Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓ ಹೃದಯಾ ♡ ಕೇಳಿದೆಯಾ

ಎಂದೋ ಕಂಡ ಕನಸು
ನನಸಾಗಿದ್ದು ಸೊಗಸು
ಆ ಬ್ರಹ್ಮ ನಿನ್ನ ಕರುಣಿಸಿದ
ನನ್ನ ಬೇಡಿಕೆಯ ವರವಾಗಿ
ನಿನ್ನಲ್ಲಿ ಒಂದಾಗಿ,
ನನ್ನೊಳಗೆ ನೀನಾಗಿ
ನೀನೇನಾನಾಗಿ
ನಾನಿಲ್ಲದಾಗುವ ಬಯಕೆ..
ನಾನೇ ನಿನ್ನೊಳಗೋ
ನೀನೇ ನನ್ನೊಳಗೋ
ಒಟ್ಟಿನಲ್ಲಿ ಎಂದಿಗೂ..
ನಾನಿರುವೆ ನಿನ್ನೊಳಗೆ,
ನಿನ್ನೆದೆಯ ಒಳಗೆ
ನೀನಿರುವೆ ನನ್ನ ಜೊತೆಯಾಗಿ
ಜೀವನದ ಪಯಣದಲಿ
ಜೊತೆಗಾತಿಯಾಗಿ...

- Pb

06 Jan 2017, 04:11 pm

ಗೆಳತಿ

ಗೆಳತಿ ಎಂದರೆ ಯಾರೆಂದು ಕೇಳಿದೆ
ಹ್ರದಯ ನಿನಗೇನು ತಿಳಿದಿದೆ
ಒಲವು ಪ್ರಿಯತಮೆಗೆಂದೇ ಆದರೆ
ಗೆಳತಿಯ ಪ್ರೀತಿಗೆ ಹೆಸರೋಂದು ಏನಿದೆ...

- PSK

06 Jan 2017, 01:43 pm

ಓ ಹೃದಯಾ ♡ ಕೇಳಿದೆಯಾ

ಮಿಡಿಯುತಿದೆ ಮನ ಮಿಡಿಯುತಿದೆ
ನೆನೆದು ನಿನ್ನ ಹೃದಯದ
ಬಡಿತ ಹೆಚ್ಚುತಿದೆ
ಸಹಿಸೆನು ವಿರಹದ ನೋವು
ನಿನಗಾಗಿಯೇ ಜೀವನ ಸವೆಸುವೆನು
ನೀನಿರುವ ಕಡೆಯಲಿ ನಗುವಿಹುದು
ನಿನಗಾಗಿ ಬಿಡುವೆನು ಎಲ್ಲವನು
ನನ್ನುಸಿರಿನ ಉಸಿರು ಇರೊವರೆಗು
ನಿನ್ನ ಪ್ರೀತಿಸುವೆ ಕೊನೆಯವರೆಗು
ನಿನ್ನ ಮರೆತ ಆ ದಿನ
ನನ್ನ ಪ್ರಾಣ ಹೋಗಲಿ ಮರುಕ್ಷಣ
ಈ ನನ್ನ ಜೀವನದ
ಪ್ರತಿಯೊಂದು ಕ್ಷಣವು
ನಿನಗಾಗಿ ಮುಡಿಪಿಡುವೆನು
ಈ ಹೃದಯದ ಬಡಿತ
ನಿಲ್ಲುವವರೆಗು ನಿನ್ನ ಪ್ರೀತಿಸುವೆನು...

- Pb

06 Jan 2017, 01:09 pm

ನನ್ನಾಸೆಯ ಹೂವೆ

ನನ್ನಾಸೆಯ ಹೂವೆ ಎಲ್ಲಿರುವೆ
ಆಸೆಯ ಅಡಕಿಸಿ ಹುಡಿಕಿರುವೆ
ಮನದಲಿ ನಾನಿಲ್ಲ ಹಿಡಿತ ಸಿಗುತಿಲ್ಲ
ಕಂಡಲ್ಲಿ ಕನಸು, ಹುಚ್ಚಾಗಿದೆ ಮನಸು
ನನ್ನ ನಾ ಹುಡುಕಲು ನಿನ್ನ ಬಯಸುವೆ ಎನ್ನ ಬಳಗಕೆ
ಚೆಂದನದ ಗೊಂಬೆ ಬಿಡಿಸೀ ಬಂಧನವ
ಚುಂಬಿಸು ಛಲವ ರಮಣಿ...

ವಿ.ಸಿ.

- śsș

06 Jan 2017, 12:46 pm

ಓ ಹೃದಯಾ ♡ ಕೇಳಿದೆಯಾ

ನೆನಸ ಬೇಡ ನೆನಸ ಬೇಡ
ನೆನಸದೆ ಹಾಯಾಗಿರು ಎಂದು ಹೇಳಬೇಡ
ಮನಸ್ಸು ಹೇಳುತಿದೆ..
ಮರೆಯಬೇಡ ಮರೆಯಬೇಡ
ಓ ನನ್ನ ಹೃದಯಾ...
ನೀ ನನ್ನ ಮರೆಯಬೇಡ
ಓ ನನ್ನ ಚೆಲುವೇ...
ಎಲ್ಲರಲಿ ಬೆರೆತು ಹಾಯಾಗಿ
ನಗುತಾ ಇರು ನೀ ಎಂದು
ಹೇಳಿದವಳು ನೀ ಈಗ ...
ನೆನದು ನನ್ನ ...
ನೀ ಕೊರಗಬೇಡ
ಕೊರಗಿ ನೀ ಸೊರಗಬೇಡ
ಓ ಮನವೇ....
ನೆನಸಬೇಡ ನೆನಸಬೇಡೆಂದು
ಹೇಳಿ ನೀ ದುಡಕಬೇಡ
ಓ ನನ್ನ ಒಲವೇ...

- Pb

06 Jan 2017, 08:47 am

ಕಾಯುವುದೇ ಕಾಯಕ ನನಗೆ.

ನೀನು ಬರುವೆ ಎಂದು ಕಾಯುವ ಕಾಯಕ ನನಗೆ.
ಬಂದವಳಾಗೇ ಬಂದು ಮತ್ತೆ ನೀ ಹೋದೆ ಎಲ್ಲಿಗೆ
ದಯಮಾಡಿ ಹಾಕಬೇಡ ಬೀಗ ನಿನ್ನ ಹ್ರುದಯದ.ಬಾಗಿಲಿಗೆ
ಸಿಲುಕುವುದು ನನ್ನ ಮನಸ್ಸು ನೋವಿನ ಸುಳಿಗಳಿಗೆ
ತಿಳಿಯದೇ ಇನ್ನು ಈ ಹ್ರುದಯ ಕಾದಿದ್ದು ನಿನಗೆ
ಬಂದು ಸೇರು ಗೆಳತಿ ನಾನೆಂದೂ ನಿನ್ನಿನಗೇ. ..

- mahi

06 Jan 2017, 02:09 am

ನಕ್ಷತ್ರಗಳು-೯

ನಕ್ಷತ್ರಗಳನ್ನು
ಹಿಡಿಯಬೇಕು
ಕಣ್ಣುಗಳಲ್ಲೇ!
ಆದ್ದರಿಂದ
ಚಾಚಬೇಕಿಲ್ಲ
ಕೈಗಳನ್ನು
ಆಕಾಶಕ್ಕೆ-ವೃಥಾ
ಆಯಾಸಕ್ಕೆ.

. ********* ಪದ್ಯಾಣ.

- padyana

05 Jan 2017, 10:34 pm

ಒಡವೆ

ನೀ ಎಲ್ಲೊ ನುಡಿದ ಮದುರ
ಮಾತು ಇಂದು ಸುಮದುರ
ಕಾವ್ಯವಾಗಿ ಮುಡಿದೆ
ಅಳಿಯದಂತ ಎಂತ ವಡವೆ
ನೀನು ಕೊಟ್ಟು ಹೊದೆ
ಅದನೆ ನಾನು ಸಿರಿಯ
ಸೊಬಗು ಎಂದು
ಕಾವ್ಯ ವಾಗಿ ಕಟ್ಟ
ಬಾಡದಂತ ಮಾಲೆ ಹೆಣೆದು
ನಿನಗೆ ಇಂದು ನಾನು ನಿಡಿದೆ

- kasturi pattar

05 Jan 2017, 09:10 pm

ಶಿಲಾಶಾಸನ

ಹೂವಂತ ಅಣ್ಣರಲ್ಲಿ
ಜೇನಂತ ತಾಯಂದಿರಲ್ಲಿ
ರಸಹೀರುವ ದುಂಬಿಗಳಲ್ಲಿ
ಹೊನ್ನದ ರಸದುಂಬಿ ಕಂಡೆನವ್ವ.

ಯುಗಳ ಪರ್ಯಂತ ನಾ ಕಂಡ ಜೀವಂತ
ಕಾಯಕದ ನೀತಿ ಪಾಠವಗೈದ ಶರಣನನ್ನು
ನಮ್ಮ ನಿಮ್ಮಲ್ಲಿ ಮನದಾಳದ ಮಾತುಗಳಲ್ಲಿ
ಸರಿದೋಗಿ ಹೋದಂತ ಅಣ್ಣನ ಕಂಡೆನವ್ವ

ಲೋಕ ಡೂಂಕ ತಿದ್ದಲು ತಿಣಕುವ ತಮ್ಮಗಳಿರಾ
ಇಹಪರವ ಜಯಿಸಿ ಮೆರವ ಆದೇವ
ಶಿಲ್ಪಗಳಲ್ಲಿ ಮಾನವತೆಯ ಮೆರವ ಆ
ಗುರುವಿನ ನೆನಪಿನಲ್ಲಿ ನಾ ಇಂದು ಬದುಕಿದೇನವ್ವ

ಜಾತಿ ಭೇದ ನೀತಿ ಪಾಠಗಳ
ಮೇಲು ಕೀಳುಗಳ ಆತ್ಮ ಅಂತರಂಗದಲ್ಲಿ ಜಯಿಸಿದ
ಅವ್ವ ಅಪ್ಪಗಳಲ್ಲಿ ಅಚ್ಚಳಿಯದೇ ಜನಮಾಸದಲ್ಲಿ ಬದುಕಿದ ಜಗದ ಜ್ಯೋತಿಯ ಕಂಡೆನವ್ವ

ಕರಿನಾಡ ಉದರದಲ್ಲಿ ಸಿರಿನಿಂತ ಕಲ್ಯಾಣದಲ್ಲಿ ನಭೋ ಮಂಡಲದ ಚುಕ್ಕಿತಾರೆಗಳ ನಡುವಲ್ಲಿ ಸಾಮನ್ಯನಾಗಿ ಬದುಕಿದ ತಂದೆಯ ಕಂಡೆನವ್ವ

ಹೆಣ್ಣಿನ ಹುಚ್ಚಿನ ರಾಮಾಯಣ
ಜೂಜಿನ ಮೋಜಿನ ಮಹಾಭಾರತ
ಜಾತಿಭೇದದ ಕೂಮುವಾದಿಗಳ ಕಲ್ಯಾಣದಲ್ಲಿ ಸ್ಯೂರನಾಗಿ ಮೂಡಿಬಂದ ಅಜಾತಶತ್ರು

ಇನ್ನೆಂಟು ಕಳೆದರು ಕಳೆಗುಂದದ ಶಿಲಾಶಾಸನ ಜಯಶರಣ ನಿನ್ನನಾಮವ ಭಜಿಸಿದೊಡನೆ ಭವಹರಣ
'ಶ್ರೀಗುರು ಬಸವಣ್ಣ

ಇಂತಿ ನಿಮ್ಮ ಕವಿ ಕುವರ
ಶರಣ - ಗೌಡ್ರುಸರ್ಕಾರ್

- ಗೌಡ್ರುಸರ್ಕಾರ್

05 Jan 2017, 07:44 pm

ಓ ಮೃದು ಮಲ್ಲಿಗೆ...

ಪ್ರಕೃತಿಯ ಸಿಂಚನದಲಿ
ನಲಿವ ಓ ಮೃದು ಮಲ್ಲಿಗೆ ,
ನಿನ್ನ ಮೈಗಂಧಕೆ
ಅದು ಸೂಸುವ ಕಂಪಿಗೆ
ನಶೆಯೇರಿತು ನಿಶೆಗೆ

ನಗುವ ಹಾಲ್ಗೆನ್ನೆಯಲಿ
ಮಿನುಗುವ ಬಿಳುಪ ಹೊಳಪನು
ಕಡ ಕೇಳಲು ಹಿಂಜರಿದ
ಆ ಪೂರ್ಣಿಮೆಯ ಒಡೆಯನು

ಕಣ್ಣಲಿ ಅರಳಿದ ಕಾಂತಿಗೆ
ಅದು ತೋರುವ ಚಂದಕೆ
ನಸುನಕ್ಕು ಹಿಗ್ಗಿದವು ಆ ತಾರೆಗಳು

ಆ ಮುಂಜಾವಲಿ
ಚೆಲ್ಲಿದ ಹಾಲ್ಬೆಳಕಲಿ
ವಯ್ಯಾರದಿ ನಲಿವ ತಿಳಿಗಾಳಿಗೆ
ಬಿಸುಪೇರಿತು ತಕ್ಷಣಕೆ
ನಿನ್ನ ಸೋಕಿದ ಆಕ್ಷಣಕೆ

ನಿನ್ನುಸಿರ ಇಬ್ಬನಿಯಲಿ
ಮಿಂದ ಹೂಗಳು
ಮೃದುವಾದವು ಮೆಲ್ಲನೆ
ಬಿರಿದು ನಕ್ಕವು ಗಲಗಲನೆ

ಸಿಗ್ಗಿನಲಿ ಕುಗ್ಗಿದ ಮೊಗದಲ್ಲಿ
ಕೆಂಪಾಗಿ ಅರಳಿದ ನಾಚಿಕೆಯಲ್ಲಿ
ತನ್ಮಯನಾದ ಆ ರವಿ
ಬೇಡಿದನು ರಂಗನು
ಚೆಲ್ಲಲು ಬಾನಂಗಳದಲ್ಲಿ

ಬಿರಿದ ತುಟಿಯ ಪಕಳೆಯಂಚಲಿ
ಜಿನುಗುವ ಜೇನನು ಸವಿಯಲು
ನಾಚಿತು ಆ ದುಂಬಿಯು

ಇಹವು ಪರವಾಯಿತು
ಪರವೇ ಇಹದೊಳರಳಿತು
ನಿನ್ನ ಪರಿವೆಯಲಿ ನನ್ನೇ ನಾ ಮರೆತೆ
ಇಹ ಪರದ ಸಾಂಗತ್ಯವ ತೊರೆದೆ

- Indushekar Chinivar

05 Jan 2017, 05:24 pm