Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರೀತಿಯ ಅನುಭವ

ಅಳುವಿನ ಆಚೆಗೆ ಅವಿತಿದೆ ಅನುಭವ
ಅರಿವಿನ ಮಟ್ಟವ ಮುಟ್ಟದ ಅನುಭವ
ಆಘಾತಕ್ಕೆ ಮೆಟ್ಟಿಲ ಕಟ್ಟುವ ಅನುಭವ
ಅದುವೇ ಪ್ರೀತಿಯ ಅನುಭವ
ಇದರಿಂದ ಹೊರಬರುವುದು ಅಸಂಭವ

ಹೃದಯದ ನೋವಿಗೆ ಉಂಟೆ ಕಣ್ಣೀರಿನ ಅಭಾವ
ಕಣ್ಣೀರ ಹಿಡಿದಿಡಲು ಬಿಡುವುದೇ ವಿರಹದ ಕಲರವ
ಈ ಕಣ್ಣೀರಿಗೆ ಕಾರಣ ಭಾವನೆಗಳ ಪರಾಭವ
ಅದುವೇ ಪ್ರೀತಿಯ ಅನುಭವ
ಇದಕೇ ನೋವೇ ಫಲಾನುಭವ.

ಕನಸೇ ಕೆರಳಿಸುತಿರಲು ನಿದ್ರಿಸಲು ಸಾಧ್ಯವ
ನೋವೇ ಮನವಾಳುತಿರಲು ನಗಲು ಸಾಧ್ಯವ
ಹೃದಯವೇ ಎದೆ ಹಿಂಡುತಿರಲು ಬದುಕಲು ಸಾಧ್ಯವ
ಅದುವೇ ಪ್ರೀತಿಯ ಅನುಭವ
ಖುಷಿ ಕ್ಷಣಿಕ ಜೀವನ ಕೃತಕ ನಿತ್ಯ ನರಕ ಇದೇ ಪ್ರೀತಿ ಪ್ರಭಾವ.

ಮರೆಯಲಾಗದ ಮರೆಯಾಗದ ಮತ್ತೆ ಸಿಗದ ಮಧುರ ಪರ್ವ
ಅಡಗಿರುವಂತೆ ಕಾಣುವುದು ಜೀವನದ ಸರ್ವಸ್ವ
ಆದರೆ ಏನು ಇಲ್ಲ ಇದರಲಿ ನೋವಿನ ವಿನಃ
ಅದುವೇ ಪ್ರೀತಿಯ ಅನುಭವ
ಇದರಿಂದ ಸಾವೂ ಸಂಭವ.

ಸನಿಹದಿ ವಿರಸದ ವಿರಹದಿ ಸರಸದ ಭಾವ
ನಗುವಲಿ ಅಳುವಿನ ಅಳುವಲಿ ಸಾವಿನ ಭಾವ
ಉಸಿರು ನಿಂತಂತಹ ಜೀವವು ಸತ್ತಂತಹ ಭಾವ
ಅದುವೇ ಪ್ರೀತಿಯ ಅನುಭವ
ಇದರಿಂದ ನರಳುವುದು ಒಳಜೀವ.

ಸೂರ್ಯನಿಲ್ಲದ ಬೆಳಗು ಜಾವ
ಮುಂಜಾನೆಯಲಿ ಅರಳದ ಹೂವ
ಉಸಿರಾಡದೆ ಬದುಕುವ ಜೀವ
ಅದುವೇ ಪ್ರೀತಿಯ ಅನುಭವ
ಇದೊಂದು ಸಾರವಿಲ್ಲದ ತತ್ವ

- ಅಕವಿ

08 Feb 2017, 09:07 pm

ಕವನ

ಕನಸು ನನಸಾಗಲು ಮಾಡುವೆ ಹರಸಾಹಸ
ನೆನಪು ಬಂದಾಗಲೆಲ್ಲಾ ನೋಡುವೆ ಪಾರಿಜಾತ
ನಿನ್ನು ನನ್ನನು ನೋಡಿದಾಗ ಬರುವದು ಮಂದಹಾಸ

- Ajay

08 Feb 2017, 08:57 pm

ಗಗನ ಕುಸುಮ ನೀನು

ಗಗನ ಕುಸುಮ ನೀನು
ನನ್ನ ಮೆಚ್ಚಿದೆ ಏಕೆ ನೀನು
ಹುಣ್ಣಿಮೆ ರಾತ್ರಿಯ
ಹೊಂಬೆಳುಕು ನೀನು
ನನ್ನಲ್ಲಿ ಏನು ಕಂಡೆ ನೀನು
ಹೂವಿನಂತ ಮೃದುವಾದ ಮನದಲಿ
ಇರಬಹುದು ನೂರಾರು ಆಸೆಗಳು
ನಾನೇನು ಕೊಡಬಲ್ಲೆ ನಿನಗೆ
ಪ್ರೇಮದ ರಥದಲ್ಲಿ ಕುಳಿತಿರುವ ನಿನಗೆ
ಕತ್ತಲೆ ತುಂಬಿದ ನನ್ನ ಜೀವನದಲ್ಲಿ
ನಿನಗೇಕೆ ಆಸಕ್ತಿ ನನ್ನಲ್ಲಿ
ನಿನ್ನಲ್ಲಿದೆ ಅಂದ ಚಂದ
ನಿನ್ನಲ್ಲಿ ನಾ ಕಂಡೆ
ಬೇಲೂರಿನ ಪ್ರತಿಬಿಂಬ
ನಿನ್ನ ಕಂಗಳ ಒಲವಿನ ನೋಟ
ಮನದಲಿ ಕಟ್ಟಿತು ಒಲವಿನ ಮಂದಿರ
ನಿನಗೆ ಅರ್ಪಿತ ನನ್ನ
ಒಲವಿನ ಹೂ ಮಂದಿರ
ನಿನಗೆ ಮೀಸಲು ಗೆಳತಿ
ಈ ನನ್ನ ಜೀವ !

- ಕುಮಾರ ಸಿದ್ದರಾಜ

08 Feb 2017, 08:30 pm

ವಾರಸುದಾರ

ನಿನ್ನ ಹೃದಯ ಖಾಲಿ ಇದೆ
ಎಂದು ನಾ ಬಲ್ಲೆ ಓ ನಲ್ಲೆ
ಆದರೆ ನಾನಲ್ಲ ಬಾಡಿಗೆದಾರ
ನೀ ನನ್ನ ಮೆಚ್ಚಿ ಒಪ್ಪುವದಾದರೆ
ನಾನಾಗುವೆ ಒಲವೆ
ನಿನ್ನ ವಿಶಾಲ ಹೃದಯಕ್ಕೆ
ವಾರಸುದಾರ !

- ಕುಮಾರ ಸಿದ್ದರಾಜ

08 Feb 2017, 08:03 pm

ಭಾವನೆಗಳು

ಭಾವನೆಗಳು
ಅರಳುತ್ತವೆ
ಮಂಜಿಗೆ
ಮಲ್ಲಿಗೆ ಅರಳುವ ಹಾಗೆ !

ಸ್ಪಂದಿಸುವ
ಹೃದಯ
ದೊರೆಯದಿದ್ದಾಗ
ತಾನೇ ಮುದುಡಿಕೊಳ್ಳುತ್ತವೆ
ಸಂಜೆ ಮಲ್ಲಿಗೆ
ಬಾಡವ ಹಾಗೆ !

- ಕುಮಾರ ಸಿದ್ದರಾಜ

08 Feb 2017, 07:46 pm

ಅಪ್ಪುಗೆ....

ನೀ
ಒಪ್ಪದೆ ನಾ ಅಪ್ಪಿದ್ದು
ನನ್ನದೇ ತಪ್ಪು....
ನಾ
ಅಪ್ಪಿದಾಗಲೂ ನೀ
ತಪ್ಪಿಸಿಕೊಳ್ಳದಿದ್ದದ್ದು
ನಿನ್ನದೇ ತಪ್ಪು.......

- ವಿಧಾತ್ರಿ ಹರಿತಸ್ಯ

08 Feb 2017, 06:57 pm

ಮಿಂಚು ನೀ........

ಬಂಧಿ ನೀ ಈ ಕಣ್ಣ ಅಂಗಳದಲಿ...
ಮಿಂಚು ನೀ ಹೃದಯದ ನರನಾಡಿಯಲಿ...
ಕೊಂಚ ಸುಳಿ ನೀ ಎದುರಲಿ
ತಾಳಲಾರದ ಖುಷಿ ಈ... ಮನದಲಿ...
P ಅನಿ...
8/2/17

- ಪಿ ಅನಿ...

08 Feb 2017, 06:34 pm

ಗೆಳೆಯ..

ಕಾಣದ ಊರಿಂದ ಕವಿಯಾಗಿ ಬಂದೆಯಾ..
ಕಲ್ಪನೆಯ ನನ್ನ ಪದಗಳಿಗೆ ಚಿತ್ತಾರವಾದೆಯ..

ಸಾಗರದಲಿ ಹೊಳೆಯುವ ಮುತ್ತಂತೆ ನೀ..
ಆ ಹೊಳಪಲಿ ಹೊಳೆಯುವ ಶಿಲೆಯಂತೆ ನಾ..
ಆಗಸದಲಿ ಮಿನುಗುವ ತಾರೆಯಂತೆ ನೀ..
ಆ ತಾರೆಯ ಮಿನುಗಲ್ಲಿ ಅರಳಿದ ಕುಸುಮವಂತೆ ನಾ..

ನಿನ್ನ ಪ್ರೀತಿಯ ಧಾರೆಯಲಿ ಮುಳುಗಿರುವ ನನಗೆ..
ನೀನೆ ಪ್ರಪಂಚ ಗೆಳೆಯಾ..
ಸೋಲುತಿದೆ ಮನಸ್ಸು ನಿನ್ನೆಡೆಗೆ...
ಸೋತರು ಸುಮಧುರ ಹಿತವಿದೆ ಗೆಳೆಯಾ..

ಏನೆಂದು ಹೇಳಲಿ ಎಷ್ಟೆಂದು ಬಣ್ಣಿಸಲಿ..
ಈ ಪ್ರೇಮ ಕಾವ್ಯದ ಮಧುರತೆಯಾ..
ಬರಿದಾದ ಬದುಕಿಗೆ ಹಸಿರಾದೆ ಗೆಳೆಯ..
ಪ್ರೀತಿಯ ತುತ್ತುಣಿಸಿ ಮಗುವಂತೆ ಆಲಿಸುವೆ..

ಗೆಳೆಯ ಹೇಳು ನೀ ಜೊತೆಗಿರುವೆಯಾ....

- B.Shree

08 Feb 2017, 11:25 am

ಗಮನ

ನನ್ನಯ ಗಮನವ
ಸೆಳೆದಿಹ ಬಾಲೆಯೇ
ಬೆಳದಿಂಗಳ ಬೆಳಕಲಿ
ನಿನ್ನಯ ಲೀಲೆಯೇ!!

ಕಣ್ಣಿನ ರೆಪ್ಪೆಯ
ಮೇಲೆಯೇ ನರ್ತಿಸಿ
ಸದ್ದನು ಮಾಡದೇ
ಓಡುವ ಮಾಯೆಯೇ!!

ಕಣ್ಣನು ಮುಚ್ಚಲು
ಕಾಣುವ ಮುಖವದು
ಮಂಜಿನ ಹನಿಗಳ
ಪರದೆಯ ಹಿಂದಿದೆ!!

ಪರದೆಯ ಸರಿಸಿ ನಾ
ನೋಡಲು ಹೋದರೆ
ಓಡುವ ಭ್ರಮೆಯದು
ನನ್ನನು ಕಾಡಿದೆ!!

- ಪಿ.ಜಿ.ಜ್ಯೋತಿ

08 Feb 2017, 11:01 am

ಆ ಒಂದು ಕ್ಷಣ..

ಮುಂಜಾವಿನ ಆ ಕ್ಷಣದಲ್ಲಿ
ರಂಗೆರಿದ ಗಗನವ ಕಂಡೆ
ನಾಚಿ ರವಿ ಕೆಂಪೆರಲು
ಮುದ್ದು ಮೊಗವ ನಾಡಿನ
ಮಕ್ಕಳ ಕಂಡೆ..

08-02-2017
ಪ್ರೀತಿಯ ಪ್ರೀತಿ...

- preethi

08 Feb 2017, 06:35 am