Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರಣಯ

ಕನಸಿನ ದಾರಿಯಲ್ಲಿ ಹುಡುಕುತ್ತಾ ಪ್ರಿತಿಯಾ
ಕಳೆದೂಯ್ತು ನನ್ನಯಾ ಹೃದಯದ ಬಡಿತ

ಚಳಿಗಾಲವಿದು ಗೆಳತಿ
ಆಗಲೇ ಪೋಲಿ..?
ನಿನ್ನಯಾ ನಡುವೆ
ವೀಣೆಯ ತಂತಿ..!!
ನುಡಿಸಲೇ ವಿರಹದ
ಸುಂದರ ರಾಗವ..?????

ಕಳೆದೋದೆ ನಾನು
ನಿನ್ನಯ ಅಂದಕೆ
ಮನಸೂತೆ ನಾನು
ನಿನ್ನಯ ಚಂದಕೆ
ನಿನ್ನಯ ಮುಂಗುರುಳೆ
ನನ್ನದೆಗೆ ಕುಂಚ...!!
ಬಿಡಿಸಲೆ ನಾನು ನಿನ್ನಯ ಚಿತ್ರವ..???

ಮಲಗಿದ್ದೆ ನೀನು ನನ್ನಯ ಕನಸಲಿ
ಎಚ್ಚರಿಸಿದೆ ನಾನು.
ಸಿಹಿಯಾದ ಮುತ್ತಿ0ದ

ಸಿಹಿಯಾದ ಜೇನು
ಸವಿಯಲು ಬಲುಚಂದ
ನಿನ್ನಯ ತುಟಿಗಳ
ನಡುವಿನ ಅಂಚಿಂದ..!!

ತಬ್ಬಿಕೊ ನನ್ನನು
ಚಲಿಗಳವಿದು ಗೆಳತಿ..!!
ನಿನ್ನಯ ರಕ್ಷೆಗೆ
ನನ್ನೆದೆಯೆ ಕಾವಲು!!

ಬರೆಯಿತು ಬಿಸಿ ಉಸಿರು
ಮಿಲನದ ಬಯಕೆಗೆ
ಹಾರಿತು ಹಕ್ಕಿಯು
ನನ್ನದೆಯ ಗೂಡಿಂದ..!!

ನನ್ನೆದೆಯೆ ನಿನಗೆ ಪ್ರೀತಿಯ ದಿಂಬು
ನನ್ನೆದೆಯ ಬಡಿತವೆ ನಿನ್ನೆದೆಗೆ ಜೋಗುಳವು
ತಬ್ಬಿಕೊ ನನ್ನನ್ನು
ಚಕಿಗಾಲವಿದು ಗೆಳತಿ..!!!

- Rajendra_InnerVoice

16 Jan 2017, 11:37 am

ಹೆಣ್ಣಿವಳು..

ಹೆಣ್ಣಿವಳು,
ಅಮ್ಮನ ಮಗಳಾಗಿ ಅವಳ ಹೆಜ್ಜೆಯ ಅನುಸರಿಸುವವಳು.
ಅಪ್ಪನ ಮಗನಾಗಿ ಅವನ ಕನಸಿನ ನನಸ ತಾನಾಗ ಬಯಸುವಳು.
ತಮ್ಮ ತಂಗಿಯ ಪ್ರೀತಿಗೆ ಬಾಗಿ ತಾನೇ ತಾಯಿಯಾಗುವಳು
ಅಣ್ಣ, ಅಕ್ಕನ ತಂಗಿಯಾಗಿ ಅಕ್ಕರೆಯ ತೋರುವಳು.
ಜೀವನ ಜೊತೆ ಸೇರಿ ಬರುವವನಿಗೆ ಮಡದಿಯಾಗುವಳು.
ಸೇರಿದ ಮನೆಗೆ ಮಗಳಾಗ ಬೇಕಾದವಳು.
ತನ್ನೊಡಲಲಿ ಹುಟ್ಟುವ ಕೂಸಿಗೆ ತನ್ನ ಜೀವವ ಮರೆತು ಜೀವ ತುಂಬುವವಳು.

ಪ್ರೀತಿಯಲಿ ಅನ್ನಪೂರ್ಣೆಯು ಆಗುವಳು, ಕಾಡಿಸಿದವರಿಗೆ ಕೊಲ್ಲುವ ಮಹಿಷಮರ್ದಿನಿಯೂ ಆಗಬಲ್ಲಳು.

ತಲೆ ಬಾಗಿ ನಿಂತಾಗ ಬೆಳಗಿನ ಶಾಂತ ಕಡಲು ಇವಳೇ, ಸಿಡಿದಾಗ ಇರುಳಿನ ಭೋರ್ಗರೆವ ಸಮುದ್ರ ರೂಪವು ಇವಳದೇ.

ಪರ್ವತದಷ್ಟು ಎಲ್ಲ ಕಷ್ಟ ನಷ್ಟವ ಸಹಿಸಿನಿಲ್ಲಬಲ್ಲವಳು, ಒಮ್ಮೆ ಉಕ್ಕಿದರೆ ಅಗ್ನಿ ಪರ್ವತದ ಲಾವರಸ ಇವಳು.

ಭೂ ತಾಯಿಯ ಸಹನೆಯವಳು ನೋವಲು ಸಲಹುವುದ ಬಲ್ಲಳು, ಅವಳ ಒಡಲ ಕಂಗೆಡಿಸಿ ಸಂತಸ ಪಟ್ಟರೆ ಬಾಯ್ದೆರೆದು ನುಂಗುವುದ ತಿಳಿದವಳು

ಮಳೆಯು ಇಳೆಯ ಕಾಪಾಡುವಂತೆ ಎಲ್ಲರನ್ನು ಕಾಯುವವಳು, ಅವಳನ್ನೇ ಅಳಿಸಿ ನಕ್ಕರೆ ಅತಿವೃಷ್ಟಿ ಅನಾವೃಷ್ಟಿಯಂತೆ ಕಾಡುವುದನು ಬಲ್ಲಳು.

ಹೆಣ್ಣಿವಳು

- ಶ್ರೀಕಾವ್ಯ

16 Jan 2017, 10:49 am

ಕಂಬನಿಗೆ ಕೊನೆಯುಂಟೆ?......

ಬಲ್ಲವರಿಲ್ಲ ಅಂತರಾಳವ,
ತಪ್ಪು-ಒಪ್ಪುಗಳ ನಡುವಣ ಬಂಧುಗ
-ಳಾಡುವ ಮಾತಿನ ಕಹಿತನ ಎಲ್ಲವ
ಎಣಿಸಿ-ಗುಣಿಸಿಯೂ,ಅಸಹಾಯಕತೆಯ ಮಡುವಿನಲ್ಲಿ ಕಣ್ ಪನಿ ಸುರಿಸುವುದುಂಟು ಮನದ ಕೋಣೆಯಲ್ಲಿ,ಇದು ಉಸಿರಿರುವತನಕ ರಿಂಗಣಿಸುವ ಕಥೆ-ವ್ಯಥೆಗಳ ಪಯಣ......
ಕಣೀರಿಗೆ ಕೊನೆಯುಂಟೆ??....

- ನಕ್ಷtra

15 Jan 2017, 10:45 pm

ಹಂಬಲ

1.ಹ0ಬಲ

ನೆತ್ತರ ಕಣ ಕಣದಲಿ
ಮೂಡಲೊ0ದು ಹೊಸ ಚೇತನ,
ಮನದ ಮೂಲೆಯಲಿ
ನನದದೊ0ದೇ ಹ0ಬಲ //1//

ಮನದಲಿವೆ ಹಲವು ಗುರಿ
ಸಾಧಿಸಲಿವೆ ಹಲವು ದಾರಿ
ಯಶ ಕಾಣಲು ಶ್ರಮ ಪಡುವುದು
ನನದದೊ0ದೇ ಹ0ಬಲ. //2//

ಗುರಿಯ ಹಾದಿಯಲಿ
ಸರಿದಾರಿಯ ತೋರುವವರಿಲ್ಲ
ಗುರಿ ಸಾಧಕರಿಗೆ ದಾರಿ ದೀಪವಾಗುವುದು
ನನದದೊ0ದೇ ಹ0ಬಲ. //3//

ತು0ಟ ಮನದ ಸೂಕ್ಷ್ಮ
ಚಿಗುರ ಏಳಿಗೆಯ ಸಹಿಸುವವರಿಲ್ಲ
ತು0ಟ ಮನಗಳಿಗೆ ನೀರೆರೆವಾಸೆ
ನನದದೊ0ದೇ ಹ0ಬಲ. //4//

ಅಜ್ಞಾನದ ಕಾರ್ಮೋಡವ
ಜ್ಞಾನಸುಧೆಯಾಗಿ ಹರಿಸುವ
ಮನದಾಳದಲಿ ಜ್ಞಾನ ಜ್ಯೋತಿಯ ಬೆಳಗಿಸುವುದು
ನನದದೊ0ದೇ ಹ0ಬಲ. //5//

ಲೋಕೇಶ.ಹೆಚ್.‌‌‌‍ಎನ್.
ಗಣಿತ ಶಿಕ್ಷಕರು..9900444951

- Lokesh.H.N

15 Jan 2017, 08:54 pm

ಪಯಣ

ಇಲ್ಲದಿರುವವರ ಚಿಂತೆ ಮಾಡುವುದಕ್ಕಿಂತ
ಇರುರುವವರ ಜೊತೆ ಚರ್ಚೆ ಲೇಸು
ಗುರಿಯ ಭೇದಿಸಲು ಹಠವು ಬೇಕು,
ಹಠದಿಂದಲೇ ಗೆಲವು ಸುಳಿಯದು,
ಆಸೆಗೆ ಕಡಿವಾಣ ಹಾಕಿ ಸಿಕ್ಕ ನಲಿವನ್ನ ಸವಿಯುವುದೊಂದು ಕಲೆ ಈ ತುಸು ಗಳಿಗೆಯ
ಪಯಣದಲಿ....

- śsș

15 Jan 2017, 07:05 pm

ಮಾರಾಟಕ್ಕಿಲ್ಲ

ಮಾರಾಟಕ್ಕಿಲ್ಲ..!

ಹೃದಯವ ಅಡವಿಟ್ಟ ದುಡ್ಡಿಗೆ
ಪ್ರೀತಿಯ ಖರೀದಿಗೆ ಹೊರಟೆ..
ಆದರೆ..!
ಈಗ ಅವಳು ಹೇಳುತ್ತಾಳೆ..
ಹೃದಯ ಇಲ್ಲದವರಿಗೆ ಪ್ರೀತಿ ಮಾರಾಟಕಿಲ್ಲವೆಂದು..!

- arun c sankannavar

15 Jan 2017, 01:17 pm

ಈ ಸಮಯದಿ ನನ್ನ ಹೃದಯದಿ

ಈ ಸಮಯದಿ ನನ್ನ ಹೃದಯದಿ
ನಿನ್ನ ವಿಯೂಗವೇ ವಿಷಾದವು.

ಈ ಇರುಳಲಿ ನೋವಿನಾ ನೆರಳಲಿ
ನಿನ್ನ ನೆನಪೆ ಸಾವಿಗೆ ನೆಪವು.

ಈ ಕಣ್ಣಲಿ ಸುರಿವ ಕಂಬನಿಯಲಿ
ನಿನ್ನ ಅಂದವೇ ಹನಿಯ ಪ್ರತಿ ಕಣವು.

ಈ ಮನದಲಿ ಹೂಬನದಲಿ
ನಿನ್ನ ಅಗಲಿಕೆಯೇ ಬಳ್ಳಿಗಳ ಬಳಲಿಕೆಯು.

ಈ ಮಬ್ಬಲಿ ನನ್ನ ಕಣ್ಣಬಾನಲಿ
ಆವಿಯಾದ ಕಂಬನಿಯೇ ಕಾಣದ ಕಾದಂಬನಿಯು(ಮೋಡ).

ಈ ನಡುರಾತ್ರಿಯಲಿ ಸುಡು ಮೌನದಲಿ
ಕಡು ಕತ್ತಲೆಯೇ ಎದೆಯ ಆಳದಲೂ.

ಈ ಕವಲಿನಲಿ ಪ್ರೀತಿಯ ಅಮಲಿನಲಿ
ನಾನಾಯ್ದ ದಾರಿಯೇ ನನ್ನ ಪಾಲಿನ ಗೋರಿಯು.

ಈ ದುಃಖದಲಿ ನನ್ನ ಪಕ್ಕದಲಿ
ಮೂಡಿದ ನೆರಳೇ ನನ್ನ ನಿಜವೈರಿಯು.

ಈ ಯೋಚನೆಗಳ ಸುಳಿಯಲಿ ಯಾತನೆಯ ವಿರಹದಲಿ
ನಿನ್ನಾ ಕನಸುಗಳೇ ಕುದಿಯುತಿಹ ಕುಲುಮೆಯು.

ಈ ಪ್ರೀತಿಯ ಸೋಲಲಿ ಈ ರೀತಿಯ ಸಾವಲಿ
ನಿನ್ನ ಸಂತೋಷವೇ ನನ್ನ ಕೊನೆ ಅಭಿಲಾಷೆಯು.

-ಭಗ್ನ ಪ್ರೇಮಿ ಶಶಿ ಕಿರಣ

- ಅಕವಿ

15 Jan 2017, 12:39 pm

ಭಗ್ನ ಪ್ರೇಮ

ನಿನ್ನನ್ನು ನೋಡಿದೆ ಅಂದು ಮೊಗ್ಗಾಗಿ,

ನಿನ್ನನ್ನು ಕುರಿತು ಯೋಚಿಸಿದೆ ಅಂದು ಹೂವಾಗಿ,

ನಿನ್ನನ್ನು ಪ್ರೀತಿಸಿದೆ ಅಂದು ಸುಗಂಧವಾಗಿ,

ಆದರೆ ನಿನ್ನನ್ನು ಅರಿತೆ ಇಂದು ನೀ ಬಾಡಿದ ಹೂ ಎಂದು......
( ಶರಣು)

- sharanu

15 Jan 2017, 12:26 pm

ಕರುನಾಡ ಕಂದ

ಸುವಾಸನೆಯಾಗು ಶ್ರೀಗಂಧದಡಿ

ದಡವಾಗು ಸಾಗರದಡಿ

ಮುತ್ತಾಗು ಸಮುದ್ರದಡಿ

ದುಂಭಿಯಾಗು ಪರಿಮಳದಡಿ

ಮಗುವಾಗು ಕರುನಾಡ ತಾಯಿಯ ಮಡಿಲದಡಿ‌.....

(ಶರಣು)

- sharanu

15 Jan 2017, 12:20 pm

....ಹೆಣ್ಣು......

ಹೆಣ್ಣಿನ ಜೀವನದಲ್ಲಿ ಎರಡಕ್ಷರದ ಪ್ರಾಮುಖ್ಯತೆ
ಹುಟ್ಟು ಎಂಬ ಎರಡಕ್ಷರದ ಒಂದು
ಮಗು ಎಂಬ ಎರಡಕ್ಷರದ
ಶಾಲೆ ಎಂಬ ಎರಡಕ್ಷರಕ್ಕೆ ಸೇರಿ
ಗುರು ಎಂಬ ಎರಡಕ್ಷರದಿ0ದ
ವಿದ್ಯೆ ಎಂಬ ಎರಡಕ್ಷರ ಕಲಿತು
ಙಾನ ಎಂಬ ಎರಡಕ್ಷರ ಪಡೆದು
ತಾರುಣ್ಯದಲ್ಲಿ ಪ್ರೀತಿ ಎಂಬ ಎರಡಕ್ಷರದ ಜೊತೆ
ಲಗ್ನ ಎಂಬ ಎರಡಕ್ಷರದಿ0ದ
ಪ್ರೀತಿ ಎಂಬ ಎರಡಕ್ಷರ ಹೊಂದಿ
ಮಗು ಎಂಬ ಎರಡಕ್ಷರ ಪಡೆದು
ತಾಯಿ ಎಂಬ ಎರಡಕ್ಷರ ಬಿರುದನ್ನು ಹೊಂದಿ.....

- shwetha

15 Jan 2017, 12:05 pm