Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿ

ಕಲ್ಲು ಒಂದು ಪ್ರಕೃತಿ
ಕೆತ್ತಿ ಕೊರೆದರೆ ಆಗುವುದು ಆಕೃತಿ
ಅರಿಶಿನ, ಕುಂಕುಮ, ಹೂಗಳ ಇತ್ತು
ಪೂಜಿಸಲು ಸಂಸ್ಕೃತಿ
ಪ್ರೀತಿಯು ಸಹ ಅದೇ ರೀತಿ...

- ಕುಮಾರ ಸಿದ್ದರಾಜ

30 Jan 2017, 07:41 pm

ಏನು ಆಗದೆ ಎಲ್ಲವೂ ಆಗಿಹೋಯ್ತು

ಉರಿಸದೆ ಹತ್ತಿಕೊಂಡ ದೀಪ
ಆರಿಸದಿದ್ದರೂ ಆರಿಹೋಯ್ತು.

ಬೀಜವಿಲ್ಲದೇ ಬೆಳೆದ ಮರ
ಹಣ್ಣಾಗುವ ಮುನ್ನವೇ ಮಣ್ಣಾಯ್ತು.

ಕಣ್ಮುಚ್ಚಿದರೂ ಕಾಣುತಿದ್ದ ನಿನ್ನ ಮುಖ
ಕಣ್ತೆರೆದು ಹುಡುಕಾಡಿದರೂ ಕಾಣದಾಯ್ತು.

ಮೋಡ ಕವಿಯದೆ ಬಿದ್ದ ಮಳೆ
ಭೂಮಿ ತಾಕುವ ಮುನ್ನವೇ ಹಾವಿಯಾಯ್ತು.

ಬೆಂಕಿಯಲ್ಲಿ ಅರಳಿದ ಹೂವು
ನೀರೆರೆದರೆ ಬಾಡಿ ಹೋಯ್ತು.

ನಿದ್ದೆ ಕೂಡದ ನಿನ್ನ ಕನಸುಗಳು
ನನ್ನನು ಚಿರನಿದ್ರೆಗೆ ಜಾರಿಸಿತು.

ಸುಗಂಧ ಚೆಲ್ಲುವ ಹೂವೇ ಇಂದು
ಹಾವಾಗಿ ವಿಷ ಕಾರಿತು.

ದುಂಬಿ ಹೀರಿದ ಮಕರಂದವೇ
ಮರಣವಾಗಿ ಅದರ ಪ್ರಾಣ ಹರಣ ಮಾಡಿತು.

ಹೃದಯ ಬಡಿತವಾಗಿದ್ದ ನಿನ್ನ ನೆನಪುಗಳೇ
ನನಗಿಂದು ಹೃದಯಾಘಾತ ನೀಡಿತು.

ಬರಡು ನೆಲದ ಮೇಲೆ ಬದುಕಿದ ಮೀನು
ತುಂಬಿದ ನದಿಯಲ್ಲಿ ಬಿಟ್ಟರೂ ಬದುಕದಾಯ್ತು.

ಹೇಳದೆ ಹೊರಬಂದ ಮಾತು
ಕೇಳದಿದ್ದರೂ ಅರ್ಥವಾಯಿತು.

ಕೇಳದೆ ನೀ ನನಗೆ ಕೂಟ್ಟ ಹೃದಯ
ಹಿಡಿದಿಟ್ಟರೂ ಇರಲಾರದೆ ಪುನಃ ನಿನ್ನ ಸೇರಿತು.

ಬೆಂಕಿಯೇ ಇಲ್ಲದೆ ಮೂಡಿದ ಕಿಡಿ
ನೀರು ತಾಗಿ ಧಗಧಗನೇ ಉರಿಯಿತು.

ನೋವೇ ನಿನ್ನ ನಗುವಿನ ರೂಪ ತೆಳೆದು
ತಿಳಿಯದೆಯೇ ನನ್ನ ಬದುಕ ಹಿಂಡಿತು..

- ಇಂತಿ ಅಳುವಿನ ಮಡುವಿನಲಿ ಶಶಿ ಕಿರಣ಼

- ಅಕವಿ

30 Jan 2017, 07:40 pm

ಕಾಣದ ಬದುಕಿನ ಸುತ್ತ ಒಂದು ಸು

ಬದುಕೆಂಬ ಈ ಖಾಲಿ ಹಾಳೆಯಲಿ ಬರೆಯುವುದಾದರೂ ಏನನ್ನು...
ಆಸರೆಯ ಬಂಧನದೊಳಗಿನ ನಾಲ್ಕು ದಿನದ ಜೀವನ..
ಸ್ವಾರ್ಥದ ಬೇಹುದಿಯೊಳಗೆ ಬೆಂದು ಹೋದವರೆಷ್ಟೋ...
ಅಸತ್ಯದ ಕೂಪದೊಳಗೆ ಸತ್ತು ಬದುಕಿದವರೆಷ್ಟೋ..
ಬಚ್ಚಿಡಲು ಅದೇನು ಬಂಗಾರದ ಕಲಶವಲ್ಲ..
ಹಣವಿಲ್ಲದವನಿಗೆ ಕಾಸು ಮಾಡುವ ಹಂಬಲ ಒಂದೆಡೆಯಾದರೆ..
ಇದ್ದವನಿಗೆ ಅದನ್ನು ಹೇಗೆ ಬಚ್ಚಿಡಬೇಕೆಂಬ ಚಿಂತೆ...
ಮರ ಅದೆಷ್ಟೇ ಎತ್ತರಕ್ಕೆ ಹೋದರೂ ಜೋರಾಗಿ ಬೀಸುವ ಗಾಳಿಗೆ ತಲೆ ಒಡ್ಡಲೇಬೇಕು..
ಅಂತೆಯೇ ಮಾನವ ಸುಖದ ಸುಪ್ಪತ್ತಿಗೆ ಏರಿದ್ದರೂ ಒಂದು ದಿನ ಸಾವಿನ ಕುಣಿಕೆಗೆ ತಲೆಬಾಗಲೇಬೇಕು...

- ನಮಿತ ಗಟ್ಟಿ

30 Jan 2017, 07:02 pm

ಮೌನದೊಳಗಿನ ಮಾತು

ಮನಸೆ ಮನಸೆ ಮೌನದೊಳಗಿನ ಮಾತು ತಿಳಿಯೆ ನಿನ್ನ ಮುಗುಳ್ನಗೆ ತದಿಂದೆ ಮನಸಲಿಂದು ಏಳು ಬಣ್ಣ, ನೂರೆಂಟು ಕಲಹ ,ನೊರೆ ಹಾಲಸ್ನೇಹ ನಿನ್ನ ನೋಟ, ಕದ್ದು ನೋಡಲು ಚೆನ್ನ ನಿನ್ನ ಮಾತು ..,ಸವಿಗಾನ ಸಿಹಿಯಾನ.

- shree

30 Jan 2017, 06:18 pm

ನೋಡಲಾರೆನು

ನೊoದಿರುವೆ ಏಕೆ ಹ್ರುದಯವೇ
ನಿನ ನೋವ ಹoಚಿ ಕೋಲ್ಲುವವರು
ಯಾರು ಇಲ್ಲವೆoದೇ .............!!!!!!

ನoಬಿದವರು ದೂರ ಆದರೆoದೇ
ಏನು ಮಾಡಲಿ ನಾನು......?
ನಿನ್ನ ನೋವ ನೋಡಲಾಗುತ್ತಿಲ್ಲ.

ದೂರವಿದ್ದರೆ ನೀನು ಹತ್ತಿರ
ಕರೆದು ಸಮಾಧಾನ ಮಾಡುತ್ತಿದ್ದೆ
ಆದರೆ ಏನು ಮಾಡೋದು
ನೀನು ನನ್ನಲ್ಲೇ ಅಡಗಿದಿಯಲ್ಲಾ ...!!!!!!

- ಚುಕ್ಕಿ

30 Jan 2017, 06:10 pm

ನನ್ನವಳು

ಮಲ್ಲಿಗೆಯಾ ಮೈಯವಳು
ಕಮಲದಾ ಮೊಗದವಳು
ನನ್ನೂರ ಚೆಲುವೆ ನನ್ನವಳು

ಚಂದಿರನ ಬಿಂಬವನು
ವದನದಲಿ ಪಡೆದವಳು
ಕುಸುಮದಾ ಕಂಪನ್ನು
ಮನದಲ್ಲಿ ಇಟ್ಟವಳು
ನನ್ನೂರ ಚೆಲುವೆ ನನ್ನವಳು

ಚೆಂಗುಲಾಬಿಯ ಚೆಲುವವಳು
ಸಂಪಿಗೆಯ ಮೂಗಿನವಳು
ಜಿಂಕೆಯಾ ಕಣ್ಣಿನ
ಜೇನ ಹನಿ ತುಟಿಯವಳು
ನನ್ನೂರ ಚೆಲುವೆ ನನ್ನವಳು

ಬಳುಕುವಾ ನಡುವಿನವಳು
ಹಂಸದಾ ನಡಿಗೆಯವಳು
ಕೋಗಿಲೆಯ ಕಂಠದ
ಚೆಲುವಿನಾ ಸಿರಿಯವಳು
ನನ್ನೂರ ಚೆಲುವೆ ನನ್ನವಳು

ಮುತ್ತಿನಾ ಹಲ್ಲಿನವಳು
ಮುಗ್ಧತೆಯ ಮನಸಿನವಳು
ನವಿಲಿನಾ ನಾಟ್ಯದ
ಒಲವಿನಾ ಗಣಿ ಇವಳು
ನನ್ನೂರ ಚೆಲುವೆ ನನ್ನವಳು.

- basavarajsirnayakpreethu

30 Jan 2017, 04:25 pm

ಚುಟುಕುಗಳು

ಪರೀಕ್ಷಾರ್ತಿ

ವಿದ್ಯಾರ್ಥಿ ಪರೀಕ್ಷೆಯಲ್ಲಿ ಬರೆದನು ಬರೆದನು
ಎಲ್ಲಾ ಹಾಳೆಗಳಲ್ಲಿ
ಮೌಲ್ಯಮಾಪಕರು ಹುಡುಕಿದರು ಹಡುಕಿದರು
ಉತ್ತರಗಳು ಎಲ್ಲಿ

ಕಾಲೇಜ್

ಪಂಚೇಂದ್ರಿಯಗಳಿಗೆ ಕಾಣಲಿಲ್ಲ ಕಾಲೇಜ್
ಮನಸ್ಸಿಗೆ ಕೊಡಲಿಲ್ಲ ಓದವ ಕ್ರೇಜ್
ಕಾಲವೇ ಮುಗಿಸಿತು ನಮ್ಮ ಟೀನೇಜ್
ಜೀವನ ತಿಳಯವಷ್ಟರಲ್ಲಿ ನಮಗೆ ಸಾಯವ ಏಜ್

ಇಂದಿನ ಬೆಡಗಿ

"ಗೆಳತಿ ನಿನ್ನ ಮಾತು ಸಂದರ
ನಿನ್ನ ರೂಪ ಅತಿ ಮಧುರ"
"ನನ್ನ ಮಾತಿಗೆ ನಿನ್ನ ನಯನ ಭಯಂಕರ
ನಿನ್ನ ಮುಷ್ಟಿ ಕೊಟ್ಟಿತು ನನ್ನ ಮುಖಕ್ಕೆ ಓಂಕಾರ"

ಸುಳ್ಳಿನ ಕಂತೆ

ಪಂಚಾಂಗ ಹೇಳಿತು
ನಾನು ಸಂಸಾರಕ್ಕೆ ಅಧಿಪತಿ
ಮದುವೆಯಾದಗ ತಿಳಿತು
ಪತ್ನಿಗೆ ನಾನು ಮಾರುತಿ

ಮುದಿತನ ಹುರುಪು

ಬಿಳಿ ಬಣ್ಣದ ಕೂದಲುಗಳ ಗಾಳಿಯಲ್ಲಿ
ತರಗಲೆಯಂತೆ ಹಾರಡತ್ತಿದ್ದವು
ಕಣ್ಣು ಕನ್ನಡಕದಲ್ಲಿ ಅಗೋಚರ ವಸ್ತುಗಳು
ಹುಡುಕತ್ತಿದ್ದವು
ಮುಖದಗೆರೆಗಳು ಸಾವಿನ ದಾರಿ ತೋರಿಸುತ್ತಿದ್ದವು
ಬಳ್ಳಿಯಂತೆ ದೇಹವು ಶಕ್ತಿ ಹೀನಾಯವಾಗಿತ್ತಿದ್ದವು ಹೃದಯ -ಮನಸ್ಸಿ ಮಾತ್ರ ಹೊಸತನಕ್ಕೆ ಮುನ್ನಗ್ಗಿತ್ತಿದ್ದವು

- Shinan

30 Jan 2017, 03:56 pm

ಪ್ರತಿ ಘಳಿಗೆ

ಕಾಡಿಸುತಿದೆ ಪ್ರತಿ ಘಳಿಗೆ ನಿನ್ನ ನೆನಪು
ಪ್ರೀತಿಯ ಮಾತೊಂದನು
ಕೇಳಲು ಈ ಹೃದಯ ಕಾದಿದೆ..
ಎಲ್ಲಿರುವೆ ನೀ ಮನಸೇ
ಅದೆಷ್ಟು ಕಾಡಿಸುವೆ ಇನ್ನು ಕಾಣದೆ…
ಸದ್ದಿಲ್ಲದೇ ಈ ಮನವ ಕದ್ದೊಯ್ದೆ 
ನಿನ್ನೊಡನೆ ಒಮ್ಮೆ ಮಾತನಾಡಲು
ಈ ಹೃದಯ ಕಾದಿದೆ…
ನಿದ್ದೆಯು ಕಾಣೆಯಾಗಿದೆ 
ಪ್ರತಿಕ್ಷಣ ನಿನ್ನ ಕಾಣಲು ಬಯಸಿದೆ..
ನಿನ್ನ ಇಂಪಾದ ಧ್ವನಿ ಕೇಳಲು
ಈ ಜೀವ ಕಾಯುತಿದೆ 
ನಿನ್ನ ತುಂಟ ನಗು
ಈ ಹೃದಯವನು ಕೆಣಕುತಿದೆ…
ನಿನ್ನ ನೆನದು ನೆನದು
ನಾನಿಲ್ಲಿ ಒದ್ದಾಡುತಿರುವೆ
ನಿನ್ನಲ್ಲಿ ಈ ಹೃದಯ ಬಂಧಿಯಾಗಿದೆ 
ನಿನ್ನ ಪ್ರೀತಿಯನ್ನ ಈ ಮನ ಬಯಸುತಿದೆ
ನಿನ್ನ ನೋಡದೆ ಚಡಪಡಿಸುತಿದೆ
ಹೇಗೆ ಇರಲಿ ನಿನ್ನಿಂದ ದೂರ
ನೀ ಇಲ್ಲದೆ ಈ ಜೀವ ಏಕಾಂಗಿಯಾಗಿದೆ...

- Pb

30 Jan 2017, 03:54 pm

ಓ ಮನಸೇ ನೀ ಯಾಕೆ ಹೀಗೆ..??

ಬರಿದಾಗಿದೆ ಈ ಮನವು ನೀನಿಲ್ಲದೆ
ಕನಸು ಮಾಯವಾಗಿದೆ ನೀನಿಲ್ಲದೆ ...
ನೀ ನಡದ ದಾರಿಯೆಲ್ಲವೂ ಖಾಲಿ ಖಾಲಿ
ತೂಗುವವರಿಲ್ಲದೆ ಮಣ್ಣು ಹಿಡಿದಿದೆ ಜೋಕಾಲಿ..
ನಿನಗಾಗಿ ನಾ ಬರೆದ ಪತ್ರಗಳೆಷ್ಟೋ
ನಿನ್ನ ದಾರಿ ಕಾದ ದಿನಗಳೆಷ್ಟೋ...
ಮರಳು ದಂಡೆಯ ಮೇಲೆ ಕೆತ್ತಿದ ಆ ನಿನ್ನ ಹೆಸರು
ವರುಷ ಉರುಳಿದರೂ ಇನ್ನೂ ಆ ನೆನಪು ಹಚ್ಚ ಹಸಿರು....
ನೀ ಮಾತಾಡದೆ ಮೌನಿಯಾದೆ ಪರವಾಗಿಲ್ಲ
ನಿತ್ಯ ನಿನ್ನ ದಾರಿ ಕಾಯುವುದು ನಿಂತಿಲ್ಲ..
ನೀ ಕೈ ಹಿಡಿದು ನಡೆದ ದಾರಿಗಳು ಕಾಣಿಸುತ್ತಿವೆ
ನಿನ್ನ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುತ್ತಿವೆ....
-ನಮಿತ ಗಟ್ಟಿ

- ನಮಿತ ಗಟ್ಟಿ

30 Jan 2017, 02:51 pm

ಕುಂಚ

ಕನಸಿಲ್ಲದ ಕಣ್ಣು ತೆರೆದಿದೆ ಇಂದು
ಬಿಂದುವಾಗಿ ಮೌನ ಮುರಿದಿದೆ
ಜಾರಿ ಹೋಗುವ ಬಣ್ಣಗಳನು
ಕುಂಚದಿ ಹಿಡಿಯುವ ಬಯಕೆ ಮೂಡಿದೆ..

- preethi

30 Jan 2017, 02:13 pm