Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದೂರವಾ(ದ)ಣಿ ಗೆಳತಿ....

ಜೀವಕಿಂತ ಹೆಚ್ಚು ಪ್ರೀತಿಸಿದೆ,
ಪ್ರೀತಿ ನೆಪದಲಿ ಮನಸ ಆವರಿಸಿದೆ..
ಮನದ ತುಂಬ ಪ್ರೀತಿ ಹಂಚಿದೆ,
ಪ್ರೀತಿ ಕನಸಲಿ ಬಿಡದೆ ಕಾಡಿದೆ..
ಪ್ರೀತಿ ಮೋಹದಲಿ ಸ್ನೇಹಿತರ ದೂರ ಮಾಡಿದೆ,
ಪ್ರೀತಿ ನೀಡದೆ ನೀನೂ ಮೋಸ ಮಾಡಿದೆ..
ದೂರದೂರಿನ ದೂರವಾಣಿ ಕರೆ,
ಪ್ರೀತಿ ಹೆಸರಲಿ ಹಾಕಿದ ಬರೆ..
ಮನಸಲೀಗಲೂ ಉಳಿದಿದೆ ಆ ಕಪ್ಪು ಕಲೆ,
ಎಷ್ಟೇ ಪ್ರಯತ್ನಿಸಿದರು ಹೊರಬಿಡುತ್ತಿಲ್ಲ ನೀ ಹಾಕಿದ ಬಲೆ..

- jp R

19 Jan 2017, 04:34 am

ವೇಶ್ಯೆಯು-ನಾ

ಕಾಮವದು ಪ್ರಕೃತಿಯ ನಿಯಮ,
ಸಂಸ್ಕೃತಿಯದ್ದು ಪ್ರೇಮವು..!

ಕಾಮವನು ಪ್ರೇಮಕ್ಕೆ ಮುಡಿಪಿಟ್ಟು,
ಪ್ರಕೃತಿಯನು ಮನದಾಳಕ್ಕೆ ಹುದುಗುವ
ನೀವೆಲ್ಲ ಸಭ್ಯರೊಂದೆಡೆ..!

ಪ್ರಕೃತಿಗು, ಪ್ರೇಮಕ್ಕು ಬೇಧವರಿಯದೆ
ಕಾಮವನೆ ಅಪ್ಪಿ, ಅದರಲ್ಲಿ
ಪ್ರೇಮವಂ ಹುಡುಕುವರೊಂದೆಡೆ..!

ಪ್ರೇಮವು ಮರೀಚಿಕೆ ನನಗದು,
ನಾನೆಂದೂ ಸಮೀಪಿಸೆನದನು
ಹಸಿವಿಗಾಗಿ ಸೆರಗನ್ಹಾಸುವವಳು ನಾ..!

- ಶ್ರೀ

19 Jan 2017, 12:13 am

ಮರೆವು

ನನ್ನ ಮೆದುಳಿಗೆ ಮರೆವು ಕೊಟ್ಟ
ಭಗವಂತ ಮನಸಿಗೆ ಮರೆಯುವುದು
ಹೇಳಿಕೊಡಲು ಮರೆತುಬಿಟ್ಟ .

ನನ್ನನ್ನು ನಾನೆ ಮರೆತುಹೋದರು
ನಿನ್ನ ನೆನಪು ನನ್ನಲ್ಲೇ ಉಳಿಸಿಬಿಟ್ಟ .
ಆದ್ರೂ ನನ್ ಕನ್ನಿರಿಗೇನು ಗೊತ್ತು
ನಿನ್ನ ಮೆರೆಯಬೇಕೆoದು.

ನಿನ್ನ ನೋಡಲು ಬಯಸಿದ ಪ್ರತೀ
ಕ್ಷಣ ಹೊರಬಂದು ಎಲ್ಲರಿಗೂ
ಕಾಣಬಾರದೆoದು .....!!!!!

- ಚುಕ್ಕಿ

18 Jan 2017, 11:06 pm

ಪಾಡು....

ಯಾರು ಸುರಿದರೀ ಸಂದರ ಜಗದೋಳು
ಮೇಲು ಕೀಳೆಂಬ ಅಪನೀತಿ.
ಕೊಚ್ಚೆಯೊಳು ನೂಕಿ
ಚಪ್ಪಲಿಯಲ್ಲಿ ಮುಖಕ್ಕೆತ್ತಿ ಮಂಗಳಾರತಿ
ತಾನೂ ಮನುಷ್ಯನೇ ಎಂಬುದ ಮರೆತು
ಬೆಲೆ ಇಲ್ಲದೆ ಅವನ ಪಾಡು.....
ಮಾರಾಟಕ್ಕಿಟ್ಟರಲ್ಲ....
ಮನಸು ನೇಣಿನ ಗೆಳೆಯ ಪರಸ್ಪರ....

- ಅದ್ಯತನ

18 Jan 2017, 10:24 pm

ಗೆಳೆತನ...

ನನ್ನ ಹೃದಯವು ಬೆಂದು ಹೋಗುತ್ತಿದೆ, ಒಳಗೊಳಗೆ ನಿಂಗೆ ಕಾಣದಿದ್ದರೇನು... ಬೆಂದ ಹೃದಯದ ವಾಸನೆಯೂ ಬರಲಿಲ್ಲವೇ ಗೆಳೆಯಾ......!

- ಹರೀಶ್. ಚಾಮರಾಜನಗರ

18 Jan 2017, 10:21 pm

ಬರೆದೆನು ನನ್ನ ಹೆಸರ

ಸಾಗರದ ತೀರದ ಮೇಲೆ
ಬರೆದೆನು ನನ್ನ ಹೆಸರ
ಸಾಗರವು ಉಕ್ಕಿ
ಸಾಗರದ ಅಲೆಗಳು,ನನ್ನ ಹೆಸರಿಗೆ ಮುತ್ತಿಕ್ಕಿ
ಕಳೆದುಕೊಂಡವು ತಮ್ಮ ಬೇಸರ.

- ಮುತ್ತು

18 Jan 2017, 09:23 pm

ನಕ್ಷತ್ರಗಳು-೧೮.

ನಕ್ಷತ್ರಗಳ
ಬೆಳಕಿಗೆ-ತಂಪಿದೆ
ನವಿರಿದೆ-ಕೋಮಲತೆಯ
ಕುಸುರಿದೆ.ಯಾಕೆಂದರೆ
ನಸುಕಿನ ಎಳೆ
ತಂಗಾಳಿಯ ಹದ
ಸುಳಿವಿಗೂ
ಆ ದೀಪಗಳ ಸಾಲು
ಸಾಲೇ ಮೌನವಾಗಿ
ಆರಿ ಹೋಗುತ್ತವೆ.

******************ಪದ್ಯಾಣ.

- padyana

18 Jan 2017, 07:55 pm

ನಕ್ಷತ್ರಗಳು-೧೭

ಅಮಾವಾಸ್ಯೆಯ ರಾತ್ರಿ
ಆಕಾಶದ ಅಂಗಳದಲ್ಲಿ
ನಕ್ಷತ್ರಗಳು
ಸಾಮೂಹಿಕ ಸಭೆ ಸೇರಿ
ದಿವಂಗತ ಚಂದಿರನ
ಆತ್ಮಕ್ಕೆ
ರಾತ್ರಿ ಇಡೀ ಶಾಂತಿ
ಕೋರಿ-ಮೌನವಾಗಿದ್ದಾವೆ.

*****************ಪದ್ಯಾಣ.

- padyana

18 Jan 2017, 07:44 pm

ಏಕೆ ಏಕಾಂತ ನನ್ನ ಸೇರೋ ಧಾವಂ

ಏಕೆ ಏಕಾಂತ ನನ್ನ ಸೇರೋ ಧಾವಂತ
ನಿನ್ನ ಎದುರಿಸಲು ನಾ ತುಂಬ ಅಶಕ್ತ
ನಿನ್ನ ಆಗಮನ ಕಂಡು ಮನಸಾಗಿದೆ ಭಯಭೀತ
ನಿನ್ನ ಈ ನಿರ್ಧಾರಕೆ ನನ್ನೊಳು ಸೃಷ್ಟಿಯಾಗಿದೆ ಉತ್ಪಾತ

ಏಕೆ ಏಕಾಂತ ನನ್ನ ಸೇರೋ ಧಾವಂತ
ದೂರ ನಿಲ್ಲು ನೀನು ನಾನಲ್ಲ ನಿನ್ನ ಸ್ವಂತ
ನಿನ್ನ ಆಕ್ರಮಣದಿಂದ ನಾನಾಗುವೆನು ಅನಾಥ
ಸಾವೇ ಸೊಗಸು ನೀ ಕೊಡುವ ನೋವಿಗಿಂತ

ಏಕೆ ಏಕಾಂತ ನನ್ನ ಸೇರೋ ಧಾವಂತ
ನಿನ್ನ ಇರುವಿಕೆಯು ಸೂತಕದ ಸಂಕೇತ
ದೂರ ನಿಂತೇ ಕೇಳು ನನ್ನ ಅಂತರಂಗದ ಸ್ವಗತ
ನೀ ತಿಳಿದಿರುವ ಹಾಗೆ ನಾನಲ್ಲ ಈಗ ಪ್ರೇಮೋನ್ಮತ್ತ

ಏಕೆ ಏಕಾಂತ ನನ್ನ ಸೇರೋ ಧಾವಂತ
ನಿಜವೇ ಅವಳು ನನ್ನನ್ನಗಲಿ ನಾನಾಗಿರುವೆ ದುಃಖತಪ್ತ
ಒಂದನ್ನು ನೆನಪಿಡು ಆ ದುಃಖ ಇರಲಾರದು ನನ್ನ ಜೀವನದಾದ್ಯಂತ
ನಂಬಿಕೆಯುಂಟು ನನ್ನಲಿ ಮತ್ತೆ ಬರುವಳವಳು ನಿನ್ನ ಹಿಮ್ಮೆಟ್ಟಿಸುತ್ತ


- ಏಕಾಂಗಿ ಶಶಿ ಕಿರಣ

- ಅಕವಿ

18 Jan 2017, 05:09 pm

ಪ್ರೀತಿಲಿ ನೊಂದ ಹೃದಯ

ನಿನ್ನ ಹೊರೆತು ನನ್ನ ಜೀವ ಬೇರೆ ಏನು ಕೇಳದೆ,
ಕೊಂಚ ನಿನಗೂ ನೆನಪು ಬಾರದೆ..
.ಖಾಲಿ ಹಾಳೆಯಂತೆ ಇದ್ದೆ ,ನಿನ್ನ ಹೆಸರು ಗೀಚಿದೆ ,ಕಣ್ಣ ನೀರಲ್ಲೇಕೆ ಹಳಿಸಿದೆ ...

- MADHUPRINCE

18 Jan 2017, 12:14 pm