Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಎತ್ತವ

ನಾನು ಬಯಸಿದ್ದೆ ಅವನು ನನ್ನ ಕೈ ಹಿಡಿದು ಪ್ರಪಂಚವ ನನಗೆ ಪರಿಚಯಿಸಬೇಕೆಂದು.
ನಾನು ಕನಸಕಂಡಿದ್ದೆ ಎಳವೆಯಲಿ ಅವನ ಹೆಗಲೇರಿ ನಾನು ಅವನೊಡನೆ ತಿರುಗಾಡಬೇಕೆಂದು.
ನಾನು ಆಷಿಸಿದ್ದೆ ಅವನು ಜೀವನದ ಸೋಲು ಗೆಲುವುಗಳ ಜೊತೆ ನಿಂತು ಜೀವನವ ಪರಿಚಯಿಸಬೇಕೆಂದು.
ನಾನು ಇಚ್ಚಿಸಿದ್ದೆ ಅವನೊಡಗೂಡಿ ಆಟವಾಡಿ ಅವನ ಪ್ರೀತಿಯ ಅನುಭವಿಸಬೇಕೆಂದು

ಆದರೆ

ಅವನಾಗಿದ್ದ ನೋವು, ದ್ವೇಷ, ಕೋಪ, ಅಸಹ್ಯಗಳ ಮೊದಲು ಪರಿಚಯಿಸಿದವ
ಅವನಾಗಿದ್ದ ನನ್ನಮ್ಮನ್ನನು ಕೊಲ್ಲುವೆನೆಂದು ಮುನ್ನುಗ್ಗುವ ರಾಕ್ಷಸ
ಅವನಾಗಿದ್ದ ನಾ ಅವನ ಮುಖವ ಕಾಣಲು ಕಾತರಿಸಿ ಕಾದರು ಕಾಣದ ಮರೀಚಿಕೆಯಂತೆ
ಅವನಾಗಿದ್ದ ನಾನು ಅವನ ಪ್ರೀತಿ ಮಮತೆಯ ಬಯಸಿ ದಶಕಗಳೇ ಕಾದರು ಕಾಣಲಾಗದ ಕುರುಡ
ಅವನಾಗಿದ್ದ ಅವನವರ ಜೀವನದ ಜೊತೆಯಲಿ ನಗಿಸಿ ನಗುತ ಹೆಜ್ಜೆ ಹಾಕಲಾಗದ ಕುಂಟ, ಮೂಕ
ಅವನಾಗಿದ್ದ ನಮ್ಮೆಲ್ಲ ಕನಸು ಮನಸಿನ ಭಾವ ಬದುಕಿಗೆ ಬೆಂಕಿ ಇಟ್ಟು ನೋಡಿ ಏನು ತಿಳಿಯದವಂತೆ ನಟಿಸುವ ನಟ

- ಶ್ರೀಕಾವ್ಯ

14 Jan 2017, 03:45 pm

ಮೌನ ಮಾತಾದಾಗ

ನನ್ನ ಮನದ ಮಂದಿರದಲಿ ಬೆಳಗದ ದೀಪ ನೀನು...
ಹೃದಯ ಸಮುದ್ರದಲ್ಲಿ ಸಿಕ್ಕ ಮುತ್ತು ನೀನು...
ಕಣ್ಣ ಕೊಳದಲಿ ಅರಳಿದ ಪ್ರೇಮ ಪುಷ್ಪ ನೀನು....
.
.
.
ನೆನಪಿರಲಿ...
ದೀಪ ಆರದಿರಲಿ.ಮುತ್ತು ಒಡೆಯದಿರಲಿ.ಹೂವು ಬಾಡದಿರಲಿ......!!!!

- chinmayi

14 Jan 2017, 02:59 pm

ಮನವೇ...

ನೆರಳನು ಹುಡುಕುತ ಹೊರಟ
ಮನವೇ..ನೆನಪಿಗಗೂ ಜಾಗವಿರಲಿ
ಬಂಧಗಳ ಹಳಹಳಿಕೆಯ ನೆವದಲಿ
ಗುರಿಯ ದಾರಿ ಮರೆಯದಿರಲಿ.......

- ನಕ್ಷtra

14 Jan 2017, 12:51 pm

ಜಲ್ಲೆಹಬ್ಬ ತಿನ್ನಿಕಬ್ಬ

ಬಂತು ಸಂಕ್ರಾಂತಿ  ಹಬ್ಬ
ತಿನ್ನಿ  ಚಪ್ಪರಿಸಿ  ಜಲ್ಲೆ ಕಬ್ಬ
ವರ್ಷಕ್ಕೆ ನೆನೆಯೋ ಮೊದಲ ಹಬ್ಬ
ಬಂತು ಬಂತು ಸಡಗರದ ಸಂಕ್ರಾಂತಿ
ತರಲಿ ನಮಗಾಗಿ ಬಾಳಲಿ ಸುಖ ಶಾಂತಿ

ಹೇಳ್ಳೂ ಬೆಲ್ಲಕು ನಮ್ಮದೇ ಮನಸು
ಕಡಲೆ ಗೆಣಸಿಗು ಅದರದೆ ಸೂಗಸು
ಸೇರಿ  ಕೂಡಿ ಬಾಳೋ ಹಬ್ಬದಲ್ಲಿ
ನಾವು ನೀವು ಒಂದಾಗಿ ಬೆರತಲ್ಲಿ
ಬಾಳೋಣ  ಕುಶಿಯಾಗಿ ಈ ವರ್ಷದಲ್ಲಿ.!

- ಭರತ್

14 Jan 2017, 12:00 pm

ಪ್ರೀತಿ

ಹೇ ಅಮು
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ ಮಾತ್ರ ಈ ರೀತಿ ಆಗುತ್ತದೆ ಅಮು....... ಕಿ........

- Kiran Raj

13 Jan 2017, 11:58 pm

ಹಣತೆ -ಕಲಾವಿದ -ಲೇಖಕ

ಕತ್ತಲೆಯಿಂದ ಹಣತೆ ಔಚಿತ್ಯ ತಿಳಿವುದು
ಬೆಳಕಿನಿಂದಲೇ ಲೋಕದ ತಿಮಿರ ಅಳಿವುದು

ಲೇಖಕನಿಗೆ ಲೇಖನಿಯೇ ಹಣತೆ
ಕಲಾವಿದನಿಗೆ ಕುಂಚವೇ ಪಣತಿ
ಅಜ್ಞಾನದ ಅಂಧತೆಯಲ್ಲಿ ಮುಳುಗಿದ
ಲೋಕಕೆ ಜ್ಞಾನದಾವಳಿ..

ಹಣತೆ ಬೆಳಗುತ್ತಿದೆ,ಉರಿಯುತ್ತಿದೆ
ಮನುಜ ಉರಿಯುತ್ತಿರುವ,ಬೆಳಗುತ್ತಿಲ್ಲ

ಓ ಮನುಜ ಕುಲವೇ ಉರಿಯುವುದನ್ನು ನಿಲ್ಲಿಸು,ಬೆಳಗುವುದನ್ನು ಬೆಳೆಸು..
ಅದುವೇ ಹಣತೆಯ ಮಹಾದಾನ.......

- ನಕ್ಷtra

13 Jan 2017, 11:03 pm

ದೇವರೆಂಬ ಹೆಸರಿನಲ್ಲಿ

ಓ ಮನುಜ ನೀ ಬಲು ದುಷ್ಟ ನಿಜ
ದೇವರೆಂಬ ಹೆಸರಿನಲ್ಲಿ ಮಾಡುವೆ ಬರೀ ಅಸಹಜ
ನೋವನುಂಡು ಬರುವುದು ಪಾಮರ ವ್ರಜ
ಅವರನ್ನು ಕಿತ್ತು ಕೊಲ್ಲುವೆಯಲ್ಲಾ ನೀ ಎಷ್ಟು ಸಾಚಾ

ಮಠ ಮಂದಿರಗಳಲ್ಲಿ ನಿಮ್ಮದೇ ಕಾರುಬಾರು
ಕಾಣಿಕೆಯ ರೂಪದಿ ಭಕ್ತರನು ವಂಚಿಸುವ ದರ್ಬಾರು
ಆಚಾರವಿಲ್ಲದ ಅನಾಚಾರದ ಅಡಿಯಲ್ಲಿ
ಶುದ್ಧ ದೇವನು ಇರಲು ಎಡೆಯುಂಟೆ ಅಲ್ಲಿ?

- Kumara.C

13 Jan 2017, 10:46 pm

ಪ್ರೀತಿ

ಹ್ರುದಯಾನೆ ಕೊಡುವೆ ನಿನಗೆ
ನಾನೆನು ಕೇಳದೆ ಕೊಡುಗೆ
ಎಂದಿಗೂ ಮನದಲ್ಲಿ ಉಳಿವ
ಪ್ರೀತಿ ನೀಡೆನಗೆ……

ಚೆಂದದ ಒಲುಮೆಗೆ
ಮೌನವ ಮುರಿಯುತ
ಮಾತಾಡುವುದು ಒಂದೆ ಬಾಕಿ…..

ಸಣ್ಣ ಆಸೆಯೂ
ನಿನ್ನ ನೋಡಲು
ಬಂದು ಹೋಗೆಯಾ ಒಮ್ಮೆ ಕನಸಲಿ…..
ನಿನ್ನ ಕಂಡರೆ
ಹಾಡೂ ನಿಲ್ಲದೂ
ನನ್ನ ಹಾಡಲಿ ನಿಂದೆ ಗುಂಗಿದೆ……

- Sharath kumar G

13 Jan 2017, 10:28 pm

ಸ್ನೇಹ ಅಮರ

ಸವಿ ಇರಲಿ ನುಡಿಯಲಿ
ನಗು ಇರಲಿ ಮೊಗದಲಿ

ಬಾರದಿರಲಿ ನಮ್ಮ ನಡುವೆ ಅಂತರ
ಸ್ನೇಹ ಇರಲಿ ನಿರಂತರ.....

- chinmayi

13 Jan 2017, 10:22 pm

ಬೆಟ್ಟದ ಗಿಡ

ಮನಸೆಂಬ ಪುಟ್ಟ ಗಿಡವು
ಪುಟ್ಟಿಹುದು ಬೆಟ್ಟದಲ್ಲಿ
ತಾವಿಲ್ಲ, ತನುವಿಲ್ಲ ಆಸರೆಗೆ
ತನ್ನವರೆಂಬುವರಿಲ್ಲ.

ಮನುಷ್ಯತ್ವ ಇಲ್ಲದ ಬಿಸಿಲಿಗೆ ಒಣಗಿ
ಕಳ್ಳ ಕೂಟದ ವಂಚನೆಗೆ ನಡುಗಿ
ಬಾಯಾರಿ ಬೆಂಡಾಗಿ ಬಳಲಿದರೂ
ಪ್ರೀತಿಯ ಹನಿ ನೀರಿಲ್ಲ.

ಜಿನುಗಿದಂತೆ ಆಗೊಮ್ಮೆ ಈಗೊಮ್ಮೆ
ಎಲ್ಲಿಂದಲೋ ಹನಿ ನೀರು
ಇದ್ದೀತು ಯಾರದೋ ಕಣ್ಣೀರು
ದೊಡ್ಡ ಮಳೆಗೆ ಕಾದ ಗಿಡಕೆ ಬೇಜಾರು.

ಸುಂದರ ಕಾರ್ಮೋಡಗಳು ಓಡಿವೆ ಎತ್ತಲೋ
ಕಾದಿಹನೇನೋ ಅವಕ್ಕೆ ಇನಿಯ
ಮುತ್ತಿಕ್ಕಲು...
ಕಾದಿರುವ ಗಿಡಕ್ಕಿಲ್ಲ ಮಳೆ ಹನಿಯ ಸ್ನಾನ
ಕಾಡಿಲ್ಲದಾ ಮೇಡಲ್ಲಿ ಒಂಟಿ ಗಿಡದ ಧ್ಯಾನ.

- ಶ್ರೀಗೋ.

13 Jan 2017, 05:36 pm