Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

‌‌‌ "ದೃಷ್ಟಿ" ______

ಅವನಿಗೆ ಅವಳಿಷ್ಟವಾದರೆ...
ಅವಳು ಚಂದ್ರನಖಿ ಪ್ರಾಣಸಖಿ..
ಅವಳಿಗಿಷ್ಟವಾಗದಿದ್ದರೆ ........
ಅವಳು ಸೂರ್ಪನಖಿ ತಾಟಿಕಾ ರಾಕ್ಷಸಿ....!
____ ______
ಬಸವಪ್ರಿಯ

- ಬಲವಂತ ಮೋರಟಗಿ(ಬಸವಪ್ರಿಯ)

11 Jan 2017, 09:03 pm

ನಡೆ ಜಡೆ ಕನಸೆಡೆ

ಹುಡಗಿಯ ಅಂಕು-ಡೊಂಕಿನ ನಡೆ,
ಓಡಿಸಿತ್ತು ನನ್ನ ಮನಸ್ಸನ್ನು ಕನಸಿನ ಕಡೆ.
ಅವಳದೋ ತುಂಬಾ ಉದ್ದ ಜಡೆ,
ಆ ಜಡೆ ಇಣುಕುತಿತ್ತು ಅವಳ ಸೂಂಟದ ಕಡೆ.
ಅವಳ ಆ ಅಳುಕು-ಬಳುಕಿನ ನಡೆ,
ತೋರುತಿತ್ತು ಅವಳದೋ ಹಂಸದ ನಡೆ.
ಅವಳು ಬಂದರೆ ಕಾಲೇಜಿನ ಒಳಗಡೆ,
ಕ್ಯಾಂಪಸ್ಸಿನ ಹುಡುಗರೆಲ್ಲಾ ಅವಳ ಹಿಂದಗಡೆ. ಕೂರುತ್ತಿದ್ಲು ಯವಾಗ್ಲು ಬೆಂಚಿನ ಕಡೆ(ಕೂನೆ),
ನಾ ಮೆಲ್ಲನೆ ನೋಡುತ್ತಿದ್ದೆ ಅವಳ ಕಡೆ.
ನಾ ಕದ್ದು ನೋಡಲು ಮೆಲ್ಲನೆ ಅವಳೆಡೆ,
ನಾಚಿ ನರ್ತನ ಮಾಡುತ್ತಿದ್ದವು ಅವಳ ಕಂಗಳೆರಡೆ.
ಸರ್ರೆಂದರೆ ಲೋ ರಾಜೇಶ ನೋಡಲೋ ಈಕಡೆ,
ನಾಚಿ ಮುಗುಳ್ನಗುತ್ತಿದ್ದವು ತೊಂಡೆಹಣ್ಣಿನ ಅವಳ ತುಟಿಗಳೆರಡೆ.
ಆಗ ಖಾಲಿಯಾಗಿತ್ತು ನನ್ನ ಮಂಡೆ(ಬುದ್ದಿ),
ಈಗ ಖಾಲಿಯಾಗಿರುವುದು ನನ್ನ ಬುಂಡೆ.
ಇದನ್ನೆಲ್ಲಾ ನೆನೆದು ಕುಳಿತಿರಲು ನಾನೂಂದೆಡೆ,
ಕನಸ್ಸುಗಳು ಮಾಡಿದ್ದವು ನನಸಿನ ದರೋಡೆ.
ನಾ ಏನ ಮಾಡಲಿ ನೀವೇ ಹೇಳಿ,
ಗೆಳೆಯ-ಗೆಳತಿಯರೆ.

- ರಾಜೇಶ್ ಎ.ಎಸ್

11 Jan 2017, 10:57 am

ಮೊದಲ ಪ್ರೀತಿ ! ಯಲ್ಲು.

ಕಣ್ಣೆಂಬ ಆಗಸದಲ್ಲಿ

ಕನಸ್ಸೆಂಬ ಮೋಡಕವಿದು

ಮನಸ್ಸೆಂಬ ಭೂಮಿ ಮೇಲೆ

ಮಳೆಯಾಗಿ ಸುರಿದಾಗ

ಹೃದಯದಲ್ಲಿ ಮೊಳಕೆ

ಒಡೆಯುವುದೇ ಪ್ರೀತಿ

ಯಲ್ಲು ಅರವಳ್ಳಿ !

- ಯಲ್ಲು ಅರವಳ್ಳಿ !

11 Jan 2017, 09:07 am

ವರ್ಣನೆ

ಒ ನಲ್ಲೆ ನಿನಗೊಂದು
ಪ್ರೇಮವ ಪತ್ರವ ಬರೆಯುವ ಆಸೆ.

ನಿನ್ನ ಪಲ ಪುಷ್ಪ ಸುಗಂಧ
ದ್ರವ್ಯಗಳಿಗೆ ಹೊಲಿಸಲೆ,
ಪ್ರಕೃತಿಯ ಸೌಂದರ್ಯಕೆ
ನಿನ್ನ ಹೊಲಿಸಲೆ,
ನಿನ್ನ ಆ ಮೈಮಾಟಕೆ
ನಿನ್ನ ಆ ಸೌಂದರ್ಯಕೆ
ಈ ಭೂವಿಯಲ್ಲ
ನಿನ್ನ ವರ್ಣಿಸಲು ಪದಗಳೆ ಇಲ್ಲಾ.

ಒ ನಲ್ಲೆ ಒಮ್ಮೆ ಹೇಳು ನಿನ್ನ
ಬಣ್ಣಿಸಲೆಂಗ ನಾ,
ನಿನ್ನ ಹೊಗಳಲೆಂಗ ನಾ,
ಈ ನನ್ನ ಮನದಾಸೆಯನ್ನು
ಹೇಳಲೆಂಗ ನಾ ನಿನ್ನೆದರು..
ಮಲ್ಲು/..

- mallu

11 Jan 2017, 08:31 am

ಜಾರಿ ಬೀಳುವವರೆಗಾದರೂ.

ಜಾರಿ ಬೀಳುವವರೆಗಾದರೂ..!

ಮುಂಗುರುಳು ಮಂಜಾನೆಯ
ಮಂಜನು ಇಷ್ಟಪಟ್ಟ ಮಂದಾರ ಹೂವೇ..
ಮರೆಯಬಾರದೀ ಮಂಜ ಹನಿಯ..
ನಿನ್ನ ಎಸಳಿನಿಂದ ಜಾರಿ ಬೀಳುವವರೆಗಾದರೂ..!

- arun c sankannavar

10 Jan 2017, 10:20 pm

ಮನಸ್ಸು

ಕತ್ತಲು ಅಂದರೆ ಅಂಧಕಾರವಲ್ಲ ಅದು ಬೆಳಕಿನ ಮೌನ.
ಸೋಲು ಅಂದರೆ ಅಂತ್ಯವಲ್ಲ ಅದು ಗೆಲುವಿಗೆ ಬೇಕಾದ ಸಾಧನ
ಕನಸು ಅಂದರೆ ಬರೀ ಹಂಬಲವಲ್ಲ ಮನಸು ಎಂಬ ಕಾದಂಬರಿಗೆ ಬರೆದ ಮುನ್ನುಡಿ.

- Manju

10 Jan 2017, 08:31 pm

ಮೋದಲ ಪ್ರೇಮ

ಸದ್ದಿಲ್ಲದ‌ ಮನಸಲಿ ಸದ್ದ‌ಾಗಿದೆ ಇಂದು
ನನಗೆ ಗೋತ್ತಾಗಲ್ಲಿ ಅಸದ್ದು ನನ್ನ ಪ್ರೀತಿಯೆಂದು
ಅವಳೆಂದಳು ನಾ ನಿನ್ನ ಗೇಳತಿಯೆಂದು
ಆಗ ತೀಳಿಯಿತು ಅದೆ ನನ್ನ ಮೋದಲ ಪ್ರೇಮವೆಂದು

sureshm suri

- sureshm

10 Jan 2017, 07:28 pm

ಭಾರವಾಗಿದೆ ಹೃದಯ

ಸಹಿಸಲಾರದಷ್ಟು ಭಾರವಾಗಿದೆ ಹೃದಯ
ಹೇಳು?
ತೆಗೆದಿಟ್ಟು ನಿರಾಳವಾಗಲೆ?
ಅಥವಾ,
ಹಾಗೆಬಿಟ್ಟು ಅಸುನೀಗಲೆ?



- ಶಶಿಕಿರಣ

- ಅಕವಿ

10 Jan 2017, 04:19 pm

ದಾರಿ ಬೇರೆ ಬೇರೆ....

ಓ ನನ್ನ ನಲ್ಲೆ ಪ್ರಯಾಣಿಸುತಿರುವೆನು
ದೂರದೂರಿಗೆ ಹೊರಟಿರುವೆನು
ನೆನೆಯುತ ನಿನ್ನನು ಮನದಲಿ
ಮಾತನಾಡುತಿರುವೆನು ಮೌನದಲಿ
ಸುಮ್ಮನೆ ಕುಳಿತಿರಲು
ಕಿಟಕಿಯ ಹೊರ
ಪ್ರಪಂಚವನ್ನು ದಿಟ್ಟಿಸುತ್ತಾ....
ಕ್ಷಣದಲ್ಲಿ ಬದಲಾಗುವ
ಪ್ರಕೃತಿಯ ಚಿತ್ರಗಳ ಸವಿಯುತ್ತಾ...
ಎಲ್ಲವನ್ನು ಅನುಭವಿಸುತ
ಮುನ್ನಡೆದಿದೆ ಬದುಕಿನ ಪಯಣ
ಒಂದು ನಿಲ್ದಾಣದಿಂದ ಮತ್ತೊಂದಕ್ಕೆ
ನಿಲ್ಲದೇ ನಡೆದಿದೆ ಬಸ್ಸಿನ ಪಯಣ
ನೀ ಜೊತೆಗಿದ್ದರೆ ಸಮಯವೇ ಸಾಲದು
ಭಾವನೆ ಬದಲಾಯಿಸೋ
ನೋಟವು ನಿನ್ನದು 
ಪ್ರೀತಿಯ ಅರಿವಾಗಿದೆ
ನಿನ್ನ ನೆನದು ನನಗಿಂದು 
ಕಣ್ಣಮುಚ್ಚಿ ಕುಳಿತರು
ನನ್ನ ಕಾಡುವೆ ಏಕೆ ನೀ ಬಂದು 
ಪದಗಳೆ ಸಿಗದು ಕವನವ ಬರೆಯಲು 
ಮನಸಿಗೆ ಆಗದು ನಿನ್ನಯ ಮರೆಯಲು 
ನೀ ನಿಲ್ಲದ ಆ ಕ್ಷಣ ನಾನಿಲ್ಲ ನನ್ನಲಿ 
ಕೊಲ್ಲುತಿರು ಹಾಗೆ ಸುಮ್ಮನೆ
ನನ್ನನು ನಿನ್ನಯ ಕಣ್ಣಲಿ 
ನೀನು ನನ್ನ ಬಿಟ್ಟಿರಲಾರೆ
ನಾನು ನಿನ್ನ ಬಿಟ್ಟಿರಲಾರೆ
ಆದರೂ ನಮ್ಮ ದಾರಿ ಬೇರೆ ಬೇರೆ.

- Pb

10 Jan 2017, 10:24 am

ಹೃದಯಕೂ ತುಟಿಗಳಿಗೂ

ಹೃದಯಕೂ
ತುಟಿಗಳಿಗೂ
ಅದೆಷ್ಟು
ಯೋಜನೆಗಳ
ಅಂತರವೋ
ಅಥವಾ
ಅದೆಷ್ಟೆತ್ತರದ
ಗೋಡೆಯಿದೆಯೋ
ಅಥವಾ
ಅದಾವಾಳದ
ಕಂದರವಿದೆಯೋ,
ಮನದಾಳದ
ಮಾತುಗಳು
ತುಟಿಯಂಚಿಗೆ
ಬಾರದಾಗಿವೆ,

- RAjESH D

10 Jan 2017, 08:21 am