Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೋವು ನೋವಾಗಿರಲಿ
ಪ್ರೇಶ್ನೆ ಪ್ರೇಶ್ನೆಗಳಾಗಿರಲಿ ಬಿಡು ಗೆಳೆಯಾ
ಸುಳ್ಳು ನೆಪ ಸಮರ್ಥನೆಗಳ ನೆಪದಲಿ
ಅವುಗಳ ಉತ್ತರ ಕ್ರಿಯೆ ಆಗೋದು ಬೇಡ..
- preethi
30 Jan 2017, 01:04 pm
ಗೆಳತಿ
ನೀನೆಂದರೆ ನನಗೆ ಬಲು ಪ್ಯಾರಿ
ಹೋಗೊಣ ಬೈಕ್ ಸವಾರಿ
ಸುತ್ತೊಣ ಬಾ ಬೆಂಗಳೂರ ಕೇರಿ
ತಿನ್ನಲು ಕೊಡಿಸುವೆ ಪಾನಿ ಪುರಿ
ಸ್ಯಾರಿ ಊಟ್ಟು ನೀನಾಗು ಭಾರತ ನಾರಿ
ಎಚ್ಚರವೇ ನಾರಿ
ನಾ ನಿನ್ನ ಬಲು ಮೆಚ್ಚಿರುವೆ ವಯ್ಯಾರಿ
ನೀನಾಗು ಆದರ್ಶ ನಾರಿ
ಆಗೋಣ ಅಂದ್ರೆ ಮ್ಯಾರಿ
ನಿನ್ನಮ್ಮ ಆಗ್ತಾರೆ ಮಾರಿ
ನೀ ಎಂದಿಗೂ ನನಗೆ ಹೇಳಬೇಡ ಸಾರಿ
ನೀನಿಲ್ಲದೆ ನನಗಿಲ್ಲ ದಾರಿ
ಪ್ರೀತಿಸು ಕರುಣೆ ತೋರಿ
- ರಾಜೇಶ್
30 Jan 2017, 11:27 am
ಯಾರು ಇಲ್ಲದ ಊರಿದು
ಯಾತಕ್ಕಾಗಿ ನಿರ್ಮಿತಗೊoಡಿರುವುದು..?
ಮಾತೆoಬ ರಾಜನಿಲ್ಲದ ಅರಮನೆ ಇದು
ನಿಶಬ್ದವೆoಬ ಸೇವಕರಿಂದ ತುoಬಿರುವುದು..?
ಒಂಟಿಯಾಗಿದ್ದವರೆ ಇಲ್ಲಿ ರಾಜರು,
ರಾಣಿಗಳು ನಿಶಬ್ದವೆoಬ ಸೇವಕರಿಂದ
ಸೇವೆ ಪಡೇಯುವವರು ......!!!!!!
- ಚುಕ್ಕಿ
29 Jan 2017, 11:11 pm
ಅರೆಕ್ಷಣವೂ ಬಿಟ್ಟೂ ಬಿಡದ ಹಲಸಿನ
ಮೇಣದ ರೀತಿ ಎನ್ನ ಕವಿತೆ
ಬಾಳ ವದ್ರಾವಕ ಸಂಗತಿಗಳಲ್ಲಿ ನೀ
-ಉದ್ರೇಕವಲ್ಲ ,ಬದಲು ಭಾವ -ಚೈತನ್ಯ
ನಿನ್ನ ತೋಳ ಆಸರೆಯಲ್ಲಿ
ಅಕ್ಕರೆಯ ತುಂತುರು,ಮಮತೆಯ ತಂಬೆಲರು,ಚಂದ್ರನ ಆವರಿಸಿರುವ ತಾರೆಗಳಂತೆ, ನನ್ನ-ನಿನ್ನ ಭಾವ
ಬೆಳಕು ಮಿಡಿವ ಸಂತೆ
ಅಜ್ಜಿಯ ತಲೆ ನೇವರಿಕೆಯಂತೆ
ನಿನ್ನ ಆರೈಕೆಪರ ಮೌನ ರಾಗವು
ಸುಮಧುರ ಚೇತೋಹಾರಿ ಪದಗಳಲ್ಲಿ
ಮರುಕಳಿಸುವವೇ ?ನಡೆದ ಕಹಿ ಸ್ಮರಣೆಗಳು
ಗಗನ ಚುಕ್ಕಿ-ಭರಚುಕ್ಕಿಯಂತೆ
ನಮ್ಮ ಸಂವಾದ ವೈಖರಿಯು
ನಾನು ಹೊಂಬಿಸಿಲು,ನೀ ಹೊಂಗೆ ನೆರಳು
ಜೀವ ಮರಳಿದಂತೆ ನನಗೆ ನೀನಿತ್ತ ಭರವಸೆ
ಸಾಕಲ್ಲವೇ ನಿನ್ನ ಕಳಕಳಿ ,ನನಗೆ
ಉತ್ಸಾಹ -ಉಲ್ಲಾಸ ಒಟ್ಟುಗೂಡಿ
ಶತಕವಾದಂತೆ...
- ನಕ್ಷtra
29 Jan 2017, 10:34 pm
ಕನ್ನಿoದ ಜಾರಿ ಬೀಳುವ
ಹನಿ ಕೇಳುವುದು ನಿನ್ನನ್ನು
ನಿನಗಾಗಿ ನಾ ನೆಲ ಸೇರುತ್ತಿರುವೇನು
ನನಗಾಗಿ ನೀ ಬಾಳುವೆಯಾ ಎಂದು.
ದುಃಖದಿoದ ನನ್ನನ್ನು ವ್ಯರ್ಥ ಮಾಡಬೇಡ
ಸಂತೋಷದಿoದ ನನ್ನನ್ನು ಲೋಕಕ್ಕೆ
ಪರಿಚಯಿಸು ಎಂದು.........!!!!!!!!!!!!!!!!!!
- ಚುಕ್ಕಿ
29 Jan 2017, 10:15 pm
ಮನೋರಾಡಿಯ ಮಂಥನದಿಂ
ಭಾವಗಳು ಬಸುರಾಗಿ
ಕಲ್ಪನಾ ಲೋಕವರಳಿ
ಭಾಷೆಯ ಬಣ್ಣ ಬಳಿದು
ಸತ್ವಪದ ಲಾಲಿತ್ಯದಿ
ಅಲಂಕಾರಗೊಂಡ
ಸಿರಿಯಕ್ಷರಗಳ
ನುಡಿ ತೋರಣವದು
ಕವನ
------------- ಹೊ.ಮ.ನಾ
- raj
29 Jan 2017, 09:59 pm
ಮೌನವು ಚಂದ ಹೆಣ್ಣಿಗೆ,
ದುಡಿಮೆಯು ಚಂದ ಗಂಡಿಗೆ,
ಹೆಣ್ಣು ಗಂಡು ಒಬ್ಬರನ್ನೊಬ್ಬರು,
ಅರಿತಾಗ ಚಂದ ಬಾಳ್ವೆಯು..
ಲಕ್ಷ್ಮಿ,ಆರ್,ರಾಯದುರ್ಗ.
- laxmi
29 Jan 2017, 08:51 pm
ಎಂದು ನಿನ್ನ ಕಂಡೆನೂ
ಹಾಳ ಆಯಿತು ಮನಸು
ಯಾವ ಗಳಿಗೆಯಲ್ಲಿ ಹೃದಯ
ಪ್ರೀತಿಯ ಸವಿಯುಂಡಿತು
ದುರಾಯಿತು ಎಲ್ಲ ನನ್ನಿಂದ
ಕಾಣುತ್ತಿದೆ ಎಲ್ಲಡೆ ನಿನ್ನದೇ ಬಿಂಬ!
ನೂರು ಕನಸು, ನೂರು ಮನಸು
ನೂರು ನೂಟಗಳ ಹಿಂದೆ
ಓಡುತ್ತಿದ್ದ ನನ್ನ ಹೃದಯ
ನಿಂತ ನೀರಾಯಿತು ನಿನ್ನ ಕಂಡ ಕ್ಷಣದಿಂದ!
ನೂರು ಮಾತು, ನೂರು ದಾರಿ
ನೂರು ಹೃದಯಗಳ ಹಿಂದೆ
ಓಡುತಿದ್ದ ನನ್ನ ಹೃದಯ
ಚಲಿಸದ ಮಾಡವಾಯಿತು ನಿನ್ನ ಕಂಡ ಕ್ಷಣದಿಂದ!
ಇನ್ನು ಯಾರು ತಡೆದರೆನು
ಯಾರು ಏನು ಅಂದರೇನು
ಲಜ್ಜೆ ಬಿಟ್ಟು ಹೇಳುವೆ ಇಂದು ಗೆಳತಿ
ನಿನ್ನ ಪ್ರಿತಿಸುವೆ ನಾನು ಎಂದು!
- ಕುಮಾರ ಸಿದ್ದರಾಜ
29 Jan 2017, 07:13 pm
ಬರವಸೆಗಳ ಕಟ್ಟೆ ಹೊಡೆದುಹೊಯ್ತು
ಕಂಡ ಕನಸುಗಳು ವ್ಯರ್ಥವಾಹಿತು
ಮಾತುಗಳಿಗೆ ಲಗಾಮು ಹಾಕಿದಾಯ್ತು
ಇನ್ನೂ ಹೇಳಲು, ಕೇಳಲು ಏನಿಲ್ಲವಾಯ್ತು
- preethi
29 Jan 2017, 06:59 pm
ಕಲ್ಪನೆಯ ಲೋಕದೊಳಗೆ ಮರಿದುಂಬಿಯಾಗು
ನಿನಗಾಗಿ ಒಂದು ಮೊಗ್ಗು ಕಾದಿಹುದು ಅಲ್ಲಿ
ಹಲವು ಮೊಗ್ಗು ಅಲ್ಲ
ನಿನಗಾಗಿ ಒಂದು ಮೊಗ್ಗು ಕಾದಿಹುದು ಅಲ್ಲಿ..
- preethi
29 Jan 2017, 06:42 pm