Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

"ಕಡಿವಾಣ" _______________

ಬರಿಮಾತಿಗೆ ಹಾಕಿ
ಮೂಗುದಾರ
ಇಲ್ಲದಿದ್ದರೆ....
ಸಂಬಂಧಗಳು ಏರುಪೇರ!
ಮಾತಿನಲ್ಲಿರಲಿ ಸಂಸ್ಕಾರ
ಆಚಾರ ವಿಚಾರ
ಇಲ್ಲದಿದ್ದರೆ.....
ಬಾಳಿನ ನೆಮ್ಮದಿಗೆ
ಸಂಚಕಾರ!
____ _______________
ಬಸವಪ್ರಿಯ

- ಬಲವಂತ ಮೋರಟಗಿ(ಬಸವಪ್ರಿಯ)

09 Jan 2017, 09:14 pm

ಕೇಶ

ಈ ನಿನ್ನ ಕೇಶರಾಶಿಯನ್ನು ಕಂಡು
ಕಂಡು ಕರಗದೆ ಇರಲು ಸಾಧ್ಯವೇ
ಆ ನಿನ್ನ ಮುಂಗುರುಳ ನರಿಸಿ ನೋಡದಿರು
ನೋಡಿದರೆ ನಾನು ಕಳೆದು ಹೋಗದೆ ಇರುವೆನೆ.

-ಸಾಗರ್

- sagar chamali

09 Jan 2017, 08:44 pm

ಗುರುವಿಗೆ

ಅಕ್ಕರೆಯಿಂ ಅಕ್ಕರವಂ ನುಡಿಸಿದವಗೆ
ಎನ್ನೊಳಗಿನ ಎನ್ನಂ ಬಿಡಿಸಿದವಗೆ
ಒಲವಿನಿಂ ತಿದ್ದಿ ತೀಡಿದ ಯೋಗಿಗೆ
ಎನ್ನನುದ್ಧರಿಸಿದ ಆ ದಿವ್ಯ ಚೇತನಕೆ

ಅಜ್ಞಾನದಿಂ ಸುಜ್ಞಾನದೆಡೆಗೆ ಕರೆತಂದವಂಗೆ
ಸರ್ವವಂ ಧಾರೆ ಎರೆದ ತ್ಯಾಗಮೂರ್ತಿಗೆ
ತನ್ನಂ ಮರೆತು ಮಾಡುವ ನಿಸ್ವಾರ್ಥ ಸೇವೆಗೆ
ಜೀವನವಂ ತೋರಿದ ಮಾರ್ಗದರ್ಶಕನಿಗೆ

ಶಿಷ್ಯನೋಳ್ ತಾ ಮೆರೆದ ಸಾತ್ವಿಕನಿಗೆ
ಅರಿವಂ ಪೊಸಯಿಸುವ ಮೇಧಾವಿಗೆ
ಜ್ಞಾನಭಂಡಾರದ ಒಡೆಯನಿಗೆ
ಶ್ರೀ ಸರಸ್ವತಿಯ ವರಪುತ್ರನಿಗೆ

ತಮದಿಂ ಕರೆತಂದ ದಿವ್ಯ ಜ್ಯೋತಿಗೆ
ಜಗದ ಕೀರ್ತಿಗೆ ಪಾತ್ರನಾದ ಪರಮಜ್ಞಾನಿಗೆ
ಸಮಾನತೆಯಂ ತೋರಿದ ಸಾರ್ಥಕತೆಗೆ
ಮೌಲ್ಯಗಳಂ ತುಂಬಿದ ಮಾನವತೆಗೆ

ವಿಶ್ವವಂ ಪರಿವರ್ತಿಸಬಲ್ಲ ಆ ಶಕ್ತಿಗೆ
ಮಣಿಯುವೆನು ನಾನೆಂದು ಚಿರಮುಕ್ತಿಗೆ
ಏನ ನೀಡಲಿ ನಾನು ಗುರುಭಕ್ತಿಗೆ?
ಇನ್ನಾವುದೆಣೆಯುಂಟು ಆ ಪ್ರೀತಿಗೆ

ಪೊರೆದು ಬೆಳೆಸಿದ ಎನ್ನೆಲ್ಲ ಪ್ರಿಯ ಗುರುವಿನ ಚರಣಕಮಲಗಳಿಗೆ
ಈ ನಿಮ್ಮ ಪ್ರಿಯ ಶಿಷ್ಯನ ಅನಂತ ಅನಂತ ಅನಂತ ವಂದನೆ

- Kumara.C

09 Jan 2017, 07:57 pm

ಎಷ್ಟು ಚಂದ ಶಿಕ್ಷೆ

ಎಷ್ಟು ಚಂದ ಶಿಕ್ಷೆ
ಬಯಸಲು ಪ್ರೀತಿ ಓಲುಮೆ
ನೀ ನನ್ನವಳೆನ್ನುವುದು ಹಿರಿಮೆ

- Pavan

09 Jan 2017, 06:24 pm

ಹೃದಯಕೂ ಕಣ್ಣೀರುಂಟು

ಸೂರ್ಯನಿಗೂ ಕಣ್ಣೀರುಂಟು ಆದರದು,
ಹುಟ್ಟುವ ಮುನ್ನವೇ ಹಿಂಗಿದೆ
ಅದರದೇ ಶಾಖಕೆ.

ಇರುಳಿಗೂ ಕಣ್ಣೀರುಂಟು ಆದರದು,
ಕಾಣುವ ಮುನ್ನವೇ ಕಾಣೆಯಾಗಿದೆ
ಅದರದೇ ಕತ್ತಲೆಗೆ.

ನೀರಿಗೂ ಕಣ್ಣೀರುಂಟು ಆದರದು,
ನೊರೆಯಾಗುವ ಮುನ್ನವೇ ಮರೆಯಾಗಿದೆ
ಅದರದೇ ಅಲೆಗೆ.

ಗಾಳಿಗೂ ಕಣ್ಣೀರುಂಟು ಆದರದು,
ಜಾರುವ ಮುನ್ನವೇ ಹಾರಿದೆ
ಅದರದೇ ವೇಗಕೆ.

ಸಮಯಕೂ ಕಣ್ಣೀರುಂಟು ಆದರದು,
ಸುರಿಯುವ ಮುನ್ನವೇ ಸರಿದಿದೆ
ಅದರದೇ ಚಲನೆಗೇ.

ಮೋಡಕೂ ಕಣ್ಣೀರುಂಟು ಆದರದು,
ಮೂಡುವ ಮುನ್ನವೇ ಮಡಿದಿದೆ
ಅದರದೇ ಕರಗುವಿಕೆಗೆ.

ನನ್ನ ಹೃದಯಕೂ ಕಣ್ಣೀರುಂಟು ಆದರದು,
ಜಿನುಗುವ ಮುನ್ನವೇ ಅಸುನೀಗಿದೆ
ಅದರದೇ ನೀರವ ಮೌನಕೆ.

- ಶಶಿ ಕಿರಣ

- ಅಕವಿ

09 Jan 2017, 05:47 pm

ನಲ್ಮಯ ನಲ್ಲೆ

ಒ ನಲ್ಲೆ
ಪ್ತೀತಿಯಲ್ಲಿ ಗಲ್ಲೆಬ್ಬಿಸಿ
ಆಸರೆಯಲ್ಲಿ ಅಲೆಯಬ್ಬಿಸಿ
ಮನದಲ್ಲಿ ಗರಿಬಿಚ್ಚಿ
ನನ್ನೊಳಗೆ ನಿನಾಗಿರುವೆ
ಕಣ್ಣೊಳಗೆ ಬಿಂಬವಾಗಿರಿವೆ..
ನಿನ್ಮ ನೆನಪಿಲ್ಲದ ಕ್ಷಣವಿಲ್ಲದ
ಆ ಘಳಿಗೆಯಲ್ಲಿ ಜೀವಿಸಲಾರದ
ಜೀವಂತ ಶವ ನಾನು.
ಚಿಂತೆಯಲ್ಲಿ ನಿನ್ನ ನೆನದಾಗೆಲ್ಲ
ನೆನಪಾಗುವುದು ಆ ನಿನ್ನ ಮುಖದ
ಚಿತ್ರಣ ಮುಂದಪಡಿ ಬರುವುದು
ನಿನ್ನೆದೆಯ ಅಂತರಸಳದಿದಂದ...
ಮಲ್ಲು....

- mallu

09 Jan 2017, 05:46 pm

ನಲ್ಲೆ ಒ ನನ್ನ ನಲ್ಲೆ...‌%

ಒ ನಲ್ಲೆ
ಪ್ತೀತಿಯಲ್ಲಿ ಗಲ್ಲೆಬ್ಬಿಸಿ
ಆಸರೆಯಲ್ಲಿ ಅಲೆಯಬ್ಬಿಸಿ
ಮನದಲ್ಲಿ ಗರಿಬಿಚ್ಚಿ
ನನ್ನೊಳಗೆ ನಿನಾಗಿರುವೆ
ಕಣ್ಣೊಳಗೆ ಬಿಂಬವಾಗಿರಿವೆ..
ನಿನ್ಮ ನೆನಪಿಲ್ಲದ ಕ್ಷಣವಿಲ್ಲದ
ಆ ಘಳಿಗೆಯಲ್ಲಿ ಜೀವಿಸಲಾರದ
ಜೀವಂತ ಶವ ನಾನು.
ಚಿಂತೆಯಲ್ಲಿ ನಿನ್ನ ನೆನದಾಗೆಲ್ಲ
ನೆನಪಾಗುವುದು ಆ ನಿನ್ನ ಮುಖದ
ಚಿತ್ರಣ ಮುಂದಪಡಿ ಬರುವುದು
ನಿನ್ನೆದೆಯ ಅಂತರಸಳದಿದಂದ.
ಮಲ್ಲು..

...

- mallu

09 Jan 2017, 05:44 pm

ನಕ್ಷತ್ರಗಳು-೧೪.

ನಕ್ಷತ್ರದ ಮೊನಚು
ತುದಿಗಳು-ನನ್ನ ಏಕಾಂತಗಳನ್ನು
ಚುಚ್ಚಿ ಚುಚ್ಚಿ
ಆಕಾಶದಂತಹ ನನ್ನ
ಮನಸ್ಸಿನಲ್ಲಿ
ಶತಕೋಟಿ ಛಿದ್ರಗಳು.!
ಅದರ ತುಂಬ ಬೆಳಕಿನ ಕಿಡಿಗಳು,
ಕತ್ತಲಲ್ಲಿ ಮಾತ್ರ
ಗೂಢವಾಗಿ-ಗಾಢವಾಗಿ
ಮಿನುಗುತ್ತವೆ-ಮೌನವಾಗಿ.

************** ಪದ್ಯಾಣ.

- padyana

09 Jan 2017, 04:56 pm

ನಕ್ಷತ್ರಗಳು-೧೩

ನಿಶಾರಾಣಿಯ
ಮಣಿಹಾರ--ಪದಕ
ಆಗಸದ ಹಾಸಿಗೆಯಲ್ಲಿ
ಸೂತ್ರ ಹರಿದು-ಚದುರಿ
ಬಿದ್ದಿವೆ,ಚೆಲ್ಲಾಡಿವೆ!
ಹರಿದೆಸೆದವನಾರಲ್ಲಿ?

*************ಪದ್ಯಾಣ.

- padyana

09 Jan 2017, 04:18 pm

ಬೇಗ ಬಳಿಬಾರೆ.... [ಓ ಹೃದಯಾ

ನನ್ನ ಸಂಪೂರ್ಣವಾಗಿ ನೀ ಆವರಿಸಿರುವೆ
ಕನಸಲೂ ಸಹ ನಿನ್ನೇ ನಾ ಕಾಣುವೆ
ಹೃದಯ ಸೋತು ಶರಣಾಗಿದೆ ನಿನಗೆ
ಮನದಲಿ ಏನೋ ಭಯವಿದೆ ಸಣ್ಣಗೆ

ನಿನಗೇಳಲು ಬಯಸಿದ ಸಾವಿರ ಮಾತು
ತುಟಿಯಂಚಲೆ ಕಾಯುತಿದೆ ನಿಂತು
ಆ ಮಾತು ಮೌನದಲಿ ಮಣ್ಣಾಗುವ ಮೊದಲು
ಬಳಿ ಬರಬಾರದೆ ನೀನೊಮ್ಮೆ ಕೇಳಲು

ನೀನೀಗ ನನ್ನೊಳಗೆ ತುಂಬಿರುವೆ
ನಿನ್ನ ಕಣ್ಣ ನೋಟಕೆ ನಾ ಸೋತಿರುವೆ
ನಾನು ನೀನಾಗಿ ಬದಲಾಗಿರುವೆ
ಹೆಚ್ಚು ಕಾಡಿಸದೆ ಬೇಗ ಬಳಿಬಾರೆ

- Pb

09 Jan 2017, 04:16 pm