Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನದಿಗೆ ಸಾಗರವು ಹೇಳುತಿದೆ
ಯಾರು ಎಷ್ಟು ಆಳವೋ ಅವರು ಅಷ್ಟೇ ಮೌನ
ನನ್ನ ಪ್ರೀತಿಯೂ ಸಾಗರದಷ್ಟೇ ಆಳ
ಆದರೆ ಅದು ಮೌನ!
ನಾನು ಹೇಗೆ ವ್ಯಕ್ತಪಡಿಸಲಿ ಕಡಲಿನಂಥ ಭೋರ್ಗರೆತ
ಹೇಗೆ ಸಾದರಪಡಿಸಲಿ ಕೋಲ್ಮಿಂಚಿನಂತಹ ಸೆಳೆತ
ಹೇಗೆ ತೋರಿಸಲಿ ಹೃದಯದ ಗುಡುಗು
ಅದುವೇ ಈ ಮೌನರಾಗದ ಅನುರಾಗ
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
20 Dec 2016, 09:13 pm
ಜನ್ಮವಿಟ್ಟಳು ಮಾಯಿ
ಲೋಕದ ಕಷ್ಟವನ್ನು ಸಹಿಸಿ
ಪ್ರೇಮ ನೀಡಿದಳು ಮಾಯಿ
ಮನುಷ್ಯನ್ನಾಗಿ ಮಾಡಿ
ತ್ಯಾಗವಿಹ ಬದುಕಿನ
ದೇವ ರೂಪ
ಮಾನವತೇಯ ಸಾಕಾರ
ನನ್ನವ್ವ ನೀ ಮಹಾ ತಾಯಿ
** ಗೌಡ್ರುಸರ್ಕಾರ್**
- ಗೌಡ್ರುಸರ್ಕಾರ್
20 Dec 2016, 09:04 pm
ಎಂದೂ ಪರಿಚಯವಿರದ ನಿನ್ನ
ನಗು ಕಂಡಾಗಲೆಲ್ಲ ಸಂಶಯ
ಕನಸಲಿ ನಕ್ಕವಳು ನೀನೇನಾ?
ನಿದ್ದೆ ಕದ್ದವಳು ಇವಳೇನಾ?.....
- PSK
20 Dec 2016, 08:53 pm
ಜೀವನ ಒಂದು ಉಯ್ಯಾಲೆ
ಯಾರು? ಯಾವಾಗ? ತೂಗುವ ರೋ ಗೊತ್ತಿಲ್ಲ!
ಬಾಲ್ಯದಲ್ಲಿ ತಾಯಿ ತೂಗುವಳು
ಬೆಳೆದಂತೆ ಸ್ನೇಹಿತರು ತೂಗುವರು
ವಿದ್ಯಾರ್ಥಿಯಾಗಿದ್ದಾಗ ಗುರುಗಳು ತೂಗುವರು
ಗುರುಗಳು ಒಳ್ಳೆಯ ದಿಕ್ಕಿನೆಡೆಗೆ ತೂಗುವರು
ವಿಧಿಯು ತನಗಿಷ್ಟ ಬಂದಂತೆ ತೂಗುವುದು
- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)
20 Dec 2016, 08:38 pm
ಶೂನ್ಯವಿಹ ಜೀವನದಲ್ಲಿ ಎಲ್ಲ ಖಾಲಿ ಖಾಲಿ
ಆಕಾಶದಂತೆ ಜೀವನ ಎಲ್ಲ ನೀಲಿ.ಕಪ್ಪು.ಬಿಳಿ
ಹಣ್ಣು ತಿನ್ನುವ.ಜೀವನ ಆಗಿದೆ ಗಿಳಿ
ಬದುಕೊಂದು ಚೆಂದ ಎಲ್ಲ ನೀ ತಿಳಿ
**ಗೌಡ್ರುಸರ್ಕಾರ್**
- ಗೌಡ್ರುಸರ್ಕಾರ್
20 Dec 2016, 07:48 pm
ಶ್ರೀ ಗಂಧದನಾಡು, ಕವಿಋಷಿಗಳ ಬೀಡು
ಸಾಂಸೃತಿಕ ಶ್ರೀಮಂತೆ ನೀ ತಾಯಿ ಕನ್ನಡತಿ
ಶಿಲ್ಪಕಲೆಗಳ ಸಿಂಗಾರಿ
ಸಂಸ್ಕೃತಿಯ ಭಂಡಾರಿ ,
ವರನಾಡು ಭಾರತಿಗೆ
ನೀ ತಾಯಿ ಕರಿಮಾಯಿ.
ಬೇಲೂರು ಹಳೇಬೀಡು ಕಲೆಶಿಖರದ ಒಡತಿ
ನೀನಾದೆ ರಮ್ಯೆ ಸುಂದರೌತಣದ ಬೆಡಗಿ
ಸಂಗೀತ ಚಿತ್ರಕಲೆ ಸೊಗಸುಣಿಸಿ, ಮೈ ನವೀರೆಳಸಿ ,
ಸಾಹಿತ್ಯ ಶ್ರೀಮಂತ ಕೊಡಚಾದ್ರಿ ಶಿಖರಗಳಲಿ
ಸಮೃದ್ಧಿಯ ಬಾಳೆಸದು ನೀ ಬೆಳಗಿದೆ ನದಿಮಣಿಗಳ.
ಗಂಗ ಕದಂಬ ಚಾಲುಕ್ಯವಿರೂಪಾಕ್ಷಗಳದಿ
ವೈಭವದ ಕಮ್ಮಿತ್ತುನಾಡಾಗಿ ನೀನಿರಲು
ಹಾರಿಸಿದರು ನಿನ್ನ ಕೀರ್ತಿ ಪತಾಕೆಯನ್ನು..
ಕಣ-ಕಣವು ಬೆಳ್ಳಿ
ಸಿರಿಕವಿಗಳ ಸರಪಳಿ.
- ಆರ್.ಎಸ್.ಕೆ
20 Dec 2016, 07:17 pm
ಉದರದಲ್ಲಿ ಬರೆದಿಲ್ಲಾ ಜಾತಿ
ಹುಟ್ಟಿದಾಗ ಕಾಣಲಿಲ್ಲ ಜಾತಿ
ಹಸುಗೂಸನಲ್ಲಿ ಕೇಳಲಿಲ್ಲಾ ಜಾತಿ
ಕಂದಮನಲ್ಲಿ ಕೂಗುಲಿಲ್ಲಾ ಜಾತಿ.
ಬಾಲ್ಯ, ಹರಿಯ ಮತ್ತು ಮುದಿತನ
ಜರಿಯತು ಜಾತಿ
ಬಲವಂತದಲ್ಲಿ ಎಳೆದು ನಮ್ಮತನ
ತಂದೀತು ಪಜೀತಿ.
ಅ...ಧರ್ಮದ ಹೆಸರುನ ಸೋಂಕನಲ್ಲಿ
ಅನಾಗರಿಕರು ನಿತ್ಯ ನಮ್ಮನ್ನ ನಿಂದಿಸಿದರು
ನರಕಯಾತನೆ ನೀಡಿ ಅವರು ಸ್ವರ್ಗ ಸೇರಿದರು
ಇನ್ನು ಬೆಳಕು ಕಡೆ ಹೆಜ್ಜೆ ಕುಣಿತ ಎಲ್ಲಿ?
ಕನಸು ಕಾಣವುದೇ ಅಂಜಿಕೆ
ಜೀವನ ಉತ್ತಮ ಮರೀಜಿಕೆ
ಸತ್ಯ ಅಸತ್ಯ ಹೇಳಿಕೆ
ಕೇವಲ ಶೂನ್ಯ ನಂಬಿಕೆ.
Shivakumar
7892977584
- Shinan
20 Dec 2016, 05:00 pm
ಕರಿಮುಖದ ಎನ್ನವ್ವ
ನಾ ಕಂಡ ಜಗದಾಂಬ ..
ಬಿಳಿಬಣ್ಣದ ಹತ್ತೀಯು
ನಾನಾಗಿ ಬೆಳೆದಿರಲು
ನಾನಾಗೆ ಬೆಳೆದೇನಾ .. ???
ಇಲ್ಲ ಇಲ್ಲ
ಅವಲಂಬಿತು ಕರಿಮಣ್ಣ..
ಸಂಸಾರದ ಬೀಳೇಳುಗಳಲಿ
ಕಂಡಳೆಷ್ಟೋ ಕಹಿಗುಡುಗ
ಆದಾರು ಬೆಳಗಿಸಿದಳು
ನನ್ನವ್ವ ... ಕಟುಜಾಣೆ ...
ಜಗವೆಂದಿತು , ತಾಯಿ
ಮನುಜ ಶ್ರೇಷ್ಠವೆಂದು ..
ನೋಡಿದರೆ ನಾವೊಪ್ಪೆವು
ಎನ್ನವ್ವನ ಹೊರಮುಖವ..
ಆದರೆ ನಾ ಕಂಡೇನು ಎನ್ನವ್ವಳ
ಅಂತರಂಗದ ಶುಭ್ರಪುಟವ ..
ಅವಳೆದುರೇ ನಾ ಗುಡುಗಲು
ಆನಂದಿಸಿದಳು ಎನ್ನವ್ವ ..
ನಾ ಬಿಟ್ಟರು ಮಗ ಉಳಿಯುವ
ಎಂದವಳ ಮನಮಂದಿರದಿ ..
- ಆರ್.ಎಸ್.ಕೆ
20 Dec 2016, 03:44 pm
ನಾನೊಂದು ಮರವಾಗಿದ್ದರೆ
ಜಗದ ಜನರ ವಾಯುವಾಗುತ್ತಿದ್ದೆ
ಜೀವ ಸಂಕುಲದ ಮನೆಯಾಗುತ್ತಿದ್ದೆ
ಎತ್ತರೆತ್ತರಕ್ಕೆ ಬೆಳೆದು ನೇರಳಾಗುತ್ತಿದ್ದೆ
ನಾನೇಕೆ ಮರವಾಗಲಿಲ್ಲ ಓ ದೇವರೆ?
ತಿಂಗಳಬಾಡಿಗೆ ಕೇಳಿಲ್ಲ ಪಕ್ಷಿವಾಸಿಸಲು
ಹಣವ ಪಡೆಯಲಿಲ್ಲ ಫಲಹಾರಿಗಳಿಗೆ
ಆಸರೆಯಾಗುವೆ ಸ್ನೇಹಿತ ಬಳ್ಳಿಗಳಿಗೆ
ಜಗಕೆ ನಿಸ್ವಾರ್ಥಿ ಕುಟುಂಬವಾಗುತ್ತಿದ್ದೆ
ನಾನೇಕೆ ಮರವಾಗಲಿಲ್ಲ ಓ ದೇವರೆ?
ಔಷಧಿಯಾಗುತ್ತಿದ್ದೆ ಹಲವು ರೋಗಿಗಳಿಗೆ
ಉಪಕರಣವಾಗುತ್ತಿದ್ದೆ ಕಟ್ಟುವ ಮನೆಗೆ
ಸಮಾರಂಭಗಳಿಗೆ ತೋರಣವಾಗುತ್ತಿದ್ದೆ
ಮೋಡತರಿಸಿ ಮಳೆ ತರುವ ಗಾಳಿ ಆಗ್ವೆ
ನಾನೇಕೆ ಮರವಾಗಲಿಲ್ಲ ಓ ದೇವರೆ?
ಯಾರಿಗೂ ಬೇಡದೇ ಸ್ವಾವಲಂಬಿ ಆಗ್ವೆ
ಸತ್ತರೆ ಭೂಮಿಯ ಖನಿಜಗಳಾಗುತ್ತಿದ್ದೆ
ಸಂಪನ್ಮೂಲವಾಗುವೆ ದೇಶದ ಪ್ರಗತಿಗೆ
ಈಭೂಮಿಯ ಸುಂದರ ಸೀರೆ ಆಗುತ್ತಿದ್ದೆ
ನಾನೇಕೆ ಮರವಾಗಲಿಲ್ಲ ಓ ದೇವರೆ?
ನಿಮ್ಮವ ..ಶರಣ್ ಪಾಟೀಲ್.!!
- Sharanpatil
20 Dec 2016, 03:25 pm
ಕಾಣಿಕೆ ಹುಂಡಿಗೆ ಯಾತಕೆ
ಹಣವನ್ನು ದೋಚಲು
ಹುಂಡಿಯೇ ಆಟಿಕೆ !!
ನಮ್ಮನು ಹರಸುವ ದೆವರು
ಪೆಟಿಎಂ ನಲ್ಲಿ ಹಣ ಪಡೆಯುವನೇ
ಹಣವನು ಪಡೆದ ದೆವರು
ಏಟಿಎಮ್ ಸಾಲಲ್ಲಿ ನಿಲ್ಲುವನೇ
- ಭರತ್
20 Dec 2016, 02:28 pm