Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಈ ಪ್ರಪಂಚದಲ್ಲಿ ಯಾವುದೇ
ಬಂದಕ್ಕಾಗಲಿ ನoಬಿಕೆ ಬಹಳ ಮುಖ್ಯ.
ಅದು ಸ್ನೆಹಕ್ಕಾಗಲೀ ,ಪ್ರೀತಿಗಾಗಲೀ
ಅಭಿಮಾನಕ್ಕಾಗಲೀ .
ಒಬ್ಬ ವ್ಯಕ್ತಿ ಇನ್ನೊಬ್ಬರನ್ನು ನoಬಬೇಕು
ಅವರ ಪರಿಸ್ತಿತಿಯನ್ನು ಅರ್ಥ ಮಾಡಿಕೊಳ್ಳಬೇಕು .
ನಿಮಗೆ ಕಾಣುವ ನಗುವಿನ ಹಿoದಿರುವ
ಕಣ್ಣೀರ ಕಳೆಗಳನ್ನು ಕಾಣಬೇಕು.
ಆಗ ತಾನೇ ನೀವು ಅವರ
ಆತ್ಮೀಯರಾಗುತ್ತಿರಿ .
ಸಂತೋಷದಲ್ಲಿ ಎಲ್ಲಾರೂ ನಿಮ್ಮ
ಬಳಿ ಇರುತ್ತಾರೆ ಆದರೆ ದುಃಖದಲ್ಲಿ
ನಿಮ್ಮನ್ನು ಇಷ್ಟ ಪಡುವವರು ಮಾತ್ರ
ಕಣ್ಣೀರು ಹೊರೆಸುತ್ತರೆ ನೆನಪಿಡಿ .....!!!
- ಚುಕ್ಕಿ
30 Jan 2017, 11:48 pm
ರಾಮ ಬಿಲ್ಲನ್ನು ಮುರಿದಾಕ್ಷಣ
ಸೀತೆ ಓಡಿ ಬಂದಳು
ಕೃಷ್ಣ ಕೊಳಲನ್ನು ಉದಿದಾಕ್ಷಣ
ರಾಧೆ ಓಡಿ ಬಂದಳು
ನಾನು ಕೇವಲ ಶಿಳ್ಳೆ ಹೊಡೆದೆ
ಅವಳು ಅಪ್ಪನ ಕರೆ ತಂದಳು...
- ಕುಮಾರ ಸಿದ್ದರಾಜ
30 Jan 2017, 10:31 pm
ನನ್ನನ್ನು , ನಾನು ಕೇಳಿಕೊಂಡೆ
ನಾನು ಯಾರೆಂದು?
ಅರಸುತ್ತಾ......... ಹೋದೆ..!!!
ಅರಳುತ್ತಾ ....ಹೋದೆ.
- ಕ್ರಿಯೆಟೀವ್ ಕೃಷ್ಣ
30 Jan 2017, 10:23 pm
""ನನ್ನೆದೆಯ ಬಾನುಲಿಯಲಿ ನನ್ನ ಅರ್ದಂಗಿ""
ಮಾತು ಮೊಳಗಿತು; ಸ್ನೇಹ ಚಿಗುರಿತು
ಹೃದಯವಿಣಿ ಹಾಡಿತು!
ಪ್ರೇಮದ್ವನಿಯಲಿ ಮನಸು ಅರಳಿತು ಸ್ನೇಹದಲೆಗಳು ಉಕ್ಕಿತು !!
ಭವಸಮುದ್ರದ ಅಲೆಗಳ
ಅಟ್ಟಹಾಸದಲಿ ಮನಸು ಬೆಸುಗೆಯ ಇಂಚರ!
ಭವ್ಯಜೀವನದ ಮಧುರ ತೊಟ್ಟಿಲಲಿ ಸುಖದುಃಖಗಳ ಸಿರಿಶಿಖರ !!
ನಮ್ಮಿಬ್ಬರ ಸ್ನೇಹ ಪ್ರೀತಿ ಬೆಳದಿಂಗಾಳಗ ಅಮರಜ್ಯೋತಿ!
ನಿನ್ನ ಪ್ರೇಮ ಹೃದಯದಲ್ಲಿ ತುಂಬಿದೆ ದಿವ್ಯ ಸ್ಪೂರ್ತಿ!!
ರಂಭೆ ಊವ್ರಶಿಯರಂತೆ ನಿನ್ನ ಚಲುವ ಬಿಂಬವನ್ನು ನೋಡಿ!
ಅಮ್ಮನಿಗೆ ಹೆಳಿದೆ ನಿನ್ನ ಹೆಸರು !
ಅಮ್ಮ ಕೆಳಿದಳು ಯಾವ ಪಟ್ಟಣದ "ನಾರಿಯವಳು" ಅಂತ?
ಸಮಯ ವಾಹಿನಿ ಮಂಡ್ಯ ಜಿಲ್ಲೆ
"" ಮಲ್ಲಿಕಾರ್ಜುನ ""
- Mallikarjun
30 Jan 2017, 10:22 pm
ನಿನ್ನ ಕಣ್ಣ ಕನ್ನಡಿಯಲ್ಲಿ
ನನ್ನ ನಾ ಕಂಡಾಗಿನಿಂದ
ಬೇರೆ ಯಾವ ಕನ್ನಡಿಯು ಇಸ್ಟವಾಗುತಿಲ್ಲ
ನಿನ್ನ ಪ್ರೀತಿಯ ಪ್ರಪಾತಕ್ಕೆ ಬಿದ್ದಾಗಿನಿಂದ
ನಿನ್ನ ಯಾರೇ ನೋಡಿದರು,
ನನಗೆ ಸಹಿಸಲಾಗುತ್ತಿಲ್ಲ...
***************
ಕುಮಾರ ಸಿದ್ದರಾಜ್
- ಕುಮಾರ ಸಿದ್ದರಾಜ
30 Jan 2017, 10:00 pm
ಅವಳೆಂದರೆ ತಪಸ್ಸು ...
ಸಪ್ತ ಸಾಗರಗಳ ಸುಲಭವಾಗಿ ದಾಟಬಹುದು...ಆದರೆ ಅವಳ ಮನಸ್ಸು ಮುಟ್ಟಲು ಇನ್ನೂ ಆಗಿಲ್ಲ....
ಅವಳು ಬರುವ ದಾರಿಯಲ್ಲಿ ಕಾಯುತ್ತಿದ್ದೆ...ಆದರೆ ಎಂದೂ ಅವಳು ಹಿಂತುರಿಗಿ ನೋಡಿದವಳಲ್ಲ..
ಅವಳು ಎದರು ಬಂದರೆ ಸಾಕು ಮನಸ್ಸಲ್ಲೆನೋ ತಳಮಳ...
ಮುಖ ನೋಡದೆ ಮನಸ್ಸು ಕದ್ದವಳು...ಮಾತಡದೆ ಹೃದಯ ದೋಚಿದವಳು..
ಅವಳು ನಕ್ಕರೆ ಸಾಕು ಚಂದ್ರನು ನಾಚಿ ನೀರಾಗುವನು..
ಪದಪುಂಜಗಳೇ ಸಾಲುತ್ತಿಲ್ಲ ನನ್ನ ದೇವತೆಯ ಬಣ್ಣಿಸಲು ...
ನಿಜಕ್ಕೂ ಅವಳೊಂದು ಅದ್ಭುತ ಶಕ್ತಿ...
- ನಮಿತ ಗಟ್ಟಿ
30 Jan 2017, 09:50 pm
ಎಲ್ಲಿ ಹೋದೆ ನಲ್ಲೇ
ಚಲ್ಲುತ ಪ್ರೀತಿಯನ್ನ ಎಲ್ಲಡೆ
ನಿನ್ನ ಪ್ರೀತಿಯ ತಂಗಾಳಿ
ಶಿಳ್ಳೆ ಹಾಕುತಿದೆ ಎದೆಯೊಳಗೆ...
ಹರಿಯುತಿದೆ ಪ್ರೀತಿ ನದಿಯಂತೆ
ಅಡೆ ತಡೆಗಳನ್ನ ದೂಡುತ ಬದಿಗೆ
ಪ್ರೀತಿಯ ಕಂಪು ಹರಡಿದೆ
ಗಡಿಗಳನ್ನ ಸರಿಸಿ ಬದಿಗೆ...
ಸವಿಜೇನಿನ ಬಿಂದಿಗೆಯ ತಂದು
ಸುರಿದಂತಾಗಿದೆ ಬಾಳಿಗೆ
ಕಣ್ಣಿಗೆ ಕಾಣುತ್ತಿಲ್ಲ ಅವಳು
ಆದರೆ ಮಿಟುತಿರುವಳು ಎದೆಯ ವೀಣೆ...
ಕುಮಾರ ಸಿದ್ದರಾಜ್
(Kumar SR )
ಬೆಂಗಳೂರು
- ಕುಮಾರ ಸಿದ್ದರಾಜ
30 Jan 2017, 09:42 pm
ದೂರವಿದ್ದರೆ ಪ್ರೀತಿಯ ಹುಡುಗಿ
ಹೆಚ್ಚುವುದಲ್ಲವೆ ಪ್ರೀತಿ..
ದಿನವೂ ಎದುರಿಗೆ ಇದ್ದರೇ
ಆಗುವುದು ತೊಂದರೆ
ಮನಸು ಬಯಸುವುದು
ಏನೇನೋ ಹಾಗೆ ಒಳಗೂಳಗೆ...
- ಕುಮಾರ ಸಿದ್ದರಾಜ
30 Jan 2017, 09:10 pm
ನಿನ್ನ ನೆನಪಲಿ
ನಿನ್ನ ಪ್ರೀತಿಯಲ್ಲಿ
ಮುಳುಗಿರುವೆ ನಾನು
ನನ್ನ ಉಳಿಸುವರು ಯಾರು?
ನಿನ್ನ ಒಲವಿನ ಅಂಗಳದಲ್ಲಿ
ಸಮಾಧಿ ಆಗಿರುವೆ
ನನ್ನ ಹೊರ ತೆಗೆಯುವರು ಯಾರು?
ನಿನ್ನ ಪ್ರೀತಿಯ ತಂಗಾಳಿ
ಹಾರಿಸಿದೆ ನನ್ನ ಗಾಳಿ ಪಟದಂತೆ
ಆ ಬಾನಿನ ಅಂಚಿನತ್ತ
ನನ್ನ ಮರಳಿ ತರುವವರು ಯಾರು?
ಒಲವಿನ ಬೆಂಕಿ ಸುಡುತಿದೆ
ನನ್ನ ಎದೆಯನು
ನನ್ನ ಅಪ್ಪಿ, ಬೆಂಕಿಯ ನಂದಿಸುವರು ಯಾರು?
- ಕುಮಾರ ಸಿದ್ದರಾಜ
30 Jan 2017, 09:00 pm
ಯಾರಿಗೂ ಕಾಣದ ಹಾಗೆ
ಏನಾದರು ಕೊಡು ನನಗೆ
ಕೆನ್ನೆಗೆ ಎಟ ಕೊಟ್ಟರು ಸರಿಯೇ
ಸಿಹಿ ಮುತ್ತು ಕೊಟ್ಟರು ಸರಿಯೇ
ದಿನಕ್ಕೊಂದು ಬಾರಿ ನಿನ್ನ ಸ್ಪರ್ಶ
ಬೇಕು ನನಗೆ...
- ಕುಮಾರ ಸಿದ್ದರಾಜ
30 Jan 2017, 07:49 pm