Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೂಕ ಮನಸು...

ಮೂಕ ಮನಸಿನ ರೋದನೆ
ಯಾರಿಗೂ ಹೇಳಲಾಗದ ವೇದನೆ,,
ಯಾರಿಗೇಳಲಿ ಮನದೊಳಗಿನ ನೋವು
ನಾ ಆಶಿಸಿರುವುದು ಆ ನೋವಿನ ಸಾವು,,
ಸಾಂತ್ವನ ಹೇಳುವ ಮನಸಿಗಾಗಿ ಕಾದಿರುವೆ
ಆ ಮನಸ ಹೊಂದಿರುವ ಹುಡುಗಿ ನೀ ಎಲ್ಲಿರುವೆ...

- jp R

24 Dec 2016, 12:34 am

ಕನಸಿನೂರು

ನನ್ನ ಕನಸಿನೂರಿಗೆ
ನೀ ಬರವುದಾದರೆ
ರಶೀದಿ ಇಲ್ಲದ
ಪಯಣ ನಿನ್ನದು.....

- PSK

23 Dec 2016, 11:17 pm

ಇಂತಿ ನಿನ್ನ ಪ್ರಾಣ ಸ್ನೇಹಿತ

ಒಂದೇ ತಾಯಿಯ ಮಕ್ಕಳಲ್ಲದಿದ್ದರೇನು......
ಸಹೋದರರಂತೆ ನಾನು-ನೀನು.........

ನಿನ್ನ ಕಣ್ಣೀರಿನ ನಡುವೆ ನನ್ನ ಕಣ್ಣೀರ ಒರೆಸಿದವ ನೀನು.....
ನಿನ್ನ ನೋವುಗಳ ನಡುವೆ ನನ್ನ ನೋವ ಆಲಿಸಿದವ ನೀನು.....

ನಿನ್ನ ಬಿಟ್ಟು ಅರೆ ಕ್ಷಣ ಇರಲಾರೆ ನಾನು......

ಏಕೆಂದರೆ ನೀ ನನ್ನ ಪ್ರಾಣ ಸ್ನೇಹಿತನು.....
ನೀ ನನ್ನ ಪ್ರಾಣ ಸ್ನೇಹಿತನು....!!

ಇಂತಿ
ನಿನ್ನ ಪ್ರಾಣ ಸ್ನೇಹಿತ

- ಅನಾಮಿಕ

23 Dec 2016, 11:08 pm

ಪ್ರೇಮದ ಹೂ

ಪ್ರೇಮವನ್ನು ಹೂವು ಎಂದು ಕರೆದವರಾರು?
ಅದು ಒಣಗಿದ ಎಲೆಯೆಂಬುದು ನನಗೆ ಗೊತ್ತು
ಬಿರುಗಾಳಿ ಬೀಸಿದಾಗ ಕೆಳಗೆ ಉದುರುತ್ತದೆ ಎಂಬುದೂ ಗೊತ್ತು
ಅದು ಸಮಯದ ಗುರುತು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

23 Dec 2016, 10:06 pm

ಬಲ್ಲೆಯಾ ನಲ್ಲೆಯಾ

ಮುನಿಸಿಕೊಂಡ ನಲ್ಲೆಯಾ
ಓಲೈಸಿಕೊಳ್ಳುವುದು ಹೇಗೆ ಬಲ್ಲೆಯಾ
ಅರಿತೊಕೊ ಮೊದಲು ಅವಳ ಪ್ರೀತಿಯಾ
ಕಲಿತುಕೊ ಅವಳ ಜೋತೆ
ಹೇಗೆ ಬಾಳಬೇಕೆಂಬ ರೀತಿಯಾ
ಅಳವಡಿಸಿಕೋ ಸರಿಯಾದ ನೀತಿಯಾ
ಬೇರೆಯವರು ಅಳವಡಿಸಿಕೊಳ್ಳಲಿ
ನಿನ್ನ ಜೀವನದ ದಾರಿಯಾ

ಆಗುವುದು ಜೀವನದಲ್ಲಿ ಅರುಣೋದಯಾ

✍ಕನ್ನಡಿಗ ಅರುಣ್

- ಕನ್ನಡಿಗ ಅರುಣ್

23 Dec 2016, 07:38 pm

ಜೀವಂತ ನಾಣ್ಯ..

ನಾನು...
ದೇವರ ಟಂಕಸಾಲೆಯಲಿ
ಟಂಕಿಸಿದ ಜೀವಂತ ನಾಣ್ಯ

ಈ ನಾಣ್ಯಕೆ ಬೆಲೆ ಇಲ್ಲ
ದುಡಿದು ತಾ ಗಳಿಸುವುದು ಎಲ್ಲಾ
ಬೆಲೆ ಬರುವುದು ವ್ಯಕ್ತಿತ್ವದಿ
ಕಳೆವುದು ದುರಾಚಾರದಿ
ಸಮಾಜದ ಖಜಾನೆಯಲಿ ಬೆರೆತರೂ..
ಇಲ್ಲಿ ಮುಖಬೆಲೆಯ ಗುಂಪು, ತಾಣ
ವಿದ್ಯೆ ಹತ್ತಿದರೆ ಬೆಲೆಯೇ ಬೇರೆ
ಇಲ್ಲದಿದ್ದರೆ, ಇಲ್ಲಿ ಚಿಲ್ಲರೆಯೇ

ಈ ನಾಣ್ಯಕೂ ಇದೆ ,
ಮೇಲು ,ಕೀಳೆಂಬ ಭೇದ - ಭಾವ
ಬಾಲ್ಯ - ವೃದ್ಧಾಪ್ಯದ ಆಯಸ್ಸು ಭಾವ
ಹಗಲಿರುಳೂ ಶ್ರಮಿಸಿದರು ಏರದು
ಹಲವು ನಾಣ್ಯಗಳ ಮುಖಬೆಲೆ
ಕವಡೆಯ ಬೆಲೆಯು ಇಲ್ಲ
ಇಲ್ಲಿ ಬಹು ನಾಣ್ಯಕೆ
ಆದರೂ, ನಾಣ್ಯ ಯತ್ನಿಸಿದೆ
ಮಾಸಲಲಿ ಸವಕಲಾಗುತಾ

ಐದು ವರ್ಷಕ್ಕೊಮ್ಮೆ ದಿಢೀರ್
ಏರುವುದು ಮುಖಬೆಲೆ ಒಮ್ಮೆಗೆ
ಆಗ ,ಸಮಾಜ ಖಜಾನೆಯ
ಎಲ್ಲ ನಾಣ್ಯ ಸಂಮಿಶ್ರ
ಚಿಲ್ಲರೆ ಮಾತಿಗೂ ಗೌರವದ ಬೆಲೆ
ಭೇದವಿಲ್ಲದ ಏಕತೆಯ ಬೆಲೆ ಅಳಿವುದು
ನಾಯಕ ನಾಣ್ಯದ ಮೋಡಿ ಕಳೆದ ಮೇಲೆ
ನಾನು, ಜೀವಂತ ನಾಣ್ಯ
ಈ ನಾಣ್ಯಕೆ ಬೆಲೆ ಇಲ್ಲ...

- Indushekar Chinivar

23 Dec 2016, 07:22 pm

ಪ್ರಚಂಡ ಕಿರಣಗಳು

" ನಾವೆಲ್ಲರೂ ಭಾರತೀಯರು" ಘೋಷಣೆ ಆಗುವ ಮುನ್ನ
ನಮ್ಮೆಲ್ಲರ ಕಥೆಯ ಕೇಳಿರು ಚಿನ್ನ.

ಶತ ಶತಮಾನದಿಂದ ಗುಲಾಮಗಿರಿ, ನಿಂದನೆ
ಅಸ್ಪೃಶ್ಯ , ಗೌರವ ನೀಡುತಿದ್ದವರ ಬಗ್ಗೆ
ಏನು ಹೇಳಿಲಿ?
ಹೊಡೆತ-ಬಡೆತ, ಭೇದ-ಭಾವ ಕಲಿತವರಿಗೆ
ಹೇಗೆ ತಲೆ ಬಾಗಿಲಿ?

ನಮ್ಮನ್ನ ಕಾಪಾಡಲು ನಮ್ಮ ದೇವರು ಬರಲಿಲ್ಲ
ಸಂಭವಾಮಿ ಯುಗೆ ಯುಗೆ ಸಂಭವಿಸಿಲಿಲ್ಲ
ಬುದ್ಧ ತತ್ವಗಳನ್ನು ಸಾಗರದಾಚೆಯ ತಳ್ಳಿದವರು
ಗೊಡ್ಡು ಸಂಪ್ರದಾಯ ಬಾಚಿ ತಬ್ಬಿಕೂಂಡವರು

ನಮ್ಮ ಕೆಟ್ಟ ಕಾಲ ಮುಗಿಯಿತು ಅಣ್ಣಾ
ಸೂರ್ಯ ಮುಳಗದ ನಾಡು ಬಂದಿತು ಅಣ್ಣಾ
ಸೇವ ಪವಿತ್ರ ಒಲುಮೆ ತಂದಿತು ಅಣ್ಣಾ
ಶಾಂತಿ ತತ್ವ ಚಿಲುಮೆ ಬೆಳೆಸಿತು ಅಣ್ಣಾ

ನಾವು ದೀರ್ಘ ಉಸಿರಾಡಲು ಅವರೇ ಕಾರಣ ಅಣ್ಣಾ
ಜಾತಿ -ಮತ, ಅ ಧರ್ಮ - ಈ ಧರ್ಮ ಸೃಷ್ಟಿ ಮಾಡ ಬೇಡ ಅಣ್ಣಾ
ವಿಶ್ವ ಮಾನವರಾಗಿ ಬದುಕುವ ಕಲಿಸು ಅಣ್ಣಾ

- Shinan

23 Dec 2016, 06:24 pm

ಜಾತಿಯೇ ಪಿಡುಗು?

ಕಲ್ಲಲ್ಲಿ ಮಣ್ಣಲ್ಲಿ
ಹೂವು ಹಣ್ಣುಗಳಲ್ಲಿ
ಕಾಯಿ ಪಲ್ಯೆಗಳಲ್ಲಿ
ಗಾಳಿ ನೀರಲ್ಲಿ!

ಪ್ರಾಣಿ ಪಕ್ಷಿಗಳಲ್ಲಿ,
ಇರುವೆ ಉರಗಗಳಲ್ಲ್ಲಿ,
ಮೀನು ಮೊಸಳೆಗಳಲ್ಲಿ
ಮನುಜರಲ್ಲಿ!

ನೋಡಿ ನುಡಿಯೆಲೋ
ಜಾಣ!...ತೆರೆದ ಕಣ್ಣಲ್ಲಿ
ಜಾತಿಯಿಲ್ಲದ ಜಾಗ
ಇಹುದೇ.......ಜಗದಲ್ಲಿ??!??

ಸೃಷ್ಟಿಯಿಂದಲೇ ಬಂದ
ಕೋಟಿ ಜಾತಿಗಳಲ್ಲಿ,
ತಮ್ಮ ತಮ್ಮದೇ ಆದ ಗುಣಗಳುಂಟು,
ತಮ್ಮದೇ ಸೊಗಡುಂಟು,
ಸೊಬಗು ಉಂಟು.!

ಜಾತಿಯನೇ ಪಿಡುಗೆಂದು
ಗುಡುಗಿ ನುಡಿಯುವ ಮನುಜ,
ನಿನ್ನ ಮತಿಯೇ ಜಾತಿ ಗಂಟಿರುವ ಪಿಡುಗು,
ಭೇದ ಮಾಡುವ ನಿನ್ನ ದುರ್ಮತಿಯ ನೀತಿಯೇ,
ದ್ವೇಷ ಹಬ್ಬಿಸುತಿಹುದು,
ಎಲ್ಲ ಕಡೆಗೂ!
✍ಮಲ್ಲಿಭಾಗವತ ಗುಡಿಬಂಡೆ✍

- ಮಲ್ಲಿಭಾಗವತ್ ಗುಡಿಬಂಡೆ

23 Dec 2016, 04:05 pm

ಮನಸೆಳೆದ ಕುಳ್ಳಿ..ಮನಗೆದ್ದ ಕ

ಮುಗ್ಧತೆ ತುಂಬಿದ ಮಗುವಿನಂತೆ ಸೆಳೆದಳು
ಅವಳ ನೆನಪಲ್ಲಿ ನನ್ನನೇ ನಾ ಮರೆಯುವಂತೆ ಮಾಡಿದಳು,,
ದಿನವೂ ಕಾದೆ ಅವಳ ಬರುವಿಕೆಗೆ
ಬಂದರೂ ಆಕೆ ನೋಡಲಿಲ್ಲ ನನ್ನ ಕಡೆಗೆ,,
ನೋಡುವಳು ಎಂದು ಅವಳಿಂದೆ ಓಡಾಡಿದೆ
ನೋಡದೇ ಹೋದಾಗ ಒಳಗೊಳಗೆ ಒದ್ದಾಡಿದೆ,,
ನನ್ನೆಡೆಗೆ ನೋಡುವಳೆಂಬ ನಿರೀಕ್ಷೆ ಸುಳ್ಳಾಗಿತ್ತು
ಏಕೆಂದರೆ, ಅವಳಾಗಲೇ ಬೇರೆಯವನಿಗೆ ಬಿದ್ದಾಗಿತ್ತು,,
ನಿರೀಕ್ಷಿಸಿದ ಮನಸ್ಸು ನುಚ್ಚು ನೂರಾಗಿತ್ತು
ಆ ಒಂದೊಂದು ಚೂರಿನಲ್ಲು ಅವಳೆಸರೆ ಬರೆದಿತ್ತು,,
ಪ್ರೀತಿ ಸಿಗಲಿಲ್ಲವೆಂದು ದುಃಖದಿಂದ ಅತ್ತೆ
ಪ್ರೀತಿಸಿದವರೆಲ್ಲ ಸಿಗಬೇಕೆನ್ನಲು ಅವರೇನು ನಮ್ಮ ಸ್ವತ್ತೆ......

- jp R

23 Dec 2016, 03:38 pm

ಬಿಸಿಲು-ನೆರಳಾಟ

ದಿನದಿನಕೆ ಇಂತಿಷ್ಟು,
ಎಂಬಂತೆ ಕಂಬಳಿಯ,
ಹೊದೆಯುತ್ತ,
ಓ...ಚಂದ್ರ! ನೀ...ಮಲಗುವೆ!
ದಿನದಿನಕೂ ಅಷ್ಟಷ್ಟೇ,
ಕಂಬಳಿಯ ಸರಿಸುತ್ತ,
ಹದಿನೈದು ದಿನಕೊಮ್ಮೆ,
ಎದ್ದೇಳುವೆ!!*
ಪೂರ್ತಿ ನೀ ಹೊದ್ದಾಗ,*
ಕಾರಿರುಳ ಕಾಟ!*
ಕೊಡವಿಕೊಂಡೆದ್ದಾಗ,*
ಬೆಳದಿಂಗಳೂಟ!!*
ಎಂಥ ಚಂದವೊ!ಚಂದ್ರ!*
ನಿನ್ನ ಕಳ್ಳಾಟ!!*
ಮಲಗಿ ಏಳುವ ನಿನ್ನ,*
ಬಿಸಿಲು ನೆರಳಾಟ!!*
*✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

23 Dec 2016, 03:09 pm