Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಬ್ಬನಿ

ಹೂವಿನ ಮೇಲೆ ಕುಳಿತ ಇಬ್ಬನಿ ನಾನು
ಬಿಸಿಲು ಬಂದರೆ ನಾ ಸಾಯುವೆ
ನೀ ಸತ್ತರೆ ಅದೆ ಬಿಸಿಲಿಗೆ ನಾ ಬಾಡುವೆ....

- chinmayi

07 Jan 2017, 04:13 pm

ಚಂದ್ರಮ

ಮಧುಚಂದ್ರಮ ಮಾಲೆ
ನಿನ್ನ ಮೊಗದಲ್ಲಿ ಬೆಳದಿಂಗಳ ಮಾಲೆ,
ನನ್ನ ಕನಸುಗಳ ಹೊತ್ತೊಯ್ಯುವ
ಯೌವನದ ಸಾಲೆ,
ಬಣ್ಣಿಸಲಾಗದ ಪದಗಳ ಸಾಲೆ..
ಮಲ್ಲು...

- mallu

07 Jan 2017, 03:54 pm

ಬಾಲ್ಯ

ಕಳೆದು ಹೋದೆ ನೀನು
ಮರಳಿ ಬಾರೆಯೇನು?
ಇನ್ನೆಲ್ಲಿ ಹುಡುಕಲಿ ನಾನು
ಮತ್ತೆ ಸಿಗಬಾರದೇನು?

ಅಲ್ಲಿ
ನಾವಾಡಿದ ಜೂಟಾಟ
ಪ್ರೀತಿಯ ಮರಕೋತಿ ಆಟ
ಆಗಸಕಾರಿದ ಗಾಳಿಪಟ
ಒಲವಿನ ಆ ನೋಟ
ಕೆಳೆಯರೊಡನೆ ಒಡನಾಟ
ಗುರುಗಳಿಂದ ಕಲಿತ ಪಾಠ

ಅಲ್ಲಿ ಇತ್ತು ನಲ್ಮೆ ನಲಿವು
ಕಾಣಲಿಲ್ಲ ಎಲ್ಲಿಯೂ ನೋವು
ಎಷ್ಟು ಚೆನ್ನ ನಿನ್ನ ಚೆಲುವು
ಅದಕೆಯೇ ನಿನ್ನಲ್ಲಿ ಒಲವು

ಎಷ್ಟು ಸುಂದರ ನೀನು
ನಿನ್ನ ಸವಿ ಹಾಲ್ಜೇನು
ಎನ್ನಲ್ಲಿ ಅಮರ ನೀನು
ನಗುತಿರಲಿ ಭೂಮಿ ಬಾನು

ಕಳೆದು ಹೋದೆ ನೀನು
ಮರಳಿ ಬಾರೆಯೇನು?

- Kumara.C

07 Jan 2017, 02:55 pm

ಇಸ್ಟ ಕಸ್ಟ =ಅನಿಷ್ಠ

ಬದುಕು ಕಟ್ಟಿಕೂಳ್ಳುವುದು
ಎಲ್ಲರಿಗೂ ಇಸ್ಟ,
ಬದುಕಿನ ನಸ್ಟ ತುಂಬಿಕೂಳ್ಳುವುದು
ಸ್ವಲ್ಪ ಕಸ್ಟ,
ಇಸ್ಟಗಳ ನಡುವೆ ಕಸ್ಟಗಳ ತಂದಾಗ
ಬದುಕಾಗುವುದು ಕನಿಷ್ಠ,
ಭಾವನೆಗಳ ಮಟ್ಟ ತಿಳಿಯದಾದರೆ
ಬದುಕುವುದೇ ಕಸ್ಟ,
ಬದುಕುವುದ ಕಲಿಯದಿದ್ದರೆ
ಮಾನವನೇ ಅನಿಷ್ಠ!

- ರಾಜೇಶ್ ಎ.ಎಸ್

07 Jan 2017, 01:25 pm

ಮಂಜಿನ ಮುತ್ತು

ಎಲೆಎಲೆಯಲಿ ಮುತ್ತಿಟ್ಟ ಮಂಜಿನ
ಸಂಬ್ರಮ ನೋಡಿ ನನಗೆ
ನಗುಬರುತಿದೆ
ಮುಂಜಾವಿಗೆ ಅದರ ಯಜಮಾನ
ಬರುವದನು ಮೈಮರೆತಂತಿದೆ

- kasturi pattar

07 Jan 2017, 11:02 am

ನನಗೆ ಗೊತ್ತಿಲ್ಲ

ನನಗೆ ಗೊತ್ತಿಲ್ಲ ನನ್ನ ಹಣೆ ಬರಹದಲ್ಲಿ
ನೀನು ಇದ್ದಿಯೋ ಇಲ್ಲವೋ ಎಂದು....
ಆದರೆ ನಾನು ಬೆಡಿಕೊಳ್ಳುವೆ ಆ ದೇವರಲ್ಲಿ
ನನಗೆ ನಿನೆ ಬೇಕು ಎಂದು.....

ನನಗೆ ಗೊತ್ತಿಲ್ಲ ಯಾವ ಜನುಮದಲ್ಲಿ
ನೀನು ನನಗೆ ಏನಾಗಿದೆ ಎಂದು...
ಆದರೆ ಅನಿಸುವದು ಇಗ
ಪ್ರತಿ ಜನುಮದಲು ನಿನೇ ಬೇಕು ಎಂದು...

ನನಗೆ ಗೊತ್ತಿಲ್ಲ ಇದು ಹ್ರದಯದ
ಯಾವ ರಾಗ ಎಂದು...
ಆದರೆ ಇದರಿಂದ ಮೂಡಿತು
ಅನುರಾಗ ಒಂದು.....
ರೂಪಾ....!

- Roopa

06 Jan 2017, 10:55 pm

ನನ್ನ-ನಿನ್ಮಿಳಿತ

ನಿನ್ನೊಡನೆ ನನ್ನ,
ನನ್ನದೆನ್ನುವ ಎಲ್ಲವನ್ನ-
ಹೇಗೆಲ್ಲಾ ಹೊಸೆಯಿತೋ ನಿನ್ಮಿಳಿತ
ಎಲ್ಲಾ ಕ್ಷಣ-ಕಣಗಳಲೂ...
ಸಭಾವ ತುಂಬಿಕೊಂಡಿರುವೆಯಲ್ಲ-
ಎಲ್ಲೆಲ್ಲೂ-ಎಲ್ಲ ಬಗೆಯಲ್ಲೂ...

................ಗರಿಮಾಮ!

- Prasanna kumar K S

06 Jan 2017, 10:52 pm

ಹರೆಯ

ನೀ,, ನಗಿಸಿ ನಗಾಡಿದ
ಆ ಹರೆಯ. ಹಬ್ಬದಲ್ಲಿ ನ
ನುಡಿ ಮುತ್ತಿನ ಮಾತು
ಮೆತ್ತಗೆ ಮಲಗಿ ಎಷ್ಟೋ
ವರುಷ ಕಳೆದಿದ್ದವು,,
ಬದುಕಿನ ಮುನ್ನುಡಿಗ
.ಮನದ ಬೆನ್ನುಡಿಯಲಿ
ನವ್ಯ ನವ್ಯ ಕಾವ್ಯವಾಗಿ
ಹೊಸ ಜೀವ
ಪಡೆಯುತ್ತಿದೆ ಇಂದು

- kasturi pattar

06 Jan 2017, 08:46 pm

ಓ ಹೃದಯಾ ♡ ಕೇಳಿದೆಯಾ

ಕನಸು ನನಸುಗಳ ನಡುವೆ
ಹೃದಯಗಳ ಪರದಾಟ
ಮನಸು ಮರೆಯದು
ಬಾವನೆ ಹೇಳಲಾಗದು
ಮನಸ್ಸಿನೊಳಗಿನ ಮಾತು
ಬಾವನೆಯಲ್ಲಿ ಸೇರಿ
ಮಾತುಗಳು ಮೌನಿಯಾಗಿದ್ದು
ಮೌನದಲ್ಲಿ ಮಾತಾಡಿದವು
ಎರಡು ಮನಸುಗಳು...
ಮನಸ್ಸಿನ ಮಾತಗಳನು
ಮೌನದಲಿ ಆಡದೆ
ಮೌನವನು ಬಡಿದೆಬ್ಬಿಸಿ
ಕೇಳಿಬಿಡಲೆ ಒಮ್ಮೆ...ಅನಿಸಿದಾಗ
ಮೌನದ ಮಾತುಗಳನ್ನು
ಕೇಳಿಬಿಡಲೆ ಇಲ್ಲವಾದರೆ
ನಾನು ಮೌನದಲಿ ಮಾತಾನಾಡಲೆ...???

- Pb

06 Jan 2017, 08:03 pm

ಸೊನ್ನೆ ಮತ್ತು ಒಂದು

CHETHAN B C:
ನಾನು ಒಂದು (1) ನೀನು ಸೊನ್ನೆ (0)
ನನ್ನ ನಿನ್ನ ನಡುವೆ ಏಕೆ ಜಗಳ?

ನನ್ನ ನಿನ್ನ ಕೂಡಲು, ನಿನ್ನ ನನ್ನ ಕೂಡಲು, ನಾನೆ ದೊರೆಯುವೆ.
ನನ್ನಿಂದ ನಿನ್ನ ಕಳೆದರೆ, ನಾನೇ ಉಳಿಯುವೆ.
ನಿನ್ನಿಂದ ನನ್ನ ಕಳೆದರೆ, ನಾ ನನ್ನಷ್ಟೆ ಕುಗ್ಗುವೆ.

ನನ್ನ ನೀ ಗುಣಿಸಲೂ, ನಿನ್ನ ನಾ ಗುಣಿಸಲೂ ನೀನೆ ದೊರೆಯುವೆ.
ನಿನ್ನ ನಾ ಭಾಗಿಸಲು ನಾ ನೀನಾಗಬಹುದು.
ನನ್ನ ನೀ ಭಾಗಿಸಿದರೆ ನೀ ನಾನಾಗಲಾರೆ,

ನನ್ನ ಘಾತ ನೀನಾದರೆ, ನಾನು ದೊರೆಯುವೆ.
ನಿನ್ನ ಘಾತ ನಾನಾದರೆ, ನೀನೇ ದೊರೆಯುವೆ.

ಎಣಿಸಲು ಇದ್ದರೆ, ನಾನೇ ಮೊದಲು.
ಎಣಿಸಲು ಇಲ್ಲದಿದ್ದರೆ, ನೀನೇ ಮೊದಲು.

ನನ್ನ ಪಕ್ಕ ನೀನು ನಿಂತರೆ, ನನ್ನ ಬೆಲೆ ಹತ್ತು ಪಟ್ಟು.
ನಿನ್ನ ಬಳಿ ನಾನು ನಿಂತರೆ, ನನ್ನ ಬೆಲೆ ಅಷ್ಟಕಷ್ಟೆ.
ಜಗದ ಉಗಮಕೂ ಮೊದಲು ನೀನು ಇದ್ದೆ.
ಜಗದ ಉಗಮದ ನಂತರ ನಾನು ಬಂದೆ.

ನನ್ನ ನಿನ್ನ ಬಳಸಿತಾನೆ ಜಗದ ನಿಯಮಗಳ ಲೆಕ್ಕಚಾರ.
ನಾನು ನೀನು ಸೇರಿತಾನೆ ಗಣಕಯಂತ್ರ ಭಾಷೆ.

ನಾನು ನಾನೆ, ನೀನು ನೀನೆ
ನನ್ನ ನಿನ್ನ ನಡುವೆ ಏಕೆ ಜಗಳ?

- ಚೇತನ್ ಬಿ ಸಿ

06 Jan 2017, 07:37 pm