Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಾಯುತಿರುವೆ ನಿನ್ನಯ ದಾರಿ

ದೂರಾಗಿರುವೆ ನೀನು ಕಾರಣವೇನು,
ದೂರಗಲು ಕಾರಣ ನೀನಾ ನಾನಾ ನಿಂತಿಲ್ಲ ಜಿಜ್ಞಾಸೆ ಇನ್ನೂ,
ಕ್ಷಮಿಸು ತಪ್ಪಿದ್ದರೆ, ತಪ್ಪಿದ್ದು ದೂರಾಗಿದ್ದರೆ,
ನನಗೂ ತಿಳಿದಿದೆ ನಿನಗೂ ನಿನ್ನದೇ ಮನಸ್ಸಿದೆ, ಬದುಕಿದೆ, ಸ್ವಂತಿಕೆಯಿದೆ,
ಆದರೂ ಸ್ವಾರ್ಥ, ನೀನೆಂದು ನನ್ನ ತೊರೆಯಾಲಾರೆ ಎಂಬ ನಂಬಿಕೆಯ ಸಲುಗೆ,
ತಿಳಿಯೆನು ನಾ ದೂರಾಗಿ ಹೇಗಿರುವೆ ನೀನು,
ಅಳುತಿದೆ ಮನಸ್ಸು ಒಪ್ಪದೇ ದೂರಾಗಿರುವೆ ನೀನು ಎಂದು,
ಕಾಯುತಿದೆ ಕನಸು, ನೀ ಹಿಂದಿರುಗವೆ ಇರಲಾರೆ ನನ್ನನಗಲಿ ಎಂದು,
ತೋಚದೆ ಸೋತಿರುವೆ ತಿಳಿಸುವೆಯ ನಿಜ ನೀನು ಏನೆಂದು,
ಬೇಕಿಲ್ಲ ನನಗೆ ನನ್ನದೇ ಜಿಜ್ಞಾಸೆ,
ತೋರಿಸುವೆಯ ದಾರಿ ನಾನು ನಿನ್ನ ವಿಶ್ವಾಸಿ,
ಬರಲೇ ಬೇಕೆಂದೆನಿಲ್ಲ ಆದರೂ ಕಾಯುವೆ ನಿನ್ನ ದಾರಿ,
ನನ್ನ ಅರ್ಥಯಿಸಿ ಹಿಂದಿರುಗಿದರೇ ನಾ ನಿನಗೆ ಆಭಾರಿ,
ಏನಾದರೂ ಕೊನೆಯಲ್ಲಿ ಒಂದೇ ಹಾರೈಕೆ ಹರಕೆ ನಿನ್ನ ನಗು ಸಂತೋಷ ಎಂದೆಂದೂ ಬಾಡದಿರಲಿ,
ಆದರೂ ಬಂದು ಬಿಡು ಕೊನೆಯ ಬಾರಿ, ಕಾಯಲಾರೆ ನಿನ್ನನಗಲಿ ನಿನ್ನ ದಾರಿ

- ಶ್ರೀಕಾವ್ಯ

24 Dec 2016, 10:41 pm

ನೆನಪು

ಹೊಂಗನಸಿನ ಸವಿ ಸುಖದ ಹಾಗೆ
ಹೊಂಬಿಸಿಲಿಗೆ ಮೊಗ ಅರಳಿ
ನಗುತಿರಲಿ ಮುಂಜಾವಿಗೆ ತಂಗಾಳಿ
ನೆನಪ ತಂದು ಬೆಳಗಬೇಕಲ್ಲವೆ.

- kasturi pattar

24 Dec 2016, 07:51 pm

ಮನಸು

ನಿನ್ನ ಕಾಣದೆ ನೊಂದು
ಬೇಯುವುದು ನನ್ನ ಮನಸು
ಅದನು ಅರಿತೂ ಕೂಡ ನೀನು
ಒಡೆಯುವುದೇಕೋ ಕನಸು

ಅಳಿಸುವುದರಲ್ಲಿ ನಿನಗೇನೋ
ಸಿಗುವುದು ಸಂತಸ
ಅದಕ್ಕಾಗೇ ನಾ ತೋರುವೆ
ನಿನ್ನಲ್ಲಿ ಮುನಿಸು

- ಶಹಾಬುದ್ದೀನ್ ಕೆ. (ಕಾವ್ಯಪ್ರೀಯ)

24 Dec 2016, 03:46 pm

ನೀನು

ಬದುಕಿರುವಸ್ಟು ದಿನ
ತಾನು ತಮ್ಮದು ಎಂಬ ಜನ!!
ಸತ್ತ ಮೇಲೆ ಆಗುವರು
ಯಾರಿಗೂ ಬೇಡದ ಹೆಣ!!

ಬದುಕಿರುವಾಗ ಆದೆ
ಸಾವಿರಾರು ಕೋಟಿಗೆ ಅಧಿಪತಿ!!
ಸತ್ತ ಮೇಲೆ ಕೊಂಡು ಹೋಗಲು
ನಿನ್ನಲ್ಲಿ ಉಳಿಯುವುದಾದರೂ ಏನು!!

ಕೋಟಿ ಗಳಿಸಿ ಕೋಟೆ ಕಟ್ಟಿದರೂ
ಅದು ನಿನ್ನ ಪಾಲಿಗಲ್ಲ!!
ನಿನ್ನ ಪಾಲಿಗೆ ದೊರೆಯುವುದು ಒಂದೇ
ಭೂತಾಯಿ ಮಡಿಲಲ್ಲಿ ಆರಡಿ ಮೂರಡಿ!!

ಕಾಮ ಕ್ರೋಧ ಲೋಭ ಮೋಹ
ಮದ ಮಾತ್ಸರ್ಯದಲ್ಲ ನೀನು!!
ಮೈ ಮರೆತು ಮಾಡಿದ್ದು ಏನು
ಯಾವುದೂ ಉಳಿದಿಲ್ಲ ಇನ್ನು!!

ಕಣ್ಣೀರ ಹರಿಸಿ ಹೋಗುವರೂ ಎಲ್ಲ
ನಿನ್ನೊಂದಿಗೆ ಬರಲು ಯಾರು ಇಲ್ಲ!!
ಜಡವಾಗಿ ಬಿದ್ದಿರುವೆ ನೀನು
ಸಿರಿ ಸಂಪತ್ತು ನಿನಗಿದ್ದರೇನು!!

ಬರುವಾಗ ಏನೂ ಇಲ್ಲ
ಹೋಗುವಾಗಲೂ ಏನೂ ಇಲ್ಲ!!
ಬದುಕಿರುವಸ್ಟು ದಿನ ತಾನು ತನ್ನದು
ಎಂಬ ಸ್ವಾರ್ಥದಿಂದೇನು ಫಲ!!

ಹುಟ್ಟಿದ ಮೇಲೆ ಸಾವು ನಿಶ್ಚಿತ
ಎಂದು ತಿಳಿದಿದ್ದರೂ ನೀನು!!
ಸ್ವಾರ್ಥಿಯಾಗಿ ಮಾಡಿದ್ದಾದರೂ ಏನು
ಯಾವುದೂ ಉಳಿದಿಲ್ಲ ಇನ್ನು!!

ನಿರ್ಜೀವ ಆಗಿರುವ ಈ ನಿನ್ನ ತನುವೀಗ
ಯಾರಿಗೂ ಬೇಡದ ಒಂದು ಜಡದೇಹ!!
ಸಾಗಲೇಬೇಕು ಮಸಣದ ಕಡೆಗೆ
ಆಗಲೇಬೇಕು ಪಂಚಭೂತದಿ ವಿಲೀನ!!

- ಪಿ.ಜಿ.ಜ್ಯೋತಿ

24 Dec 2016, 12:46 pm

ಅನ್ನದಾತ

ರೈತ ನೀ ಸುರಿಸುತಿಹೆ,
ಬೆವರು ಹನಿ ಮುತ್ತು...
ಅದರಿಂದಲೇನಯ್ಯಾ!
ನಮಗೆ ತುತ್ತು!!

ನಾತಿನ್ನುವೀಯನ್ನದ
ಗುಳಗುಳಿನಲ್ಲೂ,
ಕಂಗೊಳಿಸುತಿದೆ ಮಿತ್ರ...
ನಿನ್ನ ಮೊಹರು!
ಲೆಕ್ಕಿಸದೆ, ನಿನ್ನ ಕೈಗಾದರೂ...ಕೆಸರು,
ನಮ್ಮ ಬಾಯಿಗೆ ಎಂದೂ!
ನೀಡುತಿಹೆ ಮೊಸರು!

ನಿನ್ನ ನಿಸ್ವಾರ್ಥಕ್ಕೆ,ನಿನ್ನ ಜಗದೊಲವಿಗೆ, ಮಾಳ್ಪೆನಯ್ಯಾ! ನಿನಗೆ ನಮನ ನೂರು,
ಅನ್ನದಾತನೆ! ನಿನ್ನ ಬಾಳ ಹಸಿರಾಗಿಡಲಿ,
ಈರೇಳು ಜಗದೊಡೆಯ,ಆ...ದೇವರು!!
*

- ಮಲ್ಲಿಭಾಗವತ್ ಗುಡಿಬಂಡೆ

24 Dec 2016, 12:44 pm

ಜಗತ್ತಿನ ಮೊದಲ ಕಲಾವಿದ

ಹೊತ್ತು ಮೂಡುವ ಮೊದಲೇ... ಎದ್ದು
ನೇಗಿಲನ್ನು ಹೆಗಲಿಗೇರಿಸಿಕೊಡು
ಕಟ್ಟಿರುವ ಏರನ್ನು ಬಿಚ್ಚಿ ಹಿಡಿದು ನಡೆದು
ಭೂಮಾತೆಯ ಸೇವೆ ಮಾಡಲು ಹೊರಟಿರುವವನನ್ನು,
ಕಾದು ಕುಳಿತಿರುವ ಜಗದೊಡೆಯನಾದ
ಸೂಯ೯ದೇವನ,
ಜಗಬೆಳಗುವ ಬೆಳಕಿನ ಕಿರಣವು
ಮಣ್ಣು ಮುಟ್ಟುವ ಮೊದಲು ಎದೆಯೊಡ್ಡಿ
ತನ್ನ ಮುಖವನ್ನು ಬೆಳಗಿಸಿಕೊಳ್ಳುವವನು
ರೈತ, ಜಗತ್ತಿಗೇ ........ ಅನ್ನದಾತ.

ಬೆಳೆ ಎಂಬ ಕಲೆಯನ್ನು ಉತ್ತಿ... ಬಿತ್ತಿ...
ಒಕ್ಕಲುಮಾಡಿ ಸೃಷ್ಟಿಸುವ ಜಗತ್ತಿನ
ಮೊದಲ ನಿಜವಾದ ಕಲಾವಿದ
ನಮ್ಮ ರೈತ, ಜಗತ್ತಿಗೇ .....
ಅನ್ನದಾತ.

- ರಘುವಿಜಯ ಕಸ್ತೂರಿ

24 Dec 2016, 12:44 pm

ಋಣ ಮುಗಿದಾ ಕ್ಷಣ ...

ಋಣ ಮುಗಿದಾ ಕ್ಷಣ
ಕಡಿದುಕೊಂಡಿತೆ ನಮ್ಮ ಯಾನ
ಕರೆದಿತೆ ಕೈ ಬೀಸಿ ದೂರದ ಪಯಣ
ಇನ್ನೆಲ್ಲಿ ನಿನ್ನ ನಿತ್ಯ ಸ್ಪಂದನ ..
ದಿನವೂ ಹೊಸ ಮುನ್ನುಡಿ
ದಣಿವ ಆರಿಸುವ ಮೌನದ ನುಡಿ
ನಲಿವಿಗೂ ನೀನಾದೆ ಕೈಪಿಡಿ ..
ಇನ್ನೆಲ್ಲಿ ನಿನ್ನ ಬಾವ ಲೇಖನಿ...
ನಿನ್ನ ಬೆಳೆಸಿದ ಕೈಗಳಲೆ
ನಿನ್ನಅವಶೇಷವ ಕಿತ್ತೊಗೆಯಬೇಕೆ
ನಿನ್ನ ಮರೆತು ಮುಂದೆ ಸಾಗಬೇಕೆ ...
ಇನ್ನೆಲ್ಲಿ ವೈಭವ ಈ ಅಂಗಳಕೆ ...
ಬಂಡಿಯಲೊಂದು ಬದುಕು
ಸಾಗಲೊಂದು ದಾರಿ
ನಿನ್ನದೇ ನೆನಪಿನ ಬುತ್ತಿ
ಪಾರಿಜಾತೆ ಮಾಸದೆ ನಿನ್ನ ನೆನಪು
ಇನ್ನುಳಿದ ಹಾದಿಯಲಿ ಬರಿದೆ
ನೀ ಚೆಲ್ಲಿದ ಪರಿಮಳದ ನೆನಹು ...

- Bharavi

24 Dec 2016, 10:46 am

ಕವಿ ರೈತ

ಕವಿ ರೈತ
~~~~~~~~~
ಚಿತ್ತ-ಬುದ್ಧಿಗಳೆಂಬ,
ಎತ್ತುಗಳ ಕುತ್ತಿಗೆಗೆ,
ಹೃದಯ ನೇಗಿಲ ಕಟ್ಟಿ,
ಅರಿವಿನೊಲ ಉತ್ತಿ!

ನುಡಿ ಬೀಜಗಳ ಬಿತ್ತಿ,
ಭಾವ ಜಲ ಸಿಂಪಡಿಸಿ,
ಕವನ ತೆನೆಗಳ ಬೆಳೆವ,
ಕವಿ ರೈತನೇ!

ಸುಗ್ಗಿಯಾ ಕಾಲವಿದು
ಹಿಗ್ಗುತಲಿ ಬಾರೋ,
ಕಬ್ಬಿಗರ ಬಳಗಕ್ಕೆ
ಹಬ್ಬ ತಾರೋ!

✍ಮಲ್ಲಿಭಾಗವತ ಗುಡಿಬಂಡೆ

- ಮಲ್ಲಿಭಾಗವತ್ ಗುಡಿಬಂಡೆ

24 Dec 2016, 10:16 am

ಹನಿ..

ಮುಂಜಾನೆಯ ತಂಪಲಿ
ಕೋಗಿಲೆಯ ಇಂಪಲಿ
ನಿನ್ನ ನೆನಪಾಗಿ ,
ಮನ ಮುಗುಳ್ನಕ್ಕ
ಬೆಳಗು...

- Indushekar Chinivar

24 Dec 2016, 07:28 am

ದೇವರ ದೀಪ

ದೀಪದಂತೆ ಸಾಗಿಹೋಗಲಿ ಬದುಕು.
ದೀಪ ಹಚ್ಚಿದವರಿಗೆ ಶರಣೋ!
ಕಾಲಕ್ಕೆ ತೈಲ ಸುರಿದವರಿವೆ ನಮೋ
ದೇವರ ದೀಪವಾಗಬೇಕಪ್ಪ ,ದೇವರ ದೀಪ

ದೀಪಕ್ಕೆ ಹುಳದ ಜಂಜಾಟ ತಪ್ಪದು
ಗಾಳಿಗೆ ಅಂಜಿ ಅತ್ತ-ಇತ್ತ ತಲ್ಲಣಿಸುವುದೆನೋ ?
ಹೇ,ನಿಂತು
ಬೆಳಕು ಚಲ್ಲೋದು ಬಿಡಬರದೋ!!
ದೇವರ ದೀಪವಾಗಬೇಕಪ್ಪ , ದೇವರ ದೀಪ

ನೀ ಸಣ್ಣವ
ನಿನ್ನ ಸೊಡರು ಜಗದಗಲವಾಗುವುದೆನೋ?
ಹೇ,ಭ್ರಮೆ ಬಿಡು
ಕತ್ತಲು ಹತ್ತಿರ ಬರದಂತೆ ಬದುಕು ,ಸಾಕೋ!
ದೇವರ ದೀಪವಾಗಬೇಕಪ್ಪ
,ದೇವರ ದೀಪ.

ಹತ್ತಿದ ದೀಪ ಹಾರಲೇಬೇಕು
ಅದಕೆಲ್ಲ ದುಃಖ-ಅಂಜಿಕೆ ಯಾಕೋ
ಹೇ,ಕೇಳು!
ಹಾರುವ ಮುನ್ನ ಇನ್ನ ದೀಪವ ಹಚ್ಚಿ 'ಬಾಡೋ'!
ಜೀವ ಸಾರ್ಥಕ !
ದೇವರ ದೀಪವಾಗಬೇಕಪ್ಪ, ದೇವರ ದೀಪ.



........

- swami virupaksha

24 Dec 2016, 06:17 am