kumar K S
18 Dec 2016, 07:32 pm
ಏನೋ ಆತಂಕ ಎಂತದ್ದೊ ತಳಮಳ...
ಮನದ ಸರೋವರದಲ್ಲಿ ಮತ್ತೆ ಕೋಲಹಲ...
ಮರೆತಿರುವೆನೆಂಬ ಭಾವದಲ್ಲಿ ಮತ್ತೆ
ನೀ ಮೂಡಿಸಿದ್ದ ಹೆಜ್ಜೆಯ ಹುಡುಕಾಟ ...
ಛೇ,
ಮತ್ತೇಕೊ ಜಾರುತಿದೆ ಮನ ನಿನ್ನೆಡೆಗೆ...
ಸಿಗದ ಚಂದ್ರನೆಡೆಗೆ ಕೈ ಚಾಚುವ ಕಂದನಂತೆ...
- chikki
18 Dec 2016, 07:19 pm
ಅನಿರೀಕ್ಷಿತ ಘಟನೆಗಳ ಸಾಗರ
ಬಯಕೆಗಳ ಹಂದರ
ಕನಸುಗಳ ಸರಮಾಲೆ
ಸಂತಸಗಳ ಕಂತೆ
ದುಃಖಗಳ ಚಿಂತೆ
- ರಾಜು ಹಗ್ಗದ
18 Dec 2016, 07:14 pm
ಭುವಿಯ ದೈವಗಳಲಿ ಎಲ್ಲ ಸರಿಯಿಲ್ಲ
ನೀನೇ ತಂದೆ ತಾಯಿ ಗುರು
ಬಳಗವೆಲೢವೆಂದು ತ್ರಿಕಾಲದಿ ನೆನೆದರೂ
ನೀನಲೢದ ಮತ್ತೇನೂ ಬೇಡವೆಂದಲವತ್ತಿಕೊಂಡರೂ
ಹೃದಯವ ಪರಿಪರಿ ಒಪ್ಪಿಸಿದರೂ
ತೃಪ್ತಿಪಡರು-ಸದಾ ವಿಚಲಿತರು
ಎನ್ನೊಳು ಕುಂದನೇನು ಕಂಡರೋ
ನೀನೊಬ್ಬನೇ ನನಗೆಂದರೂ
ನಾನೊಬ್ಬನೇ ಅವನಿಗಲ್ಲವಲ್ಲ.
......ಗರಿಮಾಮ
- Prasanna kumar K S
18 Dec 2016, 06:58 pm
ಭುವಿಯ ದೈವಗಳಲಿ ಎಲ್ಲ ಸರಿಯಿಲ್ಲ
ನೀನೇ ತಂದೆ ತಾಯಿ ಗುರು
ಬಳಗವೆಲೢವೆಂದು ತ್ರಿಕಾಲದಿ ನೆನೆದರೂ
ನೀನಲೢದ ಮತ್ತೇನೂ ಬೇಡವೆಂದಲವತ್ತಿಕೊಂಡರೂ
ಹೃದಯವ ಪರಿಪರಿ ಒಪ್ಪಿಸಿದರೂ
ತೃಪ್ತಿಪಡರು-ಸದಾ ವಿಚಲಿತರು
ಎನ್ನೊಳು ಕುಂದನೇನು ಕಂಡರೋ
ನೀನೊಬ್ಬನೇ ನನಗೆಂದರೂ
ನಾನೊಬ್ಬನೇ ಅವನಿಗಲ್ಲವಲ್ಲ
- Prasanna kumar K S
18 Dec 2016, 06:55 pm
ನಾನು ನಾನೇಂಬುದೆಲ್ಲ 1 ದಿನ
ನನ್ನದು ತನದೆಂಬುದೆಲ್ಲ 1 ಕ್ಷಣ
ನನ್ನವರು ತನ್ನವರು ಎಂಬುದೆ ಜೀವನ
ಸುಖಮಯವಾಗಿರಲಿ ನಮ್ಮೆಲ್ಲ
ಮಿತ್ರರ ಜೀವನ ಪ್ರಯಾಣ
ಯುವಾ ಗೌಡ
- ಯಶ್ ಗೌಡ - S.B
18 Dec 2016, 06:17 pm
ಗುಲಾಬಿ....
ನನಗಾಗಿ ಎಂದು ಗುಲಾಬಿ ಹೂವನ್ನು
ಕೂಳ್ಳಲಿಲ್ಲ ನೀನು...
ಅದರೂ ನಿನ್ನ ಮಾತಿನಲ್ಲಿ ಗುಲಾಬಿಯ ಮೃದುವಿತ್ತು....
ನನ್ನ ಕಣ್ಣಲ್ಲಿ ಬಣ್ಣ ಬಣ್ಣದ ಗುಲಾಬಿಯ ಕನಸಿತ್ತು... ನಿಮ್ಮ
ಪ್ರಭ ಸಿರಿ...
- prabha siri
18 Dec 2016, 03:58 pm
ನೀ ಕೇಳಬಯಸಿದ್ದೆಲ್ಲಾ ಹೇಳಿದೆ
ನಾ ಹೇಳಬೆಕಿದ್ದೆಲ್ಲಾ ಎಂದೋ ಹೇಳಿ ಮುಗಿಸಿದೆ
ಉಳಿದಿರುವ ಅಲ್ಲೊಂದು ಇಲ್ಲೊಂದು
ಕನವರಿಕೆಗಳನ್ನು ಕೂಡಿಸಿ ಇಟ್ಟಿರುವೆ
ಅದನೂ ಕೇಳಿ ಆಲಿಸಿ
ಇನ್ನು ಗುಣಿಸು ನನ್ನ ಕನಸುಗಳ......
- ಸುವಿದಿನಿ
18 Dec 2016, 01:59 pm
ನನ್ನವಳೇ ನಲ್ಮೆಯ ಹೃದಯವೇ
ಕನಸಿನ ಕುವರಿಯೇ ನೀನು
ಮನಸಿನ ದೇವತೆ ನೀನು
ಪ್ರೀತಿಯ ಕುಸುಮ ಬಾಲೇ
ಒಲವಿನ ಆಸರೇ ನೀನು
ನನ್ನ ಬಾಳಪಯಣದ ಒಡತಿ ನೀನು
ನಿನ್ನ ನೆನಪಲಿ ಇರುವೆ ನಾನು
ನೀನೇ ನನ್ನ ಹೃದಯವೇ
ನೀನೇ ನನ್ನ ಕನಸೇ
ನೀನೇ ಸರ್ವಸ್ವ ನನಗೆ.
- ರಾಜು ಹಗ್ಗದ
18 Dec 2016, 11:23 am
ಭಾವ ತರಂಗಗಳ ಹೊಯ್ದಾಟದೊಳು
ನಿರ್ಜೀವ ಮೀನು ನಾನು
ಮನೋ-ಹೃದಯಗಳೆರಡರೊಳು
ಕುಣಿವ ಅಲೆಗೆ ಮಣಿವ ಶವ ನಾನು
ಮನ್ವಂತರವೆಂಬುದೆನ್ನಂಗೈಯ ರೇಖೆ
ಬರಿ ಬೂಟಾಟಿಕೆಯ ತತ್ವಗಳಿನ್ನೇಕೆ?
ನಡೆಯಿಂದ ನಡೆಯದ, ತನು-ಮನಕೆ
ನುಡಿಸಿದ್ದಾಂತದ ಹೊರೆಯ,ಬಾರವೇಕೆ?
ಅನುದಿನದ ಬಯಕೆಗಳನುಮಣಿಸಿ
ಭಾವದರಮನೆಯ ಕನಕ ಕದವ ತೊರೆದು
ಬದುಕಿನಡೆಗೆತೊಡರಿಪ ಗೋಜಲಬಿಡಿಸಿ
ಆಸೆಯ ಬಲೆಯೋಳಗಿಂದ ಬಯಲಿಗಾರುವ
ಬೇವು-ಬೆಲ್ಲದಂತಿಹ ಬದುಕಿನಲಿ
ಬೇವನೇ ಪಡೆದಿಹ ಕೈ-ಬಾಯ್ಗಳಿಗೆ
ಬೆಲ್ಲದಾನವನೀಯ್ವ,,ಬೇವದಾನವಪಡೆವ
ಬೇವು-ಬೆಲ್ಲವ ಬೆರಸಿ ಸಮರಸವ ಸವಿವ....
- ಜಿ. ಶಿವಪ್ಪ ನಾಯಕ
18 Dec 2016, 10:50 am