೧)ಪ್ರೀತಿಯ ಹಾವಳಿಗೆ ಸಿಲುಕಿ
ಹೃದಯವೆಂಬ ಕರಾವಳಿಗೆ
ನೋವೆಂಬ ಅಲೆಗಳು
ಮೇಲಿಂದ ಮೇಲೆ ಅಪ್ಪಳಿಸುತ್ತಿದೆ
ಈ ಅಲೆಗಳನ್ನು ಪ್ರಚೋದಿಸಲು,
ನಿನ್ನ ನಗುವೆಂಬ ಬಿರುಗಾಳಿ
ಬಿಡುವಿಲ್ಲದಂತೆ ಬೀಸಿ ಸಾಗರವ ಬಡಿದೆಬ್ಬಿಸುತ್ತಿದೆ.
ಈ ನನ್ನ ನಿರೀಕ್ಷೆಯು ವಿಷವಾಗಿ ನನ್ನನೇ ಕೂಲ್ಲುವ ಮುನ್ನ,
ಬಾ ಬೇಗ ಬಾ
ಈ ನನ್ನ ಪರಿಸ್ಥಿತಿಗೆ ಪರಿಹಾರ ತಿಳಿಸು ಬಾ
ನೀ ಇರದೆ ಬದುಕುವುದ ಕಲಿಸು ಬಾ
ಒಮ್ಮೆಯಾದರೂ ಕಣ್ಣೆದುರಿಗೆ ಬಂದು ನನ್ನ ಪ್ರಾಣ ಉಳಿಸು ಬಾ
ನನ್ನ ಹೃದಯಕ್ಕೆ ಕಿವಿಗೊಟ್ಟು ಪ್ರೀತಿಯ ಬಡಿತ ಆಲಿಸು ಬಾ.............
................★★★★★★★★★.......................
೨)ಕಣ್ಣಿನಿಂದ ಜಾರಿದ ಹನಿ ಮಣ್ಣು ಸೇರುವ ಮುನ್ನ
ಪ್ರೀತಿ ತುಂಬಿದ ಹೃದಯ ಚೂರಾಗುವ ಮುನ್ನ
ಎದೆಯ ಬಡಿತ ನಿಂತು ಹೋಗುವ ಮುನ್ನ
ಮನಸಿನ ಮಿಡಿತ ಮಡಿಯುವ ಮುನ್ನ
ನೆನಪುಗಳಿಂದ ಮೂಡಿದ ಬಿರುಕು ದೂಡ್ಡದಾಗುವ ಮುನ್ನ
ಒಮ್ಮೆ ಸೇರು ಬಾ ನನ್ನ............
................★★★★★★★★★.......................
೩) ಕಾಡುತಿದೆ ಒಂಟಿತನ
ನಿನ್ನ ಕಾಣದ ಈ ನಯನ
ಕಣ್ಣೀರ ಕಾರುತಿದೆ ಪ್ರತಿ ಕ್ಷಣ.
ಕೇಳುತಿಲ್ಲವೇ ನನ್ನ ಹೃದಯದ ಕಂಪನ?
ನಿನ್ನ ಕಂಡಾಗ ಆಗುವ ರೋಮಾಂಚನ
ನಿನ್ನ ಧನಿ ಕೇಳಿದಾಗ ಆಗುವ ತಲ್ಲಣ
ಮತ್ತೆ ಎಂದಿಗೆ ಸವಿಯುವೆ ನಾ.................
.............★★★★★★★★★★★.................
೪) ತಾಳಲಾರದೆ ವಿರಹದ ಬೇಗೆ
ಹೃದಯವಾಗಿದೆ ಬಾಡಿದ ಹೂವಿನ ಹಾಗೆ
ಕಾಯುತಿದೆ ಕರ್ಣವು ನಿನ್ನ ನವಿರು ಧನಿಗೆ
ನಿನ್ನ ಕಾಣದೆ ಇನ್ನೂ ಬದುಕುತ್ತಿರುವೆ ನಾ ಹೇಗೆ
ಓ ವಿರಹವೇ ಸಾಧಿಸ ಬೇಡ ನನ್ನ ಮೇಲೆ ಹಗೆ
ನಿನ್ನಿಂದ ಮುಕ್ತವಾಗಿಸೆನ್ನನು ತೋರಿಸಿ ಅವಳನ್ನು --ನನಗೆ
ಅವಳ ಇರುವನ್ನು ಅರಿಯಲು ಬಿಡು ನನ್ನೆದೆಗೆ........
.................★★★★★★★★★★★...............
೫) ಒಂಟಿತನದ ಗೂಡಾಗಿದೆ ಹೃದಯ
ನಿನಗಾಗಿ ಹವಣಿಸುತ್ತಿದೆ ಹರೆಯ
ಹೇಳು, ಹೀಗೆ ನನ್ನ ಕಾಯಿಸುವುದು ಸರಿಯ
ಒಮ್ಮೆಯಾದರೂ ಕಣ್ಣ ಮುಂದೆ ನೀ ಬಾರೆಯ
ವಾಸಿ ಮಾಡುತ ಎದೆಯ ಮೇಲಾದ ವಿರಹದ
-ಗಾಯ
ಹೇಳುತ ಹೃದಯದ ನೋವಿಗೆ ಪೂರ್ಣ ವಿದಾಯ
ಮಾಡುತ ವಿರಹದ ನೆನಪೆಲ್ಲವನು ಮಾಯ....
................★★★★★★★★★★★★............
೬) ಮಾಡುತ್ತಿರುವೆ ನಿನ್ನದೆ ಯೋಚನೆ
ಅನುಭವಿಸುತ ವಿರಹದ ಯಾತನೆ
ಮಾಡಲಾಗುತ್ತಿಲ್ಲ ವಿರಹದ ಪೋಷಣೆ
ಅದಕಾಗೆ ನಾ ಮಾಡಿರುವೆ ಒಂದು ಘೋಷಣೆ
ನೀ ಹೀಗೆಯೆ ನನ್ನ ಕಣ್ಣಿನುಪವಾಸಕೆ ನೀಡುತ್ತಿದ್ದರೆ
-ಮನ್ನಣೆ
ನೀ ನನ್ನೆದುರಾಗಿ ಬಾರಿಸದಿದ್ದರೆ ನನ್ನ ಹೃದಯದ -ವೀಣೆ
ನಾನು ಸಾಯುವೆ ಇದಕ್ಕಿದೆ ನಿನ್ನ ಮೇಲಿನ ಆಣೆ....
.............★★★★★★★★★★★★...............
- ನೀನಿರುವವರೆಗೂ ಮಾತ್ರ ನಾ ಶಶಿ ಕಿರಣ
ನೀ ಇಲ್ಲದಿದ್ದರೆ ಈ ಶಶಿ ಕಳಾ ಹೀನ
ಧರ್ಮ ದ ಬಿತ್ತನೆ
ಶಾಂತಿಯ ಕೆತ್ತನೆ
ಸಂದೇಶದ ತೆನೆ
ಸನ್ಮಾರ್ಗದ ಚಿಂತನೆ
ಆದರೆ.........
ಮೂಡನಂಬಿಕೆ-ಕಂದಚಾರ ಸುಳಿಯಲ್ಲಿ
ಬೆಂದವು
ವರ್ಗಗಳ ಮಾಡಿ ಅಮಾನವೀಯತೆಯಲ್ಲಿ
ಕಂಡವು
ಕರ್ಮ -ಮರ್ಮ ತೋಳಿನ ಬಲದಲ್ಲಿ
ರ್ಜಜರಿತರಾದವು
" ದೇವರ ಪುರಾಣ" ದಲ್ಲಿ ಕಾಣಲಿಲ್ಲ
ಭೇದ ಭಾವ
ಅನೀತಿ ಅನ್ಯಾಯದ ವಿರುದ್ಧ ಮಂಡನೆ
ಸಾರ್ವಜನಿಕರ ನಡುವೆ ನೇತುಹಾಕವರ ಹಗ್ಗದಕೂನೆ
ಕಪ್ಪು ಪರದೆಯಲ್ಲಿ ಹೆಣ್ಣಿನ ಶೋಷಣೆ
ಅಸತ್ಯದ ವಿರುದ್ದ ಹೋರಾಟ್ದವರಿಗೆ ಮರಣದಂಡನೆ
ನಿತ್ಯ ನೀಲಿ ರಕ್ತದ ಭಯೋತ್ಪಾದನೆ
"ಓದಿರಿ"ಪುಸ್ತಕದಲ್ಲಿ ಬರೆದಿಲ್ಲಾ ಘರ್ಷಣೆ.
ಮೋಜು -ಮಸ್ತಿ -ಮದ್ಯಗಳಲ್ಲಿ ದೇಹ ಕುಣಿಯಿತು
ಸ್ವೇಚ್ಛೆ- ಸ್ವಾತಂತ್ರ್ಯದಲ್ಲಿ ಅನೈತಿಕತೆ ಶುರುವಾಯಿತು
ನೆರೆ ಹೊರೆಯನ್ನು ಪ್ರೀತಿಸದೆ ದ್ವೇಷಸಿತು
"ಪವಿತ್ರ ಗಂಥ"ದಲ್ಲಿ ಪಠಿಸಿದ ಒಳ್ಳೆಯ ವಾಕ್ಯಗಳು ನುಂಗಿತು.
ಕೆಟ್ಟ ಚರಿತ್ರೆ ಮರೆಯಾಗಿ ಬೇಕಿದೆ!
ಹಿಂಸೆ ಕೊನೆಗಾಣಿಸ ಬೇಕಿದೆ!
ಸಹಬಾಳ್ವೆ ನೆಡಸಬೇಕಿದೆ!
ಧರ್ಮದ ರಾಕ್ಷರ ನೆರಳಿನ ಕೊರಳಿಗೆ
"ಮಾನವೀಯತೆ" ಹೂವಿನ ಹಾರ ಹಾಕಿರಿ
ಬನ್ನಿರಿ ನಾವೆಲ್ಲರೂ ಸೇರಿ ಹಿಡಿಯೋಣ ವಿಜ್ಞಾನದ ದೀವಿಗೆ
ಇದು ಆಧುನಿಕ ವಿಚಾರದ ಶಾಂತಿಯ ಮಂತ್ರಗೆ
ನನ್ನ ಬಾಳದೀಪ ಬೆಳಗಲು ಬಂದ ಬಂಗಾರದ ಜ್ಯೋತಿ ನಿನಾಗಿರುವೆ..
ನಿನ್ನ ಸಾಗರದಷ್ಟು ಪ್ರೀತಿಗೆ ನಾ ಮರುಳಾಗಿರುವೆ...
ನಿನ್ನ ಮಾತುಗಳು ಕಿವಿಯಲಿ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಕೇಳುತ್ತಿದೆ...
ನೀ ನಡೆದು ಬಂದರೆ ನನ್ನ ಎದೆಯ ಬಡಿತ ಜೋರಾಗುತ್ತಿದೆ....
ನನ್ನ ಉಸಿರಲ್ಲಿ ಉಸಿರಾಗಿ ಬಾಳ ಬೆಳಗಲು ಬಂದಿರುವ ಇನಿಯನು ನೀನು..
ಕೈ ಹಿಡಿದು ಮುನ್ನಡೆಸಲು ಬಂದಿರುವ ಬಾಳ ಸಂಗಾತಿ ನೀನು......
- ನಮಿತ ಗಟ್ಟಿ