Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಷ್ಟಗಳ ಸರಮಾಲೆ ಕೊರಳಿಗೆ
ಆವಾಗ ಬರೋದು ದೋಸ್ತಿ ಹೆಗಲಿಗೆ
.....
ದೋಸ್ತಿ .....ಇದಾಗ ಬೇಡ ಆಸ್ತಿ ....
ಆಸ್ತಿ ಇದಾಗ ಬಿಡಬೇಡ ದೊಸ್ತಿ......
- Ajay
12 Feb 2017, 12:32 am
*ಬೇಜಾರು ಬೇಜಾರು ಬೇಜಾರು*
ಕುಂತರೇ ಬೇಜಾರು
ನಿಂತರೇ ಬೇಜಾರು
ಅತೀ ಮಾತಾಡಿದ್ರೇ ಬೇಜಾರು
ಸ್ವಲ್ಪನು ಮಾತಾಡ್ಸದ್ದಿದ್ರೇ ಬೇಜಾರು
ಮಾತಾಡ್ಸಕ್ಕೆ ಹೊದ್ರೆ ಬೇಜಾರು
ಮಾತಾಡ್ಸದೆ ಹೊದ್ರೆ ಬೇಜಾರು
ಬೇಜಾರು ಬೇಜಾರು ಬೇಜಾರು,
ಯಾವುದಕ್ಕೆ ಬೇಜಾರು
ಯಾರಿಗೋಸ್ಕರ ಬೇಜಾರು
ಯಾವ್ಯಾವುದಕ್ಕೆ ಬೇಜಾರು
ಬೇಜಾರೆಂದರೆ ಬೇಜಾರು,
ಬೇಜಾರು ಮಾಡಿಕೊಂಡು
ಮಾಡ್ತಾರೆ ಬೇಜಾರು,
ಬೇಜಾರು ಮಾಡಿಕೊಳ್ಳೊತರ
ಮಾಡಿ ಬಿಡ್ತಾರೆ - ಬೇಜಾರು,
ಬೇಜಾರು ಮಾಡೋ ತರ
ನಡಕೊಳ್ಳುತ್ತಾರೆ - ಬೇಜಾರು,
ಬೇಜಾರ ಮಾಡ್ಕೊಂಡಾದ
ಮೇಲೆ ಇನ್ಯಾವ ಬೇಜಾರು,
ಬೇಜಾರು ಮಾಡದಂತೆ
ನಡೆಯಬೇಕು ಮನುಜರು,
ಬೇಜಾರು ಆಗದಂತೆ
ನುಡಿಯಬೇಕು ಮನುಷ್ಯರು,
ಬೇಜಾರಗದಂತೆ ಮುನ್ನಡೆಯ
ಬೇಕು ನಾವು ಹಗಲು ಇರುಳು,
ಬೇಜಾರೆ ಬರದಂತೆ
ಬೆಸೆಯಬೇಕು ಮನವು,
ಬೇಜಾರೆಂಬ ಬೇಜಾರ
ಬೇಜಾರಿಲ್ಲದ ಕಾಯಕದಿ
ಬಡಿದೊಡಿಸಬೇಕು ಬೇಜಾರು,
ಬೇಜಾರಾಗದಂತೆ ಬದುಕ
ಬೇಕು ಬದುಕು,
ಬೇಜಾರೆಂದ ಪದವ ಉರುಳ
ಹಾಕಿ ಕೊಲ್ಲಬೇಕು ಯಾವಗಲೂ,
ಬೇಜಾರಿನ ಮುಕೋಟವ
ಕಳಚಬೇಕಿದೆ ಸಂಯಮದೊಳು,
ಕಷ್ಟ ಬಂದರೇ ಬೇಜಾರು
ತುಂಬ ಸುಖ ಬಂದರು ಬೇಜಾರು,
ಅತ್ತರೆ ಹೊಗುವುದೆ ಬೇಜಾರು
ಸುಮ್ಮನೆ ನೋಡಿ ನಕ್ಕರೆ ಬೇಜಾರು,
ಬೇಜಾರಿಗೆ ಕಾರಣ ಹುಡುಕುತ್ತ
ಹೋದರೆ ಸಿಗುವುದೆಲ್ಲವು ಬೇಜಾರು,
ಅವನ ನೋಡಿದರೆ ಇವನಿಗೆ ಬೇಜಾರು
ಇವನ ಬೆಳವಣಿಗೆ ನೋಡಿ ಅವನಿಗೆ
ಬೇಜಾರೋ ಬೇಜಾರು,
ಪೋನ್ ಕಾಲ್ ಎತ್ತದ್ದಿದ್ರೆ ಬೇಜಾರು
ಪೋನ್ ಎತ್ತಿದ್ದ್ ಮೇಲೆ ಮಾಡ್ತಾರೆ
ಮಾತಿನ ಇಟಿಯಿಂದ ಬೇಜಾರು,
ಲೈಕ್ ಮಾಡದ್ದಿದ್ರೆ ಬೇಜಾರು
ಕಮೆಂಟ್ ಮಾಡಿದ್ರೆ ಬೇಜಾರು,
ಈ ಕವನ ಓದಿದರೆ ಆಗುವುದೇ
ಬೇಜಾರು, ಆಗದೆ ಬೇಜಾರು
ಬೇಜಾರಿನ ಒಳ ಅರ್ಥವ
ಅರಿತು ಮುನ್ನುಗಬೇಕಿದೆ
ಬೇಜಾರಿಲ್ಲದ ಕ್ಷಣ ಕ್ಷಣ ಸವಿಯಲು.....
~ ಕನಸುಬೇಜಾರು ಬೇಜಾರು ಬೇಜಾರು*
ಕುಂತರೇ ಬೇಜಾರು
ನಿಂತರೇ ಬೇಜಾರು
ಅತೀ ಮಾತಾಡಿದ್ರೇ ಬೇಜಾರು
ಸ್ವಲ್ಪನು ಮಾತಾಡ್ಸದ್ದಿದ್ರೇ ಬೇಜಾರು
ಮಾತಾಡ್ಸಕ್ಕೆ ಹೊದ್ರೆ ಬೇಜಾರು
ಮಾತಾಡ್ಸದೆ ಹೊದ್ರೆ ಬೇಜಾರು
ಬೇಜಾರು ಬೇಜಾರು ಬೇಜಾರು,
ಯಾವುದಕ್ಕೆ ಬೇಜಾರು
ಯಾರಿಗೋಸ್ಕರ ಬೇಜಾರು
ಯಾವ್ಯಾವುದಕ್ಕೆ ಬೇಜಾರು
ಬೇಜಾರೆಂದರೆ ಬೇಜಾರು,
ಬೇಜಾರು ಮಾಡಿಕೊಂಡು
ಮಾಡ್ತಾರೆ ಬೇಜಾರು,
ಬೇಜಾರು ಮಾಡಿಕೊಳ್ಳೊತರ
ಮಾಡಿ ಬಿಡ್ತಾರೆ - ಬೇಜಾರು,
ಬೇಜಾರು ಮಾಡೋ ತರ
ನಡಕೊಳ್ಳುತ್ತಾರೆ - ಬೇಜಾರು,
ಬೇಜಾರ ಮಾಡ್ಕೊಂಡಾದ
ಮೇಲೆ ಇನ್ಯಾವ ಬೇಜಾರು,
ಬೇಜಾರು ಮಾಡದಂತೆ
ನಡೆಯಬೇಕು ಮನುಜರು,
ಬೇಜಾರು ಆಗದಂತೆ
ನುಡಿಯಬೇಕು ಮನುಷ್ಯರು,
ಬೇಜಾರಗದಂತೆ ಮುನ್ನಡೆಯ
ಬೇಕು ನಾವು ಹಗಲು ಇರುಳು,
ಬೇಜಾರೆ ಬರದಂತೆ
ಬೆಸೆಯಬೇಕು ಮನವು,
ಬೇಜಾರೆಂಬ ಬೇಜಾರ
ಬೇಜಾರಿಲ್ಲದ ಕಾಯಕದಿ
ಬಡಿದೊಡಿಸಬೇಕು ಬೇಜಾರು,
ಬೇಜಾರಾಗದಂತೆ ಬದುಕ
ಬೇಕು ಬದುಕು,
ಬೇಜಾರೆಂದ ಪದವ ಉರುಳ
ಹಾಕಿ ಕೊಲ್ಲಬೇಕು ಯಾವಗಲೂ,
ಬೇಜಾರಿನ ಮುಕೋಟವ
ಕಳಚಬೇಕಿದೆ ಸಂಯಮದೊಳು,
ಕಷ್ಟ ಬಂದರೇ ಬೇಜಾರು
ತುಂಬ ಸುಖ ಬಂದರು ಬೇಜಾರು,
ಅತ್ತರೆ ಹೊಗುವುದೆ ಬೇಜಾರು
ಸುಮ್ಮನೆ ನೋಡಿ ನಕ್ಕರೆ ಬೇಜಾರು,
ಬೇಜಾರಿಗೆ ಕಾರಣ ಹುಡುಕುತ್ತ
ಹೋದರೆ ಸಿಗುವುದೆಲ್ಲವು ಬೇಜಾರು,
ಅವನ ನೋಡಿದರೆ ಇವನಿಗೆ ಬೇಜಾರು
ಇವನ ಬೆಳವಣಿಗೆ ನೋಡಿ ಅವನಿಗೆ
ಬೇಜಾರೋ ಬೇಜಾರು,
ಪೋನ್ ಕಾಲ್ ಎತ್ತದ್ದಿದ್ರೆ ಬೇಜಾರು
ಪೋನ್ ಎತ್ತಿದ್ದ್ ಮೇಲೆ ಮಾಡ್ತಾರೆ
ಮಾತಿನ ಇಟಿಯಿಂದ ಬೇಜಾರು,
ಲೈಕ್ ಮಾಡದ್ದಿದ್ರೆ ಬೇಜಾರು
ಕಮೆಂಟ್ ಮಾಡಿದ್ರೆ ಬೇಜಾರು,
ಈ ಕವನ ಓದಿದರೆ ಆಗುವುದೇ
ಬೇಜಾರು, ಆಗದೆ ಬೇಜಾರು
ಬೇಜಾರಿನ ಒಳ ಅರ್ಥವ
ಅರಿತು ಮುನ್ನುಗಬೇಕಿದೆ
ಬೇಜಾರಿಲ್ಲದ ಕ್ಷಣ ಕ್ಷಣ ಸವಿಯಲು.....
~ ಕನಸು
- Prathap Simha
11 Feb 2017, 05:08 pm
ದಾರಿ ಹುಡುಕ ಹೊರಟ್ಟಿದವನಿಗೆ ಸಿಕ್ಕಿದ್ದು...
ಅದೇನೋ ಹೊಸದಲ್ಲ ಆದರೂ...
ಮೋಡ ಮುಸುಕಿತ್ತು,ಸುತ್ತೆಲ್ಲಾ ಮಂಜು ಬೇರೆ..
ಆಯಾಸವಾದರೂ ಸಾಗುವುದು ನಿಂತಿಲ್ಲ..
ಮುಂದಕ್ಕೆ ಹೋದಷ್ಟು ಮತ್ತಷ್ಟು ದೂರ ಅನ್ನುವಷ್ಟಿತ್ತು ದಾರಿ..
ಛಲವಿತ್ತು ಜೊತೆಗೊಂದಿಷ್ಟು ಕನಸು..
ಹೊಟ್ಟೆ ಹಸಿವನಾದರೂ ತಡೆದೇನು ಆದರೆ
ಪ್ರೀತಿಯಲ್ಲಿ ಸೋತ ಹೃದಯದ ಹಸಿವನ್ನು ನಾ ಹೇಗೆ ಇಂಗಿಸಲಿ....
ಅವಳಿಗಾಗಿ ಹಂಬಲಿಸುತ್ತಿದ್ದ ಮನವನ್ನ ಹೇಗೆ ನೋಯಿಸಲಿ...
ಹೋದವಳು ಅವಳು ಕಾಯುತ್ತಿರುವವನು ನಾನು...
- ನಮಿತ ಗಟ್ಟಿ
11 Feb 2017, 11:54 am
ಬೆವರಿನ ಹನಿ ಕಣ್ಣೀರಿನ ಹನಿ ಉಪ್ಪುಪ್ಪಾಗಿಯೆ ಇರಬಹುದು..
ಆದರೆ ಅವು ಮಾತ್ರ ಮುಂದೊಂದು ದಿನ ಜೀವನ ವನ್ನು ಸುಖವಾಗಿಸಿ ಇಡಬಲ್ಲದು .....
- Shiva.S.M...!
11 Feb 2017, 10:10 am
ಬಾ ಬೆಳಗೆ ಬೇಗ ಬೆಳಗು...
ನಿನಗಾಗಿ ಕಾದಿರುವ ಇಬ್ಬನಿಯ ಚುಂಬಿಸು
ಬಣ್ಣದ ಕಿರಣಗಳ ಪ್ರತಿಫಲಿಸು....
ಹಸಿರೆಲೆಯ ಮರವ ಚುಂಬಿಸು
ಅದರೆತ್ತರ ಇನ್ನಷ್ಟು ಎತ್ತರಿಸು...
ಬಾ ಬೆಳಗೆ ಬೇಗ ಬೆಳಗು...
ಕತ್ತಲೆಯ ಕಾಣದೆ ಕಣ್ಣು ಮುಚ್ಚಿರುವ
ಜೀವಕುಲ ಕೋಟಿ ಚುಂಬಿಸು...
ಹೊಸದಾರಿ ತೊರಿಸು...
ಬಾ ಬೆಳಗೆ ಬೇಗ ಬೆಳಗು....
ಭೂ ಒಡಲ ಚುಂಬಿಸು
ಸಾಗರದಲೆಯ ಚುಂಬಿಸು
ಯನ್ನ ಹೃದಯ ಚುಂಬಿಸು
ಕವಿ ಜೋಳಿಗೆ ತುಂಬಿಸು....
ಬಾ ಬೆಳಗೆ ಬೇಗ ಬೆಳಗು....
ಪಿ ಅನಿ
11-2-17
- ಪಿ ಅನಿ...
11 Feb 2017, 07:05 am
ಪ್ರತಿಯೊಂದು ಮನಸಿಗೂ
ಇರುವುದೊಂದು ಕನಸು
ನನಗೇಕಿಲ್ಲ ಗೆಳತಿ ನನಗೇಕಿಲ್ಲ
ಕನಸು ಕಾಣಲು
ಕನವರಿಸಲೇ ಬೇಕು
ರೆಪ್ಪೆಗಳೇ ಇಲ್ಲ ಗೆಳತಿ ನನಗೆ ರೆಪ್ಪೆಗಳೇ ಇಲ್ಲ
ಬಿಟ್ಟ ಕಣ್ಣು
ನಿಟ್ಟುಸಿರು ಇಡುತಿದೆ
ಕನಿಕರವೇಕಿಲ್ಲ ಗೆಳತಿ ಜಗಕೆ ಕನಿಕರವೇಕಿಲ್ಲ
ರಾತ್ರಿ ಕಳೆದಂತೆ
ಬೆಳಗು ಮೂಡಲೇಬೇಕು
ಬೆಳಕಾಗಲೇ ಇಲ್ಲ ಗೆಳತಿ ಏತಕೋ ಬೆಳಕಾಗಲೇ ಇಲ್ಲ
- ವಿಸ್ಮಯ
10 Feb 2017, 08:25 pm
ನನ್ನಲ್ಲಿ ನಾ ಮರೆತು
ಕಲ್ಪನಾ ಲೋಕದಲಿ ತೇಲುತಿರುವೆ
ನನ್ನಲ್ಲಿ ನಾನಿಲ್ಲ
ಮಳೆಯೂ ಬಂದು ಮನ ನೆನದಂತೆ
ಕಂಡ ಕನಸು ನನಸಾದಂತೆ
ಎಲ್ಲ ಖುಷಿಯೂ ಒಮ್ಮೆಲೇ
ಸಿಕ್ಕಂತಾಗಿದೆ ಹೃದಯಕ್ಕೆ
ಬಿಡದೆ ನೀ ಹೀಗೆ ಕಾಡಿದಾಗ
ದಾರಿ ಕಳೆದುಕೊಂಡಿರುವೆ
ಚಳಿಯು ಮೈಗೆ ಕಚಗುಳಿ ಕೊಟ್ಟಂತೆ
ಮರೆಯಲ್ಲಿದ್ದ ಮರೆಯಲಾಗದ
ಚಳಿಯಲಿ ನಡುಗುವ ನೆನಪುಗಳಿಗೆ
ಕವಿತೆಯಾಗುತಿದೆ ಕಂಬಳಿ
ಪ್ರತಿ ಕನಸಲ್ಲಿಯೂ ಹೂಮಳೆ
ಮತ್ತೆಷ್ಟು ಕಾಯೋದು ನಾನು
ನನ್ನಲ್ಲೇ ಸಿಗಬಾರದೇ ನೀನು
- Pb
10 Feb 2017, 08:01 pm
ಗೆಳತಿ....
ನನಗಾಗಿ ನಾನು
ನಲಿವನ್ನು ಹುಡುಕಲಾರೆ....
ಆ ನಲಿವು ನಿನಗೆ ಒಲವಾಗಿದ್ದರೆ
ಅದನಾ ಪಡೆಯದೆ ಬಿಡಲಾರೆ.....!
ಪಿ ಅನಿ
10-2-17
- ಪಿ ಅನಿ...
10 Feb 2017, 07:05 pm
ನಾನು ನಿನ್ನನ್ನು ನಗಿಸಿದ್ದೆ ಅಂದು.
ನಿನ್ನೊಡನೆ ನಾ ಇದ್ದೆ ನೆಂದು.
ತಿಳಿದಿದ್ದೆ ನನಗಾಗಿ ನೀನಿದ್ದೆ ಎಂದು.
ಗೀಚಿರುವೆ ಕಾಗದವ ಮನನೊಂದು.
ಬಿಡುತ್ತಿಲ್ಲ ನೀ ಕೊಟ್ಟ ಚುಂಬನವೆಂದು.
ಹಾಗು ಅಪ್ಪಿ ಮುದ್ದಾಡಿದ್ದ ಕ್ಷಣವೊಂದು.
ಕಣ್ಣೀರ ಧಾರೆ ಹರಿಸಿದೆ ನನ್ನ ನೊಡಿ ಜೀವವೊಂದು.
ಬಿಡದೆ ಕಾಡುತ್ತಿದೆ ಬರಿ ನೆನಪುಗಳೆ ಇಂದು.
ಆರೈಸುವೆ ಖುಷಿಯಾಗಿರು ಎಲ್ಲಿದ್ದರೂ ನೀ ನನಗೆಂದು.
- Bore'S..!
- Ananth
10 Feb 2017, 05:36 pm
ನಿನ್ನ ನಗುವ ತುಟಿಗಳ ತೊಟ್ಟಿಲಲ್ಲಿ
ನಾ ಮಗುವಾಗ ಬಯಸುವೆ.
ನಿನ್ನ ಮಂದಾರ ಚೆಲ್ಲುವ ಮೊಗದ ಹೂವಲ್ಲಿ
ಮಕರಂದ ಹೀರುವ ದುಂಭಿಯಾಗ ಬಯಸುವೆ.
ನಿನ್ನ ಕಣ್ಣ ಕಡಲ ಕಿನಾರೆಯಲ್ಲಿ
ಸದಾ ಏರಿಳಿಯುವ ಅಲೆಗಳಾಗ ಬಯಸುವೆ.
ನಿನ್ನ ಮನಸಿನ ಮೇರು ಪರ್ವತದಲ್ಲಿ
ಅಡಿಯಿಂದ ಮುಡಿವರೆಗೆ ಆವರಿಸಿರುವ ಹಿಮವಾಗ ಬಯಸುವೆ.
ನಿನ್ನ ಬಾಳ ಸಮುದ್ರದಲ್ಲಿ
ದಡ ಸೇರಿಸುವ ದೋಣಿ ನಾನಾಗ ಬಯಸುವೆ.
ಇವೆಲ್ಲಕ್ಕೂ ನೀ ನೀಡುವುದಾದರೆ ಅನುಮತಿ
ಚಿರಸ್ಥಾಯಿಗೆ ಸೇರುವುದು ನನ್ನ ಪ್ರೀತಿ.
- ಅಕವಿ
10 Feb 2017, 02:12 pm