Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರವಿ

ಬಯಸುತ್ತಿದೆ ಸವಿಯಲು ನಿನ್ನ ಸೌಂದರ್ಯವನ್ನು
ಅಡಗಿಸಿತ್ತು ಮಂಜು ಮೋಡಗಳನ್ನು
ಹುಡುಕುತ್ತಿದ್ದವು ಕಣ್ಣುಗಳು ನೀನನ್ನು

ಸೋಲುವ ಹೊರಾಟವಾದ ಜೀವನದಲ್ಲಿ
ಬಿಡುವು ಮಾಡಿಕೊಂಡು ಬಂದಿಯೇನು
ಉಸಿರಾಡುವ ಶವವನ್ನಿಟ್ಟುಕೊಂಡು
ನಿನ್ನ ನೋಡಲು,ಮರಳಿ ಚೈತನ್ಯ ಪಡೆಯಲು.

ಬ್ರಹ್ಮಾಂಡವನ್ನು ಬೆಳಗುವ ದೇವನೇ
ನನ್ನ ಅಂತರಂಗದ ದೀಪವನ್ನು ಬೆಳಗು ಬಾ
ಸೋಲುವವರೆಗೆ ಹೊರಾಡಲು ಶಕ್ತಿಯನ್ನು ನೀಡಲು ಬಾ.

- Manju

05 Dec 2025, 05:17 pm

ನೀನಿರಬೇಕು ಜೊತೆಯಲಿ

ಓಲವೇ ಬಲವಾಗಿ,ಮನವು ಹೂವಾಗಿ
ಅರಳುವ ಆ ಘಳಿಗೆಯಲಿ
ನೀನಿರಬೇಕು ಜೊತೆಯಲಿ
ನಗುವಿನ ಗಳಿಗೆಗೆ ಜತೆಯಾಗುವರು
ನೂರು ಜನ
ಕಣ್ಣೀರು ಕೆನ್ನೆಯ ಜಾರುವ ಕ್ಷಣಕೆ
ನೀನೇ ಇರಬೇಕು ಜೊತೆಯಲಿ
ಸಾಗುವ ದಾರಿಯ ದೂರವದೆಷ್ಟೋ?
ಬಾಳಿನ ನಾಳೆಯ ತಿರುವುಗಳೆಷ್ಟೋ?
ಸಾಗಲು ಸವೆಸಲು ಬಾಳಿನ ಪಥವ
ಪ್ರತಿ ಹೆಜ್ಜೆಗೂ ನೀನಿರಬೇಕು ಜೊತೆಯಲಿ
ಗೆಲುವಿನ ದಿನ,ಸೊಲಿನ ಕ್ಷಣ
ಕಲಿತು ಅರಿತು ಮುನ್ನಡೆಯಲು
ನೀನಿರಬೇಕು ಜೊತೆಯಲಿ
ತಿಳಿ ಹಾಸ್ಯಕೆ ನಕ್ಕು ಹಗುರಾಗಲು

ಮಾತಿಗೆ ಅರ್ಥವಾಗಲು ಮೌನಕೆ ದನಿಯಾಗಲು
ಮನದ ನೂರು ಭಾವಗಳಿಗೆ ಬಣ್ಣವಾಗಲು
ನೀನಿರಬೇಕು ಜೊತೆಯಲಿ ,
ಬದುಕಿನ ಬೆಳಕಿನ ರಶ್ಮಿ ಸದಾ ಅನಂತವಾಗಲಿ
ಸದಾ ಅನಂತವಾಗಲಿ

- RASHMI BHAT

05 Dec 2025, 01:28 pm

ಆತ್ಮಕ್ಕಿಲ್ಲ ಮುಪ್ಪು

ಮುಪ್ಪುಆವರಿಸಿದೆ ದೇಹದ ಕಣಕಣವ

ಬಾಗಿದ ಬೆನ್ನು ಸತುವಿಲ್ಲದ ನಡುವು

ಸುಕ್ಕಾದ ಚರ್ಮಕೆ ಲೆಕ್ಕವಿಲ್ಲದಷ್ಟು ನೆರಿಗೆ 

 ಬೆರಳೆಣಿಕೆಯ ಹಲ್ಲು ಬೊಚ್ಚು ಬಾಯಿಗೆ ಮಾಸಿದರೇನು ಚರ್ಮದ ಚೆಲುವು

ಮನದಲಿದೆ ಬದುಕುವ ಬಲವು

ಬೊಚ್ಚು ಬಾಯಲಿ ಮಾಸಿಲ್ಲ 

ಹೂನಗೆಯ ಚೆಲುವು

ಪೊರೆ ಬಂದ ಕಣ್ಣಿಗೂ ನಿತ್ಯ ನೂರು ಕನಸು

ಮಾಗಿದ ಬದುಕಲಿ ದಿನ ಆರಳುವುದು ಮನಸು


ಮುಪ್ಪು ಎಸೆಯುತಿದೆ ಹೊಸ ಹೋರಾಟದ ಹಾದಿಯ

ಮನಸು ನೀಡುತಿದೆ ಮುಪ್ಪ ಮೆಟ್ಟೋ ಧ್ಯೇಯ

ಮುಪ್ಪಿಗಿದ್ದರೇನು ನೂರು ಬದಲಾವಣೆಯ ಗೋಳು

ಬದುಕು ನಿನದೇ ನಗುನಗುತ ಬಾಳು

ಹಾಕದಿರು ಮುಪ್ಪಿಗೆ ಸೊಪ್ಪು

ಇದು ಬರಿ ದೇಹಕೆ ಮನಸಿಗಿಲ್ಲ ಮುಪ್ಪು

 ಭಾವಕಿಲ್ಲ ಮುಪ್ಪು 

ಆತ್ಮಕಿಲ್ಲ ಮುಪ್ಪು

ರಶ್ಮಿ ಭಟ್ಟ

- RASHMI BHAT

05 Dec 2025, 01:22 pm

ನಾ ಕಂಡ ಸಮಾಜ

ಎತ್ತ ಸಾಗುತ್ತಿದೆ ಸಮಾಜ ಅತ್ತ ನೋಡಿದರೆ
ಬಿತ್ತುತಿದೆ ಜಾತಿಯೆಂಬ ಬೀಜ
ಬದುಕಿನ ಪರಿ ಹರಿಯೋ ನೀ ಮನುಜ

ಎಂ ಆರ್ ಮಂಜು ✨❤️

- Manju rolli

05 Dec 2025, 10:56 am


ವಾಟ್ಸಾಪ್ನ ನೀಲಿ ಟಿಕ್ಕೆಗಳು..

ಖಾಲಿ ಕಾಗದ
ಕಳೆದುಹೋದಂತಿದೆ,

ನೀಲಿ ಶಾಹಿ
ಕರಿಬಣ್ಣವಾದಂತಿದೆ,

ನೆನಪ ಪದಗಳು
ಪಾಕ ಕಳೆದುಕೊಂಡಂತಿದೆ,

ಉಸಿರಿಗೆ ಆಮ್ಲಜನಕದ
ಭಾರಿ ಕೊರತೆ ಉಂಟಾದಂತಿದೆ,

ಕಂಗಳ ಮುಂದೆ
ಅಮಿಬಾಕರಗಳು ನರ್ತಿಸಿದಂತಿದೆ,

ಮುಂದಿನ ದಾರಿ
ಕವಲಾಗಿ ಕಾಣಿಸದಂತಿದೆ,

ನಾ ಹೇಳುವೆ ಗೆಳತಿ

ನಮಗೆ ನಾವೇ ಭಾವನೆಯ
ಬ್ಯಾಟರಿ ಇಲ್ಲದ ಟಿಕ್ಕೆಗಳು,

ಇದಕ್ಕೆಲ್ಲ ಕಾರಣ
ವಾಟ್ಸಾಪ್ನ ನೀಲಿ ಟಿಕ್ಕೆಗಳು,

ದಣಿದರೆ ತನು ಮನ
ಕಂಡ ಕಳ್ಳ ಮೇಲೆ ಕುಳಿತು ಬಿಡು,

ಅವಸರದಲ್ಲಿ ತುಂಬುವ ಬದಲು
ಬಿಟ್ಟಸ್ಥಳವನು ಖಾಲಿಯಾಗಿರಲಿ ಬಿಡು..

insta:- unique_abhyaa

- abhi.s.j

02 Dec 2025, 09:34 pm

ಹೆಣ್ಣು...

ಹೆಣ್ಣೆ ಓ ಹೆಣ್ಣೆ
ಏನಾಯಿತು ನಿನಗೆ
ಹೀಗೇಕೆ ನಮ್ಮ
ಸಂಕೃತಿಯು
ಬೇಸರವಾಯಿತು ನಿನಗೆ!!

ಕೈ ಬಳೆ ನಿನಗೆ
ಭಾರವು ಆಗಿ
ಮರೆಯಾದವು ಎಲ್ಲಿ,
ಹರಸಿನ ಕುಂಕುಮವು
ಕಲೆಯಾಗಿ
ತೊಳೆದು ಹಾಕಿದೀರೆಲ್ಲಿ.

ಹೆಣೆದು ಹಾಕುತ್ತಿದ ಜಡೆಯು
ಬಿಗಿಯಾಯಿತು ನಿನಗೆಲ್ಲಿ.
ಉಡುವ ಸೀರೆಯು
ಗೊಡವೆಯೂ ಆಗಿ
ತೊಡೆದು ಹಾಕಿದೆ ನೀನೆಲ್ಲಿ.

ನಾಚಿಕೆಯಿಂದ
ತಲೆಬಗ್ಗಿಸಿದ
ಹೆಣ್ಣೆ ಎಲ್ಲಿ
ಗರ್ವದಿ ಮೆರೆಯುತ್ತಿರುವ
ನೀನೇಕೆ ಇಲ್ಲಿ..

insta:- unique_abhyaa

- abhi.s.j

02 Dec 2025, 09:24 pm


ಅವಳು

ನವಿಲಿನ ನಡಿಗೆ
ಚಂದದ ಉಡಿಗೆ
ಲಂಗದ ಹುಡುಗಿ

ಮಾತು ಕೆಲವು
ಅವಳೇ ಒಲವೂ
ಅವಳೇ ಗೆಲವು

ಮೆಚ್ಚಿದಳು ಕಲೆಗೆ
ಕೊಟ್ಟಳು ಸಲಗೆ
ಬಿದ್ದಳು ಬಲೆಗೆ

ಕೊಟ್ಟಳು ನಗುವ
ಕೊಟ್ಟೇನು ಮಗುವ
ಮರೆತಳು ಜಗವ

ಅವಳ ನಗುವು ನನ್ನ ಕೊಡುಗೆ
ಅವಳ ಮನಸು ನನ್ನ ಕಡಿಗೆ
ಅವಳು ನನ್ನ ಮರೆಯಲಿಲ್ಲ ಕಡೆಗೆ

insta:- unique_abhyaa

- abhi.s.j

02 Dec 2025, 09:18 pm

ನಾನು ಮತ್ತೆ ಬರೆಯುತ್ತೇನೆ ??

ನಾನು ಮತ್ತೆ ಬರೆಯುತ್ತೇನೆ

ನಾನು ಮತ್ತೆ ಬರೆಯುತ್ತೇನೆ
ನಾನು ಮತ್ತೆ ಬರೆಯುತ್ತೇನೆ

ಹಕ್ಕಿಯಾಗಿ ಹಾರಾಡುತ್ತಾ
ನವಿಲಾಗಿ ಕುಣಿಯುತ್ತಾ
ಕೋಗಿಲೆಯಾಗಿ ಹಾಡುತ್ತಾ
ಮನತುಂಬಿ ನಗುತ್ತಾ
ದುಂಬಿಯಾಗಿ ನಲಿಯುತ್ತಾ
ನಾನು ಮತ್ತೆ ಬರೆಯುತ್ತೇನೆ
ಸಹೃದಯಿಗಳ ಭಾವ ಬೆರೆಯುತ್ತೇನೆ...

ಮನದೊಳಡಗಿದ ನೋವನೆಲ್ಲಾ ಮರೆಸಿ
ನೊಂದ ಹೃದಯಗಳ ಕಂಬನಿಯ ಒರೆಸಿ
ಬಂಧನದ ಭಾವುಕತೆಯ ಬವಣೆ ಸರಿಸಿ
ಸಾಂತ್ವನ ಸಿಂಚನವನೆಲ್ಲವನು ಸುರಿಸಿ
ಸಂತೋಷ ನೆಮ್ಮದಿಗಳ ಮೌಲ್ಯ ಮೆರೆಸಿ
ನಾನು ಮತ್ತೆ ಬರೆಯುತ್ತೇನೆ
ನಾನು ಮತ್ತೆ ಬರೆಯುತ್ತೇನೆ...

- ರೇವು ಮರ್ಯಾಯಿ ??

- Revanna Maryayi

30 Nov 2025, 09:44 am

ನಾನು ಕವಿತೆಗಳ ಬರೆಯಲು

ನಾನು ಕವಿತೆಗಳ ಬರೆಯಲು

ನಾನು ಕವಿತೆಗಳ ಬರೆಯಲು
ಪದಗಳ ಭಾವಜ್ಯೋತಿಯೇ ನೀನು,
ನನ್ನೊಳಗಿನ ಕವಿತ್ವದ
ದಿವ್ಯ ಚೇತನವೇ ನೀನು,

ನೀನಿರದೇ ಪದಗಳಿಲ್ಲ,
ನೀನಿರದೇ ಕವಿತೆಗಳಿಲ್ಲ,
ನೀನಿರದೇ ಈ ಕವಿಯೂ ಇಲ್ಲ,
ನೆನಪಿರಲಿ,
ಈ ಬಡವ ಬರಹಗಾರನ
ಹೃದಯಕೆ ಬಾಗಿಲೂ ಸಹ ಇಲ್ಲ!!!

ನನ್ನೆದೆಯ ದಿವ್ಯ ಚೇತನವಾಗಿ ಬಂದು
ಭಾವಗಳ ಅಪರಿಮಿತ ಸ್ಪೂರ್ತಿಯ ತಂದು,
ಪದಗಳ ಭಾವಜ್ಯೋತಿಯಾಗುವೆಯಾ?
ಕವಿತೆಗಳ ಕಾರುಣ್ಯ ಮೂರ್ತಿಯಾಗುವೆಯಾ?
ಈ ಭಾವುಕ ಬಡ ಕವಿಯ ಹೃದಯದರಸಿಯಾಗುವೆಯಾ?
ಹೃದಯದರಸಿಯಾಗುವೆಯಾ?

- ರೇವು ಮರ್ಯಾಯಿ ♥️?

- Revanna Maryayi

30 Nov 2025, 09:02 am

ಅಮ್ಮನ ಬಗ್ಗೆ ಒಂದೆರೆಡು ಮಾತು

ಲೋಕದೆ ಹಿರಿದು ಮಾತೆಯ ಮಮತೆಯು,
ಅವಳ ಪ್ರೀತಿಯ ಉಣ್ಣುವ ಸೌಭಾಗ್ಯವು,
ದೊರೆತ ಮಾನವ ಜನ್ಮ ಸಾರ್ಥಕವು,
ಅಮ್ಮನೆ ಮಗುವಿನ ಸರ್ವಸ್ವವು,

ಅಮ್ಮನೆಂದರೆ ಕಾಳಜಿಯು,
ಸಂಸಾರದ ಸುಖ ಸಂತೋಷವು,
ಅವಳೇ ಎಲ್ಲರ ನಿಜದೈವ,
ಪೊರೆವಳು ತಾನುಂಡು ನೋವ.

ಮಗುವಿನ ಪಾಲನೆ ಪೋಷಣೆಗೆ,
ಮುಡಿಪಾದ ಜೀವನ ಅವಳದೆ,
ಬದುಕುವ ರೀತಿಯ ಕಲಿಸಿದಳು,
ನಿಸ್ವಾರ್ಥ ಪ್ರೇಮವ ಉಣಿಸಿದಳು.

ಅವಳ ಸೇವೆಯ ಭಾಗ್ಯವು ,
ದೊರೆತರೆ ಬಾಳು ಸ್ವರ್ಗವು,
ಅಶಕ್ತರೆಂದು ಅವಗಣಿಸದೆ,
ಅನುಸರಿಸುವ ಮಾರ್ಗದಿ ಗೆಲುವಿದೆ...!!

*#ಅಮ್ಮ?❤️*

*#ರೇವು ಮರ್ಯಾಯಿ ♥️?

- Revanna Maryayi

29 Nov 2025, 07:55 pm