ಆ ರಾತ್ರಿ ನಮ್ಮಿಬ್ಬರ ಸೇರಿಸುವ ಕನಸಿಗು ವಿರಹವಿದೆ ಕಣೇ
ಕಗ್ಗತ್ತಲೆಯ ಇಣುಕು ಬೆಳದಿಂಗಳಲ್ಲಿ ನಮ್ಮಿಬ್ಬರ
ಮಿಲನಕ್ಕೆ ಶಾಬೀತು ಮಾಡಿದ್ದ ಹರುಷ ಕನಸಿಗಿದೆ
ಆ ನಮ್ಮ ಭೇಟಿಯ ನಂತರ ಆದ ದಿಗ್ಭ್ರಮೆಯ ಶುಬೋದಯ ನೋಡಿ...
ಆಗಸದಲ್ಲಿ ಹೊಳೆವ ನಕ್ಷತ್ರಕ್ಕು ಮುನಿಸು ಇದೆ ಕಣೇ
ಮತ್ತದೆ ಚಹರೆಯಲ್ಲಿ ಮಿನುಗದ ಒಲವುಗಳ ಕಂಡು
ಭೂವಿಯಂತರಾಳವ ಹುಡುಕುತ್ತಾ ಮರದ ಕೊಂಬೆಯ
ಒಳನುಸುಕುತ್ತಲೆ ಅಡಗಿದ ಮೌನದ ಕತ್ತಲೆಯ ಕಂಡು....
ರಾತ್ರಿಕನಸಲಿ ಕಾಡಿದ ಕಣ್ಣದಾಳಿಗೆ ಕನ್ನಡಿಯ ಹಿಡಿದು
ನೀ ಬಯಸಲು ನಿನ್ನ ಬೆನ್ನಲೆ ಬರೆವೆ ನನ್ನೆದೆಯ ಹಾಡು
ನನ್ನುಸಿರ ಶಾಖಕೆ ಬೆವರ ಹನಿಗರೆದು, ನಿನ್ನಶೃತಿ ಸೇರಿದ….
ಪದಗಳಿಗೆ ಸಿಗದ ಮಧುರ ಕ್ಷಣಗಳವು
ನಿನ್ನ ಕೈ ಅಷ್ಟು ಗೆರೆಗಳ ಮೇಲೆ ನನ್ನೆಸರ ಬರೆವೆ
ಜಗದ ಜಂಜಾಟವ ಮರೆಸಿ, ನಾಗಜಡೆಯ ಸಿಕ್ಕ ಬಿಡಿಸುವೆ
ಮೈ ಗಂಧಮಕರಂದದಿ ನಸುನಾಚಿದ ನಿನ್ನ
ಮೊಲ್ಲೆ ಮೊಗದ ಸೂಜಿಕಣ್ಣಿನ!!!!
ನಿನ್ನ ಸೀರಿಯ ಸೆರಗಸರಿಸಿ ಹಾಲ ಬೆಳಕಿನಲಿ
ಕುಣಿವ ತನುವೊಳಗಿನ ತುಡಿತದ ಮಿಡಿತವ …
ಅದು ಹೇಗೆ ತಿಳಿಸಲಿ ನಾ…. ಗೆಳತಿ ನೀನೇ ನೋಡು ಬಾ..!!
<ನಿನ್ನಯ ಕನಸಿನ ಹಾದಿಯಲ್ಲಿ >
ಓ ನನ್ನ ಗೆಳತಿ....
ನೀ ಬಲು ಸುಂದರ ಯುವತಿ......
ನೀ ಚೆಲುವಿಗೆ ಒಡತಿ....
ರೆಪ್ಪೆ ಕಣ್ಣ ಜೋಪಾನ ಮಾಡುವ ರೀತಿ.....
ನಾ ನಿನ್ನ ಕೊನೆಯವರೆಗೂ ಕಾಯುವೆ ಗೆಳತಿ.....
ನೀ ಆಗುವೆಯಾ ನನ್ನ ಬಾಳ ಸಂಗಾತಿ....??
ಪ್ರೀತಿಯ ಬಲೆಯೊಳಗೆ ನಾನು,
ಇದು ಬದುಕೋ ಬಂಧನವೋ ಅರಿಯೆನು,
ಮನದ ಮನೆಯೊಳಗೇ ನೂರಾರು ಕನಸ ಹೊತ್ತು ತಂದಿಹುದು ಪ್ರೀತಿ,
ಕಾಣುವುದೇ ನಿನಗೆ ಕನಸು ನನಸಾಗುವುದೆಂಬ ನಂಬಿಕೆಯಲಿ ನಾ ಬದುಕುತಿರುವ ರೀತಿ,
ನನ್ನ ಕನಸಿನ ನನಸಿಗೆ ಉತ್ತರವು ನೀನು,
ಬಂದು ನೀನು ಮನದ ಕಗ್ಗಂಟನು ಬಿಡಿಸುವೆಯೇನು.
ತಿಳಿಯೆನು ನಾನು ಮಾಯೆಯು ಪ್ರೀತಿಯೋ ಇಲ್ಲ ನೀ ನನ್ನ ಸೆಳೆದ ರೀತಿಯೋ,
ಈಗ ನಿನ್ನ ಪ್ರೀತಿಯ ಬಾಹುಬಂಧನದಲ್ಲಿ ನಾನು,
ನನ್ನ ನೋವು ನಲಿವುಗಳಿಗೆ ಸಹಪಾಠಿ ನೀನು,
ನಾ ತೋರುವ ಒಲುಮೆಯನ್ನು ಸ್ವೀಕರಿಸುವೆಯೇನು,
ನನ್ನ ಕನಸುಗಳ ದಾರಿಗೆ ಜೊತೆಯೂ ನೀನು,
ನನಸುಗಳ ಹಾದಿಗೆ ದೀವಟಿಗೆಯ ಬೆಳಕನ್ನು ತೋರಲು ಬರುವೆಯೇನು.
ನೀ ನಗುತಾ ಬದುಕಿರಲು ನನ್ನೊಂದಿಗೆ, ಕಷ್ಟ ದುಃಖಗಳಿಗೆ ನಾ ಎದುರುವೆನೇನು,
ನಿನ್ನ ನಂಬುಗೆ ಮಮತೆಯ ಪ್ರೀತಿಯ ಬಿಟ್ಟು ಬೇರೇನೂ ಕೇಳೆನು ನಾನು, ನೀ ಕೊಡುವೆಯೇನು,
ನಿನ್ನ ಸೋಲು ಗೆಲುವುಗಳಿಗೆ ನಿನ್ನಡಗೂಡಿದ ಪಯಣಿಯು ನಾನು,
ನನ್ನ ಏಳು ಬೀಳುಗಳ ಜೊತೆ ಪ್ರೀತಿಯಿಂದ ಸೇರುವೆಯ ನೀನು,
ಹಿತವಾದ ಪ್ರೀತಿಯಲಿ, ಒಬ್ಬರನ್ನೊಬ್ಬರು ಸೋಲಿಸದ ರೀತಿಯಲಿ, ಜಗವ ನೋಡುತ ಜೊತೆಯಲಿ, ಸಿಹಿಗನಸ ಹೆಣೆಯುತ ಬದುಕಲಿ, ನಗುತಿರಲು ಜೊತೆಯಲಿ ಸೋಲಿಹುದೆ ನಮಗೆ ಜಗದಲಿ!
ಕೇಳುತಿಹುದು ಮನಸು, ಅರಸುತಿಹುದು ಕನಸು,
ಬೇಗ ಬಂದು ಸಂಥೈಸುವೆಯ ಇದು ಆಗುವುದೆಂದು ನನಸು.