Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಪುಟ್ಟ ಕಂದ ಗೋಡೆ ಮೇಲೆ ಗೀಚಿದ
ಸ್ವಲ್ಪ ಓರೆ-ಕೋರೆ. ನೆಟ್ಟಗೆ. ಮೇಲೆ-ಕೆಳಗೆ
ನನಗೆ ಅರ್ಥವಾಗದ ಗೂಢಲಿಪಿ ಬರಹ
ಸಿಂದು ನಾಗರಿಕತೆಯ ಲಿಪಿಯಂತೆ ಗೋಚರಿಸಿತು.
ನಾನು ಗೋಡೆ ಮತ್ತು ಪುಟ್ಟಕಂದನ ದಿಟ್ಟಸಿದಿ
ನನ್ನು ನೋಟಕ್ಕೆ ಭಯ ಮತ್ತು ಗೊಂದಲವಿಲ್ಲದೆ ಹಾಲು ಜೇನು ಭಾಷೆಯಲ್ಲಿ ಉತ್ತರಿಸಿತ್ತು
ಕೇಳಿ ಅನಕ್ಷರಸ್ಥರಂತೆ ಮಂಕಾಗಿ ಕುಳಿತೆ
ಅದರ ಮಾತು ತಂಗಾಳಿಯಂತೆ ಬೀಸಿದವು
ಅದರ ಗೋಡೆ ಚಿತ್ರ ಅಪ್ರತಿಮ ಕಲಾವಿದನೆ ಮೀರಿಸಿದವು
ಮತ್ತೆ ಏಕಾಗ್ರತೆಯಿಂದ ತನ್ನ ಕೆಲಸ ಪೂರ್ಣಗೊಳಿಸಲು ಬೆರಳುಗಳು ಆಡಿಸಿತಿತ್ತು
ಗುಡಗು ಮಿಂಚು ಕೆಲವು ಕ್ಷಣದಲ್ಲಿ ಬಂದಿತು
"ಗೋಡೆ ಹಾಳಾಯಿತು,ಬಣ್ಣ ಬಳಿಯುವರ ಯಾರು? ಜನಗಳ ಬಂದು ಏನು ಅನ್ನತ್ತಾರೆ?"
ಕಠೋರ ಧ್ವನಿಗೆ ಪುಟ್ಟ ಕಂದ ಗಾಬರಿ ಆಯಿತು
ಹೆದರಿಕೆಯಿಂದ ಅಳುತಾ ಮೂಲೆ ಸೇರಿತು
ನಾನು ಪ್ರಪಾತಕ್ಕೆ ಜಾರಿ ಬಿದ್ದೆ
ಮಗವಿನ ನಿಷ್ಕಲ ಮನಸಿಗೆ ರಕ್ತದ ಒದ್ದೆ
ಮುಗ್ದ ಮನಸಿಗೆ ಗಾಯದ ಬರೆ
"ವಸದೈವ ಕುಟುಂಬ" ಪದಕ್ಕೆ ಸೆರೆ
"ವಿಶ್ವ ಮಾನವ" ಪುಟ್ಟ ಕಂದನಲ್ಲಿದೆ
"ಕ್ರೂರ ಮಾನವ" ನಮ್ಮ ಮನಸ್ಸಿನಲ್ಲಿದೆ
- Shinan
25 Jan 2017, 04:15 pm
ಹತ್ತಿರವಿದ್ದರೂ ನಿಲುಕದ ದೂರ ನಿ
ಮರೆವೆಎಂದರೂ ಮರೆಯಲಾಗದ ಕನಸು ನಿ
ಬಾವಿಯಲ್ಲಿ ಕಾಣುವ ಚಂದಿರ ನಿ
ಹಿಡಿಯಲು ಹೋದರೆ ಕರಗುವೆ ನಿ
ನನ್ನ ಒಳಿತಿನ ನೆರಳು ನಿ
ನಿನ್ನೆಡೆ ನಡೆದರೆ ಸರಿಯುವೆ ನಿ
ನನ್ನ ಮನೆಯ ದೀಪವು ನಿ
ಬೆಳಗುವೆ ಏಕೆ ಬೇರೆಡೆ ನಿ
ನನ್ನ ಬಾಳಿನ ಚೇತನ ನಿ
ಎಲ್ಲೆ ಇದ್ದರು ನಗುತಿರು ನಿ
------ ಜೆ. ಕೆ
- Brijnesh JK
25 Jan 2017, 03:06 pm
ಕತ್ತಲ ಮೌನ ದ
ದೇವರ ಕೋಣೆಯಲ್ಲಿ
ಚೆಲ್ಲಿದ ಹರಳು
ಬೀರಿದ ಬೆಳಕು
ಮಿನುಗುವ ತುಣುಕು
ನೀರವ ಕೊರಳು
ಬಿತ್ತಿದ ರಾಗದ
ನೆರಳು!
**********************ಪದ್ಯಾಣ.
- padyana
25 Jan 2017, 11:26 am
ನಕ್ಷತ್ರಗಳ ಧೂಳ ಕಣ
ಒಂದೊಂದೂ ಬಹು ಭಾರ!
ಎಂತಹ ಪ್ರಚಂಡ
ಗಾಳಿ ಧಾಳಿಗೂ
ಕಂಪನವಿಲ್ಲದ
ನಿಶ್ಚಲ
ಮೌನದ ಮಿನುಗು.
*********************ಪದ್ಯಾಣ.
- padyana
25 Jan 2017, 11:22 am
ಬೇರೆ ಬೇರೆ ಆದರೂ
ಪ್ರತಿ ನಕ್ಷತ್ರಗಳೂ
ದೂರದಿಂದ ನೋಡಿದರೆ
ರೀತಿಯ ಆಕೃತಿ ಗಳಲ್ಲಿ
ಒಂದೇ! ಅವುಗಳ ಭಾಷೆ
ಮೌನ ಒಂದೇ!
#ಬಡವರ ಆಸೆಗಳ ಹಾಗೆ!
********************ಪದ್ಯಾಣ.
- padyana
25 Jan 2017, 11:12 am
ಕಬ್ಬಿಣದ ಜಲ್ಲೆಯಲ್ಲಿ ಐರಾವತ ಕುತಾಯಿತು
ಇನ್ನೇಕೆ ತಡ
ಕಂಡ ಹನಿಗನಸಿನ ಕಣ್ಣಾಚೆ ಹೊರಹೊಮ್ಮಿದೆ
ಇನ್ನೇಕೆ ತಡ ...
ತಿಳಿನೀರಿನ ನಿನ್ನೆದೆಯ ಭಾರ ಇಳಿ ಸಂಜೆಯ ದಾರಿಯಲಿ ಕಾಣುತಿಹೆ ನೀ ತಂಪಾನು ತಂಪು ..
ಇನ್ನೇಕೆ ತಡ.... ಸಾಗು ನೀ ಮುನ್ನುಗು ನೀ
ನಿನ್ನೆಲ್ಲ ಕಲ್ಪನೆಯ ಹೊರಹೊಮ್ಮುತಿದೆ
ಇನ್ನೇಕೆ ತಡ ....ಜಾರು ನೀ ....
ವಿಸ್ಮಯ ಜೊತೆಗೆ ಚಮತ್ಕಾರವ ತೋರುವ ಸಮಯ ತೆರೆದಿದೆ ...
ಇನ್ನೇಕೆ ತಡ ..ಓಡು ನೀ....ಸಾಗು ನೀ.... ಜಗದಗಲ ....ಬಿತ್ತಲಿ ನಿನ್ನ ವಿಸ್ಮಯ ....
- ಪ್ರದೀಪ.ಮ.ಪಾಡಮುಖೆ
25 Jan 2017, 11:06 am
ಕಾರ್ತಿಕದ ರಾತ್ರಿ
ದೀಪದ ಬುತ್ತಿಗಳ
ಹಚ್ಚಿಟ್ಟಿದೆ
ಪ್ರತಿ ಬೆಳಗಿನ ತನಕ
ಉರಿಯುತ್ತವೆ
ಎಣ್ಣೆ ಯಿಲ್ಲದೆ
ಕಣ್ಣ ಮುಚ್ಚದೆ!!
*******************ಪದ್ಯಾಣ.
- padyana
25 Jan 2017, 11:05 am
ಕಲ್ಪನೆಯ ಕೆನ್ನೆಗೆ ಕನಸುಗಳ ಮಾಲೆ
ಮನಸಿನ ಭಾವನೆಗೇ ನಗುವೇ ಸೆಳೆ
ಸುಂದರ ರಾತ್ರಿಯಲ್ಲಿ ಕನಸುಗಳ ಮಳೆ
ಕನಸನು ಕಾಡುವಳು ಆ ನನ್ನ ನಲ್ಲೆ
....
RAGHU VIRAT
- Raghu Virat
24 Jan 2017, 10:14 pm
ಯಾವುದಾದರು ಕನಸಿನ ಕೂಪದೊಳಗೆ
ಮುಳುಗಿಸೆನ್ನ ಮನಸನು
ದಾರಿ ಕಾಣದಾಗಲಿ , ಮರಳಿ ತನ್ನೆದೆಯ ಸೇರಲು
ಎತ್ತಣದೊಲವಿನೊಳಗೆ ಸತ್ತ ಮಸಣದ ಹೂವುಗಳು
ಎಷ್ಟೇ ಅರಳಿ ನಕ್ಕರೂ ಗ೦ಧ ಕಾರದಿರಲಿ
ಮು೦ಜಾವಿನ ನಸುಕಲಿ ಎದ್ದ ರವಿತೇಜನು
ಮತ್ತೆ೦ದು ತನ್ನ ಕಿರಣವ ಬೀರದಿರಲಿ
ಕಪ್ಪು ಮೋಡದಲ್ಲಡಗಿರುವ ಮಳೆಯ ಹನಿಗಳು
ಮತ್ತೆ೦ದು ಭೂರಮೆಯ ಮೈಯ ಸೋಕದಿರಲಿ
ಹಾಳು ಹುಣ್ಣಿಮೆಯ ಬೆಳಕಲಿ ಮನಸಿದು
ನೆನೆದು ನೆನೆದು ನಡುಗಿ ಕೊರಗಿದೆ
ಬಟ್ಟ ಬಯಲಲಿ ಕುರುಡು ಹೃದಯವು
ತನ್ನ ಕಣ್ಗೆಜ್ಜೆಯ ಕಳಚಿ ಹೊರಟಿದೆ
ಕನಸು ಮನಸಿನ ಬೇಕು ಬೇಡದಮಲಿನಲಿ
ಮೂಕ ಕೋಗಿಲೆ ಹಾಡಿದೆ
ಮೂಕ ಕೋಗಿಲೆ ಹಾಡಿ
- ಜಿ. ಪ್ರಕಾಶ್
24 Jan 2017, 09:29 pm
ದೇಹದ ರಾಜ್ಯಕೆ ಮನಸೆ ಅರಮನೆ
ಆತ್ಮವೇ ರಾಜಕುಮಾರ
ಸತ್ಯದ ತೇರಿಗೆ ನ್ಯಾಯವೇ ಕುದುರೆ
ಜ್ಞಾನವೇ ಕೈಚಾಟಿ
ಹೊರಡಲಿ ಜೀವನ ಯಾನ
ಪ್ರಕೃತಿ ದೇಗುಲ ದುಡಿಮೆಯೇ ದೇವರು
ಶ್ರಮವೇ ಆರಾಧನೆ
ವಿದ್ಯೆಯು ಶಿಖರ ಸಾಧನೆ ಗೋಪುರ
ಛಲವೇ ನಿನ್ನಯ ಚಲನೆ
ನಗುವೇ ಮಲ್ಲಿಗೆ ಸ್ನೇಹವೇ ಸೌಗ೦ಧ
ಆಸೆಗಳೇ ನೆರೆಹೊರೆಯವರು
ಹುಟ್ಟು ಹಗಲು ಸಾವು ಇರುಳು
- ಜಿ. ಪ್ರಕಾಶ್
24 Jan 2017, 09:28 pm