Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಮ್ಮ ಹೆತ್ತು ಹೊತ್ತು ಬೆಳೆಸಿದ ಮಾತಾಪಿತೃಗಳಿಗೆ,
ನಮ್ಮೊಂದಿಗೆ ಸಂತಸದಿಂದಿದ್ದ ಸಹೋದರ ಸಹೋದರಿಯರಿಗೆ,
ನಮ್ಮ ಬದುಕಿಗೆ ಆಸರೆಯಾದ ಬಂಧುಗಳಿಗೆ,
ನಮ್ಮ ಸಂತಸಕ್ಕೆ ಕಾರಣರಾದ ಬಾಲ್ಯದ ಸ್ನೇಹಿತರಿಗೆ,
ನಮಗೆ ತಿದ್ದಿ ಬುದ್ದಿ ಹೆಳಿದ ಸಮಸ್ತ ಗುರುವೃಂದಕ್ಕೆ,
ಹೊಸ ಪರಿಚಯವಾಗಿ ಚಿರಪರಿಚಿತರಾಗಿ ಉಳಿದ ಎಲ್ಲ ಸಹೃದಯಿ ಜೀವಗಳಿಗೆ,
ನಮ್ಮ ನಗುವಿಗೆ ಕಾರಣರಾದವರಿಗೆ,
ನಮಗೆ ಕಷ್ಟ ಕೊಟ್ಟ ಪುಣ್ಯವಂತರಿಗೆ,
ಕಣ್ಣೀರು ತರಿಸಿದ ಜೀವಗಳಿಗೆ,
ನಗು ತರಿಸಿದ ಮುಗ್ದ ಜೀವಗಳಿಗೆ,
ನಮ್ಮೊಂದಿಗೆ ಬಾಳಿನುದ್ದಕ್ಕೂ ಸಾಗುವ ನನ್ನ ಹೆಂಡತಿಗೆ,
ನಮ್ಮ ಜೀವನದ ಪ್ರತೀಘಳಿಗೆಗೂ ಸಹಾಯ ಮಾಡಿದ ಸಮಸ್ಥ ಪ್ರೀತಿಯ ಸಹೃದಯಿ ಸ್ನೇಹಜೀವಿಗಳಿಗೆಲ್ಲ
ಹೊಸ ವರುಷದ ಶುಭಾಷಯಗಳು.
ರಾಜು ಹಗ್ಗದ
- ರಾಜು ಹಗ್ಗದ
01 Jan 2017, 11:51 am
ಪ್ರೀತಿಯಲ್ಲಿ ಸದಾ ಮಾಮೂಲಿ ಸಂಕಲನ - ವ್ಯವಕಲನ
ಎಂದೆಂದಿಗೂ ಜೊತೆಯಲ್ಲೇ ಇರಲಿ ನಿಮ್ಮತನ...
ಆಗಲಿ ಅಲ್ಲೊಮ್ಮೆ ಇಲ್ಲೊಮ್ಮೆ ಚಿಕ್ಕ ಚಿಕ್ಕ ಸದನ - ಕದನ
ಮೂಡಲಿ ಎಲ್ಲೆಲ್ಲೂ ನಿಮ್ಮದೇ ಸಂಚಲನ...
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:20 am
ನಮ್ಮ ಪಯಣಕೆ ಬೇಕು ನಂಬಿಕೆಯೆಂಬ ವಾಹನ
ರಿಪೇರಿ ಮಾಡಿಸುತ್ತಾ ಸಾಗಿಸಬೇಕು ಯೌವ್ವನ...
ಅಳುತ್ತಾ ನಗುತ್ತಾ ಸಾಗೆ ಸಾಗುವುದು ಜೀವನ
ಕೊನೆಗೊಂದು ದಿನ ಸೇರವುದು ಖಚಿತ ಕಾನನ...
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:19 am
ಪ್ರೀತಿಯಲ್ಲಿ ಕಾಮನ್ನು ಗಡಿಬಿಡಿ
ಆಗಬೇಡಿ ನೀವು ಗಲಿಬಿಲಿ...
ಹೋಗೋರ್ಗೆಲ್ಲ ನೀವು ದಾರಿಬಿಡಿ
ಇಲ್ಲಾಂದ್ರೆ ಒದ್ದಾಡ್ಬೇಕು ವಿಲಿವಿಲಿ....
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:18 am
ತಿರುಗಿ ತಿರುಗಿ ನೋಡಿದಳು ಅವಳು ನನ್ನನ್ನು
ಅಲ್ಲೋಲ ಕಲ್ಲೋಲವಾಯಿತು ಮನಸು ನೋಡಿ ಅವಳನ್ನು..
ಚಿಗುರೊಡೆಯಿತು ಪ್ರೀತಿ ಮನದಲ್ಲಿ ನೋಡಿ ಇವಳನ್ನು
ಆದರೆಲ್ಲೋ ಅನಿಸಿತು ಪ್ರೀತಿಸಿ ತಿನ್ನಬೇಕಾ ಮಣ್ಣನ್ನು.....
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:17 am
ಬಯಸಿದ್ದೆಲ್ಲ ಸಿಗುವುದಿಲ್ಲ ಈ ಜಗದಲಿ
ಸಿಗುವುದನು ಬಯಸುವುದಿಲ್ಲ ಈ ಮನದಲಿ
ಕೆಲವೊಮ್ಮೆ ಬಯಸಿದ್ದು ಸಿಗುವುದು ಕನಸಲಿ
ಕೊನೆಗೆ ಸಿಕ್ಕಿದ್ದನ್ನೆ ಪಡೆದು ಸುಮ್ಮನಾಗಬೇಕು ಜೀವನದಲಿ....
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:17 am
ಸೂರ್ಯನನ್ನೆ ಮರೆ ಮಾಡಿದ ಕಪ್ಪು ಮೋಡಗಳಂತೆ ನಮ್ಮ ಕಷ್ಟಗಳು, ಕೊನೆಗೆ ಗೆಲುವು ಸೂರ್ಯನಿಗೆ ಹೊರತು ಮೋಡಗಳಿಗಲ್ಲ..
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 11:16 am
ಮರೆತು ಹೋಗಲಿ ಮನವೇ
ಕಹಿಯಾದ ಕ್ಷಣಗಳು
ಎಲ್ಲರೆದೆಯೊಳಗೆ ಹೊಸ
ಬಾವದ ಉದಯದಾಳದ
ಹೊಸ ಆನಂದದ ನಂದನ ವನ
ಪಲ್ಲವಿಯಾಗಲಿ ಎನ್ನುವ ಆಶಯ
ನಿಮ್ಮೆಲ್ಲರಿಗಾಗಿ ನನ್ನಿಂದ
ಹೊಸ ವರ್ಷದ ಶುಭಾಶಯಗಳು
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
01 Jan 2017, 10:42 am
ಹಿಂದೆ ಸರಿಯುತ್ತಿದೆ ಹಳೆಯ ವರ್ಷ
ಮುಂದೆ ಕಾಣುತಿಹುದು ಹೊಸ ವರ್ಷ
ಈ ವರ್ಷ ತರಲಿ ನಿಮಗೆಲ್ಲರಿಗೂ ಹರ್ಷ...!!!
ಹೊಸ ಅಧ್ಯಾಯಕ್ಕೆ ಆಗು ನೀ ಮುನ್ನುಡಿ
ಎಲ್ಲೆಡೆ ಪಸರಿಸಲಿ ನಿನ್ನ ಮನದಾಳದ ಕಿಡಿ..!!!
-- ನಿಮ್ಮನೆ ಹುಡ್ಗ Maruthish
- ನಿಮ್ಮನೆ ಹುಡ್ಗ ಮಾರುತೀಶ್
01 Jan 2017, 10:01 am
ನನ್ನೋಲುಮೆಯ ಹದಿನಾರ
ನೀ ಬಿಟ್ಟು ಹೋದ ನೆನಪು
ನೂರಾರ
ಬಲು ತೋರಿದೆ ಕರುಣೆ
ಮರೆಯಲಾರೆ ನಿನ್ನ ಸ್ಮರಣೆ||
ಜೋಡಿಯುಸಿರಿಗೊಂದ
ಉಸಿರು ಸೇರಿಸಿದಿ.
ಉಸಿರಿನಿಂದ
ಹಸಿರು ಸ್ಪುರಿಸಿ
ಹರಸಿದಿ |
ಕೆಟ್ಟ ಹಸಿವು
ಸುಟ್ಟ ಭಾವಕೆ
ಅಮೃತ ಉಣಿಸಿ
ತನಿಸಿದಿ
ಬೆಟ್ಟದಷ್ಟು ಭಾವ
ತುಂಬಿ
ನಮ್ಮನೆಲ್ಲ ಕುಣಿಸಿದಿ|
ಹದಿನಾರ ಬಲು ಹಳ ಹಳಿ
ನನಗ
ನೆನಪು ನೂರಾರ
ಅನನ್ಯ ಧನ್ಯವಾದ ನಿನಗ
ಹೊಸ ಸ್ನೇಹ ಕೊಟ್ಟಿ
ಹಳೆ ಸ್ನೆಹ
ಉಳಿಸಿದಿ
ಗಟ್ಟಿ ಮುಟ್ಟಿ
ಪ್ರೀತಿ-ಸ್ನೇಹದಿಂದ
ತುಂಬಿದೆ ಎದೆಯ ಕಟ್ಟಿ|
ಬರುವ ವರುಷ ಶುಭವ ತರಲಿ
ಸ್ನೇಹ ಕೊಂಡಿ ಗಟ್ಟಿ ಇರಲಿ
ಹೃದಯ ತುಂಬ ಪ್ರೀತಿಯಿರಲಿ
ಜಗದ ತುಂಬ ನಗುವೆ ಇರಲಿ.|
- bharatakumar
01 Jan 2017, 07:15 am