Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಕ್ಷತ್ರಗಳು-೧೫.

ಮನೆ-ಮನೆಗಳಂಗಳಗಳಲಿ
ರಂಗೋಲಿ
ಮೂಡುವ
ಮೊದಲು
ಆಗಸದಂಗಳದಿ
ಚುಕ್ಕಿ-ಗೆರೆಗಳ
ಸಡಗರ!

***************ಪದ್ಯಾಣ.

- padyana

12 Jan 2017, 09:45 pm

ಮೌನ ವೀಣೆ

ಸುಮ್ಮನೆ ಗುನುಗುತಿದೆ
ಸರಿಗಮ ಸಂಗೀತ.
ನನ್ನೆದೆಯ ಏಕಾಂತದಲಿ....
ನೀ ನಿರದ ನೀರವದಲಿ
ನಿನ್ನ ನೆನಪಿನ ಕಲರವ.
ಸದಿಲದೆ ಪಿಸುಗುಡುವ
ನನ್ನ ಮೌನದಲಿ
ಹಾಡಾಗು ಬಾ... ಸುಮ್ಮನೆ

- chinmayi

12 Jan 2017, 09:09 pm

ಪ್ರೀತಿ ಸಂತೆ

ಹ್ರದಯದ ಹೆಬ್ಬಾಗಿಲಿಗೆ ನಾ ಬಂದು ನಿಂತೆ
ಏನು ಅರಿಯದ ಮಳ್ಳಿಹಾಗೆ ನೀ ನಿಂತೆ
ಕಟ್ಟಿಕೊಂಡಿರುವೆ ನಿನಗಾಗಿ ಅಸೆಗಳ ಕಂತೆ
ಹ್ರದಯ ಬಾಗಿಲು ನೀ ತರೆಯದಿರೆ ನನ್ನ ಜೀವನ
ಕನಸ್ಸಿಲದಿರುವ ಹಾಳು ಸಂತೆ

- j s

12 Jan 2017, 06:52 pm

ಮನುಜ

ಯೋಚ‌ನೆ ಗುರಿಯ‌ತ್ತ‌ ,ಗುರಿ ಮ‌ನ‌ಸ್ಸಿನ‌ತ್ತ,ಮ‌ನ‌ಸ್ಸು ಕ‌ನ‌ಸ್ಸಿನ‌ತ್ತ‌,ಕ‌ನ‌ಸ್ಸು ಪ್ರೀತಿಯ‌ ಸುತ್ತ‌,ಪ್ರೀತಿ ನಂಬಿಕೆಯ‌ತ್ತ‌,ನಂಬಿಕೆ ವಿನಯದ‌ತ್ತ‌,ವಿನಯ ಮ‌ನುಜ‌ನ‌ತ್ತ‌,ಮ‌ನುಜ‌ ಪ್ರೀತಿಗೆ ಸ್ವಂತ....

- sowmyashree S M

12 Jan 2017, 04:48 pm

ಸಂಕ್ರಮಣದ ಸಂಭ್ರಮ.

ಬೇವು- ಬೆಲ್ಲಗಳ ಮಿಶ್ರಣ
ಸಿಹಿ- ಕಹಿಗಳ ತೋರಣ
ಸರಿದೂಗಿಸುವ ಈ ಸಂಕ್ರಮಣ
ಸಂಭ್ರಮದಿಂದ ಆಚರಿಸೋಣ
ಹಗೆ- ಹೊಗೆ ತೊರೆದು ನಲಿಯೋಣ
ಮಾದುಲಿಯ ರುಚಿ ಸವಿಯೋಣ
ಭಾವೈಕ್ಯತೆಯನು ಜಗಕೆ ಸಾರೋಣ
ಭಾರತಾಂಭೆಯ ಅಡಿಗೆ ನಮಿಸೋಣ.
:
- ಎ.ಜಿ.ಕಮತಗಿ.(ಶಾಂತಿಪ್ರಿಯ)

- "ಶಾಂತಿಪ್ರಿಯ"

12 Jan 2017, 03:56 pm

ನೋವು

ಮನಸ್ಸಿನಲ್ಲಿ ಕುಳಿತು
ಕನಸ್ಸಿನಲ್ಲಿ ಬೆರೆತು
ಉಸಿರಲ್ಲಿ ಬೆಸತು
ಈಗ ನೀ ಕೈ ಬಿಟ್ಟರೆ
ನನ್ನ ಹ್ರದಯಕ್ಕೆ ಯಾರಿಲ್ಲ ಆಸರೆ
=dev=

- j s

12 Jan 2017, 03:48 pm

ನಿದ್ರಾ ದೇವಿ..............

ಒಂದೊಂದು ಸಾರಿ ನಾನು ಬೇಡ ಅಂದ್ರು
ಅವಳಾಗೆ ನನ್ನ ಬಳಿ ಬರುತ್ತಾಳೆ
ಕೆಲವೊಮ್ಮೆ ನಾನೆ ಕರೆದ್ರು ಅವಳು
ಬರೋಕೆ ಹಿಂದೆ ಮುಂದೆ ನೋಡುತ್ತಾಳೆ
ಅವಳನ್ನ ಹೆಂಗೆ ಅರ್ಥಮಾಡ್ಕೊ ಬೇಕು
ಅನ್ನೋದು ಇನ್ನು ತಿಳಿದಿಲ್ಲ ಈ ಮುಗ್ಧ ಜೀವಿಗೆ
ಹೇಳಿಬಿಡು ನಿದ್ರಾದೇವಿ ನಿನ್ಯಾರು ಅಂತ
ಕೆಲವೊಂದು ಬಾರಿ ನನಗೆ ಅನ್ಸಿದ್ದು ಉಂಟು
ನಿ ಮಾಯಾವಿ ಎಂದು............

- ಒಳ್ಳೆ ಹುಡ್ಗ ಅಭಿ

12 Jan 2017, 01:21 pm

ಜೀವನ

ಮರಳುಗಾಡಿನಂತೆ ಜೀವನ
ಮರಳುಗಾಡು ದಾಟಿ ಹೋಗಲೇ ಬೇಕೆಂಬ ಹಂಬಲ.
ಕನಸೆಂಬ ಬಾಯಾರಿಕೆಯ ತಣಿಸಲು
ನೀರಿಗಾಗಿ ಹುಡುಕಾಡುವುದೇ ನಿಜ ಕಾಯಕವಿಲ್ಲಿ
ಸಿಕ್ಕೇ ಬಿಟ್ಟಿದೆ ನೀರು ಸಮೀಪಿಸೆ ಬಿಟ್ಟಿರುವೆ ನೀರಾಡಿಕೆಯ ತನಿಸಿಕೊಳ್ಳುವ ಕ್ಷಣವ ಎಂದುಕೊಳ್ಳುತ್ತಲೇ ನೀರ ಸಮೀಪಕೆ ಓಡುತ್ತಲೇ ಇರಲು
ಅರಿವಾಗುವುದು, ಓಡಿ ಬಂದಿರುವೆನು ನಾನು ಮರಿಚಿಕೆಯೇ ನೀರೆಂದು ಹರಸಿ

ಮತ್ತೆ ಮತ್ತೆ ಮರಳುಗಾಡು ದಾಟಿ ಗೆಲ್ಲಲೇ ಬೇಕೆಂಬ ಬಯಕೆ
ಮತ್ತದೇ ಪಯಣದ ಮುಂದುವರಿದ ಭಾಗ
ಮತ್ತದೇ ನೀರಿಗಾಗಿ ಹುಡುಕಾಟ
ಮತ್ತೆಷ್ಟೋ ಮರೀಚಿಕೆಯ ಭೇಟಿ
ಮತ್ತೆಷ್ಟೋ ಕಾಲ ಬಾಯಾರಿಕೆಯ ಸಂಕಟ
ಸಿಕ್ಕ ನೀರು ಕೂಡ ಮರೀಚಿಕೆಯೇನೋ ಎನ್ನುವ ಆತಂಕ
ಮೊಗೆದು ಕೊಳ್ಳಲು ಹೆಜ್ಜೆ ಹಾಕಲು ಹಿಂಜರಿಯುವ ಮನಸು
ಎಲ್ಲವ ದಾಟಿ ನೀರು ಹುಡುಕಾಡಿ, ಮೊಗೆದು ಕುಡಿದು ಬಾಯಾರಿಕೆಯ ತಣಿಸಿ ಮರಳುಗಾಡು ದಾಟಿ
ಗೆದ್ದ ಕ್ಷಣವ ಸಂಭ್ರಮಿಸಿದಾಗಲೇ ನಿಜವಾದ ಸಂತಸ

- ಶ್ರೀಕಾವ್ಯ

12 Jan 2017, 11:16 am

ಹುಚ್ಚುಮನಸ್ಸು...

ಕಣ್ಣೊಳಗಿನ ಕನಸನ್ನು ಕದಿಯಬೇಡ
ಮನದೊಳಗಿನ ಮನಸ್ಸಿನ ಮಾತನ್ನು ಮರೆಯಬೇಡ .
ಹೃದಯದ ಭಾವನೆಗಳನ್ನು ನಾ ಹೇಳಲು ಬಂದಾಗ
ಮರೆಯಾಗಿ ಹೋದೆಯಾ ಈ ನನ್ನ ಪುಟ್ಟ ಹೃದಯದ ಮೌನವನ್ನು ಅರಿಯದೆ ...
(ಅಮ್ಮು ಎಸ್)...

- anilsajjan

12 Jan 2017, 12:28 am

ಮನದಲ್ಲಿ ಒಂದು ಮನವಿ

ಪ್ರಶ್ನೆಗಳು ಪ್ರಶ್ನಗಳಾಗಿಯೇ ಬದುಕಿರಲ್ಲಿ ಬಿಡು ಸುಳ್ಳು ಸಮರ್ತನಗಳ ನೆಪದಲ್ಲಿ ಅವುಗಳ ಉತ್ತರ ಕ್ರಿಯೆ ಆಗೋದು ಬೇಡ

- ಪ್ರದೀಪರಾಜ್

11 Jan 2017, 11:48 pm