Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಪ್ಪ ಅಪ್ಪನೆಂದರೆ,,,,ವರ್ಣಿಸಲು ಪದಗಳೇ ಸಿಗದು......
ಆ ಪದಗಳ ಹುಡುಕಲು ಹೊರಟರೆ ಈ ಜನ್ಮ ಸಾಲದು ...!!!!!! ❤
.... ✍️ - Sunil
- Sunil Bgm kannada
12 Nov 2023, 07:47 pm
ನಿನ್ನ ಮುಂದೆ ನಿನ್ನ ಹೊಗಳಿ ನಿನ್ನನೇ ಪಡೆಯೋಕೆ
ತಿಂದುಕೊಂಡು ಬಂದೀನಿ ಅರ್ಥ ಪ್ಯಾಕ್ Parle -G
ಬಾಯಗೊಂದು ಪದ ಬರದೆ ಏಕ್ ದಮ್ ಬಿಕ್ಕಳಿಗೆ
ಸಾಲದಾಗಿದೆ ಒಳ ಧೈರ್ಯ ಇದ್ದದ್ದೇ 3-KG
ನೀನೆ ಬೀಸಿ ಮಾತಲೇ ಮಿತವಾಗಿ ಬೀಸಣಿಕೆ
ಹೇಳಿಕೊಟ್ರೆ ಕಲಿತೀನಿ ಕೆಮಿಸ್ಟಿ - BIOLOGY
ಕರುಣೆ ತೋರ್ಸಿ ಕೆಲ್ಕೊಂಡ್ರೆ ನೀನಾಗೇ ಮನಸೊಳಿಕೆ
ಕಣಿ ಕೇಳ್ದೆ ತಿನ್ನುಸ್ತಿನಿ ಪಾನಿಪೂರಿ, PAW BAAJI...
✍️ Sunil Bgm kannada
- Sunil Bgm kannada
12 Nov 2023, 07:45 pm
ಕಣ್ಣಂಚಿನ ಕಾಡಿಗೆಗೂ,
ತುಟಿಯಂಚಿನ ಬೋಟ್ಟಿಗೂ ಏನೋ ಸೇಳತವಿದೆ,
ಹಾಳಾದ ಹೃದಯ ದಾರಿ ತಪ್ಪಿದ ಸಮಯದಲ್ಲಿ
ಕಣ್ಣಿಗೂ ಲಗಾಮು ಸಿಗುತ್ತಿಲ್ಲ....
ಮುದ್ದಾದ ನಗುವ ಚೆಲ್ಲಿ,
ಹೃದಯದಲ್ಲಿ ಅರಳಿದೆ ಪ್ರೀತಿಯ ಬಳ್ಳಿ,
ನೀರೇರೆದು ಸಲಹುವೆಯ ಸಲುಗೆಯಲಿ,
ಜೋಪಾನ ಮಾಡುವೆನು ನನ್ನೆದೆಯ ಕೋಟೆಯಲ್ಲಿ,
ದಾರಿ ಕಾಣದ ಪಯಣಿಗ ಯಾದವ್
- Yadav Gouda
07 Nov 2023, 09:19 pm
- Viresh uppar
07 Nov 2023, 07:52 pm
ಹುಡುಗಿ ದೊಡ್ಡವಳ್ ಆಗ್ಯಾಳ
ದೊಡ್ಡಅತ್ತೆ ಮನೆಯಾಗ ನಂ ದಡ್ಡ್ ಕತ್ತೆ ಮನೆಯ್ಯಾಗ
ಅತ್ತೆಗೆ ಋತು ಸ್ನಾನ
ಅವಳಿಗೆ ಪವಿತ್ರ ಸ್ನಾನ
ಕರೆತಲೆಯಾವು ಸೇರೆಯಾವ
ಹುಡುಗಿಯ ಹೊರಕ್ಕ ಹಾಕಲಾಕ್ಕ
ಬಿಳಿತಲೆಯಾವು ಸೇರೆಯಾವ
ಶೋಭನ ಹಾಡಲಕ್ಕ
ಹೈಕಳು ಸೇರಾವ
ಕಜ್ಜಿ೯ಕಾಯಿ ತಿನ್ನಲಕ್ಕ
ಪಡ್ಡೆಗಳೂ ಸೇರಾವ
ಆಕೆಯ ಸೋಭಗನು ನೋಡಲಕ್ಕ
ಆಕೆಯ ಮುಖವು ಅರಳೈತ
ಹುಣ್ಣಿಮೆಚಂದ್ರನ ಮುಖದಂತ
ಆಕೆ ಮಾವ ಕಳ್ಳ ನಗೆಯ ನಕ್ಕನಾ
ಆಕೆ ಬೇಕು ನಂಗಂತ ಪಟ್ಟುಹಿಡಿದ್ದಾನ
ಅವಳ ತಂದೆ ಕಣ್ಣಲ್ಲಿ ನೀರು ಜಿನಿಗ್ಯಾತ
ಅವಳ ತಾಯಿ ಸಿಟ್ಟಲ್ಲಿ
ಪಾತ್ರೆ ಕುಕ್ಕಯಾಳ
ಅವಳ್ ಅತ್ತೆ ನಗುತ್ತಾಳ
ನನ್ನ ಮಗನಿಗೆ 2ನೇ ಹೆಂಡತಿ
ಇವಳಂತಾ
ಎನೂ ಅರಿಯದ ಆ ಹುಡುಗಿ
ನಗುತ್ತ ಕುಂತಳಾ....
- Vitala N C (ವಿಠಲ ಎನ್ ಸಿ)
07 Nov 2023, 11:55 am
ಬಾನಿನಲ್ಲಿ ಹಕ್ಕಿಗಳ ನೋಡುವ ಆಸೆ
ಭುವಿಯಲ್ಲಿ ನಿಸರ್ಗ ನೋಡುವ ಆಸೆ
ಎನ್ನ ಮನಕ್ಕೆ ನಿನ್ನ ನೋಡುವ ಆಸೆ
ಶಶಿ ಇರಳಲ್ಲಿ ಬೆಳಗುವನು
ರವಿ ಹಗಲಲ್ಲಿ ಬೆಳಗುವನು
ನೀ ಎನ್ನ ಮನದಲ್ಲಿ ಬೆಳಗುವೆ
ಕವಿ ಕಾಣದೆ ಇರುವ ಕಾಲ್ಪನಿಕ ಚಿತ್ರವಿಲ್ಲ
ಭಾಸ್ಕರನು ಬೆಳಗದೆ ಇರುವ ದಿನವಿಲ್ಲ
ನಾ ನಿನ್ನ ನೆನೆಯದ ಕ್ಷಣವಿಲ್ಲ
- Nikhil
07 Nov 2023, 07:58 am
ನೆನಪಾಗುವುದು ಎನ್ನಲು ಮರೆತಿದ್ದರೇ ತಾನೇ
ಆ ನೆನಪುಗಳ ಬತ್ತಳಿಕೆ ನೀಡಿ ಹೋದವನು ನೀನೇ
ಅದ ಹೊತ್ತು ತಿರುಗಲಾಗದೆ ನಾ ಸೋತು ಹೋಗುತ್ತೀರುವೆನೆ
ಆದರೂ ಅದು ಬರೀ ನೆನಪಲ್ಲ ಸಿಹಿ ಕ್ಷಣಗಳ ಬುತ್ತಿ ಎನ್ನುವೆನು ನಾನೇ
- Varshini Hebbar
06 Nov 2023, 07:45 pm
ಭಗೀರಥ ಬಂದನು ಭೂಮಿಗೆ
ಗಂಗೆಯ ಇಳಿಸಿದ ಧರೆಗೆ
ಹರಿದು ಬಂದಿತು ಭಸ್ಮದ ಕಡೆ
ಸ್ವರ್ಗವು ಲಭಿಸಿತು ಪೂರ್ವಜರಿಗೆ
ತಪಸ್ಸು ಯಶಸ್ವಿಯಾಯಿತು
ರಘುವಂಶದ ಕಡೆಗೆ
ಗಂಗೆಯು ಹರಿಯಿತು
ಹಿಮಾಲಯದ ಕಡೆ
ರಭಸವು ಹರಿಯಿತು ಜಲಜಲನೆ
ಇದನ್ನು ತಪ್ಪಿಸಲು ಶಿವನ ಜಡೆಗೆ
ಹರಿಯ ಪಾದದಿಂದ ಝರಿಗೆ
ಇದುವೇ ಭಗೀರಥ ಸಾಧನೆಯೆಡೆಗೆ
ವಿರೇಶ ಉಪ್ಪಾರ್
- Viresh uppar
05 Nov 2023, 08:50 am
ದಿನಗಳು ಉರುಳುತ್ತಿದೆ, ಕಾಲ ಸಾಗುತ್ತಿದೆ
ನೆನ್ನೆಗಳು ಕಳೆದು ಹೋದವು ಲೆಕ್ಕಕ್ಕೆ ಸಿಗದಂತೆ
ಬರುವ ನಾಳೆಗಳ ಬಗ್ಗೆ ಯಾರಿಗೆ ತಾನೇ ತಿಳಿದಿದೆ
ಜೀವಿಸು ನೀನು ಈ ಕ್ಷಣ ಮಾತ್ರ ನಿನ್ನದೆಂಬಂತೆ
-ವರ್ಷಿಣಿ
- Varshini Hebbar
01 Nov 2023, 08:20 pm
ನಗುವೆಲ್ಲೊ ಮರೆಯಾಗಿದೆ,,,,
ಮರೆಯಲ್ಲೂ ಏನೋ ಒಂದು ನೆನಪಾಗಿದೆ,,,
ಆ ನೆನಪೇ ನೀನಾಗಿಹೆ....!!!
- Megha
01 Nov 2023, 01:27 pm