Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಪಸ್ಸಿನ ಫಲವೊ

ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನಿನ್ನನು ಹುಡುಕುತ ಹುಡುಕುತ
ನಿನ್ನೊಳಗೆ ನನ್ನ ನಾ ಕಳೆದುಕೊಂಡಿರುವೆ
ಹಗಲು ಇರುಳು ಒಂದು ಅರಿಯದೆ
ನೀ ನನಗೆ ಸಿಕ್ಕ ಕ್ಷಣದಿಂದ
ಗುರುತೇ ಸಿಗದಂತೆ ಕಳೆದೋಗಿರುವೆ

ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನೀ ಸಿಕ್ಕ ಘಳಿಗೆಯ
ಪ್ರತಿ ರಾತ್ರಿ ಕಾಣುವ ಕನಸಿನಲ್ಲೂ
ನಿನ್ನ ಮುಖವನು ಮಾತ್ರ ಕಾಣುವೆ
ನಿನ್ನ ಹೊರತು ಬೇರೇನೂ
ನನಗೀಗ ಕಾಣದಾಗಿ
ಜಗತ್ತನ್ನೆ ಮರೆತು ಬಿಟ್ಟಿರುವೆನು

ಅದೆಷ್ಟೊ ವರ್ಷಗಳ ತಪಸ್ಸಿನ ಫಲವೊ
ನೀ ನನಗೆ ಸಿಕ್ಕಿದ್ದು
ನಿನ್ನ ಭೇಟಿಮಾಡಿದ ಕ್ಷಣವ ನೆನೆದು ನೆನೆದು
ಪದಗಳೇ ಸಿಗದಂತಾಗಿದೆ
ನನ್ನ ಸಂಭ್ರಮವ ವರ್ಣಿಸಲು
ಮನಸ್ಸು ಬಿಚ್ಚಿ ನಾ ನುಡಿದಿರುವೆ
ನನ್ನ ಭಾವನೆಗಳ ನೂರು , ...
ನಿನಗಿಷ್ಟವಾದರೆ ಮನಸಿನ 
ಭಾವನೆಗಳೆ ಈ ನನ್ನ ಕವನ ...

- Pb

23 Jan 2017, 04:25 pm

ಪ್ರೀತಿ

ಪ್ರೀತಿಯೆಂಬುದು ಅಂತರಂಗದ ಭಾವನೆ

ಶತ್ರುವನ್ನು ಗೆಲ್ಲ ಬಹುದಾದ ದೋಡ್ಡ ಸಾದನೆ

ಪ್ರೀತಿಯೆಂಬುದೇ ನಾಡು

ಪ್ರೀತಿಯಿಲ್ಲದು ಬಂಜರು ಕಾಡು

 ಏನನ್ನಾದರೂ ಸಾದಿಸಲು ಬೇಕು ಪ್ರೀತಿ ಬಾವನೆ

ಪ್ರೀತಿ ಪ್ರತೀ ಜೀವಿಗೂ ಸಿಗಬೇಕೇನ್ನುವುದು ನನ್ನ ಕಾಮನೆ

ತನ್ನ ಋತುಚಕ್ರದ ಸೃಷ್ಠಿಯಲ್ಲಿ

ಪ್ರೀತಿಯೇ ದೇಶದ ಪಾಡು

ಪ್ರೀತಿ ಎಂದಿಗೂ ಸೋತ್ತಿಲ್ಲ , ಸೋಲುವುದೂ ಇಲ್ಲ

ಪ್ರೀತಿಸಿದವರು ಸೋತರು ಸಿಗದ ಪ್ರೀತಿಯ ಮುಂದೆ,

- ರಾಜೇಶ್

23 Jan 2017, 12:28 pm

ಅಮ್ಮ

ನನ್ನ ಪ್ರತಿ ಉಸಿರಿನ ಹೆಸರು ಅಮ್ಮ

ನನ್ನ ಪ್ರತಿ ಕನಸು ನನಸಾಗಲು ನೀ ಬೇಕಮ್ಮ

ನನ್ನ ಹ್ರುದಯದ ಬಡಿತವು ನೀನಮ್ಮ

ನನ್ನ ನೇತ್ತರು ಹನಿ ಹನಿಯಲ್ಲೂ ನೀನುರುವೆಯಮ್ಮ

ನಾ ಬಿದ್ದರೂ ದನಿಯಲ್ಲೂ ಕೂಗುವೆ ಅಮ್ಮ

ನಾ ಅತ್ತರು ಕಣೆರಿನಲ್ಲಿ ನೀನುರುವೆಯಮ್ಮ

ನನ್ನ ಕರುಣೆಯ ದೇಗುಲ ನೀನಮ್ಮ

ನನ್ನ ಜೋತೆಯಲ್ಲಿರುವ ಪಾಠ ಶಾಲೆ ನೀನಮ್ಮ

ನಿನ್ನ ಪಡಿಯಲು ಯಾವುದೊ ಜನ್ಮದಲ್ಲಿ ತಪಸ್ಸು ಮಾಡಿದ್ದನಮ್ಮಾ

ನೀ ಜೋತೆಯಲ್ಲಿರಲು ಯಾವ ವರವು ಬೇಡಮ್ಮ

ನನ್ನ ಪ್ರತಿ ಯಶಸ್ಸಿಗೆ ನೀ ಬೇಕಮ್ಮಾ

ನಾ ಸತ್ತರೂ ಕೋನೆಯಲ್ಲಿ ನಿಮ್ಮ

ಮಡಿಲಿಗೆ ಬಂದು ಸೇರುವೆನಮ್ಮ

ನೀ ಇಲ್ಲದಿದ್ದರೆ  ಈ ಭೂಮಿಯನ್ನು ನಾ ನೋಡುತ್ತಿರಲಿಲ್ಲಮ್ಮ 

ಸುತ್ತುತಿರುವ ಭೂಮಿಯ ಮೇಲೆ ಸುತ್ತದ ಭೂಮಿ ನೀನಮ್ಮ 

- ರಾಜೇಶ್

23 Jan 2017, 12:27 pm

ನಗುವಾಸೆ

ಮನೆಯ ಮುಂದಿರುವಗಿಡದ ಹೂವಾಗಿ
ಪರಿಮಳವ ಪಸರಿಸುವಾಸೆ....
ಕಡಲ ನೀರನಲಿ ಮೀನಾಗಿ ಈಜಾಡಿ
ಆಳಕ್ಕಿಳಿಯುವಾಸೆ....
ಹಕ್ಕಿಯಾಗಿ ಬಾನಲಿ ಹಾರಾಡಿ ಮುಗಿಲ ಮೇಲೇರಿ
ಧರೆಯ ನೋಡುವಾಸೆ....
ಉರಿವ ದೀಪದಲಿ ಬೆಳಕಾಗಿ ತೋರುವಾಸೆ....
ಭೋರ್ಗರೆವ ಜಲಪಾತದಿ ನೀರಾಗಿ
ಹಾರಿ ನದಿಯ ಕಡಲ ಸೇರಿ
ಆವಿಯಾಗಿ ಮೋಡದಿ ಮಳೆಯಾಗಿ
ಭೂಮಿಗೆ ಧುಮುಕುವಾಸೆ.....
ಮುಂಜಾವಿನಲಿ ಮಂಜಿ ಹನಿಯಾಗಿ
ಇಳೆಗೆ ಇಳಿದು ಹುಲ್ಲಿನ ತುದಿಯಲ್ಲಿ
ವಜ್ರದಂತೆ ಹೋಳೆಯುವಾಸೆ....
ಹಲವ್ ನೋವ್ಗಳ ನಡುವೆ
ಮನವ ಹಿಡಿಯಲಿ ಹಿಡಿದು
ಹಸುಕಂದ ನಂತೆ ನಗುವಾಸೆ....

ಅರುಣ್.ಕೆ.ಗಟ಼಼ಿ.ಕಾಪಿಕ್ಕಾಡ್

- ಅರುಣ್. ಕೆ. ಗಟ್ಟಿ. ಕಾಪಿಕಾಡ್

23 Jan 2017, 11:45 am

ಸ್ವಪ್ನಗಳ ಸುಮಧುರೆ...!

ನಡುಹಗಲೆ ಬೀಳುತಿವೆ
ಮುಗಿಲೊಷ್ಟು ಕನಸುಗಳು,
ಸ್ವಪ್ನಗಳಲ್ಲಿ ಸುಳಿವ ಸುಮಧುರೆಯೇ

ತುಂಟ ಮೋಸಗಾತಿಯು ನೀ
ಕೆಂದುಳಿಯ ಕೆಂಬಣ್ಣವ
ಕದ್ದು ಕೆನ್ನೆಯಲಿ ಅಡಗಿಸಿಹೆ

ಚಲುವೆ ಚೋರಿಯು ನೀ
ಕಾಮನ ಬಿಲ್ಲಿಂದ ಬಣ್ಣಗಳ
ದಂಗೆ ಮಾಡಿ ಕಣ್ಣಲ್ಲೇ ಸೆರೆಹಿಡಿದಿರುವೆ

ಮಧುರ ಮಾಯಗಾತಿಯು ನೀ
ಮೋಡಗಳಿಂದ ಶ್ವೇತವನೇ ಅಪಹರಿಸಿ
ಮೇಘಗಳ ಬೊಂಬೆಯಾಗಿರುವೆ...!
-ಶ್ರೀ

- ಶ್ರೀ

23 Jan 2017, 10:58 am

ದೋಸ್ತಿ

ಜೀವನದಲ್ಲಿ ಯಲ್ದಕು ಬೇಕೇ ಬೇಕು ದೋಸ್ತಿ....
ದೋಸ್ತಿ ಇದ್ರೆ ಲೈಫನಲೀ ಮಸ್ತಿ........ .
ಹಂಚಿತಿಂದ್ರೆ ಮನಸ್ಸಿಗೆ ಶಾಂತಿ
ಕುಡಿದುಕುಡಿದು ಮಾಡ್ಕೊಲ್ಲಾ ನಾವ್ ವಾಂತಿ
ಜೀವನ್ದಲಿ ಬೇಕು ನಮ್ಗೆ ದೋಸ್ತಿ..
ದೋಸ್ತಿಗಿಂತ ದೊಡ್ಡದಲ್ಲ ಆಸ್ತಿ?....

- Ajay

23 Jan 2017, 10:33 am

ಜೀವನ

ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ ಹಾಗೆ

ಓಮ್ಮೆ ನಕ್ಕು ಮತ್ತೊಮ್ಮೆ ಅಳುವ
ಸುಖ ದುಃಖಗಳ ಪಯಣವಿದು
ಅದೆ ತಾನೆ ಜಗತ್ತು ಕಾಣುತ್ತಿರುವ
ಹಗಲು ಇರುಳುಗಳ ಪಯಣವಿದು

ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ ಹಾಗೆ

ಮಗು ಹುಟ್ಟಿದಾಗ
ಅಳುವುದು, ಕಿರುಚುವುದು
ಅಮ್ಮಳ ಎದೆ ಹಾಲಿಗಾಗಿ, ತಂದೆಯ ಅಪ್ಪುಗೆಗಾಗಿ
ಕೈ ಕಾಲು ಬಂದಾಗ ಕುಣಿದು ನಲಿಯುವುದು 
ನೆರೆ ಮಕ್ಕಳ ಜೋತೆ ಸ್ನೇಹ ಬೆಳೆದು 

ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ ಹಾಗೆ

ಇನ್ನು ರೆಕ್ಕೆ ಬಂದಾಗ
ಮನಸ್ಸು ಚಡಪಡಿಸುವುದು
ಹೊಸದೊಂದ ಬದುಕ ಕಟ್ಟಲು
ಸಾವಿರಾರು ಮೇಟ್ಟಿಲುಗಳ ಕನಸ ತೋಟ್ಟಿಲು

ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ ಹಾಗೆ

ಇನ್ನು ಪ್ರೀತಿ ಬಂದಾಗ
ಅವಳದೆ ಧ್ಯಾನ ಮರಳಿ ಮರಳಿ
ಮನದೋಳಗೆ ಅವಳೆ ಸಂಪೂರ್ಣ
ಕನಸಿನಲ್ಲಿ ಚಂದ್ರತಾರಾಲೋಕದ ಪಯಣ
ಕೋನೆಗೆ ಇಬ್ಬರ ಮನೆಯಲ್ಲಿ ರಾಮಾಯಣ
ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ ಹಾಗೆ

ಇನ್ನು ಮದುವೆಯಾದಗ
ಮೋದಲೇರಡು ತಿಂಗಳು ಸ್ವರ್ಗದ ಪಯಣ
ನಂತರ ಶುರುವಾಯಿತು ನೋಡಿ
ಪಾತ್ರೆಗಳ ಪ್ರಳಯಗಾನ
ಮಧ್ಯರಾತ್ರಿಯಲ್ಲಿ ನಿದ್ದೆಯಿಲ್ಲದ ಬರಿಗಾಲಿನ ಪಯಣ

ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ ಹಾಗೆ

ಇನ್ನು ವಯಸ್ಸಾದ ಮೇಲೆ
ಜೀವನವೆಂದರೆ ಬರೀ ಬೇಸರ ಗಾನ
ಜೀವಾತ್ಮ ಜಗದಾತ್ಮನ ಸೇರುವಾಗ ಬರೀ ಮೌನ
ಹಾರಿ ಹೋಯಿತು ಪ್ರಾನ

ಈ ಜೀವನವೇ ಹೀಗೆ
ಅತ್ತು ನಗಿಸುವ ಜನನ,  ನಕ್ಕು ಅಳಿಸುವ ಮರಣದ ಹಾಗೆ
ಮುಳ್ಳಿನಲ್ಲಿ ಅರಳಿದ ಗುಲಾಬಿಯ

- ರಾಜೇಶ್

23 Jan 2017, 09:53 am

ಹನಿ..

ಹೊಸ ಭರವಸೆ ಬೆಳಕು
ಪೂರ್ವದಂಚಲಿ ಕಂಡ
ಹಕ್ಕಿಗಳು ,
ಆತ್ಮವಿಶ್ವಾಸದಿ
ಗಗನಕೆ ಚಿಮ್ಮುವ‌
ಬೆಳಗು...

- Indushekar Chinivar

23 Jan 2017, 07:00 am

ಮೌನಿ

ಚೆಲುವೆ ನಾ ಕೇಳಿದ ಪ್ರಶ್ನೆ ಗೆ
ಉತ್ತರ ಹೇಳೆ
ನಾ ಕೊಡುವೆ ಮುತ್ತಿನ ಒಲೆ
ನೀ ಮೌನಿಯಾದರೆ ನಾ ಹೇಗೆ ಇರಲೆ.........................

- ಸುಬ್ರಹ್ಮಣ್ಯ ಶಾಸ್ತ್ರಿ

22 Jan 2017, 10:08 pm

ನೀನಂದುಕೊಂಡಂತೆ ನಾನಿಲ್ಲ ಗೆಳ

ನೀನಂದುಕೊಂಡಂತೆ ನಾನಿಲ್ಲ ಗೆಳತಿ;
ನೀನಂದುಕೊಂಡಂತೆ ನಾನಲ್ಲ....

ನಿನ್ನಂತೆ ನನಗೂ ಒಂದು ಮನಸಿದೆ
ಆ ಮನಸಿನಲಿ ದ್ವೇಷವೆಂಬುದಿಲ್ಲ ಗೆಳತಿ
ಸದಾ ತಾಳ್ಮೆ ವಹಿಸುವಾಸೆ ಗೆಳತಿ,
ನನ್ನದು ಸದಾ ಪ್ರೀತಿ ಸುರಿಸುವಾಸೆ

ನನ್ನ ಮನಸಿಗೂ ಒಂದು ಕನಸಿದೆ ಗೆಳತಿ
ಆ ಕನಸಲಿ ನಾ ಸದಾ ನಗುವಾಸೆ
ಆ ಕನಸು, ಕನಸಲ್ಲ ಗೆಳತಿ. ಅದು -ಜೀವನ
ವಾಸ್ತವದಲೂ ನಾ ಅಂತೆಯೇ ಇರುವೆ ಗೆಳತಿ

ಕೋಪ ತಾಪಗಳ ಪಾಪ ನನಗೆ ಬೇಕಿಲ್ಲ
ಬದಲಾಗುವಾಸೆ ನನಗಿಲ್ಲ ಗೆಳತಿ
ಇರುವ ನಾಲ್ಕು ದಿನಗಳಲಿ ಪ್ರೀತಿ ಹಂಚುವಾಸೆ ಗೆಳತಿ
ನನ್ನದು ಕೇವಲ ನಗುವಾಸೆ, ನಗಿಸುವಾಸೆ

ನೀನಂದುಕೊಂಡಂತೆ ನಾನಿಲ್ಲ ಗೆಳತಿ
ನೀನಂದುಕೊಂಡಂತೆ ನಾನಲ್ಲ

-ಅಡಿಗ

- ಅಡಿಗ

22 Jan 2017, 08:07 pm