Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಿಳಿಯದಾದೆನನು ನಿನ್ನ ಹೃದಯವ (ಓ ಹೃದಯಾ ♡ ಕೇಳಿ

ನೀನಾದೆ ಮಿಡಿತ ನೀನಾದೆ ತುಡಿತ
ನನ್ನನ್ನು ಸೆಳೆದು
ಹೃದಯದ ಬಡಿತವಾಗಿರಲು
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ

ನೀ ದೂರವಾದರೆ ಬಡಿತವೆ ನಿಂತಂತೆ
ಏನಿದೆ ಹೇಳೇ ಆ ನಂತರ
ಬರೇ ಶೂನ್ಯ ಶೂನ್ಯ ಶೂನ್ಯ
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನು ನಾ
ನಿನ್ನ ಹೃದಯವ

ಆಡೊ ಮಾತಿನಲ್ಲಿ ಪ್ರೀತಿಯಿದೆ
ಇರೊ ಸಲುಗೆಯಲ್ಲಿ ಒಲವಿದೆ
ಕಂಗಳೆರಡು ಬೆರೆತಿರಲು
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ

ಮನವ ಬಿಚ್ಚಿ ನನ್ನಲಿ
ನೀ ಬೆರೆತು ಹೋದೆ
ಯಾವ ಪರಿವೆಯಿಲ್ಲದೆ
ನನ್ನ ಪ್ರೇಮಿಸಿದೆ,
ಮನಸುಗಳೆರಡು ಬೆಸೆಯಲು
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ

ತೇಲಿ ಬಂದೆ ಅಲೆ ಅಲೆಯಾಗಿ
ನನ್ನ ಜೀವನದ ಸಾಗರದಿ
ಕೊಟ್ಟೆ ಹರುಷ ಪರಿ ಪರಿಯಾಗಿ
ನನ್ನುಸಿರಿಗೆ ನಿನ್ನುಸಿರು ಬೆರೆಸಿ
ದೇಹಗಳು ಒಂದಾದಾಗ
ಯಾಕೆ ಹೇಳುವೆ... ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ...
 
ನಮ್ಮಿಬ್ಬರ ಮೊದಲ ಮಿಲನ 
ಏಳೇಳು ಜನುಮಕೆ
ಮರೆಯದ ಕ್ಷಣವಾಗಿರಲು
ನಿನ್ನಲ್ಲಿ ಬೆರತು
ನನ್ನ ನಾ ಮರೆಯಲು
ಯಾಕೆ ಹೇಳುವೆ... ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ...

- Pb

31 Dec 2016, 07:13 am

ಪ್ರಯಾಣ

ಉಲ್ಲಸದ ಕ್ಷಣ
ಸಂತೋಷದ ಮನ
ಹಂಬಲಿಸುವ ಘಳಿಗೆ
ಹಾತೊರೆಯುವ ಸಮಯ
ಭಾವುಕತೆಯ ಸಂದರ್ಭ
ಈ ಪ್ರಯಾಣದ ಮನ.

- ರಾಜು ಹಗ್ಗದ

31 Dec 2016, 06:40 am

ಒಲವು-ಗುಂಗು-ನೆನಪು

ಹರಿಯುವ ಗಂಗೆಯಂತೆ
"ಒಲವು"
ಸಾವಿರ ಹೆಣಗಳೆ ಸರಿದರೂ
ನಿಲ್ಲಳು
ಸಾಗರನೆಡೆಗೆ ಸರಿವಳು
ಮಂಜುಗಡ್ಡೆಗಳನೆಲ್ಲಾ ಕರಗಿಸಿಕೊಂಡು....

ಸುತ್ತುವ ಸುಳಿಗಳಂತೆ
"ಗುಂಗು"
ಎಂತಹುದು ಅದೇನೇ ಬಂದರೂ
ಸೆಳೆವಳು
ಪಾತಾಳಕೆ ಎಳೆವಳು
ಯೋಚನೆಯಲಿ ತನ್ನೊಳು ತಾ ಕೊರಗಿಕೊಂಡು...

ಭಾವಗಳ ಹಗೇವಿನಂತೆ "ನೆನಪು"
ಸಿಡಿವ- ಬರದಲೂ
ಸಿಡಿಲು-ಮಳೆಯಲೂ
ಕಾಯುವಳು
ಜೋಪಾನದಿ ಕಾಪಾಡುವಳು
ಎದೆಗೂಡ ಗಟ್ಟಿ ಬಂಡೆಯಾಗಿಸಿಕೊಂಡು.....

.................ಗರಿಮಾಮ.

- Prasanna kumar K S

30 Dec 2016, 11:50 pm

ಮನದ ಒಪ್ಪಿಗೆ...

ಹೃದಯ ಅಡವಿಟ್ಟು ಪ್ರೀತಿ ಖರೀದಿ ಮಾಡಿದೆ ನಾನು
ಉಳಿಯುವೆಯ ಬಹುಕಾಲ ಪ್ರೀತಿಯ ಜೊತೆ ನೀನು....!

ಯಾಕೋ ಪಶ್ಚಾತಾಪವಾಗುತ್ತಿದೆ ಮಾಡಿದ ತಪ್ಪಿಗೆ
ಕೇಳ ಬೇಕಿತ್ತೇನೋ ಅನ್ನಿಸುತ್ತಿದೆ ನಿನ್ನ ಮನದ ಒಪ್ಪಿಗೆ....!

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

30 Dec 2016, 11:50 pm

ನಿನ್ನಲಿ ಬೆರೆಯುವೆ (ಓ ಹೃದಯಾ

ನಿನ್ನ ನೋಡಲೆಂದು ಕಾದಿರುವೆ ಇಂದು
ಬರುವೆನು ಬೇಗ ನಿನ್ನ ಸೇರಲೆಂದು
ನಿನ್ನ ನೋಡಲೆಂದು ಕಾದಿರುವೆ ಇಂದು
ಬರುವೆನು ಬೇಗ ನಿನ್ನ ಸೇರಲೆಂದು

ನಿನ್ನ ತೋಳಲಿ ಬಳಸಿ
ಹಾಡುವೆನು ಪ್ರೇಮರಾಗ
ನಾನು ನೀನು ಸೇರಲು
ಅದುವೇ ಅನುರಾಗ
ನಿನ್ನ ಬಳೆಯ ನಾದವೇ
ನಮಗೆ ಪ್ರಣಯರಾಗ
ನಿನ್ನ ಗೆಜ್ಜೆ ಸ್ವರಕೆ ಪಲ್ಲವಿ ಬೆರೆತಾಗ

ಕೆಂಪು ಸೀರೆ ಧರಿಸಿ
ನೀ ಬಾಗಿಲು ಬಂದು ತೆರೆದಾಗ
ನಾಚುತ ನೀರನು ಕೇಳಿದಾಗ
ನನ್ನ ಮನದಲಿ ಏನೊ ರೋಮಾಂಚನ
ಅಪ್ಪಿ ಮುದ್ದು ಮಾಡುವ ಹಂಬಲ

ನಿನ್ನ ನಾಚಿಕೆ ಮೊಗವ
ಕಂಡಾಗ
ಬಳುಕುವ ನಡ ಹಿಡಿದು ನನ್ನ ಬಳಿ ಎಳೆದಾಗ
ಕೆಂಪು ಗಲ್ಲ ಹಿಡಿದು ಚುಂಬಿಸುವೆ
ತುಂಟ ನಗೆ ನಕ್ಕಾಗ
ನಿನ್ನ ಪ್ರೀತಿ ಮಾಡುವೆ

ನಾಚಿ ನೀ ನಿಂತಾಗ
ಕೆಂದುಟಿಯ ಸಿಹಿ ಜೇನು ಹೀರುವೆ
ನಿನ್ನ ಹೃದಯ ಮಿಡಿದಾಗ
ಆ ಉಸಿರಲಿ ಉಸಿರಾಗಿ
ನೀನು ನಾನಾಗಿ ನಾನು ನೀನಾಗಿ
ದೇಹಗಳು ಒಂದಾಗಿ ನಿನ್ನಲಿ ಬೆರೆಯುವೆ

- Pb

30 Dec 2016, 10:01 pm

ನಕ್ಷತ್ರಗಳು--೪

ಭೂಮಿಯ ಅಸಂಖ್ಯ
ಜನಕೋಟಿಯ
ಪ್ರತಿಬಿಂಬ-ಗಗನದ
ಕನ್ನಡಿಯಲ್ಲಿ
ಮಿನುಗುವ ನಕ್ಷತ್ರಗಳಾಗಿ
ರಾತ್ರಿ ಯ
ಮೌನ ದಲ್ಲಿ.
****ಪದ್ಯಾಣ.

- padyana

30 Dec 2016, 09:48 pm

ಸೌಂಧರ್ಯದ ಲಹರಿ

ಕಣ್ಣಲ್ಲಿ ಕವನ.
ತಿಳಿಸುವ ಮದುರ ನಯನ.!

ಮನದಲ್ಲಿ ಮನಸ್ಸು!
ಕಾಣುವ ಮುದಾದ ಕನಸು!

ತುಟ್ಟಿಯಲ್ಲಿ ಹೊಳಪು!
ಬಂಗಾರದ ಚುಂಬನಗಳ ಬೆಳಪು!

ಮುಖದಲ್ಲಿ ಮಂದಹಾಸದ ಲಹರಿ!
ನನ್ನ ಎದೆಯಲ್ಲಿ ನೀನಾದೆ ರುವಾರಿ!

ಸೂರ್ಯನಿಗಿಂತ ಹೆಚ್ಚು ನಿನ್ನಲ್ಲಿ ಕಾಂತಿ!
ನನ್ನ ಬಾಳಲ್ಲಿ ಬರುವುದು ನೆಮ್ಮದಿಯ ಶಾಂತಿ!

ನನ್ನ ಮುದಾದ ಮನಸ್ಸಿನ ತುಂಬ!
ನಿನ್ನ ಎದೆಯ ಆಧಾರಾದ ಪ್ರತಿಬಿಂಬ!

ನಿನ್ನ ನಡೆ ನುಡಿಯಲ್ಲಿರುವ ಲಾವಣ್ಯ!
ನನ್ನ ಜೊತೆ ಶುಭಮಸ್ತು ಕಲ್ಯಾಣ!

ನಿನ್ನಲ್ಲಿರುವ ಸೌಂಧರ್ಯ ಸುಮದುರ!
ಸವಿದವನೆ ಬಾಳಲ್ಲಿ ಅಮರ!

ಧರ್ಮ

- Dharma

30 Dec 2016, 05:30 pm

*ಕಳೆದು ಹೋದ ಕ್ಷಣ ಮತ್ತೆ ಬರು

ಕಳೆದು ಹೋದವು ಅನುಭವದ ಹಳೆಯ ದಿವಸ!
ಬರಲಾರಂಭಿಸಿದವು ಹೋಸ ವರ್ಷಗಳ ವಸಂತ!

ಏಳುಬೀಳುಗಳನ್ನು ಕಂಡೆವು ದಿನನಿತ್ಯ!
ಇನ್ನಾದರು ದೂರವಾಗಲ್ಲಿ ಕಷ್ಟಕಾರ್ಪುಣ್ಯ ಪ್ರತಿನಿತ್ಯ!

ದೇಶದಲ್ಲಿ ಆನೇಕ ಸಂಪನ್ಮೂಲಗಳನ್ನು ಕಳೆದುಕೊಂಡು ಮನದಲ್ಲಿ ಕಹಿ!
ಇನ್ನಾದರು ಮುಂದಿನ ದಿನಗಳಲ್ಲಿ ಈ ಘಟನೆ ಬಾರದೆ ಇರಲ್ಲಿ ಮನದಲ್ಲಿ ಸಿಹಿ!

ಹಿಂದೆ ಎದುರಿಸಿದ ಆನೇಕ ತರಹದ ನೋವು!
ಮುಂದೆ ಮರುಕಳೆಸದೆ ಬಾಳಲ್ಲಿ ಇರಲ್ಲಿ ಸಂತೋಷದ ನಲಿವು!

ಹಳೆಯ ಅನುಭವದ ಸೋಲಿನ ಮೇಟ್ಟಿಲು!
ಹೊಸ ದಿನಗಳಲ್ಲಿ ನಿಧಾನವಾಗಿ ಏರುತ್ತೀರು
ಗೆಲುವನ್ನು ಮುಟ್ಟಲು!

ಎಲ್ಲರ ಬಾಳಲ್ಲಿ ಬರಲ್ಲಿ ಸಂತೋಷದ ಹೊಂಗೀರಣದ ಕಿರಣಗಳು!
ನಿಮ್ಮ ಬದುಕಿನಲ್ಲಿ ಬರಲ್ಲಿ ಸಂತೋಷದ ಹೊಸ ತಿರುವುಗಳು!

ಧರ್ಮ

- Dharma

30 Dec 2016, 04:56 pm

ಮಧುರ ಪ್ರೀತಿ

ಎನ್ನ ಮನ ಮಿಡಿದ ಮಾತು
ಎದೆ ತುಂಬಿ ಬಂದಾಗ ಹಿಂದೆಂದೂ ನಾ
ಕಾಣದ ಭಾವನೆ ಪ್ರೀತಿಯೆಂದು ತಿಳಿದಾಗ
ಕಣ್ಣ ಮುಚ್ಚಿ ಕಂಡೆ ಹೊಸ ಲೋಕವ,ಸಖಿ.
ಕತ್ತಲೆಯ ಹುಡುಕಿ ಮಂಕಾದೆ
ಎಲ್ಲೆಲ್ಲೂ ಬೆಳಕು.
ಅಪರವ ಗೆಲ್ಲುವ ಶಕ್ತಿ ಮಿತಿಮೀರಿತ್ತು,
ಮನಸ ಪೋಣಿಸಿ ಹುಡಕಿದೆ
ಮುಗ್ಧನಾಗಿ....ಸಖಿ

ವಿ.ಸಿ

- śsș

30 Dec 2016, 10:05 am

ಸಿನಿಮಾ

ಮನರಂಜಕ ಮಸಾಲೆ ಚಹಾ ಇದು
ಸುಮದುರ ಸಂಗಿತದ ಸಮ್ಮಿಲನವಿದು
ಮನ ಮೆಚ್ಚಿದ ನಟಿ ನಟರ ಅಭಿನಯವಿದು
ನಮ್ಮೆಲ್ಲರ ನೆಚ್ಚಿನ ಸಿನಿಮಾ ಇದು
.......ಭವ್ಯಶ್ರೀ

- ಚುಕ್ಕಿ

30 Dec 2016, 09:09 am