Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾಯಿ

ನೂರು ಆಸೆ ಹೊತ್ತು
ಒಡಲು ತುಂಬಿ ಬಂತು
ನಗೆಯು ನೋವ ತಿಂತು
ಮಡಿಲು ಲಾಲಿ ಅಂತು

- shree

20 Jan 2017, 06:16 pm

ಕಳೆಯಿತು ಶತಮಾನಗಳ ಒಂಟಿತನ.

ನಿನ ಬಟ್ಟಲು ಕಂಗಳು ಮನವನು ಸೆಳೆದು
ಭಾವವೀಣೆಯ ತಂತಿಗಳ ಎಳೆದೆಳೆದು,
ಅನುರಾಗದ ಹೊಸರಾಗವೊಂದು ಮೊಳೆದು,
ಜೀವನಕೊಂದು ಹೊಸ ಅರ್ಥ ಹೊಳೆದು,
ಶತಮಾನಗಳ ಒಂಟಿತನ ಹೋಯಿತೇ ಕಳೆದು.

- Ugnil

20 Jan 2017, 05:25 pm

ಹೆಣ್ಣು ತಾಯಿ

ಪ್ರತಿ ಪುಟ್ಟ ಹುಡುಗಿಯಲ್ಲೂ
ಒಬ್ಬ ತಾಯಿ ಇರುತ್ತಾಳೆ
ಪ್ರತಿ ಪ್ರೌಢ ಮಹಿಳೆಯಲ್ಲೂ
ಒಬ್ಬ ಪುಟ್ಟ ಹುಡುಗಿ ಇರುತ್ತಾಳೆ
ಮಗುವಿಗೆ ಜನ್ಮ ಕೊಟ್ಟ ನಂತರ
ಹೆಣ್ಣು ತಾಯಿ ಆಗುತ್ತಾಳೆ

- basavarajsirnayakpreethu

20 Jan 2017, 02:25 pm

ಸ್ನೇಹ

ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ.

ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು, ನಿನ್ನ ಆಪ್ತರು ಯಾರಂತ.

- basavarajsirnayakpreethu

20 Jan 2017, 02:24 pm

ತ್ಯಾಗ

ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆ
ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು
ಯಾಕೆಂದರೆ ..
ಅದನ್ನು ಪಡೆಯುವ ಆತುರದಲ್ಲಿ
ತುಂಬಾನೇ ಕಳೆದುಕೊಂಡು ಬಿಡ್ತೀವಿ..

- basavarajsirnayakpreethu

20 Jan 2017, 02:23 pm

ಮೌನ

ಸಹನೆ ಅಂದ್ರೆ ಮೌನವಾಗಿರುವುದಲ್ಲ
ಮೌನ ಅಂದ್ರೆ ಎಲ್ಲವನ್ನು ಸಹಿಸಿಕೊಳ್ಳವುದಲ್ಲ.

- basavarajsirnayakpreethu

20 Jan 2017, 02:20 pm

ಭರವಸೆ

ಅಜ್ಞಾನದ ಪೊರೆ ಹರಿದು
ಸುಜ್ಞಾನದ ತೆನೆ ಬೆಳೆದು..
ಸಮೃದ್ಧಿ ನೆಲೆಗೊಂಡು
ಭರವಸೆಯ ನಾಳೆಗಳು ನಮ್ಮದಾಗಲಿ..

- basavarajsirnayakpreethu

20 Jan 2017, 02:19 pm

ಅಂದ

ಜನರು ಮೆಚ್ಚುವ ಅಂದ
ನಿಮ್ಮಲ್ಲಿದ್ದರೆ ಸಾಲದು
ಎಲ್ಲಾರು ಮೆಚ್ಚುವ ಮನಸು ಇರಬೇಕು .

ಸಾವಿರ ಅಂದವಾದ ಮುಖಗಲಿಗಿಂತ
ಒಂದು ಅಂದವಾದ ಮನಸು ಸಾಕು
ಜೀವನ ಸಂತೋಷವಾಗಿ ಸಾಗಲು .

- ಚುಕ್ಕಿ

20 Jan 2017, 12:08 pm

ಬೇಸರ

ನೀನು ಸಿಕ್ಕ ಮೇಲೆ ನನಗೆ
ಬೇಸರವೆoಬ ಪದ ಮರೆತೋಗಿತ್ತು .

ನಿನ್ನ ಸನಿಹದಲ್ಲಿ ಕೂತಾಗ
ಕಣ್ಣೀರೆ ಕನ್ಮರೇಯಾಗೀತ್ತು.

ನಿನ್ನ ನಗುವಿನಲ್ಲಿ ನನ್ನ ಪ್ರಪಂಚವೇ
ಸಾವಿರ ಸ್ವರಗಳ ಸಂಗೀತವಾಗಿತ್ತು .

ಆದರೆ ನೀನಿಲ್ಲದೆ ನನ್ನ ಮನಸು
ಬೇಸರದ ಬಂದನದಲ್ಲಿ ಮೌನವಾಗಿತ್ತು .

- ಚುಕ್ಕಿ

20 Jan 2017, 11:15 am

ಎಲ್ಲಿರುವೆ

ಕಷ್ಟವ ಕಳೆವ ನೀನೆ‌ ಬಂಧು
ಹಿಂದು ಮುಂದು ಎಂದೂ ಬೆಂದು
ನೀನಿಲ್ಲಿರುವೆ ಎಂದೈತಂದು
ಕಂಡ‌ ಕನಸು ನನಸಾಗುವುದೆಂದು
ಕಾಣದೆ ನಿ‌ನ್ನ ಅರಸಿ ನೊಂದು
ಬಲವಿಲ್ಲದ ಬರಿಗೈಲಿ ನಿಂದು
ಬೇಡುವೆ ನಾ ನಿನ್ನೆದುರಲಿ ನಿಂದು
ಕರುಣಿಸಿ ಎನ್ನ ಕಾಯಬೇಕೆಂದು
ಎಲ್ಲಿರುವೆ ನೀ ಎಲ್ಲಿರುವೆ

- Kumara.C

20 Jan 2017, 08:26 am