Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನಸ್ಸು ಕಸದ ತೊಟ್ಟಿಯಲ್ಲ,
ದ್ವೇಷ,ಅಸೂಯೆ,ಮಚ್ಚರ ತುಂಬಿಕೊಳ್ಳಲು..
ಅದು ಪ್ರೀತಿ,ಮಮಕಾರ, ಸಹಕಾರ
ತುಂಬಬೇಕಿರುವ ಹೂ ಬುಟ್ಟಿ.......
- ನಕ್ಷtra
13 Jan 2017, 04:37 pm
ದುಡ್ಡಿದ್ದವನೇ ದೊಡ್ಡಪ್ಪ;
ದುಡ್ಡಿಲ್ಲಾಂದ್ರೆ ಚಿಕ್ಕಪ್ಪ
ದುಡ್ಡಿದ್ರೆ ಇಂದ್ರ ಚಂದ್ರ ದೇವೇಂದ್ರ,
ದುಡ್ಡಿಲ್ಲಾಂದ್ರೆ ನೀಚ ಕಡುಮೂರ್ಕ,
ದುಡ್ಡಿದ್ರೇ ಮುದುಕನಿಗೂ ಮದುವೆ
ದುಡ್ಡಿಲ್ಲಾಂದ್ರೆ ಕವಡೇ ಕಿಮ್ಮತ್ತೂ ಇರೋಲ್ಲಾ,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
13 Jan 2017, 01:20 pm
ಮಾನವ ಜನ್ಮ ಒಂದು ಜೀವನದ ಸಂತಿ
ಜೀವನದುದ್ದಕ್ಕೂ ಇರಬೇಕು ಮಾಸದ ಕಾಂತಿ
ಅಂದಾಗ ಜೀವನದ ಬಂಡಿ ಇರುವುದು ಶಾಂತಿ
ಎಲ್ಲರೂ ಕುಶಿಯಿಂದಾ ಆಚರಿಸೋಣ ಸಂಕ್ರಾಂತಿ
ಸಂಕ್ರಾಂತಿಯ ಶುಭಾಶಯಗಳು ಗೆಳೆಯರೆ
=dev=
- j s
13 Jan 2017, 01:19 pm
ಹಸುಗಳು ಇರಬೇಕು ಮನೆಯಲ್ಲಿ,
ಸಸಿಗಳು ಇರಬೇಕು ಹೊಲದಲ್ಲಿ,
ಋಷಿಗಳು ಇರಬೇಕು ಆಶ್ರಮದಲ್ಲಿ,
ಶಿಷುಗಳು ಬೆಳೆಯಬೇಕು ಶರಣರ ಸಂಗದಲ್ಲಿ,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
13 Jan 2017, 12:48 pm
ಐಶ್ವರ್ಯಕ್ಕೆ ಪುಣ್ಯಬೇಕು
ಸೌಂದರ್ಯಕ್ಕೆ ಕಣ್ಣುಬೇಕು,
ಆರೋಗ್ಯಕ್ಕೆ ಹಣ್ಣುಬೇಕು
ಗ್ರಹಸ್ಥಾಶ್ರಮಕ್ಕೆ ಹೆಣ್ಣುಬೇಕು,
ಬಾಳಿಬದುಕಲು ಮಣ್ಣುಬೇಕು,,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
13 Jan 2017, 12:42 pm
ಪ್ರೀತಿಯ ಕಡಲಲಿ ರಾತ್ರಿ ಹಗಲು ಕುಂತು ನಿಂತು ನನ್ನ ಎದೆಗೆ ತಲೆಇಟ್ಟು ಕೈಯಲ್ಲಿ ಕೈ ಇಟ್ಟು ಆಡಿದ ಮಾತುಗಳು ಅತಿ ಪ್ರೀತಿಯ ಹರಳೊ ಮಾತಿನ ಮರುಳೊ ಈಗ ನಿ ಹೇಳು ::- ಶುಭೋದಯ -::
=dev=
- j s
13 Jan 2017, 06:05 am
ನಿನ್ನ ಕನವರಿಕೆಯೊಂದು,
ನನಗೆ ನಿನ್ನ ನೆನಪೆ ಸವಿ ಸಂಕಟ..
ನಲ್ಲ ಹೋದೆಯಲ್ಲ ಬಾರದೂರಿನ ನಗರಕೆ
ಇನ್ನೆಲ್ಲಿ ನೆಮ್ಮದಿ ಈ ಮನಕೆ.....
ಸ್ಮರಣೆಯೊಂದೇ ಬಾಕಿ ನನಗೆ.....
- ನಕ್ಷtra
13 Jan 2017, 12:44 am
ಬಾನ ಸಂಧ್ಯೆಯಲ್ಲಿ ನಿತ್ಯ
ಹರ್ಷದ ಹೋಳಿ-ಓಕುಳಿ
ಏನು ಔಚಿತ್ಯ....
ಮಾನವರ ಒಂದೇ ದಿನದ
ಬಣ್ಣದೋಕುಳಿ......
- ನಕ್ಷtra
13 Jan 2017, 12:36 am
ನೀನಿರದ ನೋಟಗಳು
ನೊಂದಿಹವು ಕಣ್ಣುಗಳು
ಬೆಸರವಾಗಿದೆ ಕನಸುಗಳು.
ಬದುಕು ಕನಸಾಗಿದೆ,
ಕನಸು ಬರಿದಾಗಿಸದೆ,
ಬರುವೆಯಾ ಎನ್ನ ಕನ್ನ ಮುಂದೆ....!
- chinmayi
12 Jan 2017, 11:27 pm
ನಕ್ಷತ್ರಗಳೆಂದರೆ
ಭೂಮಿಯ
ಸಜ್ಜನರ-ಪುಣ್ಯದ
ಮಿಣುಕುಗಳು!
ಹಾಗೆಯೇ-ಜನರೆಂದರೆ
ಸ್ವರ್ಗದ ಪಾಪಿಗಳ
ಪಾಪದ ತುಣುಕುಗಳು.
****************ಪದ್ಯಾಣ.
- padyana
12 Jan 2017, 09:54 pm