Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

.........ಒಂದೊಮ್ಮೆ...

ಒಂದೊಮ್ಮೆ ವಿಹಾರಕ್ಕೆ ಒಬ್ಬಂಟಿಯಾಗಿ
ಏಕಾಂಗಿಯಾಗಿ ಮುಕ್ತಛಂದದಲಿ,
ಅನಂತರ ಅನಿಸಿತು ಬಹುಶ..
ಅವೆಲ್ಲ ಗಗನಕುಸುಮಗಳು,
ಹಗಲುಗನಸು,ನಿಜವಲ್ಲದ ನನಸುಗಳು....

- ನಕ್ಷtra

03 Feb 2017, 07:59 pm

ಶ್ರೇಷ್ಠ ತಾಯಿ

ಶ್ರೇಷ್ಠಳಲ್ಲವೆ ತಾಯಿ ಭೂ ತಾಯಿ..?
ಇವಳೊಡಲ ಅಗೆದು ಬಗೆದರೂ..
ನರನಾಡಿ ಹೀರಿದರೂ..
ನಾನು ಇದ್ದರುˌ ಸತ್ತರು ಭಾರವಲ್ಲ
ಇವಳಿಗೆ.! ಹೌದು ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ...!

ಶ್ರೇಷ್ಠಳಲ್ಲವೆ ತಾಯಿ ಗೋತಾಯಿ..?
ಮುಕ್ಕೋಟಿ ದೇವರಿಗೂ ಹಂಚಿಕೊಂಡ
ಮಹಾ ತಾಯಿ..!
ಕಡಿವ ಕಟುಕನಿಗೂ ಕರುಳ ಕರುವಿನಂತೆ
ಕಂಡ ಕರುಣಾಮಯಿ..!
ಹೌದುˌ ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ
ಅni

- ಪಿ ಅನಿ...

03 Feb 2017, 06:34 pm

ಜಾರುತಿದೆ ನನ್ನ ಹೃದಯ

ಜಾರುತಿದೆ ನನ್ನ ಹೃದಯ
ನೀಲಿ ಸೀರೆಯಲಿ ನಿನ್ನ ಈ
ಅಂದವನು ಕಂಡಾಗ
ನಾ ಕಾಣೋ ಲೋಕವೆಲ್ಲವೂ ಮರೆತು
ಸದ್ದು ಮಾಡುತಿದ್ದ ನನ್ನ ಭಾವನೆಗಳೆಲ್ಲ,
ಒಮ್ಮೆಲೇ ಮೌನವಾಯಿತು...!!!
ನೀನುಟ್ಟ ನೀಲಿ ಸೀರೆಯಿಂದ
ಬೆಳದಿಂಗಳೂ ಮರೆಯಾಗಿದೆ
ನಿನ್ನ ಅಂದವ ಹೇಗೆ ಹೊಗಳಲಿ
ಪದಗಳೇ ಸಾಲದೆ ..........
ನಿನ್ನಯ ರೂಪವ ಸ್ಮರಿಸುತ
ಹೃದಯ ಬಯಸುತಿದೆ,ನಿನ್ನ ಸೇರಲು.......!!!
ನನ್ನ ತುಟಿಯು ದುಂಬಿಯಾಗಿ
ಮತ್ತೆ ಮತ್ತೆ ನಿನ್ನ ತುಟಿಯ
ಜೇನಹನಿಯನು ಹೀರ ಬಯಸುತಿದೆ.
ಅನಿಸುತಿದೆ ಮನಕೆ ಏನೇನೋ
ವಿರಹ ವೇದನೆ ಸಹಿಸದೆ
ಮೌನದಿ ಹಂಬಲಿಸುತಿದೆ
ಈ ಮನ ಮಾತು ಕೇಳದಾಗಿದೆ...
ಮತ್ತೊಮ್ಮೆ ನಿನ್ನಲ್ಲಿ
ಬೆರೆತು ಹೋಗಲು ಮನಸಾಗಿದೆ...!!!

- Pb

03 Feb 2017, 02:17 pm

ನಿನ್ನ.ನೆನ

ನಿನ್ನ ನೆನಪು..
ಹೃದಯಕ್ಕೆ ತಂಪು
ಕೊನೆಯ ಕ್ಷಣದಲ್ಲಿ
ಪೂರ್ಣ ಮುಗ್ದನಾಗಿ
ನಿನ್ನ ನೆನಪಲ್ಲೇ
ಉಸಿರು ನಿಲ್ಲಬೇಕಿದೆ
ರವಿ

- ರವಿ

03 Feb 2017, 12:09 pm

ಭಾಸ್ಕರ

ಬಂದ ಬಂದ ಬಂದ ನೋಡಿ ಬಾನಲಿ ಭಾಸ್ಕರ
ತಂದ ತಂದ ತಂದ ನೋಡಿ ಬಾಳಲಿ ಸಂಸ್ಕಾರ
ಕೇಳಿ ಕೇಳಿ ಕೇಳಿ ನಿಮಗೆ ನನ್ನ ನಮಸ್ಕಾರ
ಏಳಿ ಎದ್ದೇಳಿ ನೀವು ನಿಮ್ಮ ಗುರಿ ಮುಟ್ಟಕೋಸ್ಕರ.

- ಗೌಡ

03 Feb 2017, 04:59 am

ಹಗಲು-ಇರುಳು

ನೀವು ನಗಲು
ಮೂಡಿದಂತೆ ಹಗಲು
ನೀವು ಅಳಲು
ಕವಿದಂತೆ ಇರುಳು.

ನೀವು ನಗಲು
ಹುಣ್ಣಿಮೆ ಬೆಳದಿಂಗಳು
ನೀವು ಅಳಲು
ಅಮಾವಾಸ್ಯೆ ಕತ್ತಲು.

ಸದಾ ನಗುತ್ತಾ ನಗಿಸುತ್ತಾ ಬಾಳಿರಿ.....

- ಗೌಡ

03 Feb 2017, 04:56 am

ನಮನ

ಮೊದಲ ದಿನದ ಮೊದಲ
ಕವನ, ಎಲ್ಲಾ ಸ್ನೇಹಿತರಿಗೆ
ನನ್ನ ನಮನ

ಮನ ಮುಟ್ಟುವ ಕವನಗಳ
ಹೆಣಿಯೋ ಸಣ್ಣ ಪ್ರಯತ್ನ -
-ನಡೆಸಲು ಬಂದಿಹೆ ನಿಮ್ಮೂಂದಿಗೆ
ಸಹಕರಿಸಿ ನನಗ........


vanishree

- Vanishree c p

03 Feb 2017, 02:21 am

ನೆನಪುಗಳ ಸುಳಿಯಲ್ಲಿ

ಅವರ ಇವರ ಮಾತುಗಳ ಮದ್ಯದಲ್ಲಿ
ನಿನ್ನ ನೆನಪುಗಳು ಅತಿಯಾಗಿ ಕಾಡುತ್ತಿವೆ
ಕಾಡುವ ಆ ನೆನಪುಗಳಲಿ ಎಂಥಹ ಸುಖವಿದೆ
ಹಿತ ನೀಡುವ ನೆನಪುಗಳು ನನ್ನಲ್ಲಿ, ಆದರೆ ನಿನ್ನೆಲ್ಲಿ
ನೆನಪುಗಳ ಅಂಗಳದಲ್ಲಿ ನೀನು ಆದರೆ ನಾನೆಲ್ಲಿ
ನೆನಪಲ್ಲಿ ನೀ ನೆನಪಾಗಿ ಎಲ್ಲಿ ಹೋದೆ
ನೆನಪುಗಳ ಮದ್ಯದಲ್ಲಿ ನಾ ಒಂಟಿಯಾದೆ
ಬೆನ್ನು ಬಿಡದ ನೆನಪುಗಳನು ದೂರ ಮಾಡಲಾಗದು
ಅದರಲ್ಲಿ ಅಡಗಿವೆ ನಮ್ಮದೆ ನೂರು ಕನಸುಗಳು
ಮನಸಿಗೆ ಹತ್ತಿರವಾಗಿ, ಕಣ್ಣಿಗೆ ಕಾಣದ ನೆನಪುಗಳು
ನೀ ಕೇವಲ ನೆನಪಾಗಿಯೆ ಉಳಿಯದಿರು
ನೆನಪುಗಳು ಮಧುರ, ನೆನಪುಗಳ ನೆನಪಲಿ ಕಳೆಯಲಾಗದು ಈ ಜೀವನ
ಓ ನೆನಪೇ ನೀ ಜೊತೆಯಾಗುವುದು ಯಾವಾಗ?

- ಕುಮಾರ ಸಿದ್ದರಾಜ

02 Feb 2017, 10:47 pm

ಕಾಪಾಡು ಶಿವನೇ.....

ಸಾಕು ..ಸಾಕು...ಸಾಕು....
ಇನ್ನೆಷ್ಟು ದಿನ ಬೇಕು??
ಕಾಯಿಸೋಕೆ ಅಂತನೇ ನೀ ಹುಟ್ಟಿದ್ಯಾ?
ಇಂದಾದರೂ ದರುಶನ ನೀಡಯ್ಯಾ..
ಎನ್ನ ಬಾಳಿಗೆ ನೀನೇ ಬೆಳಕಯ್ಯಾ..
ಓ ಶಿವನೇ....
ಭಾಗ್ಯದಾತನೇ...
ಕಣ್ಣಿದ್ದು ಕುರಡಾನಾಗಿರುವ ಎನಗೆ
ದಾರಿ ತೋರಿ ಉದ್ಧರಿಸು ಕರುಣಾಕರನೇ..
ಅರಿವೇ ಇಲ್ಲದ ಎನ್ನ ಬಾಳಿಗೆ ಮಮತೆಯ ಸಾರವ ತೋರೆಯಾ...
ಅಂಧಕಾರದಲ್ಲಿ ಕೂಪದಲಿ ಹುದುಗಿರುವ ಎನ್ನ ಆತ್ಮವ ಶುದ್ಧಿಕರಿಸೆಯಾ...
ಗತಿ ನೀನೆ ಎನಗಿಂದು ಶಿವನೇ ಕಾಪಾಡು....

- ನಮಿತ ಗಟ್ಟಿ

02 Feb 2017, 10:30 pm

ಮಾಸದ .......ನೋವು.......ಕೊ

ಮಾಸಿದ ನೆನಪುಗಳು ಕಣ್ಣಂಚಿನಿಂದ ಜಾರುತ್ತಲಿದೆ...
ಮನವು ನೋವ ಬಚ್ಚಿಟ್ಟು ನಗುತ್ತಲಿದೆ...
ಸಾವಿರ ಕನಸುಗಳು ಜೊತೆಯಾಗಿ ಪೋಣಿಸಿ
ಇಂದು ಅದೇ ಕನಸಿನ ಸುತ್ತ ಭಾವನೆಗಳ ತೊಳಲಾಟ ...
ವರುಷ ಉರುಳಿದರೂ ನೆಮ್ಮದಿ ಮರೀಚಿಕೆಯಾಗಿದೆ..
continue....

- ನಮಿತ ಗಟ್ಟಿ

02 Feb 2017, 10:10 pm