Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊನಿಲಿನ ವರುಷ

ಕಣ್ಣಂಚಿನ ಕನಸು
ಮರೆಯಾದ ಮಾತು
ಕಾಡುವ ನೆನಪು
ಕಂತೆ ಕಟ್ಟಿರುವಾಗ

ಎದೆಯಾಳದ ನೋವು
ಕರಗದ ಭಾವನೆ
ಸಿಗದಿರುವ ಪ್ರೀತಿ
ಮಡಗಟ್ಟಿರುವಾಗ

ಗತಕಾಲ ಮರೆಸಿ
ಮಿಂಚಂತೆ ಮಿಂಚಿ
ಹೊಸಬಾಳ ಬೆಳಗಲು
ಬರುತಿದೆ ಹೊಸ ವರ್ಷದ ಹೊನಲು

ತುದಿಗಾಲ ಮೇಲ್ ನಿಂತು
ಕೈಯರೆಡು ಮೇಲ್ ಚಾಚಿ
ನಿನ್ನವರಿಗೆ ಕೂಗಿ ಹೇಳು
ಹೊಸ ವರುಷದ ಶುಭಾಶಯ

- ವೆಂಕಟೇಶ್ ದೈಶಿ ವೇಮಗಲ್

01 Jan 2017, 01:15 am

ನಿನಗಾಗಿ ಮೀಸಲು... (ಓ ಹೃದಯಾ

ಮನಸೇಕೋ ಹಪಿಸುತಿದೆ,
ನಿನ್ನ ನೋಡಲೆಂದು.... 

ಕಾಡುತಿದೆ ಅರಿಯದ 
ಭಯವೊಂದು, ಈ
ಹೃದಯದ ಬಡಿತ ನಿಲ್ಲುವ ಮುನ್ನ.... 

ಹೇಳಬೇಕಿದೆ ಮಾತೊಂದು
 ಇಂದಿಗೂ ಈ ಹೃದಯ
"ನಿನಗಾಗಿ ಮೀಸಲೆಂದು"... 

ಪಡೆಯಬೇಕಾಗಿದೆ ಅಪ್ಪಣೆಯೊಂದು,
ಮಲಗಲು ನಿನ್ನ ಮಡಿಲಲಿ,
ಈ ಉಸಿರಿನ ಕೊನೆ ಘಳಿಗೆಯಲಿ.... 

ನನ್ನ ಕೊನೆಯ ಆಸೆ
ಪೂರೈಸಿದೆಯೆಂದು, ಹೇಳುತ,
ಕಣ್ಮರೆಯಾಗಬೆಕೆನಿಸಿದೆ ಇಂದು....        

- Pb

01 Jan 2017, 12:33 am

ನೂತನ ವರುಷ

ನೂತನ ವರುಷ ತರಲಿ
ಮಂದಹಾಸ ಮುಖದಲಿ
ಹಳೆ ವರುಷ ಸೇರಲಿ
ಸವಿನೆನಪುಗಳ ಸಾಲಲಿ
–ಭವ್ಯಶ್ರೀ

- ಚುಕ್ಕಿ

01 Jan 2017, 12:20 am

ಮುಂಗಾರ ನಿರೀಕ್ಷೆ!

ನಿನಗೇ-ನನ್ನ
ನನಗೇ-ನಿನ್ನ
ಮನಸೀನ ಬೆಸೆತ? ಅದು ಯಾಕೆ! ಯಾರಿಷ್ಟ?

ನಾನೆಂಬ ಮನಸ್ಯಾರೋ
ನೀನೆಂಬ ಮನಸ್ಯಾರೋ
"ಪರವಶವೇಕೆ ಮನ-ಮನಸು?"

ನನ್ನೊಳಗಿನ ಎಲ್ಲಾ ನಾನೇನಲ್ಲ!
ನಿನ್ನೊಳಗಿನ ಎಲ್ಲಾ ನೀನೇನಲ್ಲ!
ಯಾರ್-ಯಾರೋ ಎಲ್ಲೆಲ್ಯೋ ಅದು ಯಾಕೆ? ಯಾರಿಷ್ಟ.

ಒಲವನ್ನೇ ಧ್ಯಾನಿಸಿ
ನೆನಪಿನ ಉಳುಮೆ
"ಮುಂಗಾರ-ನಿರೀಕ್ಷೆ! ಅದು ಯಾಕೆ, ಯಾರಿಷ್ಟ??

.......................ಗರಿಮಾಮ?!?!

- Prasanna kumar K S

31 Dec 2016, 11:39 pm

ವಿದಾಯ

ನಿಂತಿರುವೆ ಆಗಸಕೆ ಕಣ್ನೆಟ್ಟು
ಹೊಸ ಕಿರಣದ ಆಗಮನಕೆ
ಈ ಇರುಳಿಗೆ ಹೇಳಿ ವಿದಾಯ

ಮುಚ್ಚಿದ ಕಂಗಳಲಿ ಕಾಣುತ್ತಾ
ಹೊಂಗನಸೊಂದು ಸುಂದರ
ಬೇಡದ ದುಮ್ಮಾನಕೆಹೇಳಿ ವಿದಾಯ

ಬೇರೇನೂ ಕೇಳೆ ನಾ ದೇವಾ
ಕೃಪೆ ಇರಲಿ ಸದಾ ನಮ್ಮ ಮೇಲೆ
ಹೊಸ ವರ್ಷ ತರಲಿ ಸುಖ ಸಕಲರಿಗೆ
ಬಾ ಎಂದು ಕರೆಯುತ ನವವರ್ಷವ
ಹೇಳುತ್ತಾ ಹಳತಿಗೆ ವಿದಾಯ
ವಿದಾಯ ವಿದಾಯ.....

ಕವಿ ರಾಜ

- kavita Rajesh

31 Dec 2016, 11:24 pm

ಹಣೆಬರಹ... (ಓ ಹೃದಯಾ ♡ ಕೇಳಿದೆಯಾ)

ದಿನ ಮುಳುಗಿದ್ದರು
ಇನ್ನೂ ರಾತ್ರಿ ಬರುತ್ತಿಲ್ಲ
ನೀ ದೂರವಿದ್ದರು
ನಿನ್ನ ನೆನಪು ಬೆನ್ನು ಬಿಡುತ್ತಿಲ್ಲ
ಆದರೂ ಅದೇಕೋ
ಮನದಂಗಳ ಇನ್ನೂ ಕತ್ತಲಲ್ಲಿದೆ
ಭಾವಗಳೆಲ್ಲ ಕುರುಡಾಗಿದ್ದರು
ಎದೆ ಸುಡುತಿದೆ ವಿರಹದ ಬೇಗೆಯಲಿ
ಭಾವನೆಗಳ ಜೊತೆ ಬೆರೆತಿರುವೆ ನೀನು
ನೀನೇನೆ ಹೇಳು ಜನ್ಮಪೂರ್ತಿ
ನಿನ್ನದೇ ನೆನಪಲ್ಲಿ ನರಳೋದೇ.
ನನ್ನ ಹಣೆಬರಹ....

- Pb

31 Dec 2016, 10:09 pm

ನಕ್ಷತ್ರಗಳು-೫.

ನಕ್ಷತ್ರಗಳು ರಾತ್ರಿಯಲ್ಲಿ
ಭೂಮಿಯ ಗಾಢ ನೀರವತೆಯ
ಅಗಾಧ ಚಟುವಟಿಕೆಗೆ
ಮೌನ ಸಾಕ್ಷಿ ಗಳಾಗಿ -ಅದರ
ಹುಮ್ಮಸ್ಸು-ರಭಸಗಳನ್ನು,
ಮೋಜು-ಮಿಲನಗಳನ್ನು,
ಕುತೂಹಲದಿಂದ ನೋಡುತ್ತಾ
ಕಣ್ಣ ಮಿಟುಕಿಸುತ್ತಾ,
ಲಕ್ಷ ಕೋಟಿಗಳಾಗಿ
ನೆರೆದು-ಮೈ
ಮರೆತು,ಮೇಳೈಸಿದೆ
ಗಗನಪರದೆಯ ಹಿಂದೆ.

*****ಪದ್ಯಾಣ.

- padyana

31 Dec 2016, 05:40 pm

ಹೊಸ ವರಷ

ವರುಷ ವರಷವು
ಹರುಷ ತರಲಿ

ನವ ಬಯಕೆಗಳು
ಅರಳಿ ನಗುತಿರಲಿ

ಹಳೆ ನೆನಪುಗಳು
ದಾರಿ ತೋರುತಿರಲಿ

ಹೊಸ ವರುಷವು
ಮರಳಿ ಬರುತಿರಲಿ

- ಪಿ.ಜಿ.ಜ್ಯೋತಿ

31 Dec 2016, 05:18 pm

ಹೊಸ ವರುಷ ಹೊಸ ಹರುಷ ಹೊಸ ಹುಮ

ನಿತ್ಯ ರವಿ ಕಾಂತಿಯಂತೆ ಹೊಸ ಬೆಳಕು ಮೂಡಲಿ
ಹೊಸ ವರುಷದಂತೆ ,ಹೊಸ ಹರುಷದಂತೆ
ಪ್ರತಿನಿತ್ಯ.

ಆಗಿ ಹೋದವುಗಳು ಬೇಡ, ಆಗು ಹೋಗುಗಳು ಬೇಡ
ವರ್ತಮಾನವ ಕಳಿ ಹೊಸ ಹರುಷದಿ,
ಪ್ರತಿ ದಿನ ಹೊಸ ಉದಯವಾಗಲಿ,
ಕಲ್ಲು- ಮುಳ್ಳಿನ ಬಾಳೊಳಗೆ ,ನೆಮ್ಮದಿಯ ಹೂವೊಂದು ಸಾಕು,
ಜಗಕೆ ಪಸರಿಸು ನಿನ್ನಿಸುಗಂಧವ
ವ್ಯರ್ಥವಾಗುವ ಮೊದಲು,
ಪಾವನವಾಗುವುದು ನಮ್ಮೀ ಜೀವನ.
ಬೆಳಕ ನೀ ಬಯಸುವ ಮುನ್ನ
ಪ್ರಯತ್ನವ ನೀ ಗೆದ್ದಿರಬೇಕು.
ಹೊಸ ವರುಷ ಹೊಸ ಹರುಷ ಹೊಸ ಬೆಳಕು
ತಂದೀತು ಹೊಸ ಬಾಳು.

ವಿ.ಸಿ.

- śsș

31 Dec 2016, 12:50 pm

"ಹದಿನೇಳರ ಸೋಗೆ"

ಹಳತಾದ ಹುಸಿ
ಮನಸ್ತಾಪಕೆ ಹೇಳಿ ವಿದಾಯ.
ಹೊಸ ಭರವಸೆಯ ಬಯಸಿ
ಮನ ರಸಮಯವಾಗಿಸುವ ಈ ಸಮಯ
ಹೂವು ಕಾಯಾಗಿ ,ಹಣ್ಣಾಗಿ
ಮಣ್ಣಾಗಿ,ಹಳತು ಹೊಸದಾಗುವ ರೀತಿ
ನಿನ್ನೆ ಮೊನ್ನೆಗಳ ನಿರೀಕ್ಷೆ ಪೇಲಾಗಿ
ಇಂದು ನಾಳೆಗಳು ಯಶಸ್ಸಾಗುವ ನೀತಿ
ಮರೆಯಾಗಲಿದೆ "ಹದಿನಾರು"ಕನಸಿನ ಹಾಗೆ
ನಾಳೆ ಬರುತಿದೆ "ಹದಿನೇಳು"ನನಸಿನ ಸೋಗೆ
ಹೊಸ ವರುಷದ ಆರಂಭ
ಯಶಸ್ಸಿನ ಕಾಯ೯ದಿಂದಾಗಲಿ ಆರಂಭ.

ರಚನೆ,- ಎ.ಜಿ.ಕಮತಗಿ(ಶಾಂತಿಪ್ರಿಯ)

- "ಶಾಂತಿಪ್ರಿಯ"

31 Dec 2016, 12:42 pm