Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

" ನನಸಾಗದ ಕನಸು, ಭಾರವಾದ ಮನಸ

" ನನಸಾಗದ ಕನಸು, ಭಾರವಾದ ಮನಸು,"
ನಲ್ಲೆಯ್ ಹುಸಿಮುನಿಸು, ಬಾವನೆಯ ಗಳಿಸು
ನಿನ್ನ ನೆನಪನ್ನು ಉಳಿಸು, ಹಾಡಾಗಿ ನನ್ನಲ್ಲಿಹೊಮ್ಮಳಿಸು
ನಿನ್ನಾಸೆಯನು ತಿಳಿಸು, ನನಗೊಂದು ಓಲೆಯನ್ನು ಕಳಿಸು. .......

ಬಿ. ಲಿಂಗರಾಜು

- lingaraj

04 Jan 2017, 07:42 am

ಹನಿ...

ಪ್ರಕೃತಿ ಅಂಬರದಲಿ
ಕೆಂಪು ರವಿಯ
ಚಿತ್ರಿಸಿದ
ಬೆಳಗು...

- Indushekar Chinivar

04 Jan 2017, 07:32 am

ಭಾವಕ್ಕೆ ಪರದಾಟ

ಕಲ್ಪನೆಗಾಗಿ ಪರಪರ
ಕೆರ್ಕೊಂಡೆ ತಲೆಯನ್ನು,
ಮೌನವಾಗಿ ಸತ್ತು ಬಿತ್ತು,
ಅಲ್ಲೊಂದು ಹೇನು!!

~ಮಲ್ಲಿಭಾಗವತ ಗುಡಿಬಂಡೆ●

- ಮಲ್ಲಿಭಾಗವತ್ ಗುಡಿಬಂಡೆ

04 Jan 2017, 05:55 am

ಮಡದಿಗೆ ಮನವಿ

ಮೌನವ್ರತ ಸಾಕಿನ್ನು ಮಾನಿನೀ
ಇನ್ನಾದರೂ ಆಡೊಂದು ಮಾತು,!
ನಿನ್ನ ನಿಶ್ಶಬ್ದದ ಸದ್ದಿಗೆ
ಎದೆಕಿವಿಗೂ ಬಿದ್ದಿದೆ ತೂತು!!
✍ಮಲ್ಲಿಭಾಗವತ✍

- ಮಲ್ಲಿಭಾಗವತ್ ಗುಡಿಬಂಡೆ

04 Jan 2017, 12:51 am

ಹೀಗೇಕೆ ಹೆಣ್ಣೇ?

ಹೆಣ್ಣೇ.......!ಹೀಗೇಕೆ ನಿನಗೆ?
ತವರು ಮನೆ ಅಂದ್ರೆ
ಮನವೆಲ್ಲಾ ನವುರು-ನವುರು!
ಅತ್ತೆ ಮನೆ ಅಂದ್ರೇಕೆ
ತನುವೆಲ್ಲಾ ಬೆವರು-ಬೆವರು!?!

- ಮಲ್ಲಿಭಾಗವತ್ ಗುಡಿಬಂಡೆ

04 Jan 2017, 12:48 am

ಬಹುದಿನದ ಗೆಳತಿ....

ಸ್ನೇಹವೆಂಬ ಸಿಹಿ ನೀಡಿದ ಸಿಹಿಜೇನು,
ನನ್ನ ಸ್ನೇಹಕೆ ದೇವತೆಯು ನೀನು..
ಒಳ್ಳೆಯ ಗೆಳತಿಯು ನೀ ನನಗೆ ಹಲವು ವರುಷಗಳಿಂದ,
ಹೀಗೆಯೇ ಜೀವನಪೂರ್ತಿ ಇರಬಹುದೆ ನಮ್ಮ ಸಂಬಂಧ..
ಇಲ್ಲವೆನ್ನುತಿದೆ ಒಳ ಮನಸು,
ಅದಕಾಗೆ ನನಗದರ ಮೇಲಿದೆ ಮುನಿಸು..
ಕಾಡುತಿದೆ ನನಗೆ, ನೀ ನನ್ನಿಂದ ದೂರವಾಗುವೆ ಎಂಬ ಭಯ,
ನೀನೆ ನೀಡಬೇಕಿದೆ, ದೂರವಾಗುವುದಿಲ್ಲ ಎಂಬ ಅಭಯ..
ಆದರೂ ಮನದಲ್ಲಿ ಆ ಭಯವು ಬೆಳೆಯುತಿದೆ,
ನಮ್ಮ ಸ್ನೇಹ ಉಳಿಸಲು ಬೇರೆ ದಾರಿ ಕಾಣದಾಗಿದೆ...

ಭಯಗೊಂಡ ಮನವೀಗ ಬೇರೆ ಯೋಚನೆ ಮಾಡಿದೆ,
ಕೊನೆವರೆಗು ನಿನ್ನ ಜೊತೆಗಿರುವ ಉಪಾಯವೊಂದನ್ನು ಹೇಳಿದೆ..
ನಿನ್ನ ಪ್ರೀತಿಸು ಎಂದು ಮನ ಹೇಳುತಿದೆ,
ಅದು ಸರಿ ಎಂದು ಹೃದಯ ಮಿಡಿಯುತಿದೆ..
ನಾನೀಗ ನಿನ್ನ ಪ್ರೀತಿಯಲಿ ಬಿದ್ದಿರುವೆ,
ಅದ ನಿನ್ನಲ್ಲಿ ಹೇಳಲು ಒಳಗೊಳಗೆ ಹೆದರಿರುವೆ..
ನೀ ಒಪ್ಪದೇ ಹೋದರೆ ಎಂಬ ಪ್ರಶ್ನೆ ಕಾಡುತಿದೆ,
ಆ ಪ್ರಶ್ನೆಗೆ ಉತ್ತರ ನಿನ್ನ ಬಳಿಯಿದೆ..
ದಯಮಾಡಿ ಬಾ ಗೆಳತಿ ನನ್ನ ಮನದೊಳಗೆ,
ನಿನ್ನ ಕೈ ಬಿಡದೆ ಕಾಪಾಡುವೆ ನನ್ನ ಜೀವ ಇರೊವರೆಗೆ..
ನೀ ನನ್ನ ಜೊತೆ ಇರಬೇಕು ಕೊನೆವರೆಗು,
ನಾ ಸತ್ತು ಮಣ್ಣಲ್ಲಿ ಮಣ್ಣಾಗೊವರೆಗು........

- jp R

04 Jan 2017, 12:26 am

ಬಿಳಿ ಹುಡುಗಿ......

ಬಳುಕುವ ಬಳ್ಳಿಯಂತ ಬಿಳಿ ಹುಡುಗಿ
ನನ್ನ ನೋಟವನ್ನು ನಿನ್ನೆಡೆಗೆ ಸೆಳೆದ ಬೆಡಗಿ,,
ನಾನಿದ್ದೆ ಪ್ರೀತಿಯಾಗಬಹುದೆಂಬ ನಿರೀಕ್ಷೆಯಲ್ಲಿ
ನಿರೀಕ್ಷೆ ನಿಜವಾಗುವಂತೆ ನೀ ಕಂಡೆ ಆ ಕ್ಷಣದಲ್ಲಿ,,
ನಾ ಬಯಸಿದ್ದು ಅಪ್ಸರೆಯಂತ ಹುಡುಗಿಯನ್ನಲ್ಲ
ನೋಡಲು ನೀನೂ ಕೂಡ ಅಪ್ಸರೆಯಂತೇನು ಇರಲಿಲ್ಲ,,
ಬಿಳಿ ಮೋಡ ಕೆಳಗಿಳಿದು ಬಂದಂತೆ ಕಂಡೆ
ಅದರಲ್ಲಿ ನೀನಿರುವೆಯೆಂದು ಓಡೋಡಿ ಬಂದೆ,,
ಮೋಡ ಕರಗಿದಂತೆ ಕಾಣದೇ ಮರೆಯಾದೆ
ನಿನ್ನ ಕಾಣದೆ ನಾ ದಿಕ್ಕೆಟ್ಟು ಹೋದೆ,,
ಇಂದು ನೀ ನನಗೆ ಕೇವಲ ಆಕರ್ಷಣೆಯಾಗಿ ಉಳಿದಿರುವೆ
ಆ ನಿನ್ನ ನೆನಪಲ್ಲೆ ಈ ಕವನ ಬರೆದಿರುವೆ........

‌ ಜೆಪಿ....

- jp R

04 Jan 2017, 12:20 am

ಜಾತಿ ಮತ

ಜಾತಿ ಮತ ನೀತಿ ಧರ್ಮ
ನಿನಗೆ ತಿಳಿದಿರಲಿ ಇವುಗಳ ಮರ್ಮ
ಇವುಗಳಿಂದ ಹಿಡಿದಿರುವುದು ನಮಗೆ ಹುಚ್ಚು
ನಮ್ಮ ನಿಮ್ಮಲಿ ಹಬ್ಬಿರುವುದು ಬರೀ ಕಿಚ್ಚು

-ಗಿರೀಶ್ ರಾಮಕೃಷ್ಣ

- girish r

04 Jan 2017, 12:09 am

ಹುಟ್ಟಿದ ದಿನ

ದಿನ‌‌‍‌‌‌‍‌‍
ಹುಟ್ಟಿದ ದಿನ
ನಾನು ಅತ್ತಿದ ದಿನ
ತಾಯಿ ಗರ್ಭ ಸೀಳಿಬಂದ ದಿನ
ತಾಯಿಗೆ ನೋವು ಕೊಟ್ಟ ದಿನ
ಆ ನೋವು ಮೀರಿ ಖುಷಿಪಟ್ಟ ದಿನ
ನನ್ನ ತಾಯಿ ಹೊಸ ಜಗತ್ತು ಕಂಡ ದಿನ
ಅದು ಈ ದಿನ, ನನ್ನ ದಿನ, ನಾನು ಜನಿಸಿದ ದಿನ
-ಸಾಗರ್

- sagar chamali

03 Jan 2017, 10:08 pm

"ನೆನಪುಗಳು" ________

ನೆನಪುಗಳು ಬರುತ್ತಾವೋ ಗೆಳೆಯ
ನೆನಪುಗಳು ಕಾಡುತ್ತಾವೋ!
ಬಾಲ್ಯದ ಆಡಿದ ಆಟ
ಗೆಳೆಯರೊಡನೆಯ ಊಟ
ಮನದಲ್ಲಿ ಚಿಮ್ಮುತ್ತಾವೋ ಗೆಳೆಯ
ಮನವನ್ನು ಕಲುಕುತ್ತಾವೋ!
ಬಾಲ್ಯದ ಗೆಳತಿಯ ನೆನಪು
ಅವಳು ಕೊಟ್ಟ ಜೇನುತುಪ್ಪ
ಭಾವನೆಯ ಅರಳಿಸ್ಯಾವೋ ಗೆಳೆಯ
ವಿವರವಾಗಿ ಕಾಡುತ್ತಾವೋ!
ಅಪ್ಪ ಹೇಳಿದ ಮಾತು
ಅಮ್ಮನ ಪ್ರೀತಿಯ ತುತ್ತು
ಮತ್ತೆ ಮತ್ತೆ ಬರುತ್ತಾವೋ ಗೆಳೆಯ
ನೆಮ್ಮದಿಯ ತರುತ್ತಾವೋ
ಗುರುಗಳು ಹೇಳಿದ ಪಾಠ
ಸಹಪಾಠಿಗಳ ಕೂಟ
ಎದ್ದೇದ್ದು ಬರುತ್ತಾವೋ ಗೆಳೆಯ
ಬದುಕನ್ನು ಅರಳಿಸ್ಯಾವೋ !ನೆನಪು!
_____________________________
" ಬಸವಪ್ರಿಯ"

- ಬಲವಂತ ಮೋರಟಗಿ(ಬಸವಪ್ರಿಯ)

03 Jan 2017, 09:38 pm