Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಕ್ಷತ್ರಗಳು-೧೨.

ಅಷ್ಟೆಲ್ಲಾ ಸಂಖ್ಯೆಯಲ್ಲಿ
ಇದ್ದರೂ ಪ್ರತಿಯೊಂದೂ
ಯಾಕೋ
ಅನಾಥವಾದವುಗಳಂತೆ
ನಕ್ಷತ್ರಗಳು
ಬಿಕ್ಕಳಿಸುತ್ತವೆ.
ರಾತ್ರಿಯ ನೀರವತೆಯಲ್ಲಿ.
************
ಪದ್ಯಾಣ.

- padyana

09 Jan 2017, 04:12 pm

ನಕ್ಷತ್ರಗಳು-೧೧

ನಕ್ಷತ್ರಗಳು
ಮೌನವಾಗಿವೆ.
ಖಂಡಿತ.
ಅವುಗಳು ಮಾತನ್ನು
ಆಡಲಾರವು.
ಯಾಕೆಂದರೆ
ಅವುಗಳು ಹೊರಳುವ
ನಾಲಿಗೆಗಳಲ್ಲ!
ಮಿನುಗುವ
ಕಣ್ಣುಗಳು!

***********ಪದ್ಯಾಣ.

- padyana

09 Jan 2017, 03:53 pm

ಹಳೆ ಪ್ರೇಮಿ

ದಯವಿಟ್ಟು ತಿರುಗಿ ನೋಡಬೆಡಾ,ಮತ್ತೆ ನನ್ನನ್ನು ಹಳೆ ಪ್ರೇಮಿಯಾಗಿಸಲು ಪ್ರಯತ್ನಿಸಬೆಡಾ

- ಸಂಘರ್ಷ ಎಸ್ ರಾಗಿ

09 Jan 2017, 03:31 pm

ನಗುವ ಹೂವು

ಹಸಿರ ಎಲೆಗಳ ಮೇಲೆ
ನಗುವ ಹೂಗಳ ಕುರಿತು
ಬರೆಯಬೇಕಿದೆ ಕವನ
ಅರಿತು ಅವುಗಳ ಪಯಣ!!

ಗಿಡದಿ ಎಲೆಗಳು ಚಿಗುರಿ
ಎಲೆಯ ಒಡಲಲಿ ಮದುರಿ
ಜನನವಾಗಿದೆ ಮೊಗ್ಗು
ಅರಳಲು ಅವಸರ ಅದಕೆ!!

ಇಬ್ಬನಿಯ ಸ್ಪರ್ಷಕ್ಕೆ
ಬೆಚ್ಚಿ ಎಚ್ಚರಗೊಂಡು
ಉದಯ ರಾಗದ ರವಿಯ
ಕಿರಣಕೆ ಮೈ ಒಡ್ಡಿ ನಿಂದು!!

ಅರಳಿ ಸಂತಸದಿ
ಸುಗಂಧವನು ತಾ ಬೀರಿ
ಮಕರಂದ ಚಿಮ್ಮುತ
ಹರೆಯವ ಏರಿ!!

ವಿರಹದ ಬೇಗೆಯಲಿ
ಬಳಲಿ ತಾ ನೊಂದು
ಪ್ರಣಯದ ಬಯಕೆಯಲಿ
ಕೈ ಚಾಚಿ ನಿಂದು!!

ಪುಳಕವಾಯಿತು ತನುವು
ದುಂಬಿಯ ಸ್ಪರ್ಷಕೆ
ಬೆರೆತು ಹೋಯಿತು ಒಲವು
ಪರಾಗ ಸ್ಪರ್ಷದಿ!!

ಸಡಿಲವಾಗಿಹ ದಳವು
ಗಿಡದ ಬುಡದಲಿ ಉದುರಿ
ಅಡಿಯ ಬೇರನು ಸೇರಿ
ಮರಳಿ ಉದಿಸಲಿ ನಾಳೆ!!

- ಪಿ.ಜಿ.ಜ್ಯೋತಿ

09 Jan 2017, 03:20 pm

ಸಾದನೆ

ಈ ವಿಚಿತ್ರ ಜಗತ್ತಿನಲ್ಲಿ ಬದುಕ್ತಿರೋದೇ ಗ್ರೇಟ್ !!
ಅಂಥದ್ರಲ್ಲಿ ನಾಲ್ಕ್ ಜನ ಏನ ಹೇಳ್ತಾರೆ ಅಂತ ಯೋಚನೆ ಮಾಡ್ಕೊಂಡು ಕೂತಿದ್ರೆ ."
ಅದೇ ನಾಲ್ಕ್ ಜನ ಕೊನೆಗೆ ಹೇಳ್ತಾರೆ ಟೈಮು ಆಯ್ತು ಬೇಗ ಯತ್ತಿ ಅನ್ನೋ ಜನ"
"ಸಾವು ಬೆನ್ನಿಂದೆ ಇರೋದು ವಾಡಿಕೆ
"ಸಾಧನೆ ಕಣ್ ಮುಂದೆ ಬರಬೇಕು ಅನ್ನೋದು ಬೇಡಿಕೆ .
ಸಾಧನೆ ಇಲ್ಲದೆ ಗೆಲುವೇ ಇಲ್ಲಾ
ಸಾಧಿಸದವನಿಗೆ ಸಾವೇ ಇಲ್ಲಾ


ಜೀವನದ ಪುಟಗಳು❣❣❣❣❣❣❣

- Manju

09 Jan 2017, 03:05 pm

ನಕ್ಷತ್ರಗಳು-೧೦

ಈಡೇರದ
ಆಸೆಗಳೆಲ್ಲಾ ನಭೋ
ಮಂಡಲಕೆ ಚಿಮ್ಮಿ
ಮಾತು ಕಳೆದುಕೊಂಡು
ಕತ್ತಲಲ್ಲಿ ಮಿನುಗುತ್ತವೆ.
ಅಣಕಿಸುತ್ತವೆ.
ನಕ್ಷತ್ರಗಳಾಗಿ,
ಗಗನಕುಸುಮಗಳಾಗಿ!
**********
ಪದ್ಯಾಣ.

- padyana

09 Jan 2017, 01:59 pm

ಸ್ವಾಗತ ನಲ್ಲನೇ ಸ್ವಾಗತವು

ಸ್ವಾಗತ ನಲ್ಲನೇ ಸ್ವಾಗತವು
ನನ್ನ ಹೃದಯದ ಗುಡಿಗೆ ಸ್ವಾಗತವು!!

ಮೆಲ್ಲನೆ ಬಂದಿಹ ಈ ಇರುಳು
ನನ್ನನು ಕಾಡಿವೆ ಬಯಕೆಗಳು!!
ನಿಲ್ಲದೇ ಓಡುತ ಕನಸುಗಳು
ಹೊಸ ಹೊಸ ಭಾವನೆ ಮನಸಿನೊಳು!!

ಸ್ವಾಗತ ನಲ್ಲನೇ ಸ್ವಾಗತವು
ನನ್ನ ಹೃದಯದ ಗುಡಿಗೆ ಸ್ವಾಗತವು!!

ಕತ್ತಲ ಕರಗಿಸುವ ಹಗಲು
ಎತ್ತಲೋ ಹೋಯಿತು ನಿಮಿಷದೊಳು!!
ಬೆನ್ನನು ಬಿಡದಿರೋ ಆಸೆಗಳು
ನನ್ನನು ಕಾಡಿವೆ ಹಗಲಿರುಳು!!

ಸ್ವಾಗತ ನಲ್ಲನೇ ಸ್ವಾಗತವು
ನನ್ನ ಹೃದಯದ ಗುಡಿಗೆ ಸ್ವಾಗತವು!!

ಸುಮ್ಮನೇ ಕುಳಿತರೂ ಮಾತುಗಳು
ಪಿಸುಗುಡುತ್ತಿವೆ ನನ್ನ ಭಾವದೊಳು!!
ಸ್ವಾಗತ ಕೋರುತ ನಾ ಕಾದಿರುವೆ
ಜೀವದ ಭಾವವೇ ನೀ ಬರಲು!!

ಸ್ವಾಗತ ನಲ್ಲನೇ ಸ್ವಾಗತವು
ನನ್ನ ಹೃದಯದ ಗುಡಿಗೆ ಸ್ವಾಗತವು!!

- ಪಿ.ಜಿ.ಜ್ಯೋತಿ

09 Jan 2017, 01:23 pm

ನಿನ್ನ ನೆನಪು

ನೀ ಎಂದು ಬಂದು
ಸೇರುವೆ ನನ್ನ ಮನಸ್ಸನ್ನ
ನಿನ್ನ ಮಡಿಲಲ್ಲಿ ಮಗುವಂತೆ
ಮಲಗಿಕೊಳ್ಳುವ ಆಸೆ
ನನ್ನ ಹೃದಯಾಂತರದಲಿ ನಿನ್ನ
ಪ್ರೀತಿಯನ್ನು ಉಳಿಸಿಕೊಳ್ಳುವ ಆಸೆ
ನಿನ್ನ ನೆನಪಲ್ಲೆ ನಾ ಸತ್ತರು ಓ ಒಲವೇ
ಬರಬೇಡ ನೀ ನನ್ನ ನೋಡಲು
ಯಾಕೆಂದರೆ.....
ಮತ್ತೆ ಜೀವ ಬರಬಹುದು..
ನಿನ್ನ ನೆರಳು ನನಗೆ ಸೋಕುವ ಮುನ್ನ..
ಬಂದ ಜೀವಕೆ ಮತ್ತೆ ನೋವಾಗಹುದು
ಕಾಡಿಸುತಿದೆ ಒಲವೇ ನಿನ್ನ ನೆನಪು..
ಹೋಗಬಾರದೆ ನನ್ನ ಈ ಜೀವ..

- Pb

09 Jan 2017, 12:43 pm

ಬದುಕು ಒಂದು

ಬದುಕು ಒಂದು
ಆಸೆ ನೂರು...
ಕೊಟ್ಟು ನೊಡು
ಸೇವೆ ಮಾಡು....
ಆಪೆಕ್ಷೆ ಬೇಡಾ
ಅಸೂಹೆ ಬೇಡಾ...
ಒಂದಾಗಿ ಬದುಕೊಣ
ಒಂದಾಗಿ ಬೆಳೆಸೊಣ
ಈ ಬದುಕು ಅಥ೯ ಪೂಣ೯ವೆಂದೆನಿಸಿಕೊಳ್ಳೊಣಾ...
ರೂಪಾ
(ಬಾವನೆಗೆ ಬರವಣಿಗೆಯ ರೂಪಾ)

- Roopa

09 Jan 2017, 10:18 am

ನೂರು ಜನ್ಮ ಕಾಯುವೆನು (ಓ ಹೃ

ಮೌನದ ದಾರಿಯಲಿ
ಒಂಟಿಯಾಗಿ ನಾನಿರಲು
ಜೊತೆಯಾದಳು ನನ್ನ
ಒಂಟಿತನ ದೂರ ಮಾಡಲು
ಕೈ ಹಿಡಿದು ನಡೆದಳು
ಜೊತೆ ಜೊತೆಯಲಿ ಅವಳು
ಹೀಗೆ ಅನುಕ್ಷಣ
ಪ್ರತಿದಿನ ಸಾಗುತಿರಲು
ನಮ್ಮಿಬ್ಬರಲಿ ಪ್ರೀತಿ
ಮೂಡಿ ನನ್ನುಸಿರಾದಳು

ತಿಳಿಯದೆ ಒಮ್ಮಲೆ ದೂರವಾದಳು
ಉಳಿಯಿತು ನನ್ನ ಜೊತೆ
ಅವಳ ಸವಿ ಸವಿ ನೆನಪುಗಳು
ಅವುಗಳ ಜೊತೆಗೆ
ಜೀವನ ಸಾಗುತಿರಲು
ಕಣ್ಣೀರು ಹನಿಯಾಗಿ
ಕರಗಿತು ನನ್ನ ಕನಸುಗಳು
ಮನದಲ್ಲಿ ಉಳಿದಿತ್ತು
ನೂರಾರು ಭಾವನೆಗಳು.

ಆ ಭಾವನೆಗಳೇ ಇಂದು
ನಾ ಬರೆದ ಕವನಗಳು
ಈ ಕವನದಲಿ ಪ್ರೀತಿಯಾಗಿ
ಉಳಿದಿರುವಳು ಅವಳು
ಅವಳಿಗಾಗಿ ನಾ
ಕಾಯಬಲ್ಲೆ ನೂರು ಜನುಮಗಳು.

- Pb

09 Jan 2017, 09:21 am