Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾಯಿಗೆ ಕಾಗದ

ತಾಯಿಗೆ ಕಾಗದ ಬರೆದ
ದುರುಳ ಕಂದನು ನೀನು!!
ಮರಣದಲಿ ಇದೆಂತ
ದೂರಾಯ್ತು ನಿನ್ನ ಸ್ವಂತ!!

ಸೃಷ್ಟಿಕರ್ತೆಯ ಮಡಿಲ
ತೊರೆದು ಹೋಗಿಹ ನೀನು!!
ಹಿಂತಿರುಗಿ ಬರಲಾರೆ
ಎಂದು ನುಡಿದೆ!!

ಅವಸರದಿ ನೀ ನುಡಿದು
ಬರೆದಿರುವ ಕಾಗದವದು!!
ನೊಂದ ಮಾತೆಯ ಕಣ್ಣೀರಿನ
ಅಭಿಷೇಕ ನಿನ್ನ ಬರಹಕೆ!!

ನೀ ಬರೆದ ಕಾಗದವ
ಎದೆಗೊತ್ತಿ ಮಲಗಿಹಳು!!
ಮರಳಿ ಬಾರದ ಮಾತೆ
ತನ್ನ ಮರಣದಲ್ಲಿ!!

- ಪಿ.ಜಿ.ಜ್ಯೋತಿ

10 Feb 2017, 10:07 am

ನಾ ನಿನ್ನ ಭಿಕ್ಷುಕ

ನನ್ನ ಕನಸಿನ ತಾವರೆ ಹೂವೆ...
ಕನಸಲ್ಲಿ ಕಂಡು ಕುಣಿಯುವ ಚೆಲ್ಲುವೆ...
ಕ್ಷಣ ಕ್ಷಣಕೂ ಕಾಡುವ ಕನಕೆ...
ಹೋಲಿದು ಬಿಡ್ಡು ನನ್ನ ಹೊಲುವೆ...
ಅಂಬಲಿಸುತ್ತಿದೆ ನನ್ನ ಹೃದಯ ಅಂಬಿಕೆ...
ನಾ ನಿನ್ನ ಭಿಕ್ಷೆಗೆ ಬರುವೆ ಬಳ್ಳಿಗೆ...

‌ ಪ್ರದೀಪ್.ಡಿ ಸೊಬಗು

- ಪ್ರದೀಪ್.ಡಿ

10 Feb 2017, 10:01 am

ಸಪ್ತಪದಿ

ಬೆರಳ ಹಿಡಿದು ನಡೆವ
ಈ ಬಂದಕೆ ಹೆಸರ ಇಡುವ!!
ಹೆಜ್ಜೆ ಮೇಲೆ ಹೆಜ್ಜೆ
ಇಟ್ಟು ಒಮ್ಮೇ ನಾವು ನಡೆವ!!

ಸುತ್ತಿ ಅಗ್ನಿ ಕುಂಡ
ಹೊಸ ಬಾಗ್ಯವ ನಾವು ಪಡೆವ!!
ಏಳೇಳು ಜನ್ಮದಲ್ಲಿ
ನಾವು ಒಂದೇ ಎಂಬ ವರವ!!

ಏಳು ಹೆಜ್ಜೆ ಇಟ್ಟು
ಜೊತೆಗೊಮ್ಮೆ ನಾವು ನಡೆವ!!
ಬಿಡಿಸಲು ಆಗದಂತಹ
ನಂಟಿಗೆ ಬೆಸೆದುಕೊಳ್ಳುವ!!

ಏಳು ಹೆಜ್ಜೆಯಲ್ಲಿ
ಹೊಸ ಬದುಕಿನ ಪುಟವ ಬರೆವ!!
ಜೊತೆಗೆ ಹೆಜ್ಜೆ ಇಟ್ಟು
ಸಪ್ತಪದಿಯ ನಾವು ತುಳಿವ!!

- ಪಿ.ಜಿ.ಜ್ಯೋತಿ

10 Feb 2017, 09:34 am

ನನ್ನೊಲವೆ ಎಲ್ಲಿರುವೆ...?

ಓ ಒಲವೆ ..ಎಲ್ಲಿರುವೆ
ನೀ ಬರದೆ .. ನೊಂದಿರುವೆ

ಈ ಮನಸ್ಸಿನಾಗೆ ನೀನು ಕವಿತೆಗಾರನು..
ಪ್ರೀತಿಯ ಕಾವ್ಯ ಬರೆದೋದೆ ..
ಈ ಹೃದಯದಲ್ಲಿ ನೀನು ಚಂದಮಾಮನು..
ಬೆಳದಿಂಗಳ ಚೆಲ್ಲಿ ಎಲ್ಲೋದೆ..
ಜೋಡಿ ಹಕ್ಕಿ ನಾವು ಎಲ್ಲಿ ಹೋದೆ ನೀನು..
ಇನ್ನೊಮ್ಮೆ ಜೊತೆಯಾಗುವ ಬಾರಾ..

ಮೌನವಾಗಿಯೇ ನನ್ನ ಮನಸ್ಸು ಸೇರಿದೆ..
ಪ್ರೀತಿ ಮಾತಲ್ಲೆ ನನ್ನ ಹೃದಯ ಕದ್ದಿದೆ ..
ಮೌನಾನೆ ನಾನಾದೆ ಪ್ರೀತಿನೆ ನೀನಾದೆ..
ಆ ಪ್ರೀತಿ ನೀಡದೆ ನೀನೀಗ ಎಲ್ಲೋದೆ ..
ಒಲವಿಂದ ಒಲವನು ಸೇರಲು ಬಾ..
ನನ್ನೊಲವೆ ದೂರಾಗದೆ ಬೇಗನೆ ಬಾ..

- B.Shree

10 Feb 2017, 06:53 am

ಏಕೆ? ಹೀಗೇಕೆ?

ಕೊಳಲೂದಿದಾಗ ಬಾರದ ಸದ್ದು
ಕೊಳಲು ಮುರಿದಾಗ ಬಂದೀತೇಕೆ

ಬಿರು ಬಿಸಿಲಲಿ ಬಾರದ ಮಳೆ
ಕೆರೆ ಕಟ್ಟೆ ಒಡೆದಾಗ ಬಂದೀತೇಕೆ

ಹೂ ಅರಳಿದಾಗ ಬಾರದ ಸುಗಂಧ
ಹೂ ಬಾಡಿದಾಗ ಬಂದೀತೇಕೆ

ಅಲೆಗೆ ಅಳಿಸಿ ಹೋಗದ ನಿನ್ನೆಸರು
ಸಮುದ್ರ ಒಣಗಿದಾಗ ಅಳಿಸೀತೇಕೆ

ಕೋಗಿಲೆ ಹಾಡಿದಾಗ ಬಾರದ ಸ್ವರ
ಕೋಗಿಲೆ ಅತ್ತಾಗ ಬಂದೀತೇಕೆ

ಕಡಲ ಸುಳಿಗೆ ಸಿಲುಕದ ಮೀನು
ಅಲೆಗೆ ಸಿಲುಕಿ ಸತ್ತೀತೇಕೆ

ಹಸಿರಲ್ಲಿ ಅರಳದ ಕಮಲ
ಕೆಸರಲ್ಲಿ ಅರಳುವುದೇಕೆ

ಕಣ್ತುಂಬಿದಾಗ ಬಾರದ ಕಣ್ಣೀರು
ಎದೆ ತುಂಬಿದಾಗ ಬಂದೀತೇಕೆ

ಬೆಳಕಲಿ ಹುಡುಕಿದರೂ ಕಾಣದ ನಕ್ಷತ್ರ
ಕತ್ತಲು ಕವಿಯುತ್ತಿದ್ದಂತೆ ಮಿನುಗಿ ಮರೆಯಾಯಿತೇಕೆ

ಅಮಾವಾಸ್ಯೆಯಲಿ ಬಾರದ ಚಂದ್ರ
ಬೆಳದಿಂಗಳಲೂ ಕಾಣದಾದ ಹೀಗೇಕೆ

- ಅಕವಿ

09 Feb 2017, 09:49 pm

ದೋಸ್ತಿ...

ಈ ಪ್ರೀತಿ ಪ್ರೇಮ ಶುರು ಆಗುದು
ಕಾಲೇಜನ್ಯಾಗ... // ಆದ್ರಾ...
ದೋಸ್ತಿ ಶುರು ಆಗುದು
ಮನಿಮುಂದಿನ ಅಂಗಳದಾಗ... /
ಪಿ ಅನಿ
9-2-17

- ಪಿ ಅನಿ...

09 Feb 2017, 08:56 pm

ಕನ್ನಡ ಶಾಯರಿ

ಅವಳೆಂದಳು ಪ್ರೀತಿ ಒಂದು ನೋವಂತೆ
ನಾನೆಂದೆ ಆ ನೋವು ನನಗಿಷ್ಟ ಅಂತ
ಅವಳೆಂದಳು ಆ ನೋವಿನ ಜೊತೆಗೆ ನೀ ಬದುಕಲಾರೆ
ಅದಕ್ಕೆ ನಾನೆಂದೆ ನೀ ಕೊಡುವ ಆ ನೋವಿಗಾಗಿ
ನಾ ಸಾಯಲು ಸಿದ್ದ ಅಂತ !

- ಕುಮಾರ ಸಿದ್ದರಾಜ

09 Feb 2017, 08:44 pm

ಕನ್ನಡ ಶಾಯರಿ

ಅವಳೆಂದಳು ಪ್ರೀತಿ ಒಂದು ನೋವಂತೆ
ನಾನೆಂದೆ ಆ ನೋವು ನನಗಿಷ್ಟ ಅಂತ
ಅವಳೆಂದಳು ಆ ನೋವಿನ ಜೊತೆಗೆ ನೀ ಬದುಕಲಾರೆ
ಅದಕ್ಕೆ ನಾನೆಂದೆ ನೀ ಕೊಡುವ ಆ ನೋವಿಗಾಗಿ
ನಾ ಸಾಯಲು ಸಿದ್ದ ಅಂತ !

- ಕುಮಾರ ಸಿದ್ದರಾಜ

09 Feb 2017, 08:43 pm

ಕನ್ನಡ ಶಾಯರಿ

ಕೋಪದಿ ನೋಡಿದರೆ ಪ್ರೀತಿ ಇಲ್ಲ ಎಂದರ್ಥವಲ್ಲ
ನಗುತ ಮಾತನಾಡಿದರೆ ಪ್ರೀತಿ ಇದೆ ಎಂದರ್ಥವಲ್ಲ
ಜೀವನದ ಪಯಣದಲ್ಲಿ ನೋಟಗಳು ಬೆರಿತಾನೆ ಇರ್ತವೆ
ಪ್ರತಿ ನೋಟದ ಅರ್ಥ ಪ್ರೀತಿ ಎಂದರ್ಥವಲ್ಲ. !

- ಕುಮಾರ ಸಿದ್ದರಾಜ

09 Feb 2017, 08:36 pm

ಪ್ರೀತಿಯಲಿ ತೆಲುತಿದೆ ಮನಸು

ಪ್ರೀತಿಯಲಿ ತೆಲುತಿದೆ ಮನಸು
ಯಾಕೋ ಕಾಣೆನು
ಹೃದಯದಿ ನಿನೀನೆ
ಮನದಿ ನಿನೀನೆ
ಎಲ್ಲೆಲ್ಲೋ ನಿನೀನೆ
ಇನ್ನೇನು ಹೇಳಲಿ ನಾನು /

ನೂರಾರು ಜನರ ನಡುವೆ
ನನ್ನ ಕಾಡುತಿರುವಳು ನೀನೆ
ಚಲುವೆಯರಲ್ಲಿ ನೀನು ಚಲುವೆ
ನನ್ನನರಸಿ ಬಂದೆಯಾ ನೀನೇ
ನೋಡುವ ನೋಟದಲ್ಲಿ
ಆಡುವ ಮಾತಿನಲ್ಲಿ
ನಿನೆನೆ ತುಂಬಿರುವೆ
ನಾನೇನು ಮಾಡಲಿ ಹೇಳು ನೀ. /

ನಗುತಿರಲಿ ನೀನು ಒಲವೇ
ಕಂಡೆ ಪ್ರೇಮಧಾರೆಯಂತೆ ನನಗೆ
ಹೂಮನದಂತೆ ನೀನು ನಲಿವೆ
ನನ್ನ ಮನವಾಯ್ತು ದುಂಬಿಯಂತೆ
ಊಸಿರಿನ ಬಿಸಿಯಲಿ
ಎದೆಯ ಮಿಡಿತದಲಿ
ಒಲವೆ ನಿನಿರುವೆ
ನಾನೆಲ್ಲಿಗೆ ಹೋಗಲಿ ಹೇಳು ನೀ /

- ಕುಮಾರ ಸಿದ್ದರಾಜ

09 Feb 2017, 08:26 pm