Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೋವಿನ ಜೋಡಿ ನಲಿವೆ..#

ಪ್ರತಿ ನೋವು ನಮದೇನೆ
ಪ್ರತಿ ನಲಿವು ನಮಗೇನೇ
ನೋವು ನಲಿವು ಇರದೆನೇ
ಯಾವ ಜೀವಿ ಇರುತಾನೇ...!

- ಭರತ್

25 Dec 2016, 11:23 pm

"ಅರಳು ಮಲ್ಲಿಗೆ" ___ __________________

ಮನಸ್ಸು ಮಲ್ಲಿಗೆ
ಅರಳು ಮಲ್ಲಿಗೆ
ನನ್ನದೆಯ ಬಾನಿನಲ್ಲಿ
ನಲುಗಿರುವ ಜೀವನದಲ್ಲಿ!
ಕಷ್ಟದ ಬಾಳಿನಲ್ಲಿ
ಕಲ್ಪನೆಯ ಕಾನನದಲ್ಲಿ
ಚೈತನ್ಯದ ಚಿಲುಮೆಯಾಗಿ
ಮಿನುಗುವ ತಾರೆಯಂತೆ!
ನೊವುಂಡ ಜೀವನದಲ್ಲಿ
ಕಮರಿದ ಕಂಗಳಲ್ಲಿ
ಭರವಸೆಯ ಶಿಖರವಾಗಿ
ಹುಣ್ಣಿಮೆಯ ಚಂದ್ರನಂತೆ!
‌‌‌ ಕಳವಳದ ಬಾಳಿನಲ್ಲಿ
ಹೊಂದಿರುವ ಜೀವನದಲ್ಲಿ
‌‌‌‌‌‌‌ ಪ್ರೀತಿಯ ಸೆಲೆಯಾಗಿ
ಭರವಸೆಯ ಭಾವವಾಗಿ!
___________________________
"ಬಸವಪ್ರಿಯ"

- ಬಲವಂತ ಮೋರಟಗಿ(ಬಸವಪ್ರಿಯ)

25 Dec 2016, 03:50 pm

ಕನ್ನಡದ ಕಲರವ

ಪ್ರಪಂಚದ ಭೂಪಟದಲ್ಲಿ
ಭಾರತಂಭೆಯ ಮೆರಗು

ಭಾರತಂಭೆಯ ಮಡಿಲ್ಲಲ್ಲಿ
ಕನ್ನಡಂಭೆಯ ಸೊಬಗು

ಕನ್ನಡಂಭೆಯ ನೆಲದಲ್ಲಿ
ಕಾವೇರಿ ಕಪಿಲಾರ ಗುಂಗು


ಕಾವೇರಿ ಹರಿದು
ಕನ್ನಡಿಗರ ಧನಿವು ಥನಿಸಿ

ಜೋಗುಪಾಲ್ಸ್ ದುಮ್ಮುಕಿ
ಕನ್ನಡದ ಭಾವನೆಗಳು ಬೆಳಗಿಸಿ

Dharma

- Dharma

25 Dec 2016, 02:56 pm

ಸ್ನೇಹ

ಸ್ನೇಹವೆಂಬುದು ಶುಭ್ರವಾದ
ನೀಲಿ ಅಗಸದಂತೆ
ಹರಿಯುವ ತಿಳಿ ನೀರಿನ ಕಲರವದಂತೆ
ಇಲ್ಲಿ ಕೊಂಕು ಬಿಂಕಗಳಿಲ್ಲ .

ಜಾತಿ ಮತಗಳಿಲ್ಲ
ನಾನು ತಾನು ಎಂಬುದಿಲ್ಲ.
ನವ ಚೇತನ ನಿತ್ಯ ನೂತನ
ಅನುದಿನ ವಸಂತಮಯ ಈ ಗೆಳೆತನ.
ಈ ಸ್ನೇಹಕ್ಕೆ ಎಲ್ಲೇ ಇಲ್ಲ

ಎರಡು ಜೀವಗಳ ಆತ್ಮ ಸಂಬಂಧವಿದು
ಎಲ್ಲೋ ಇರುವ ಒಂದು ಜೀವ
ಇನ್ನೆಲ್ಲೋ ಇರುವ ಇನ್ನೊ೦ದು ಜೀವದ
ನಡುವೆ ಬೆಸೆಯುವ ಆತ್ಮ ಸಂಯಮವಿದು
ಸುವರ್ಣ ಸೇತುವೆಯಿದು.

ನೋವು ನಲಿವಿಗೂ ಸ್ಪಂದಿಸುತ
ದಿಕ್ಕು ತಪ್ಪಿದಾಗ ದಾರಿ ತೋರುತ ನಿನ್ನ ಏಳ್ಗೆಯೇ ನನ್ನ ಏಳ್ಗೆ ಎಂಬುದೇ ನಿಜವಾದ ಸ್ನೇಹ
ಈ ಸ್ನೇಹ ಅಮೃತ ಜಲದಂತೆ ಸದಾ ಜೀವಂತಧಾರೆ.

- veda

25 Dec 2016, 02:42 pm

ಕನ್ನಡ ಬಾವವು

ಜೀವಕ್ಕೆ ಜೀವವು ಕನ್ನಡ ಬಾವವು
ರಾಗಕ್ಕೆ ರಾಗವು ಕನ್ನಡದ ಅಕ್ಷರ ಸಾರವು

ಅ ಎಂಬ ಅಕ್ಷರ ಅಪ್ಪ ಅಮ್ಮ ಮಮ್ಮಕರ
ಅಪ್ಪ ಅಮ್ಮ ಎನ್ನುವ ಎಲ್ಲ ಜನರಿಗೆ ನಮಸ್ಕರ

ಸ್ವಥ೯ ಇಲ್ಲದ ಸ್ವಗಾ೯ವು ನಮ್ಮ ಕನ್ನಡ ಬಳಗವು
ಯಾರಿಗೂ ದ್ರೋಹ ಬಗೆಯುವ
ಚಿಂತೆ ಇಲ್ಲದೆ ಮಲಗುವ

Dharma

- Dharma

25 Dec 2016, 01:51 pm

ನಕ್ಷತ್ರಗಳು.

ಹಸಿರು ನಕ್ಷತ್ರಗಳಿಗಾಗಿ
ನೀವು ನೀಲ ಗಗನದಲ್ಲಿ
ಹುಡುಕಬೇಡಿ!
ಅವುಗಳು ನೀವೆ
ಮೆಟ್ಟಿರುವ
ಕೆಂಪೊ ಕಪ್ಪೊ
ಮಣ್ಣಿನಲ್ಲಿ ಚಿಗರಿ
ಮಿನುಗುತ್ತಿರುತ್ತವೆ!

-------ಪದ್ಯಾಣ.

- padyana

25 Dec 2016, 10:46 am

‌‌‌‍‍ಅನುಭವ

ಮುದ್ದಾಡುವಂತಹ ಮನಸ್ಸು
ಕದ್ದುಸೇರುವಂತಹ ವಯಸ್ಸು
ಈ ಸಂಭ್ರಮದ ದಿನವು
ಅನಂದದ ಅನುಭವವು
ನೋಡಾಲಾರಂಭಿಸಿದೆ ನೀನ್ನ ಮುಖವು
ತುಂಬಿ ತುಲಾಕಡುತಿತ್ತು ನೀನ್ನ ಒಲವು

ಅದರಿಂದ್ದ ಬವುದಿನಗಳ ನಂತರ ಒಂದು ಮಗುವು


ಧಮ೯

- Dharma

25 Dec 2016, 10:01 am

ಕನ್ನಡ ನಾಡು

ಹೋದರೆ ಹೋಗಲಿ ಯನ್ನ ಜೀವ
ಕನ್ನಡನಾಡಿನ ಮಣ್ಣೀನಲೆ ಯನ್ನ ದೇಹ

ಎಲ್ಲಿಯು ಇಲ್ಲ ಇಂತಹ ನಾಡು
ಇದ್ದರೆ ಆದೇ ಯನ್ನ ಕರುನಾಡು

ಹಸಿದು ಬಂದವರಿಗೆ ಅನ್ನದಾತೆ
ದನೀದು ಬಂದವರಿಗೆ ಗಂಗೇಮಾತೆ
ಪ್ರೀತಿ ವಾತ್ಸಲ್ಯಹ ತೋರವವರಿಗೆ ತಾಯಿಮಮತೆ

ಇಲ್ಲಿದೆ ಎಲ್ಲೋ ಇಲದ ಸೌಂದರ್ಯ
ಈ ನಾಡಿನ ಸಂಸ್ಕೃತಿ ಮಾದುರ್ಯ

Dharma

- Dharma

25 Dec 2016, 09:37 am

ಸ್ನೇಹಾಂಬರ...

ಮಂಜಿನಲಿ ಮಿಂದ
ಶ್ವೇತಾಂಬರವೆ...

ಸ್ಫಟಿಕ ಮನದ
ನೀಲಾಂಬರವೇ..

ಮುಗ್ಧ ನಗೆಯ
ಕನಕಾಂಬರವೇ..

ಭಾವ ಝರಿಯ
ಪೀತಾಂಬರವೇ..

ನನ್ನಕ್ಕರೆಯ
ಸ್ನೇಹಾಂಬರವೇ..

ಮರೆವಿನ ಸುಳಿಯಲಿ ಸಿಲುಕಿ
ಮರೆತೂ ಮರೆಯದ
ಅನುಬಂಧವು ನೀ...

ಮರೆತು ಮರೆತು
ನೆನಪಾಗುವ ನಲ್ಮೆಯ
ಭಾವಬಿಂದು ನೀ...

- Indushekar Chinivar

25 Dec 2016, 08:53 am

ಸರ್ವಂತರ್ಯಾಮಿ

ನರಮಾನವ ನೀನಾದೆ ನರ ಜನ್ಮವ ನೀ ತಳೆದೆ
ನರಕುಲ ಲೋಕಕೆ ನಾಕಲೋಕದ ನಗಾರಿಯಾದೆ
ನರಪಾಲನ ಶಿಶುವಾದೆ ನರಹರಿಯ ರೂಪವಾದೆ
ನಾನೆನ್ನುವ ನರಜಂತುವಿಗೆ ನರಕವ ತೋರಿದೆ
ನಿನ್ನನಾಮವ ನೆನೆಯುವ ನರನಿಗೆ ಮುಕ್ತಿಯ ನೀಡಿದೆ
ಭಕ್ತಿಯ ರೂಪವಾದೆ ಶಕ್ತಿಯ ತಿಲಕವಾದೆ,
ಸಪ್ತ ಋಷಿಗಳ ಸ್ವರೂಪನಾದೆ ಆದಿ ಅಂತ್ಯವಿಲ್ಲದ ಆಕಾರವಾದೆ ,
ಅಗ್ನಿ ಲೋಕದ ತಾಪವಾದೆ ಚಂದ್ರಲೋಕದ ಶೀತಲ ವಾದೆ ,ಮೃತ್ಯುಲೋಕಕೆ ಮೃತ್ಯುಂಜಯನಾದೆ ಸ್ವರ್ಗಲೋಕದ ಕಾಮಧೇನು ಪುಷ್ಪ ಪಾರಿಜಾತವಾದೆ,
ಸಪ್ತಲೋಕಗಳ ಸೂತ್ರಧಾರನಾದೆ ಅಷ್ಟದಿಕ್ಕುಗಳ ದಿಕ್ಪಾಲಕನಾದೆ,
ಸಹಸ್ರಬಾಹುಗಳ ಶಂಖ,ಚಕ್ರ ಗದಾಧಾರಿಯಾದೆ
ರುದ್ರತಾಂಡವದ ರುದ್ರಾಂಶವು ನೀನಾದೆ,
ಕರ್ಮನಿಷ್ಟನಿಗೆ ಕಾರುಣ್ಯದ ಸಿಂಧುವಾದೆ
ಯೋಗಿ ಬ್ರಹ್ಮರಿಗೆ ಯೋಗಾತ್ಮನಾದೆ,
ಸತ್ಯ ಧರ್ಮ ಪರಿಪಾಲಕನಿಗೆ ಧರ್ಮನಾಯಕನಾದೆ
ಕುಟಿಲ ಕ್ಷುದ್ರರಿಗೆ ಕಾಲಭಯಂಕರನಾದೆ,
ಸಾತ್ವಿಕ ಜೀವಿಗಳ ಸಚ್ಚಿದಾನಂದನಾದೆ
ಸರ್ವ ಬಲ್ಲವನಾಗಿ ಸರ್ವಜ್ಞನಾದೆ...

- Irayya Mathad

25 Dec 2016, 01:17 am