Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

* ಅವನೊಂಥರಾ

ಆಕಾಶದಲ್ಲಿರೋ ಸಾವಿರಾರು ನಕ್ಷತ್ರಗಳ ನಡುವೆ ಇರೋ ಧ್ರುವತಾರೆ ಇದ್ದಂಗೆ.....
ಹುಣ್ಣಿಮೆಯ ಕಡುರಾತ್ರಿಯಲಿ ಹೊಳೆಯೊ ಚಂದಮಾಮ ಇದ್ದಂಗೆ.....
ವೃತ್ತಿಯಲ್ಲಿ ದೇಶ ಕಾಯೋ ಸೈನಿಕ ಆದ್ರೂ ಸಹ ನನ್ನ ಹೃದಯ ಆಳುವ ಮಹಾರಾಜ ಇದ್ದಂಗೆ....
ಕನ್ನಡಿಯಲ್ಲಿ ನನ್ನ ನೋಡಿಕೊಳ್ಳೋ ಪರಿವೆ ಇಲ್ಲ ಅವನು ನನ್ನ ಪ್ರತಿಬಿಂಬ ಇದ್ದಂಗೆ.....
ನೋವಲ್ಲಿದ್ದಾಗ ನನ್ನ ನಗಿಸೋ joker ಇದ್ದಂಗೆ.....
ಯಾವಾಗಲು ನನ್ನ ಕಾಯೋ unpaid bodyguard ಇದ್ದಂಗೆ.....
ಎಷ್ಟೇ ಕಷ್ಟ ಕೊಟ್ರು ನನ್ನ ಬಿಟ್ಟ ಹೋಗ್ದೇ ಇರೋ ಬೆನ್ನಿಗೆ ಬಿದ್ದ ಬೇತಾಳನಂಗೆ.....
ಹೃದಯಕಂಟಿ ಕೊಂಡಿರೋ ಬಿಡಿಸಲಾಗದ ಜಿಗಣೆ ಹಂಗೆ......
ಸಿಟ್ಟದಾಗ ಹೆಡೆಯೆತ್ತಿ ಬುಸುಗುಟ್ಟೋ ಹಾವಿನಂಗೆ....
ಮಗು ತಪ್ಪು ಮಾಡಿದಾಗ ತಿದ್ದಿ ಹೇಳೋ ತಾಯಿ ಇದ್ದಂಗೆ.....
ಜೀವನ ಪೂರ್ತಿ ಜೊತೆಗೆ ಇರ್ತಿನಿ ಅನ್ನೋ ಒಂದೇ ಒಂದು ಜೀವ ಅವನು,ನನ್ನ ಜೀವ ಇದ್ದಂಗೆ....

- shaila yalashetti

07 Oct 2023, 11:57 pm

ನನ್ನ ಹುಡ್ಗ

ಎಷ್ಟು ಹೊತ್ತು ಓದ್ತೀಯಾ ಅಂತ ಕೇಳ್ಲಿಲ್ಲ ನನ್ನ ಹುಡ್ಗ,
ಮೂರ್ ಹೊತ್ತು ಎಮ್ಮೆ ತರ ತಿನ್ನೋದು ಮಾತ್ರ ಬಿಡಬೇಡ ಎಂದ.....
ಎಷ್ಟ phone use ಮಾಡ್ತೀಯಾ ಅಂತ ಬೈಯ್ಲಿಲ್ಲಾ ನನ್ನ ಹುಡ್ಗ ,
daily extra data pack ಅವ್ನೆ ಹಾಕಿಸ್ತೀನಿ ಎಂದ ....
ಜಾಸ್ತಿ ಹೊತ್ತು ನಿದ್ದೆ ಮಾಡೆಂದ ನನ್ನ ಹುಡ್ಗ ,
ಆರೋಗ್ಯ ಚೆನ್ನಾಗಿರತ್ತಂತಲ್ಲ ನನ್ನ ಕಾಟ ಸ್ವಲ್ಪ ಹೊತ್ತಾದ್ರು ತಪ್ಪುತ್ತೆ ಎಂದ....
ಚೆನ್ನಾಗಿ ಓದಿ ಡಿಗ್ರೀ ಮಾಡು ಅನ್ಲಿಲ್ಲ ನನ್ನ ಹುಡ್ಗ,
ಡಿಗ್ರೀ ಆಗ್ಲಿಲ್ಲ ಅಂದ್ರು ಪರವಾಗಿಲ್ಲ ಕಸಮುಸುರೆ ಮಾಡಕ್ಕಾದ್ರು ಕಲಿಯಂದ ....
valentine's day ಗೆ gift ಏನೂ ಕೊಡಲಿಲ್ಲ ನನ್ನ ಹುಡ್ಗ,
ಯಾಕ್ ಅಂದ್ರೆ costly ಹೃದಯಾನೇ ಕೊಟ್ಟೀನಿ ಎಂದ........

- shaila yalashetti

07 Oct 2023, 10:21 pm

ಕನ್ನಡ ಹಬ್ಬ


ಅಣ್ಣ ಅಣ್ಣ ಬಾರಣ್ಣ
ಕನ್ನಡ ಹಬ್ಬವ ಮಾಡೋಣ
ಹೆಮ್ಮೆಯ ನಾಡಿಗೆ
ಚಿನ್ನದ ಭೂಮಿಗೆ
ಎಲ್ಲರು ಒಗ್ಗೂಡಿ ನಮಿಸೋಣ

ಜಾತಿ-ಮತ ಭೇದ ಮರೆತು
ಮೇಲು-ಕೀಳು ಭಾವ ತೊರೆದು
ಕಾವೇರಿ ನೀರನು ತಂದು
ಭುವನೇಶ್ವರಿ ಪಾದವ ತೊಳೆದು
ಮಾಡೋಣ ಕನ್ನಡ ಹಬ್ಬವ ಮಾಡೋಣ
ಅಣ್ಣ ಎಲ್ಲರು ಕೂಡಿ ನಲಿಯುತ ಹಾಡೋಣ

ಅರಿಶಿಣ-ಕುಂಕುಮ ಬಾವುಟ ಚೆನ್ನ
ಗೋಡಂಬಿ ಆಕಾರದ ಭೂಪಟ ಚೆನ್ನ
ಅಮ್ಮನ ಹಣೆಗೆ ಗಂಧವ ಹಚ್ಚಿ
ಚಿನ್ನದ ಮುಡಿಗೆ ಮಲ್ಲಿಗೆ ಚುಚ್ಚಿ
ಘನತೆಯ ಬಾವುಟ ಹಾರಿಸಿ ಹಬ್ಬವ ಮಾಡೋಣ
ಅಣ್ಣ ಸಂಭ್ರಮದಿ ನಾವೆಲ್ಲರು ತೇಲೋಣ

ನಾಡನು ಕಟ್ಟಿದ ಧೀರರಿಗೆ ಮಣಿದು
ನಮ್ಮನು ಆಳಿದ ವೀರರ ನೆನೆದು
ಕಾಯದ ಬತ್ತಿಯ ಹೊಸೆದು
ತ್ಯಾಗದ ತೈಲವ ಸುರಿದು
ಬೆಳಗೋಣ ಸ್ವಾಭಿಮಾನದ ಹಣತೆ ಬೆಳಗೋಣ
ಅಣ್ಣ ನಮ್ಮ ನಾಡಗೀತೆ ಹಾಡುತ ನಲಿಯೋಣ

ಕರುಣೆಯ ಬೀಡು ಕರುನಾಡು
ಇದುವೆ ಸೌಹಾರ್ದತೆಯ ಗೂಡು
ಪರರಿಗು ಕನ್ನಡ ಕಲಿಸಿ
ನಾಡಿನ ಸವಿಯನು ಉಣಿಸಿ
ಸಿಹಿಯನು ಎಲ್ಲೆಡೆ ಹಂಚಿ ಹಬ್ಬವ ಮಾಡೋಣ
ಅಣ್ಣ ಮನದುಂಬಿ ಹಾಡುತ ನಲಿಯೋಣ


- ಶಕುಂತಲಾ

07 Oct 2023, 03:00 pm

#ನನ್ನವಳು..

#ನಾ ಬರೆದ ಕವಿತೆಗೆ ನೀನೇ ರೂವಾರಿ...
#ನನ್ನೆದೆಯ ಮೇಲೆ ನಿನ್ನದೆ ಶಾಹಿರಿ...

#ನೀ ಇರಲು ಸನಿಹ...
#ಬೇರಾರು ಬೇಡ ನಿನ್ನ ತರಹ..


#ಬಂದು ನಿಲ್ಲು ದಡದಲ್ಲಿ ನಿನ್ನ ಕಾಲ್ತೊಳೆವ ಅಲೆಯಾಗುವೆ...
#ನಕ್ಕು ಬಿಡು ಒಲವೆ ನಿನ್ನ ನಗುವಲ್ಲಿ ಜೇನ ಹೊಳೆಯಗುವೆ...
ಶರತ್ ನಾಯ್ಕ್/..

- ಶರತ್ ನಾಯ್ಕ್../

07 Oct 2023, 12:37 pm

ಹಳೆ ಪ್ರೇಯಸಿ ಆಣೆಗೂ...

ಮಹಿಳೆಯರಿಗೆ ಉಚಿತ ಪ್ರಯಣ
ಅಂಥದ್ದೇನೋ ಸರ್ಕಾರ ಮಾಡವ್ರೆ...
ನನ್ನವಳಿಗೆ ನನ್ನ ಮನ್ಸು , ಕನ್ಸು
ಬಿಟ್ಟು ಬೇರೆ ಯಾವ್ದೇ ಉಚಿತ
ಪ್ರಯಾಣ ಬೇಡ ಅಂತ ಕಾಣ್ಸುತ್ತೆ...
ಹಳೆ ಪ್ರೇಯಸಿ ಆಣೆಗೂ ಅವಳು
ನೋಡೋ ನೋಟಕ್ಕೆ ನಾ
ಸೋತ್ರು ಪ್ರತಿ ಬಾರಿ ಸ್ವರ್ದಿಸುವ....
ಎಮ್.ಎಸ್.ಭೋವಿ...✍️

- mani_s_bhovi

02 Oct 2023, 10:12 pm

ನಲ್ಮೆ

ಒಲವು ಮೌನವಾಗಿ ಮನವ ಸೇರಿದೆ...
ಸರಿ ತಪ್ಪು ತಿಳಿಯದಾಗಿದೆ...
ಎಂದೋ ಕಾದಿದ್ದ ದಿನಾವಿಂದು ಕಣ್ಣೆದುರು
ಬಂದಂತಾಗಿದೆ..
ಒಪ್ಪಿಗೆಯ ಸೂಚಿಸಲೇ...?
ಅಪ್ಪುಗೆಯಲಿ ಬಂಧಿಯಾಗಿಬಿಡಲೇ...?
ಪ್ರೀತಿಯಲಿ ಈ ಸೆಳೆತವೇಕೊ ಕಾಡಿಹುದು..
ನೀ ಜೊತೆ ಇದ್ದರೆ ಕಹಿಯೂ ಸಿಹಿಯಾಗುವುದು..
ತಿಳಿದು ತಿಳಿಯದ ನಲ್ಮೆ ನಿನ್ನದು..
ಬೇಕಿದ್ದೂ ಬೇಡವೆಂದ ಹೃದಯ ನನ್ನದು...

✍️ತನುಮನಸು

- Tanuja.K

28 Sep 2023, 05:43 am

ರಾಧೆ

ಹೇ ರಾಧೆ..
ನಿನ್ನ ನೋಡಿ ನಾನು ಮತ್ತೊಮ್ಮೆ ಮಾಧವನಾದೆ..
ನಿನ್ನ ಬರುವಿಕೆಗೆ ಈ ಜನ್ಮದವರೆಗೂ ನಾ ಕಾದೆ..
ನಿಲ್ಲೇ ನಿಲ್ಲೇ ನೀ ಎಲ್ಲಿಗೆ ಹೋದೆ.?
ನಿನ್ನ ಮಡಿಲಲ್ಲಿ ನಾನು ಮರಳಿ ಮಾಗುವಾದೆ.


✍️ ಬಸವರಾಜ ಗುಡೆನ್ನವರ

- basavaraj gudennavar

25 Sep 2023, 11:38 pm

ಹೇಳು ಗೇಳತಿ...

ನಾ ಚೂರು ಪೋಲಿಯಾಗಬೇಕು

ನಿನ್ನೊಪ್ಪಿಗೇ ಇದಿಯಾ ಹೇಳು...

ನಿನ್ನ ಮಡಿಲಲ್ಲಿ ಮಲಗಿ ಆಕಾಶ ನೋಡಬೇಕು

ಮಡಿಲು ನೀಡುವೆಯಾ ಹೇಳು..

ಇಳಿ ಸಂಜೆಯ ಚಳಿಯಲ್ಲಿ

ಬೆಚ್ಚುಗೆಯ ಅಪ್ಪುಗೆ ಬೇಕು

ಅಪ್ಪಿಕೊಳ್ಳುವೆಯಾ ಹೇಳು...
. ಎಮ್.ಎಸ್.ಭೋವಿ...✍️
.
.
.
.
.
.
.

- mani_s_bhovi

23 Sep 2023, 07:22 pm

ಮನಸ್ಸಿನ ವೀಣೆ

- ನೆನಪಿನ ಕವಿತೆ

20 Sep 2023, 04:49 pm

ಸಾಲದ ಪ್ರೀತಿ

ಇದ್ದಾಗ ಜೊತೆ ನೀನು
ಮರೆವೇ ನನ್ನನ್ನೇ ನಾನು

ನಿನ್ನ ಮೊಗವ ನೋಡುತ್ತಾ
ಕುಳಿತೆನು ಕಾಲ ಕಳಿಯುತ್ತಾ

ಕೂತಿಹೆ ನಿನ್ನ ಬಳಿ
ಚಿಂತೆಯ ಮೂಟೆಯ ತಳ್ಳಿ

ನೀನಾಡುವ ಮಾತನು ಕೇಳುತ್ತಾ
ಸರಿ ಪಡಿಸಿದೆನ್ನ ಚಿತ್ತ

ನೀ ಕೇಳಿದನ್ನು ಕೊಡಿಸುತ್ತ
ಜಾಸ್ತಿ ಆಯ್ತು ಸಾಲದ ಮೊತ್ತ

ಅದ ತೀರಿಸಲು ವದ್ದಾಡುತ್ತ
ಹೊರಟು ಹೋದೆ ಊರಿನತ್ತ

- Maheshkumar Swami

17 Sep 2023, 10:27 pm