Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಪ್ಪು=ಸಾವು(100%)

ನಾ ಮಾಡಿದ ತಪ್ಪಿಗೆ,
ನನಗರಿವಾಗುವ ಹೂತ್ತಿಗೆ,
ನಾ ಹೂತ್ತಿದ್ದೆ,ಪಾಪಗಳ ಪೆಟ್ಟಿಗೆ,
ಬಂದಿತ್ತು,ಸಾವೆಂಬ ಕರಿನೆರಳು ಕುತ್ತಿಗೆಗೆ,
ನಾ ಶರಣಾದೆ ನೇಣಿಗೆ!

- ರಾಜೇಶ್ ಎ.ಎಸ್

19 Dec 2016, 10:38 am

ಕಾಣದ ಭಕ್ತಿ

ದೇವ ನಿನ್ನ‌ ನಂಬಿ ಬಂದೆ
ನಾನು ಇಲ್ಲಿಗೆ!!
ಅದೇಕೆ ನೀನು ಕಾಣದಾದೆ
ನನ್ನ ಕಣ್ಣಿಗೆ!!

ನಿನ್ನ ಅರಸಿ ಹೊರಡಲೀಗ
ನಾನು ಎಲ್ಲಿಗೆ!!
ಹೇಳು ದೇವ ನನ್ನ ಮೇಲೆ
ಕೋಪ ಏತಕೆ!!

ಭಕ್ತಿಯಿಂದ ವರವ ಬೇಡ
ಬಂದೆ ಇಲ್ಲಿಗೆ!!
ನಾ ಬರುವ ಮೊದಲೇ ದೇವ
ನೀನು ಹೋದೆ ಎಲ್ಲಿಗೆ!!

ಕಾಯುತಿರುವೆ ನಿನ್ನ ಗುಡಿಯ
ದ್ವಾರದ ಎದುರಿಗೆ!!
ಹಿಂದಿರುಗಿ ನೀನು ಬರಲೇ ಬೇಕು
ದೇವ ಇಲ್ಲಿಗೆ!!

- ಪಿ.ಜಿ.ಜ್ಯೋತಿ

19 Dec 2016, 10:30 am

ನೋವು

ಕೇಳದೇ ಬರುವುದು,
ಕಣ್ಣೀರ ತರುವುದು,
ನೆಮ್ಮದಿ ಕೆಡಿಸುವುದು,
ಸಂತಸ ಹಾಳಾಗುವುದು,
ಸುನಾಮಿಯಂತೆ ಬರುವುದು,
ಸಮುದ್ರದಂತೆ ಪ್ರಶಾಂತವಾಗುವುದು.

- ರಾಜು ಹಗ್ಗದ

19 Dec 2016, 08:52 am

ಅಯ್ಯೋ ಮನಸೇ...

ಬಹು ದಿನದ ಬೇಡಿಕೆಯಂತೆ
ಮುರಟಿ ಹೋದ ಗಿಡದಲೆ
ಹುಟ್ಟಿದೊಂದು ಮೊಗ್ಗಿನ ಕಂತೆ ...
ಮೊಳಕೆಯೊಡೆದ ಆಸೆಗೆ ಬೆಟ್ಟದಷ್ಟು ನಿರೀಕ್ಷೆ
ಆದರೆ ಅರಳಿದೊಂದು ಚಿಕ್ಕ ಗುಲಾಬಿಯಷ್ಟೆ ..
ಮರೆಮಾಚಲಾರದ ಪೆಚ್ಚು ನಗೆ , ನಿರಾಸೆ ಛಾಯೆ
ಅನಿಸಿದ್ದು ಅಯ್ಯೋ ಮನಸೇ ನೀನೇಕೆ ಹೀಗೆ

ಭಾರತಿ

- Bharavi

19 Dec 2016, 07:47 am

ಹನಿ..

ಪಕ್ಷಿಗಳ ಮಂಜುಳನಾದ
ಸ್ವಪ್ನ ಲೋಕದಿ ವಿಹರಿಸುವ
ವಸುಂಧರೆಗೆ ,
ಇಹದರಿವು ಮೂಡಿಸುವ
ಬೆಳಗು...

- Indushekar Chinivar

19 Dec 2016, 06:36 am

ಮೊದಲದಿನ

ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ
ಕಂದಗು ಅಮ್ಮಗು ಒಳಗೇ ಕಸಿವಿಸಿ
ಹೇಗೋ ಏನೋ ಶಾಲೆಯಲಿ ||ಪ||

ಕಂದರದೆಲ್ಲಾ ಒಂದೇ ಅಳುಮುಖ
ಅಕ್ಕಪಕ್ಕದಾ ಬೆಂಚಿನಲಿ
ಟೀಚರಿಗಂತೂ ಹಿಡಿದಿಡಲಾಗದು
ಎಲ್ಲರ ಒಂದೇ ನೋಟದಲಿ

||ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ||

ಕಣ್ಣಾಲಿಗಳು ತುಂಬಿ ಬಂದರೂ
ಅಳಲಾರದೆ ಮಗು ಕುಳಿತಿಹುದು
ಬಣ್ಣಬಣ್ಣದಾ ಆಟಿಕೆ ಕೈಯಲಿ
ಆಡಿಸಲಮ್ಮನು ಎಲ್ಲಿಹಳು

||ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ||

ಗಂಟೆಯ ಸದ್ದಿಗೆ ಕೂಗುತ ಓಡಲು
ಗೇಟಲಿ ಅಮ್ಮನು ಕಂಡಿಹಳು
ಪುಟುಪುಟು ಹೆಜ್ಜೆಗೆ ಗೆಜ್ಜೆಯ ಸದ್ದಿಗೆ
ಅಮ್ಮನು ಮನದೇ ನಲಿದಿಹಳು

||ಪಾಟಿಯ ಚೀಲ ಹೆಗಲಿಗೆ ಏರಿಸಿ
ನಡೆದಿದೆ ಮಗುವು ಠೀವಿಯಲಿ||

- ಗುರುಮೂರ್ತಿ ಬಾಲಚಂದ್ರ ಮೆಹೆಂದಳೆ

19 Dec 2016, 03:53 am

ಚಲುವ ಕನ್ನಡ ನಾಡು

ಚಲುವೈತಿ ಕನ್ನಡ ನಾಡು
ತಿರುಗಿ ಒಮ್ಮೆ ನೋಡುವ ಬಾರೆ "ಪ"

ಹಂಪಿ ಬೇಲೂರ ಶಿಲ್ಪ
ತಿರುಗಾಡಿ ನೋಡುವ ಸ್ವಲ್ಪ
ಬಾಳು ಎಂಬುದು ಇರುವುದು ಅಲ್ಪ
ನೋಡದಿದ್ರೆ ಮಹಾ ಪಾಪ
ಈ ನಾದ ಸೊಬಗನು ಅರಿತು
ಖುಷಿಯಿಂದ ಹಾಡುವ ಬಾರೆ. "೧"

ಮೆರೆಯುತಿದೆ ಜೋಗದ ಸಿರಿ
ಎಂತ ವರವ ನೀಡಿದೆ ಹರಿ
ಸೈಹ್ಯಾದ್ರಿ ಬೆಟ್ಟದ ಲಹರಿ
ಸುತ್ತಿನಂತೆ ಹಾವಿನ ಮರಿ
ಶ್ರೀ ಗನ್ಧದ ಕಾಡು ನಮ್ಮದು
ವನದಲ್ಲಿ ಉಯ್ಯಾಲೆ ಆಡುವ ಬಾರೆ "೨"

ಅಂಟುವಂತೆ ಹುಬ್ಬಳ್ಳಿ ಧಾರವಾಡ
ಸಿಧಾರೂಢರ ದೊಡ್ಡ ಪವಾಡ
ಅನ್ನಪೂರ್ಣೆಯ ಹೊರನಾಡ
ನೋಡು ಎಂಥಾ ಸುಂದರ ಕಾಡ
ಬೆಳ್ಳಿ ಚಿನ್ನ ಬೆಳೆಯುವ ನಾಡ
ಒಮ್ಮೆ ಇಲ್ಲಿ ಮಡಿದರು ಪಾಡ. "೩"

ಆಗುಂಬೆ-ಚಾರ್ಮಾಡಿ ಘಾಟ
ದೇವರೇ ನಿಂತು ಮಾಡಿದಂಗೆ ಮಾಟ
ನೋಡೋ ಕಣ್ಣಿಗೆ ಹಬ್ಬದ ಊಟ
ನನಗೆ ಮಾತ್ರ ಅದೊಂದೇ ಹಟ
ಕಡಲ ತೀರದ ಕಾರವಾರ
ಸುತ್ತೋಣ ಬಾರ ಮೈಸೂರ ಬೆಂಗಳೂರ "೪"

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

18 Dec 2016, 11:01 pm

ಯಶಸ್ಸು

ನಿನ್ನ ಯಶಸ್ಸಿನ ಮೇಲೆ ಗರ್ವಪಡಬೇಡ
ಚುಕ್ಕೆಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ
ನಿನ್ನ ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ಕಂಡಿದ್ದೇನೆ
ನಿನ್ನ ರೂಪದ ಬಗ್ಗೆ ಅಹನ್ಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ
ಜೀವನದಲ್ಲಿ ಗೆದ್ದೆನೆಂದು ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ಕಂಡಿದ್ದೇನೆ

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

18 Dec 2016, 10:06 pm

ಬುದ್ಧಿಯೋ ಮನಸೋ?

ಮನಸು ಬುದ್ಧಿಗಳೆರೆಡು ಹೇಳುತಿರಲು ಹಿಂಬಾಲಿಸು ನನ್ನ ನನ್ನ,
ಯಾರ ಹಿಂದೆ ಓಡಲಿ ನಾನು
ಮನಸು ನನ್ನದೇ ಬುದ್ಧಿಯು ನನ್ನದೇ,
ಮನಸು ಸೋಲದು, ಬುದ್ಧಿಯು ಬಾಗದು,
ಮನಸನ್ನು ಬಿಡಲಾರೆ ಬುದ್ಧಿಯನ್ನು ತೊರೆಯಲಾರೆ,
ಯಾಕಿಷ್ಟು ಸ್ವಾರ್ಥ ಮೋಹ ಬುದ್ಧಿ
ಮನಸೇ,
ನೀವೆಂದು ನನ್ನ ಬಾವ ಬದುಕು
ಹೇಗಿರಲಿ ನಾ ನಿಮ್ಮ ತೊರೆದು,
ನಿಲ್ಲಿಸುವಿರ ಕದನವ,
ನೀವು ಒಡಗೂಡಿ ಸಂತಸದಿ ಜೊತೆಯಾಗಿ ನಡೆಸಿದರೇನೆ ಸುಂದರ ಈ ಬದುಕು,
ನಿಲ್ಲಿಸುವಿರ ಸ್ವಾರ್ಥವ ಜೊತೆಗೊಡಗೂಡಿ ಬರುವಿರ ನಾ ನಿಮ್ಮವ.

- ಶ್ರೀಕಾವ್ಯ

18 Dec 2016, 09:47 pm

ಚೆಲುವೆ

ಹುಣ್ಣಿಮೆ ಚಂದ್ರನಂತ ಮೊಗದವಳೆ...
ನಯನದಲೆ ಮನಸ್ಸನ್ನು ಸೆಳೆದವಳೆ...
ಕಾಮನಬಿಲ್ಲಿನ ಸೊಬಗಿನವಳೆ...
ಹೃದಯದಲಿ ಪ್ರೀತಿ ಧಾರೆಯೆರೆದವಳೆ...
ನೀನೆ ನನ್ನ ಒಲವಿನ ಹೂಮಳೆ...

- B.Shree

18 Dec 2016, 09:41 pm