Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿತ್ಯೋತ್ಸವ ..

ಸುಗ್ಗಿಯ ಸಂಭ್ರಮ
ಹೋಳಿಯ ಸಡಗರ
ನೀ ಬಿರಿದು ನಕ್ಕಾಗ ...
ಕೋಗಿಲೆಗಳ ಇಂಚರ
ಉತ್ಸಾಹದ ಸಂಚಾರ
ನಿನ ಪಿಸುಮಾತೆ ಝೇಂಕಾರ ..
ಹಾರಿದೆ ಮನದ ಹಕ್ಕಿ
ತೊರೆದು ಕೋಟಲೆಗಳ ಬೇಲಿ
ನೀ ಚೆಲ್ಲಿದ ಪರಿಮಳದಿ ...
ನಿನ್ನದೆ ಮೆರವಣಿಗೆ
ನೀನೇ ಬರವಣಿಗೆ
ನೀನೆಲಿಸಿದ ಈ ಆಂತರ್ಯದಿ ...
ಸಾಗುತಿರಲಿ ಈ ಉತ್ಸವ
ಚಿಮ್ಮುತಿರಲಿ ಉತ್ಸಾಹ
ನೀನೇ ಬಾಳ ನಿತ್ಯೋತ್ಸವ ..

- Bharavi

20 Dec 2016, 11:47 am

ನಾಗರೀಕತೆ

ಉದಯಿಸಿದೆ ಅಂದು ಭೂತಾಯಗರ್ಭದಿ
ನಲಿದಾಡಿದೆ ನಾನು ಸಿಂಧೀಯಳ ಮಡಿಲಲ್ಲಿ
ಬೆಳಗಿಸಿದರು ನನ್ನ ಅಕಳಂಕಿತ ಹೃದಯಗಳದಿ
ಬದುಕುಳಿದೆನು ನಾನು ಸಂಸ್ಕೃತಿಯ ಮನದಲ್ಲಿ..
ಕಂಡೇನು ಅಂದು
ಜಗ-ಗಮಿಸುವ ನಾಗರೀಕತೆಯಾಗಿ
ದೂಡಿದರು ಇಂದು
ವೈಶ್ಯಾಟದ ನಾಗರೀಕತೆಯಾಗಿ ..
ಉಳಿದಿರುವೆನು ನಾನು ಹರಿ
ಯುತ್ತಿರುವ ಪೀಳಿಗೆಯ ರಕ್ತದಿ ,
ಮುಂದಾಗ ಬಹುದೇನೋ
ಬರಿ ಪುಟಗಳ ಪದವಾಗಿ !!
ತಾಯಾಗಿ ಮೆರೆದು ನಾ
ಮಗುವಾಗಿ ಬೆಳೆಸಿದೆ.
ನಾನಾದಿ ಮೇಳ..ನಗರೀಕರಣದ ಮೂಲ
ನೀ ಬೆಳೆದೆ ಬೆಳೆಯ, ನಾ ತಂದೆ ಮಳೆಯ
ಕಟ್ಟೇವು ಸಮಾಜ, ಮನುಜ ಧರ್ಮದ ಮಿತಿಯ
ಮುಖಮಾಡಿದ ಭಾವನೆಗೆ ನಾನಾದೆ ಲಿಪಿಯಾಗಿ.
ಒಟ್ಟಾಗಿ ಬೆರೆತು ಕನಿಕಹಳೆ ಮೊಳಗಿರಲು,
ಕಣ-ಕಣದ ಕರೆ ನೀಡಿ
ಏಕೆ ನೀ ಮುನಿಸಿಕೊಂಡೆ
ಮನದಾಳದ ಮುಖದಿಂದ ..??

( ಈ ಕವಿತೆಯಲ್ಲಿ ನಾಗರೀಕತೆಯ ಭಾವ ಹಾಗೂ ವೈಜ್ಞಾನಿಕ ಬೆಳವಣಿಗೆಗಿನ ಕೊಡುಗೆಗಳನ್ನು ಬಣ್ಣಿಸುವ ಪ್ರಯತ್ನ ಮಾಡಲಾಗಿದೆ)

- ಆರ್.ಎಸ್.ಕೆ

20 Dec 2016, 11:10 am

ಮುಂಜಾನೆ ಆದೊಡೆ

ಮುಂಜಾನೆ‌‌ ಆದೊಡೆ
ರಂಗೋಲಿ ಹಾಕಿದೆ
ಅಂಗಳದ ತುಂಬಾ ಸುಮ್ಮನೇ!!

ತಂಗಾಳಿ ಸದ್ದಿಗೆ
ಕಿಟಕಿಯ ಪರದೆ ಸರಿಸಿ
ಇಣುಕಿದೆ ನಾ ಮೆಲ್ಲನೆ!!

ಮನಸಿನ ತಳಮಳದ
ಪ್ರಶ್ನೆಗೆ ಉತ್ತರವ
ಹುಡುಕುತ್ತಲಿದ್ದೆ ನಲ್ಲನೇ!!

ಎದುರಿಗೆ ನೀ ಬರಲು
ತಳಮಳ ನಿಂತಿರಲು
ನೋಡುತ್ತ ನಿಂತೆ ನಿನ್ನನೇ!!

ಮೌನದಿ ಉತ್ತರವು
ದೊರೆತಿರೊ ಭಾವದಿ
ನಾ ಮರೆತು ಹೋದೆ ನನ್ನನೇ!!

- ಪಿ.ಜಿ.ಜ್ಯೋತಿ

20 Dec 2016, 09:44 am

ವಸಂತದ ಸಂತಸ

ಹೊಸ ವರುಷಕ್ಕೆಂದು ಹೊರಟ
ರವಿಯ ಹೊನ್ನಿನ ಕಿರಣ
ಕೊರೆವ ಚಳಿಯ ಸೀಳಿ
ಭುವಿಯ ಬೆಳ್ಳಿಯ ಹನಿಗೆ
ಮುತ್ತಿಕುವ ಮೊದಲೇ

ಬಿಸಿ ಉಸಿರ ಬಿಗಿ ಹಿಡಿದು
ಮಲಗಿರುವ ಆಸೆಯ ಬಡೆದು
ಮನದ ಕನಸು ನನಸಾಗಳೆಂದು
ಕೂಗಿ ಹೇಳು ನಿನ್ನವರಿಗೆ
ನವ ವಸಂತದ ಸಂತಸದಲಿ

- ವೆಂಕಟೇಶ್ ದೈಶಿ ವೇಮಗಲ್

20 Dec 2016, 09:19 am

ಸಂಭ್ರಮ...

ಧುಮ್ಮಿಕ್ಕುವ ಪ್ರೇಮ ಧಾರೆಗೆ
ಮೈ ಒಡ್ಡುವ ಸಂಭ್ರಮ

ನಿನ್ನ ಕಣ್ಣಿಗೆ ನನ್ನ ಬಿಂಬವ
ಒಪ್ಪಿಸುವ ಸಂಭ್ರಮ

ಎದೆಯ ಬಡಿತ ತಾಳತಪ್ಪಿ
ನಿನ್ನಲ್ಲಿಗೆ ಬರುವ ಸಂಭ್ರಮ

ಹೂತುಟಿಯ ಜೇನ ಹೀರಿ
ಮತ್ತಲಿ ಮೈಮರೆವ ಸಂಭ್ರಮ

ಎದೆಯಂಗಳದಿ ನಲಿವ
ನಿನ್ನ ಗೆಜ್ಜೆನಾದ
ಆಲಿಸುವ ಸಂಭ್ರಮ

ನಿನ್ನ ಭಾವದಳೆಯ
ಉಯ್ಯಾಲೆಯಲಿ ಎನಗೆ
ಜೀಕುವ ಸಂಭ್ರಮ

ಸಂತೈಸುವ ಈ
ಮಡಿಲಲ್ಲಿ ಮನ
ಹಗುರಾಗುವ ಸಂಭ್ರಮ

ಈ ಸಂಭ್ರಮಗಳ
ಸಂಗಮ ನೀನಾದರೆ
ಬಾಳು ಒಲವ
ತುಂತುರ ರಿಂಝಿಮ...

- Indushekar Chinivar

20 Dec 2016, 08:50 am

ಮನ್ನಣೆ

ಕೊನೆಗೂ ಫಲಿಸಿದ
ಪಟ್ಟಭದ್ರರ ಚಿತಾವಣೆ.
ಆಯ್ತು ದಕ್ಷ ಅಧಿಕಾರಿ
ಸುಬೋಧ್ ಯಾದವ್ ವರ್ಗಾವಣೆ!
ಕೊನೆಗೊಂಡಿಲ್ಲ ಇನ್ನೂ
ಸಮರ್ಥ ಅಧಿಕಾರಿಗಳ ಬವಣೆ.
ನೀಡಲಿಲ್ಲ ಸರ್ಕಾರ
ಜನರ ಆಕ್ರೋಶ
ಅಭಿಪ್ರಾಯಕ್ಕೆ ಮನ್ನಣೆ!!

- Manjunath Swamy KM

20 Dec 2016, 08:29 am

ಕುಳಿ

ಕೆನ್ನೆ ಮೇಲೆ ಜಾರುತಿರುವೆ
ಸ್ವಲ್ಪ ನಿನ್ನ ನಗು ನಿಲ್ಲಿಸು
ಕುಳಿಯಲಿ ಬೀಳುವ ಭಯ ನನ್ನದು....

- PSK

20 Dec 2016, 07:54 am

ಒಳಗೆ ...

* ಒಳಗೆ *

ನವರಸಗಳ ನೋಟ ಬಣ್ಣದೊಳಗೆ
ಬಣ್ಣಗಳ ನೋಟ ಕಣ್ಣಿನೊಳಗೆ
ಕಣ್ಣು ಬಣ್ಣಗಳೆರಡು ಬುದ್ಧಿಯೊಳಗೆ
ಬುದ್ಧಿ ಮನಸ್ಸು ನಮ್ಮೊಳಗೆ

ಸೂರ್ಯನ ಬೆಳಕು ಭೂಮಿಯೊಳಗೆ
ಭೂಮಿಯ ಆಕಾರ ಬೆಳಕಿನೊಳಗೆ
ಬೆಳಕು ಭೂಮಿಗಳೆರಡು ಸೂರ್ಯನೊಳಗೆ
ಸೂರ್ಯ ಕಿರಣಗಳು ಭೂಮಿಯೊಳಗೆ

ಬರವಣಿಗೆಯ ಅಕ್ಷರ ಲೇಖನಿಯೊಳಗೆ
ಲೇಖನಿಯ ಮಸಿ ಮನಸ್ಸಿನೊಳಗೆ
ಅಕ್ಷರ ಲೇಖನಿಗಳೆರಡು ವಿಷಯದೊಳಗೆ
ವಿಷಯ ಅಕ್ಷರಗಳು ಭಾವದೊಳಗೆ

ಬದುಕಿನ ಅಂದ ಇರುವಿಕೆಯೊಳಗೆ
ಇರುವಿಕೆಯ ನಡೆ ಸ್ಪಷ್ಟತೆಯೊಳಗೆ
ಅಂದ ನಡೆಗಳೆರಡು ಧ್ಯಾನದೊಳಗೆ
ಇರುವಿಕೆ ಸ್ಪಷ್ಟತೆ ಕಾಲದೊಳಗೆ

ವಾಯುವಿನ ಜೀವ ಜೀವಿಯೊಳಗೆ
ಜೀವಿಗಳ ಜೀವ ಪ್ರಕೃತಿಯೊಳಗೆ
ಪ್ರಕೃತಿ ಜೀವಿಗಳೆರಡು ಮಂಡಲದೊಳಗೆ
ವಾಯು ಜೀವಗಳು ನಮ್ಮೊಳಗೆ

- ಈಶ, ಎಂ.ಸಿ.ಹಳ್ಳಿ

- ಈಶ

20 Dec 2016, 07:34 am

ಕವಿಯಾದೆ ಕಲಿಯುಗದಲ್ಲಿ!

ಕವಿಯಾದೆ ಕಲಿಯುಗದಲ್ಲಿ,
ಪುಸ್ತಕದ ಹಾಳೆಯು ಸಿಗದಿಲ್ಲಿ;

ಕಾವ್ಯಾಸಕ್ತಿಯ ಕಲೆ ಎಲ್ಲಿ,
ಓದುವ ಹವ್ಯಾಸ ಕಾಣದಿಲ್ಲಿ.

ಮೊಬೈಲ್ ಎಂಬ ಕಲಾರಂಗದಲ್ಲಿ!
ಬಂದಿಗಳಾಗಿರುವ ಖೈದಿಗಳಿಲ್ಲಿ.

ಕವಿಯ ಕಲೆ ಹಳದಿಯಾಗಿ ಕಾಣುತಿದೆ ಇಲ್ಲಿ;
ಈ ಆಧುನಿಕ ರಂಗದಲ್ಲಿ.

- ವೇಣು ಆರ್ ಚಿನ್ನದೂರು

20 Dec 2016, 12:39 am

ಪರ್ಯಾಯ

ಹೊಗಳುಭಟನಾಗಿಹೆನು ಅನ್ಯಾಯವಾಗಿ
ಪ್ರೀತಿಸುವ ಕೆಲಸ ಕೊಡು ಪರ್ಯಾಯವಾಗಿ..!

- ಜೀವಿ

19 Dec 2016, 09:51 pm