Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅತಿ ಭಾರ ಈ ಶರೀರ
ಊಟವಿಲ್ಲ -ನಿದ್ದೆಯಿಲ್ಲ
ಸಣ್ಣ ಆಗಬೇಕೆoಬ ಆಸೆ ಬಿಟ್ಟರೆ.
ಅತ್ತು ಅತ್ತು ಮನಸಿನ
ಬಾರ ಜಾಸ್ತಿಯಾಗುವುದು ಬಿಟ್ಟರೆ
ದೇಹದ ಭಾರ ಇಳಿಯುತ್ತಿಲ್ಲ .
ಇದೇ ನನ್ನ ದುರಂತ ಎಂದುಕೊಳ್ಳುವಷ್ಟರಲ್ಲಿ
ಆಯಿತೊoದು ಅದ್ಬುತ .
ಒಂದು ದಿನ ನನ್ನ ತೂಕ ನೋಡಿದ್ರೆ
ಆಯಿತದು ಅರವತ್ತು.
ನಗು ಚಿಮ್ಮುತಿತ್ತು ನನ್ನ ಮನಸು
ಅತ್ತು ಅತ್ತು ........!!!!!!
- ಚುಕ್ಕಿ
19 Jan 2017, 05:31 pm
ಮನಸು ಮನಸು ಬೆಸೆಯುವ
ನೋಟ ನೋಟ ಸೇರುವ
ಶಾಂತಿ ನೀತಿ ರೀತಿ ಕಲಿಸುವ
ನಿಶ್ಕಲ್ಮಶ ಒಲವು ಬರಿಸುವ
ರೂಪವೆ ಪ್ರೀತಿ
- ಗೌಡಕಲರ್ಪುಲ್
19 Jan 2017, 05:27 pm
ಮನಸಲ್ಲಿ ಒಂದು ಯೋಚನೆ
ದಿನಕ್ಕೊಂದು ಕಲ್ಪನೆ
ಏನೇನೋ ಭಾವನೆ
ಚಿತ್ರಿಸಲಾಗದ ಚಿಂತನೆ
ಇದೆ ಈ ಜೀವನದ ಯಾತನೆ...
- shwetha
19 Jan 2017, 04:31 pm
ಒಮ್ಮೆ ನಿನ್ನ ನಗಿಸಿದರು
ಒಮ್ಮೆ ನೋಯಿಸಿದರು
ಒಮ್ಮೆ ನಿನ್ನ ಕಾಡಿಸಿದರು
ಒಮ್ಮೆ ನಿನ್ನ ಮುದ್ದಿಸಿದರು
ಒಮ್ಮೆ ನಿನ್ನ ಜೊತೆ ಮರೆತರು
ಒಮ್ಮೆ ನಿನ್ನಲ್ಲೇ ಬೆರೆತಿರುವೆ
ಪ್ರತಿಯೊಮ್ಮೆಯು ನಿತ್ಯ ಹಸಿರು
ಅದುವೇ ನಮ್ಮ ಪ್ರೀತಿಯ ಉಸಿರು.....
- shwetha
19 Jan 2017, 04:23 pm
ಬದುಕೆಂಬ ಗಾಳಿಗೋಪುರ
ಉರುಳಿ ಹೋಗುವ ಮುನ್ನ
ಬಂದುಬಿಡು ನೀ ಗೆಳೆಯ
ಒಮ್ಮೆ ಈ ಬದುಕಲಿ!!
ಬರವಸೆಯ ದಾರಿಯನ್ನು
ಕಾಯುತ್ತ ಕುಳಿತರೆ
ಉರುಳುವ ಕಾಲವದು
ಮತ್ತೆ ಮರಳದು!!
ಕಡಲ ತೀರದಿ ಮರಳ
ಮನೆಯ ಮಾಡಿದರೆ
ಅಲೆಯು ಬಂದಳಿಸಿ
ಹೋದಂತೆ ಜೀವನ!!
ಉರುಳುವ ಜೀವನ ಚಕ್ರದ
ಅಡಿಯಲ್ಲಿ ಮತ್ತೆ
ಮರಳುವುದೇ ಈ ಯವ್ವನ
ಬಂದುಬಿಡು ಗೆಳೆಯ ಬದುಕಲಿ!!
- ಪಿ.ಜಿ.ಜ್ಯೋತಿ
19 Jan 2017, 04:18 pm
ನನ್ನ ಎದೆಯೆಂಬ ತೋಟದಲ್ಲಿ
ಬೆಳೆದ ಗಿಡದಿಂದ ಕಿತ್ತುಕೊಟ್ಟೆ
ಮುಳ್ಳಿಲ್ಲದ ಗುಲಾಬಿಯೆಂಬ ಹೃದಯವನ್ನ
ನೀ ಮುಡಿಯದೆ ತಿರುಗಿ ನನಗೆ ಮುಡಿಸಿದೆ
ತಲೆ ಮೇಲೆ ಅಲ್ಲ ಕಿವಿಯ ಮೇಲೆ.
- ಮುತ್ತು
19 Jan 2017, 03:03 pm
ನಾನೊಬ್ಬ ಅನಾಮಿಕ ನಿಮ್ಮ ಅಭಿಮಾನಿ
ದೂರದಲ್ಲಿ ಕೂತು ಬರೆಯಬೇಕೆಂದಿರುವೆ ನಿಮಗೂಂದು ಕಹಾನಿ
ಪದಗಳೆ ಸಿಗದೆ ನಾ ಕುಳಿತಿರುವೆ ಸುಮ್ಮನೆ
ಸಿಗದ ಪದಗಳ ಹುಡುಕುತ
ನೆನೆಯುತಿರುವೆ ನಿಮ್ಮನೆ
ಸಾಹಿತ್ಯದ ಱನವ ಹೊಂದಿರದ ನನಗೆ
ಹಾಡೊಂದನ್ನು ಬರೆಯಲು ಹೊರಟಿರುವೆ ನಿಮಗೆ
ಹೆಸರು ಇಡದ ಈ ನನ್ನ ಮುಗ್ದ ಕವಿತೆಗೆ
ನಾಮಕರಣ ಮಾಡುವಿರಾ?
- chetankumar
19 Jan 2017, 11:51 am
ಮರಳಿ ಬಾ ಎಂದೆನ್ನ
ನಾಡು ಕರೆದಿಹುದು
ಅನುಮತಿಯ ನೀಡಮ್ಮ
ನಾ ಹೊರಡಲೀಗ!!
ಸುತ್ತ ಸೈನ್ಯವ ಕಟ್ಟಿ
ಬದುಕಿದವನು ಗಟ್ಟಿ
ನಾಡ ಸೇವೆಗೆ ಈ ತನುವು
ಮುಡಿಪಾಗಿ ಇಹುದಮ್ಮ!!
ಯುಧ್ಧ ಸಾರಲೂ ಬಹುದು
ಕಪಟದಿಂದಲಿ ಹೊಂಚು
ದಾಳಿ ನಡೆಸಲೂ ಬಹುದು
ಗೆದ್ದು ಬಾ ಎಂದೆನ್ನ ಹರಸಮ್ಮ!!
ಸಲಹಿದ ತಾಯಿನಾಡು
ಕೈ ಬೀಸಿ ಕರೆದಿಹುದು
ಹೊರಡಲನುಮತಿಯ ನೀಡಿ
ನನ್ನ ಹುರಿದುಂಬಿಸಮ್ಮ!!
ಮತ್ತೆ ಮರಳುವೆ ತಾಯಿ
ನಾ ಹಿಡಿದು ವಿಜಯ ಪತಾಕೆಯ
ವೀರ ತಿಲಕವನಿಟ್ಟು
ನನ್ನ ಆಶೀರ್ವದಿಸಮ್ಮ!!
ನಾಡ ಸೇವೆಗೆ ನನ್ನ
ಪ್ರಾಣ ಹೋದರೂ ಸರಿಯೇ
ವೀರ ಮರಣದಿ ಮರಳಿ
ನಾ ಧೀರನಾಗುವೆನಮ್ಮ!!
- ಪಿ.ಜಿ.ಜ್ಯೋತಿ
19 Jan 2017, 10:12 am
ರವಿಯ ನಿರೀಕ್ಷೆಯಲ್ಲಿ
ಅವನಿ ದುಗುಡದಿ
ಕೆಂಪಾದ ಬೆಳಗು...
- Indushekar Chinivar
19 Jan 2017, 08:14 am
ವಿಜಯದ ಹಿoದಿನ ಶ್ರಮ ಪಟ್ಟವರಿಗೆ ಗೊತ್ತು .
ನಗುವಿನ ಹಿoದಿನ ನೋವು ಅನುಬವಿಸಿದವರಿಗೇ ಗೊತ್ತು .
ನಿಮ್ಮ ಪ್ರತೀ ನೋವಿನ ಹಿoದೆ ಒಂದು ಕಾರಣ
ಇದ್ದಹಾಗೆ ನಿಮ್ಮ ಜೊತೆ ಆ ನೋವಲ್ಲಿ ಕೈ ಬಿಡದೆ
ಜೊತೆಗಿದ್ದವರು ಇರುತ್ತಾರೆ.
ಅಂತಹವರನ್ನು ಎಂದಿಗೂ ಮರೆಯಬೇಡಿ.
........ಭವ್ಯಶ್ರೀ
- ಚುಕ್ಕಿ
19 Jan 2017, 07:40 am