Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾವಿರ ಆಸೆಗಳು ಮನದಲಿ
ನೂರು ಕನಸುಗಳು ಕಣ್ಣ ಅಂಚಲಿ
ಮನದ ಆಸೆಯು ಕಣ್ಣ ಸ್ವಪ್ನವು
ಮೊಗದ ಮಾತುಗಳು
ಬಿಳಿ ಕಾಗದಲಿ ಮೂಡಿಬಂತು ಸುಂದರ ಸಾಲುಗಳು
ಕಟ್ಟಿ ಹೆಣೆದಾಗ ಹಾಡಗಿಬಂತು ನಿನ್ನ ಮಧುರ ಸ್ವರಗಳಲಿ
- Veeresh Sabanna
07 Feb 2017, 08:38 pm
ಜೊತೆಯಾಗಿ ನಡೆದ ದಾರಿಗಳು ಕೂಗಿ ಕರೆಯುತ್ತಿರಲು..
ತಣ್ಣನೆಯ ಗಾಳಿ ಬೀಸುತ್ತಿರಲು....
ಕೋಗಿಲೆ ಮನ ತುಂಬಿ ಹಾಡುತ್ತಿರಲು...
ನವಿಲು ಗರಿ ಬಿಚ್ಚಿ ನರ್ತಿಸುತ್ತಿರಲು...
ಕಳೆದ ನಿನ್ನೆಯ ನೆನಪುಗಳ ನೆನಪಿಸುತ್ತಿರಲು...
ಮತ್ತೆ ಬಾರದ ಲೋಕದಲಿ ನಾ ಸಾಗುತ್ತಿರಲು...
- ನಮಿತ ಗಟ್ಟಿ
07 Feb 2017, 08:33 pm
ಪ್ರೀತಿ ಎಂಬುದು
ಒಂದು ಮಹಾಸಾಗರ
ಈಜಲು ಬಲು ಬೇಸರ
ಈಜಿ ದಢ ಸೇರಿದರೆ
ಸುಖದ ಸಾಗರ
- ಕುಮಾರ ಸಿದ್ದರಾಜ
07 Feb 2017, 08:13 pm
ಒಂದು ಬೊಗಸೆ ನೀರಿಗಾಗಿ
ಸಮುದ್ರವನ್ನು ಕಲಕಬೇಡ
ಒಂದು ದಿನದ ಆಸೆಗಾಗಿ
ಒಂದು ಹೆಣ್ಣಿನ ಜೀವನ
ಹಾಳು ಮಾಡಬೇಡ.
- ಕುಮಾರ ಸಿದ್ದರಾಜ
07 Feb 2017, 08:10 pm
ಅಚ್ಚು ಮೆಚ್ಚಿರ ಬೇಕು
ಸ್ವಚ್ಚ ಮನಸಿರ ಬೇಕು
ನೂರು ವೆಚ್ಚವಾದರು ಸರಿಯೇ
ನಿನ್ನಂಥ ಗೆಳಯ/ಗೆಳತಿ ಇರಬೇಕು
- ಕುಮಾರ ಸಿದ್ದರಾಜ
07 Feb 2017, 08:04 pm
‘ಮನಸು ಮಗುವಿನಂತೆ ನಿರ್ಮಲ
ಇದರ ನಿರ್ಧಾರ ಸದಾ,ಅಚಲ
ಇದು ಹೂವಿನಂತೆ,ಮ್ರುದು ಮತು ಕೋಮಲ
ಸಹಿಸದ ಕಠಿಣ, ಪದಗಳು ಅಳಲ
ಅರ್ಥ ಮಾಡಿಕೊಂಡರೆ,ಜೀವನ ಸಬಲ_‘
- KiranKiru
07 Feb 2017, 06:44 pm
ಚಂದಿರೆಯೇ ಓ ಸುಂದರಿಯೇ
ನನ್ನ ಹೃದಯವ ಕಳೆದುಕೊಂಡೇ
ಅದು ಕಳೆದ ಜಾಗ ಅದಾವುದೆಂದು
ನಿನ್ನ ದ್ಯಾನದಿ ಮರೆತು ಬಿಟ್ಟೆ.
ನಿನ್ನ ಕಾಲ್ ಗೆಜ್ಜೆಯಲ್ ಅದು ಕಳೆದಿತೆಂದು
ನಿನ್ನ ಕಾಲಡಿ ಹುಡುಕಿ ಬಂದೆ
ನಿನ್ನ ಹೆಜ್ಜೆಯ ಧೂಳಿನ ಕಣಗಳಲು
ನಿನ್ನೊಲುಮೆಯ ಕಂಡು ನಿಂದೆ.
ಇದು ಮಾಯವೋ, ಇಲ್ಲ ಮರ್ಮವೋ
ಹೇಳೆಲೆ ನನ್ನುಸಿರೇ..
ನೀ ದೊರೆವೆಯ ಇಲ್ಲ ಮರೆವೆಯ
ತಿಳಿಸುತ ಬಿಡಿಸು ಸೆರೆ.. ||
ಚಂದಿರನ ಒಂದಾಗಮನ
ಆ ಕಡಲನು ಕುಣಿಸುವುದು
ಚಂದಿರೆಯೇ ನಿನ್ನೊಂದು ನುಡಿ
ಈ ಮನಸನ್ನು ತಣಿಸುವುದು
ನೀನೊಲಿದು ಜೊತೆ ಸೇರಿದರೆ
ಆ ಬದುಕದು ಸುಂದರವೂ
ಮರೆಯಾಗಿ ನೀನೋಡಿದರೆ
ಈ ಬದುಕೇ ಮರಳ್ಗಾಡು..
ನೀ ಪ್ರೇಮಿಯೋ ಬರಿ ಗೆಳತಿಯೋ
ಹೇಳೆಲೆ ಗಿರಿ ನವಿಲೇ
ಇದು ಸಾಧ್ಯವೋ, ಅಸಾಧ್ಯವೊ
ತಿಳಿಸೆಲೆ ನನ್ನೊಲವೇ..
- ಶ್ರೀಗೋ.
07 Feb 2017, 03:55 pm
ನಿನಗೆ ನಾನು
ನಿನವಳು ನಾನು
ಆದರೆ
ನನ್ನ ಆಸೆ ಆಕಾಷೆಗಳ-
-ಕೊಂದು ಜೀವಿಸಲಾರೆ
ನಿನ್ನ ಮುಷ್ಠಿಯಲೇ ಬಾಳಲಾರೆ
vanishree
- Vanishree c p
07 Feb 2017, 01:57 am
ಜೀವನದ ಸಂತೆಯಲಿ
ಭಾವನೆಗಳ ಅಂಗಡಿಯಲ್ಲಿ
ನೀ ಕದ್ದೆ ನನ್ನ ಹೃದಯವ.........
- ಸುಬ್ರಹ್ಮಣ್ಯ ಶಾಸ್ತ್ರಿ
07 Feb 2017, 12:21 am
ಅಪರಿಚಿತರಾಗಿ ಬಂದು
ಪರಿಚಿತರಾಗಿ ಹೋದೆ ನೀ
ಕಡೆ ತನಕ ಚಿರಪರಿಚಿತರಾಗಿ ಬಾಳುವ ಬಾರೆ ಓ ಗೆಳತಿ.....
- ಸುಬ್ರಹ್ಮಣ್ಯ ಶಾಸ್ತ್ರಿ
07 Feb 2017, 12:12 am