Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬದುಕಿಗೆ ಅರ್ಥ ಬೇಕು

----------------------------------------------
ಕೋಪವೆಂಬ ಮಂಜಿಗೆ ,ನಗುವೆಂಬ ಬೆಂಕಿಬೇಕು
-ಕರಗಲು
ದ್ವೇಷವೆಂಬ ಉಪ್ಪಿಗೆ ,ಸ್ನೇಹವೆಂಬ ನೀರು ಬೇಕು
- ಅರಗಲು
ಬದುಕೆಂಬ ಹೂವಿಗೆ ,ಹಣ ವೆಂಬ ಸೂರ್ಯ ಬೇಕು ,
-ಅರಳಲು
ಆಸೆಯೆಂಬ ನದಿಗೆ, ಮಿತಿಯೆಂಬ ದಡಬೇಕು ,
-ತಡೆಯಲು
ಸ್ನೇಹ ವೆಂಬ ಹಾಡಿಗೆ , ಪ್ರೀತಿ ಯೆಂಬ ತಾಳ ಬೇಕು ,
-ಬೆರೆಯಲು
ಧೇಹ ವೆಂಬ ಧೇಶಕೆ , ಉಸಿರೆಂಬ ಏಕತೆ ಬೇಕು ,
-ಬದುಕಲು
ಚಿಪ್ಪೆಂಬ ಮುಖಕೆ ,ಹವಳವೆಂಬ ನಗು ಬೇಕು ,
-ಹೊಳೆಯಲು

- kiru

02 Jan 2017, 09:04 pm

ಇಲ್ಲಿ ಎಲ್ಲರೂ ಕಳ್ಳರೆ ! ಸ

ಇಲ್ಲಿ
ಎಲ್ಲರೂ ಕಳ್ಳರೆ !
ಸುಳ್ಳರೆ , ಮಾತಿನ ಮಲ್ಲರೆ !


ಇವರಿಗಿಂತ ಅವರು
ಅವರಿಗಿಂತ ಇವರು
ಒಬ್ಬರಿಗಿಂತ ಒಬ್ಬರು
ಮಾತಿನಲ್ಲಿ ಮಹಲು
ಕಟ್ಟಿಸಬಲ್ಲರು ,
ಕೆಡಿಸಬಲ್ಲರು
ಸುಟ್ಟು ಬಿಡಬಲ್ಲರು !

ಸತ್ಯವನ್ನು ಸುಳ್ಳಿನಂತೆ
ಸುಳ್ಳನ್ನು ಸತ್ಯದಂತೆ
ಹೇಳಬಲ್ಲರು !
ರಾಮನನ್ನು ಮೀರಿದ
ಭರತ ತಾನೆಂದು
ಕೊಚ್ಚಿ ಕೊಳ್ಳಬಲ್ಲರು !

ಅಸ್ತಿತ್ವಕ್ಕಾಗಿ
ಕುರ್ಚಿಯ ಕಾಲುಗಳಿಗೆ
ನೇಣು ಹಾಕಿಕೊಳ್ಳುವರು
ಸಮಾಧಿಯೊಳಗೂ ಇರಲೇ
ಬೇಕೆಂದು ಹಠ ಹಿಡಿವರು !

ನಮ್ಮ ನಿಮ್ಮನೆಲ್ಲ
ಮಂಕು ಮಾಡಿ
ಹಾದಿ ತಪ್ಪಿಸಬಲ್ಲರು
ನೀವು ನಾವು
ಒಟ್ಟಿಗೆ ಕಿತ್ತಾಡಿ
ಸಾಯುವುದರಲ್ಲಿ
ಜೀವನ ಮಾಡಿಕೊಳ್ಳಬಲ್ಲರು !

ಇಲ್ಲಿ
ಎಲ್ಲರೂ ಕಳ್ಳರೆ !
ಸುಳ್ಳರೆ , ಮಾತಿನ ಮಲ್ಲರೆ !
ಹಣಕಾಗಿ ,
ಹೃದಯ
ಹರಾಜಿಗಿಟ್ಟು
ಹಪಹಪಿಸುವವರು !

ಇರುವುದೆರಡೇ ಆಯ್ಕೆ

ಕಳ್ಳನಾಗು
ಇಲ್ಲ
ಕಳ್ಳತನ ಸಹಿಸಿಕೊ !


dj

- ಧನಂಜಯ ಕೆ ಎಸ್

02 Jan 2017, 08:52 pm

ಅರಮನೆ

ಮನುಷ್ಯನಿಗೆ
ಅರಮನೆ ಕಟ್ಟುವಂತ
ಸಿರಿತನ ಇಲ್ಲದಿದ್ದರೂ ಏನಂತೆ
ಕಣ್ಣೀರೋರೆಸುವ ಗೆಳೆತನ
ಇದ್ದರೆ ಸಾಕು....

ಬಿ.ಹೇಚ್.ಕೆಂಪೇಗೌಡ

- ಬಿ.ಹೆಚ್.ಕೆಂಪೇಗೌಡ

02 Jan 2017, 08:04 pm

ನನ್ನ ಕನಸು

ನಾನೊಬ್ಬ ಕನಸುಗಾರ,
ಕನಸಲ್ಲಿ ಹತ್ತಿದ್ದೇ ನಾ ಹೆಲಿಕಾಪ್ಟರ,
ಕನಸು ಕನಸೆನ್ನುವಸ್ಟರಲ್ಲಿ,
ಸಾಗಿದ್ದೆ ದೂರ,ಹೆಚ್ಚರ ವಾದಾಗ
ಅನಿ‌ಸಿತ್ತು ಜೀವನ ಬರೀ ನಶ್ವರ..

ಬಿ.ಹೆಚ್.ಕೆಂಪೇಗೌಡ

- ಬಿ.ಹೆಚ್.ಕೆಂಪೇಗೌಡ

02 Jan 2017, 07:48 pm

ಕನ್ನಡಿಗನೇ ಸಾರ್ವಭೌಮ...

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ತಿಳಿದು ಬದುಕು ನಡೆಸೋ ಓ ನನ್ನ ಅಣ್ತಮ್ಮ...!!

ಗೌರವಿಸಬೇಕು ನಾವು ಎಲ್ಲ ಭಾಷೆ
ಪ್ರೀತಿಸಬೇಕು ನಮ್ಮ ಮಾತೃಭಾಷೆ.....!!

ಕನ್ನಡ ಕಲಿಯಲು ತುಂಬಾ ಸರಳ
ಆದರೆ ಕಲಿಯುತ್ತಿರುವವರು ವಿರಳ
ಕಲಿಯದೇ ಇರಬೇಡವೋ ನೀ ದುರುಳ....!!

ಬೆರೆತು ಜೊತೆಯಾಗಿ ಬಾಳು ನೀ ನಮ್ಮ ಸಂಗಡ
ಕಲಿತು ಉಳಿಸಿ ಬೆಳೆಸು ನೀ ನಮ್ಮ ಕನ್ನಡ
ಎಂದೂ ಅನ್ನಬೇಡ ನೀ ಎನ್ನಡ..ಎಕ್ಕಡ..!!

-- ನಿಮ್ಮನೆ ಹುಡ್ಗ Maruthish

- ನಿಮ್ಮನೆ ಹುಡ್ಗ ಮಾರುತೀಶ್

02 Jan 2017, 04:40 pm

ಹೊಸ ಕಾವ್ಯ

ಹಳೆಯ ವಿಷಯ ಹೊಸ
ಕಾವ್ಯವಾಗಿ ಮೂಡಿ
ರಸಕಾವ್ಯವಾದ
ಕನಸು ಕಾಣುತಿದೆ
ಬತ್ತದಂತೆ ಕಾಫನಿಟ್ಟು
ಪಲವ ಕೂಡುವ ಕೆಲಸದಲಿ
ನಿರತವಾಗಿ ಸಾಗಿದೆ

- kasturi pattar

02 Jan 2017, 01:51 pm

ಹ್ರುದಯದರಸಿಯ / ಹ್ರದಯವ ಅರಸಿ

ಅವಳೇ ನನ್ನ ಜೀವ
ಅರಿಯದೆ ಹೂದಳು ನನ್ನ ಭಾವ
ಓ ದೇವರೇ ಕೆಳದೆ ನನ್ನಿ ನೂವ
ಅವಳು ಪ್ರತಿ ಕ್ಷಣ ಸುಖವಾಗಿರಲಿ ದೇವ

. . . . . . . . . . . . . . .ಯಲ್ಲು ಗೌಡ - ಬಿರಾದಾರ

- ಯಶ್ ಗೌಡ - S.B

02 Jan 2017, 01:22 pm

ಓ ಹೃದಯ

ನನ್ನ ಕನಸಿನ ಹಾಳೆಕೋ
ಅಳುತ್ತಾ ಅಪ್ಪಸ್ವರವ ನುಡಿಯುತ್ತಿದ್ದೆ
ನೋಡ ಬಾರದೆ ನನ್ನ ಒಲವೇ
ನನ್ನ ಹೃದಯವು ನರಳುತ್ತಿದ್ದೆ
ಲೋಕದಲ್ಲಿ ಪ್ರೇಮಿಗಳು ನಂಬಿದ ಕಥೆ ಬಹಳ ಆ
ಅವರಂತೆಯೇ ನನ್ನ ಕಥೆ ಆಯಿತ್ತೆ .

ಓ ಹೃದಯ ಕೇಳಿದೆಯಾ.

- Ruturaj byatgar

02 Jan 2017, 01:14 pm

ಸಮಯ

ತುಂಬಾ ಹೇಳಬೇಕು ನಾನು
ಸಮಯ ನಿನಗೆ ಸಮಯ ಇಲ್ಲವೇನು
ಸೂರ್ಯ ನಿನಗೆ ಕೆಲಸ ಕೋಡಲೇನು
ಸ್ವಲ್ಪ ನಿಂತು ಹೋಗಬಾರದೇನು.......

ತುಂಬಾ ಕೇಳಬೇಕು ಇನ್ನೂ
ನನ್ನವಳ ಎಲ್ಲ ಮಾತನು
ಹೀಗೆ ನೋಡುತಿರಬೇಕು ನಾನು
ನನ್ನವಳ ಚೆಂದದ ನಗುವನು
ಸಮಯ ನಿನಗೆ ಸಮಯ ಇಲ್ಲವೇನು
ಸ್ವಲ್ಪ ನಿಂತು ಹೋಗಬಾರದೇನು

ಎಣಿಕೆ ಇಲ್ಲದ ಅವಳೆಲ್ಲ ಕನಸುಗಳ
ಪೋಣಿಸಿ ಪೋಣಿಸಿ ಬಚ್ಚಿಡಬೇಕು ನಾನು
ತಂಪು ತಂಗಾಳಿಯಲಿ ಕೂತು
ಒಲವಿನ ಹೊಳೆ ಹರಿಸಬೇಕು ಇನ್ನೂ
ಸಮಯ ನಿನಗೆ ಸಮಯ ಇಲ್ಲವೇನು
ಸ್ವಲ್ಪ ನಿಂತು ಹೋಗಬಾರದೇನು....

- PSK

02 Jan 2017, 01:13 pm

ನಿಧಾನ ನಡಿಗೆಯ ನೀರೆ..

ನಿಧಾನ ನಡಿಗೆಯ ನೀರೆ,
ನಿನ್ನ ಪ್ರೀತಿ ಮಾಡಿದನು ಮನಸಾರೆ..
ಕಾಲೇಜಿನಲಿ ನನ್ನ ಸೆಳೆದ ಮೊದಲಿಗಳು ನೀನು,
ನೀ ಕಂಡಾಗಲೆಲ್ಲ ನಿನ್ನನೇ ನೋಡುತ್ತ ನಿಂತಿದ್ದೆ ನಾನು..
ಓದುವವರ ಸಾಲಿನಲಿ ಮೊದಲಿಗಳು ನೀನು,
ಅತಿಥಿಯಂತೆ ಕಾಲೇಜಿಗೆ ಬಂದವನು ನಾನು..
ನಾನಿದ್ದ ಕೆಲಗಳಿಗೆಯಲ್ಲೆ ನೀ ನನ್ನ ಆಕರ್ಷಿಸಿದೆ,
ಆದರೂ ನಿನ್ನ ನೋಡಲು ನಾ ದಿನವೂ ಬರದೆ ಹೋದೆ..
ನಿನ್ನ ಮೇಲಿನ ಆಕರ್ಷಣೆ ಪ್ರೀತಿಯಾದಂತಿತ್ತು,
ಆ ಪ್ರೀತಿ ತಿಳಿಸಲು ನನಗೆ ಧೈರ್ಯ ಸಾಲದಂತಿತ್ತು..
ನಿನ್ನ ಮೇಲಿನ ಪ್ರೀತಿ ನನ್ನ ಚೌಕಟ್ಟನ್ನು ಮೀರಿ ನಿಂತಿತ್ತು,
ಶುದ್ಧ ಪ್ರೀತಿಯ ಜಾಗದಲ್ಲಿ ಬೇರೆ ಕನಸು ಮೂಡಿ ಬಂದಿತ್ತು..
ನಿನ್ನ ಮೇಲಿನ ಪ್ರೀತಿ, ಪ್ರೀತಿಯೋ ಆಕರ್ಷಣೆಯೋ ಎಂಬುದ ತಿಳಿಯ ಹೊರಟೆ,
ಅದ ತಿಳಿಯುವ ಮೊದಲೇ ನೀ ನನ್ನಿಂದ ದೂರ ಹೊರಟೆ..
ಇಂದಿಗೂ ನನ್ನಲ್ಲಿ ಆ ಪ್ರಶ್ನೆ ಉಳಿದಿದೆ,
ಅದು ಪ್ರೀತಿಯೋ, ಆಕರ್ಷಣೆಯೋ ಎಂದು ತಿಳಿಯದೆ.....

- jp R

02 Jan 2017, 10:55 am