ಗಗನ ಕುಸುಮ ನೀನು
ನನ್ನ ಮೆಚ್ಚಿದೆ ಏಕೆ ನೀನು
ಹುಣ್ಣಿಮೆ ರಾತ್ರಿಯ
ಹೊಂಬೆಳುಕು ನೀನು
ನನ್ನಲ್ಲಿ ಏನು ಕಂಡೆ ನೀನು
ಹೂವಿನಂತ ಮೃದುವಾದ ಮನದಲಿ
ಇರಬಹುದು ನೂರಾರು ಆಸೆಗಳು
ನಾನೇನು ಕೊಡಬಲ್ಲೆ ನಿನಗೆ
ಪ್ರೇಮದ ರಥದಲ್ಲಿ ಕುಳಿತಿರುವ ನಿನಗೆ
ಕತ್ತಲೆ ತುಂಬಿದ ನನ್ನ ಜೀವನದಲ್ಲಿ
ನಿನಗೇಕೆ ಆಸಕ್ತಿ ನನ್ನಲ್ಲಿ
ನಿನ್ನಲ್ಲಿದೆ ಅಂದ ಚಂದ
ನಿನ್ನಲ್ಲಿ ನಾ ಕಂಡೆ
ಬೇಲೂರಿನ ಪ್ರತಿಬಿಂಬ
ನಿನ್ನ ಕಂಗಳ ಒಲವಿನ ನೋಟ
ಮನದಲಿ ಕಟ್ಟಿತು ಒಲವಿನ ಮಂದಿರ
ನಿನಗೆ ಅರ್ಪಿತ ನನ್ನ
ಒಲವಿನ ಹೂ ಮಂದಿರ
ನಿನಗೆ ಮೀಸಲು ಗೆಳತಿ
ಈ ನನ್ನ ಜೀವ !
ಹೀಗೊಂದು ಪರಿಚಯ,
ಬಹುದೂರದಲ್ಲಿರುವಳು ನನ್ನ ಸಾರಿಕೆ,
ಚಿತ್ರಿಸಲು ಕಣ್ಣಿಗೆ ಕಾಣದವಳು,
ಕೈಗೆ ಎಟಕಲಾರದವಳು,
ಕೂಗಲು ಹೆಸರಿಲ್ಲದವಳು,
ಬರುವಳು ದಿನ ನಿದಿರೆಯಲಿ ಚಂದಿರನಂತೆ,
ಕಣ್ಣ ತೆರೆಯಲು
ಮಾಯವಾಗುವಳು ಕ್ಷಣಮಾತ್ರದಲ್ಲಿ,
ಮನದಲಿ ಬಿಡಿಸಿಹಳು ರಂಗೋವಲಿ,
ಆ ನನ್ನ ಬೆಳದಿಂಗಳ ಬಾಲೆ,
ಹೀಗಿದೆ ಅಭಿಸಾರಿಕೆಯ ಪರಿಚಯ.