Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಗು ನಿನ್ನ ಚಿತ್ರವ ಕಂಡೆ
ಮನದಲ್ಲಿ ಕೊಂಡಾಡಿಕೊಂಡೆ
ಬಂಗಾರಿ ನೀ ಬಂದ ಗಳಿಗೆ
ಆಗುಹುದು ನಿನ್ನ ತಂದೆಯ ಎಳೆಗೆ
ಮನಸಾದೆ ಕನಸಾದೆ ಮಗುವಾದೆ ನೀ ಎಲ್ಲರ ಪಾಲಿಗೆ

- Kishore

27 Nov 2023, 10:14 am

- Chaitra Patil

26 Nov 2023, 11:23 pm

Life

life is like sounds less ticking clock,when every bell rings that time we think

- Chaitra Patil

26 Nov 2023, 11:19 pm

ಕವನ ಜ್ಞಾನದ ಬೆಳಕು



 ಶುಭೋದಯದಿ ಸ್ಪಟಿಕದಂತೆ ಪುಟಿಯುತ್ತಿದ್ದ ನಿಮ್ಮ ಧ್ವನಿ,ನಮ್ಮ ಮುಗುಳ್ನಗೆಯಲ್ಲಿ ಹೊಳೆಯುತ್ತಿದ್ದ ಬಂಗಾರದ ಹನಿ.

ನಮ್ಮ ಮನದ ಕಾರ್ಮೋಡ ಸರಿಸೊ ನಿಮ್ಮ ನುಡಿಯ ಆಕರ್ಷಣೆ,

ನಮ್ಮೊಳಗೆ ಹೆಚ್ಚಿಸಿದೆ ನಾವ್‌ ಛಲ ಬಿಡದೆ ನಿಭಾಯಿಸುವ ಜವಾಬ್ದಾರಿಗಳ ಹೊಣೆ.

ನಮ್ಮ ತರಬೇತಿಗೆ ನಿಮ್ಮ ಅನುಭೂತಿಯ ಪರಿಶ್ರಮ,ನಮಗೆ ಸ್ಪೂರ್ತಿಯಾಗಿದೆ ನೀವ್‌ ಸಂಯೋಜಿಸಿದ ಹಲವು ರೀತಿಯ ಕಾರ್ಯಕ್ರಮ.

ನಮ್ಮ ಹೃದಯದ ಬೆಳಕಾಗಿ ನೀಡಿದ ನಿಮ್ಮ ಮಾರ್ಗದರ್ಶನ,ಪೀಟಿಕೆಯಾಗಿ ಪ್ರಝ್ವಲಿಸುವುದು ನಮ್ಮ ಕರ್ತವ್ಯ ಜೀವನ.

ತರಬೇತಿಯ ಮರೆಯಲ್ಲಿ ನಮಗೆ ಖುಶಿ ತರುತ್ತಿದ್ದ ನಿಮ್ಮ ಕಾರ್ಯ ಯೋಜನೆ,ನಮ್ಮ ಶಿಸ್ತಿನ ಬದುಕಿಗೆ ಸೇತುವೆಯಾಗಿವೆ, ನಿಮ್ಮ ಸದ್ಗುಣಗಳ ಆರಾಧನೆ.

ಜ್ಞಾನದ ಜೊತೆಯಲ್ಲಿ ನಾವ್‌ ಪಡೆದೆವು ನಿಮ್ಮಲ್ಲಿ ಮಾತೃ ಮಮತೆಯ,ಸಮಾಜಕ್ಕೆ ಸಲ್ಲಿಸಬೇಕು ನಾವ್‌ ನಿಮ್ಮ ಸ್ಮರಣೆಯಲ್ಲಿ ಉತ್ತಮ ಸೇವೆಯ.

ಎಲ್ಲರೆದೆಯಲ್ಲಿ ಕ್ರಿಸ್ಟೀನರ ಜ್ಞಾನ ಕಾಂತಿ ಹರಿಯಲಿ,ನಮಗಾಗಿ ಸೃಶ್ಟಿಯಾಗಲಿ ನಿಮ್ಮಂತ ಅಧಿಕಾರಿಗಳು ನಮ್ಮ ಧರೆಯಲಿ.

- nagamani Kanaka

26 Nov 2023, 02:22 pm

ಜನ್ಮದಿನ

ರೆಕ್ಕೆ ಇರದ ಹಕ್ಕಿಗೆ ಜೊತೆಯಾದ ನೀವೇ ಕಾರ್ತಿಕ ಮಾಸದ ದೀಪ,
Z ಒಣಗಿದ ನನ್ನೆದೆ ಗೂಡಿಗೆ ನವ ಚಿಂತನೆಗಳನೆ ಸಗುವುದೇ ನಿಮ್ಮ ಸಂಕಲ್ಪ.
ಬಡಿದೆಬ್ಬಿಸುವ ನಿಮ್ಮ ಜೀವನದ ಅನುಭವದ ಸಾಲುಗಳು,
ನನ್ನ ಸಂಕೀರ್ಣ ಸಂಸಾರವ ಸಾಗಿಸಲು ಪ್ರಯೋಗಿಸುವ ವಿವೇಕ ಮಂತ್ರಗಳು.
ನೆನಪುಕುವ ಲತೆಗೆ ನಿಮ್ಮನ್ನು ಅಪ್ಪುವ ಬಯಕೆ,
ನೆರಳ ಕೊಡುವ ಮರ ಅರ್ಥವಾದರೂ, ತಿರಸ್ಕರಿಸಬಾರದು ಮರುಕ ಜೀವದ ಕೋರಿಕೆ.
ಕಣ್ಮುಚ್ಚು ಕೊನೆಯ ಉಸಿರು ನಿಮ್ಮ ಹೆಸರು ಕರೆಯುವಾಗ,
ಅಳಿಲಂತೆ ಪ್ರೀತಿಯ ಗುಟುಕ ನೀಡಬೇಕೆನಿಸದೆ ನಿಮ್ಮ ಹೃದಯಕ್ಕೀಗ..
ಕಿಡಿಗಳ ಕಡುನುಡಿಗೆ ಕುಗ್ಗದಿರಲಿ ಹೊಸ ಪ್ರಯತ್ನದ ಚಿಂತನ,
ಮಾಗಿದ ಸಿಹಿ ಹಣ್ಣಿಗೆ ಜನ ಆಕರ್ಷಿಸುವಂತಿರಲಿ ನಿಮ್ಮ ವೃತ್ತಿ ಜೀವನ.
ಸರ್ವರ ಸಮಾನತೆಗೆ ಬೆಳಕಾದ ನಿಮ್ಮ ಜನ್ಮ ದಿನ,
ಭಾರತೀಯರ ಸ್ವಾಭಿಮಾನದ ಬದುಕಿಗೆ ಸನ್ಮಾರ್ಗ ರಚನೆಗೊಂಡ ಕ್ಷಣ.
ನಕ್ಷತ್ರದಂತೆ ಧರೆಯನ್ನು ಧರಿಸಲು ಉದಯಿಸಿದ ನಿಮಗೆ,
ನನ್ನ ಪ್ರೀತಿಯ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳ,
ಮಲ್ಲಿಗೆ ಹಾರ ನಿಮ್ಮ ಕೊರಳಿಗೆ.

- nagamani Kanaka

26 Nov 2023, 01:56 pm

ಜೀವನ

ಮನುಷ್ಯ ಎಷ್ಟೇ ಒಳ್ಳೆಯವನ್ನಾಗಿ, ಇರುತ್ತನೋ, ಅವನ್ ಹಣೆಬರಹ ಅಷ್ಟೇ ಕೆಟ್ಟದಾಗಿರುತ್ತೆ...


ಫೀಲಿಂಗ್ಸ್ ✍️

- HV..k

26 Nov 2023, 12:09 am

ಓ ಮನವೇ

ಓ ಮನವೇ ಹೇಳು...
ನೀನೇಕೆ ಹೀಗಾಗಿರುವೆ ?
ಏಕೆ ಇಷ್ಟೊಂದು ಪರಿತಪಿಸುತ್ತಿರುವೆ ?

ಓ ಮನವೇ ಹೇಳು...
ಈ ಪುಟ್ಟ ಜೀವಕ್ಕೇಕೆ ನೋವುಣಿಸುತ್ತಿರುವೆ ?
ಯಾವುದಕ್ಕಾಗಿ ಇಷ್ಟೊಂದು ಹೋರಾಟ?

ಓ ಮನವೇ ಕೇಳು...
ಬಿಟ್ಟು ಬಿಡು ಈ ತೊಳಲಾಟವ
ದೂರ ಮಾಡು ನೀ ದುಗುಡವ

ಓ ಮನವೇ ಕೇಳು...
ಯಾರಿಲ್ಲ ಇಲ್ಲಿ ನಿನ್ನಷ್ಟು ಬಲಶಾಲಿ
ಭರವಸೆಯೇ ನಿನ್ನ ಕನಸಿಗೆ ರುವಾರಿ

ಓ ಮನವೇ ಹೇಳು...
ಮತ್ತೆ ನೀ ಹುಡುಕಿ ತರುವೆಯ ಆ ನಗು
ಮುಖವ ನನಗಾಗಿ ?

- ವರ್ಷಿಣಿ

- Varshini Hebbar

24 Nov 2023, 03:03 pm

ಅವಳಿಂದ ಹೆಚ್ಚೇನೂ ನಿರೀಕ್ಷೆಯಿಲ್ಲ..

ನೋಡೋಕೆ ಸಿಂಪಲ್ಲಾಗಿದ್ರು ಗುಣದಲ್ಲಿ
ಸೂಪರ್ ಆಗಿರಬೇಕು..
ಮ್ರಾಡನ್ ಬಟ್ಟೆ ಹಾಕಿದ್ರು
ಅದು ಪ್ರಚೋದಿಸದಂತಿರಬೇಕು..
ಖುಷಿಯಲ್ಲಿದಾಗ ರೇಗಿಸಬೇಕು
ಸಪ್ಪಗಿದ್ದಾಗ ಹುರಿದುಂಬಿಸಬೇಕು..
ಎಷ್ಟೇ ಕೋಪ ಮಾಡ್ಕೊಂಡ್ರು ಮುತ್ತಲ್ಲೇ
ಕೋಪ ಕರಗಿಸಬೇಕು..
ಮಡಿಲಲ್ಲಿ ಮಲಗಿಸಿಕೊಳ್ಳಬೇಕು
ಅವಳೇ ತಾಯಿಯಂತಾಗಬೇಕು...
ಎಮ್.ಎಸ್.ಭೋವಿ...✍️
.
.
.
.
.
.

- mani_s_bhovi

20 Nov 2023, 10:38 pm

ಆತ್ಮಾನುಸಾರಿಣಿ

ನಸುಕು ಕವಿದ ಮನಕೆ
ತುಸು ಮೆಲ್ಲಗೆ ನುಸುಳಿ,
ಗಾಳಿಗೂ ಆರದ
ಕಾಲಕೂ ಮಾಸದ,
ಒಲವಿನ ಬೆಳಕನು
ಹೊತ್ತು ತಂದ ಹೃದಯವೇ,
ಪಿಸು ಮಾತಲಿ ಪ್ರೀತಿಯ
ಪರ್ವತದಂತೆ ಪಸರಿಸಿ,
ಒಸು ನೊಂದ ಎದೆಗೆ
ಅಪ್ಪುಗೆಯ ದೀವಿಗೆ,
ನನ್ನ ಕನಸಿನ ಅರಮನೆಯಲಿ
ನಿನ್ನ ನಗುವಿನ ನಿತ್ಯ ಮೆರವಣಿಗೆ,
ಕಳೆದುಹೋದ ನನ್ನ ಪ್ರತಿಬಿಂಬವ
ನಿನ್ನ ಕಂಡ ಕೂಡಲೇ ಮನ ತುಂಬುವ,
ಭರವಸೆಯ ಸ್ವಾರಸ್ಯವೂ ನೀ ಸಖಿ
ಪಡೆದು ನಿನ್ನನು ಅನುಕ್ಷಣವೂ ನಾ ಸುಖಿ,
ಜೀವನದ ಎಲ್ಲಾ ಆಯಾಮಗಳ ಸಾಥಿ
ಮರು ಉಸಿರಿಗೂ ನೀನಾಗು ನನ್ನ ಸಂಗಾತಿ,
ಹೃದಯಪೂರ್ವಕ ವಿವಾಹ ವಾರ್ಷಕೋತ್ಸವದ ಶುಭಾಷಯಗಳು ಪುಟ್ಟ.



- Chethan M P

16 Nov 2023, 11:05 pm

ಅಪ್ಪ

ನನ್ನಪ್ಪನಿಗೊಂದು ಮಾತು ಜೀವನ ಎಂಬ ರಥದ ಸಾರಥಿ
ಸಂಸಾರ ಎಂಬ ಸಾಮ್ರಾಜ್ಯದ ಅಧಿಪತಿ

ಎಷ್ಟೆ ಕಷ್ಟ ಬಂದರೂ ಮಕ್ಕಳ ನಗುವಲ್ಲಿ ನೋವನ್ನು ಮರೆಯುವ ಗುಣವಂತ
ಪ್ರೀತಿಯ ಲೋಕಕ್ಕೆ ನೀನೇ ಸಿರಿವಂತ

ಮಕ್ಕಳ ಏಳ್ಗೆಗೆ ದಾರಿದೀಪ
ಮುಂದೆ ನಮ್ಮ ಜೀವನಕ್ಕೆ ನೀನೇ ನಂದಾದೀಪ

ಕಲ್ಮಶವಿಲ್ಲದ ಮನಸುಳ್ಳ ದಿಗ್ಗಜ
ನಮ್ಮ ಪಾಲಿಗೆ ನೀನೇ ರಾಜ

ದುಡಿಯುತ್ತಾನೆ ಮೈಯಲ್ಲಿ ರುಧಿರ ಸುರಿಯುವಂತೆ
ಲೆಕ್ಕಿಸದೇ ತನ್ನ ಪ್ರಾಣದ ಚಿಂತೆ

ಆಕಾಶಕ್ಕೂ ಮಿಗಿಲು ನಿನ್ನ ಮೇಲೆ ಪ್ರೀತಿ
ದೇವರಿಗಿಂತ ಹೆಚ್ಚು ನಿನ್ನ ಮೇಲೆ ಪ್ರತೀತಿ

ದಾರುಣ ಸ್ಥಿತಿಯಲ್ಲೂ ಧೈರ್ಯಗೆಡದ ಧೀರ
ಜಗತ್ತನ್ನೇ ಎದುರಿಸುವ ಶಕ್ತಿ ಹೊಂದಿರುವ ರಣಧೀರ

ಚಾಣಕ್ಯನಿಗಿಂತಲೂ ಚಾತುರ್ಯ ಹೊಂದಿರುವ ನನ್ನಪ್ಪ
ಯಾರೂ ಹೋಲಿಕೆ ಇಲ್ಲ ನಿನಗಪ್ಪ

ಸಂಸಾರ ಎಂಬ ರಣಾಜಿರದಲ್ಲಿ ಸೋಲನ್ನು ಕಲ್ಪನೆ ಕೂಡಾ ಮಾಡಿಕೊಳ್ಳದವನು
ಕಗ್ಗತ್ತಲೆಯಲ್ಲೂ ನಮಗೆ ಬೆಳಗಾಗಿ ನಿಂತಿರುವವನು

ಹಗಲು ರಾತ್ರಿ ಎನ್ನದೆ ದುಡಿಯುವ ಕಾಯಕ ಯೋಗಿ
ನಿರುದ್ಯೋಗಿಯಾದರೂ, ಸರ್ವಲೋಕವನ್ನೇ ಕೊಳ್ಳುವ ಉದ್ಯೋಗಿ

ಓ ಸ್ನಾತಕೋತ್ತರ ಪದವೀಧರ
ಹರಿಯುವದು ಜ್ಞಾನ ನನ್ನಲ್ಲಿ ನಿರಂತರ

ನಕ್ಷತ್ರಗಳು ನಾಚುವಂತೆ
ಸುನಾಮಿಗಳು ಅಬ್ಬರಿಸುವಂತೆ
ವಿಶ್ವವೇ ಬೆರಗಾಗುವಂತೆ
ದೈವವೇ ಕಣ್ತೆರೆಯುವಂತೆ
ನಮ್ಮ ಜೀವನಕ್ಕೆ ತನ್ನ ಪ್ರಾಣವನ್ನೇ ಪಣವಿಡುವ ನನ್ನಪ್ಪನಿಗೊಂದು ನಮನ..... ಸುನೀಲ್ ಬಿಜಿಎಂ ಕನ್ನಡ ....✍️

- Sunil Bgm kannada

15 Nov 2023, 08:06 pm