Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುದ್ದಿನ ಗೆಳೆಯ

ಜೊತೆಯಾಗಿ ಬಂದವನಲ್ಲ
ಜೊತೆಯಾಗಿ ಬೆಳದವನಲ್ಲ
ಮತ್ತೆಕೆ ನನ್ನ ಮೆಲೆ ಒಲವು.

- mallu

14 Feb 2017, 08:33 am

ನಿನ್ನೊಲವು...

ಖಾಲಿ ಖಾಲಿ ಏಕಾಂತ
ಈ ನನ್ನ ಮೌನಗಳು,
ಮಾತಾಡುವ ನೀರೀಕ್ಷೆಗಳು,
ಅಂದು ನಸು ನಕ್ಕು ಪಿಸುಗುಟ್ಟಿದ
ಪಿಸುಮಾತುಗಳ ಕಚಗುಳಿ
ಇನ್ನು ನನ್ನೆದೆಯಲ್ಲಿದೆ
ಹೇಯ್ ಹುಡುಗಿ ನಾ ಒಂಟಿಯಲ್ಲ ಕಣೆ
ನೀ ಬಿಟ್ಟುಹೋದ ನಿನ್ನ ಬೇಡಗಳು
ಇನ್ನು ನನ್ನ ಜೊತೆಯಲ್ಲೇ ಜೊತೆಯಾಗಿವೆ..........

ಒಲವೇ ನೀನೆಲ್ಲಿರುವೆ.....

- mallu

14 Feb 2017, 08:31 am

.. ಅಳುತಿರುವೆ ನಾನೊಬ್ಬ.....

ನಿನ್ನೆಯತನಕ ಅವಳು ನನ್ನವಳು
ಇನ್ನು ಬರೀ ನೆನಪುಗಳು..
ಇವಳ ನೋಡಲು ಬರುತಿರುವ ವರನೊಬ್ಬ
ದುಃಖ ತಾಳದೆ ಅಳುತಿರುವೆ ನಾನೊಬ್ಬ

ಇರಲಿರಲಿ ಜೀವನ ಸುಕವಾಗಿರಲಿ
ಬರುವವನು ದೇವನಿಟ್ಟ ವರವಾಗಿರಲಿ..
ನನ್ನ ನೆನಪು ಇರಲಿ ಇಲ್ಲದಿರಲಿ
ಅವನಲ್ಲಾದರೂ ನಿನ್ನ ನಿಯತ್ತಿರಲಿ....

ಪಿ ಅನಿ
13-2-17

- ಪಿ ಅನಿ...

14 Feb 2017, 06:40 am

#ಆ ದಂಡೇ ಈ ದಂಡೇ ನಡುವಲ್ಲಿನಿ

 

===========================

ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಗೆದ್ದರೆ ನನ್ನಗಿದು ಬಲ

ಪ್ರೀತಿಯ ಹೊಲದಲ್ಲಿ ಪಸಲೂ ಗಳಿಸುವ
ಛಲ 
ಪ್ರೇಮದ ಹೊಳೇಯಲಿ ಈಜುವಬ್ಬರ
ಪ್ರೀತಿಯ ಗಳಿಸುವ ಬರದಲ್ಲಿ ಸೋತೆನೆಂಬ್ಬ ಬಯ 
ಸೋತ ಗಳಿಗೆಯಲ್ಲಿ  ಬಯಸದೆ ಬಂದ ಪ್ರೇಮದಾಗಮನ

ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಜಯಿಸಿದರೆ ಕುಣಿಯುವುದು ನನ್ನೆದೆಯ ಮನ

ಮರುಗಳಿಗೆ ಮುಡಿತು ಪ್ರೀತಿಗೆ ಒಲವಿನ ಛಾಯಾ
ಒಲವಿಗಿದೆ ಪ್ರೀತಿಯಾ ಮೆಲೆ ಒಲವುಗಳ ಕಮಲ್ 
ಪ್ರೇಮಕಿದೆ ಒಲವಿನ ಮೆಲೇ ಪ್ರೇಮಾದಾಮಲ

ಇದೋ ಪ್ರೀತಿ ಅದೋ ಪ್ರೇಮ
ಇದನೆರಡು ಜಯಿಸಿದರೆ ಕುಣಿಯುವುದು ನನ್ನೆದೆಯ ಮನ

ತಿರಬೋಕಿ  ತ್ರಿಕೋನದಾಟದಲ್ಲಿ ಸಿಲುಕಿ
ಆ ಮುಲೇ ಈ ಮುಲೇ ಗೆರೆ ಎಳೆದು 
ಗರಿದುಂಬಿಸೋ ಬಲವೋ ಅಬಲ 

ಬಣ್ಣಗಳ ಚಿಮುಕಿಸಿ ಬಾಳೆಂಬ್ಬ
ಮಡಿಕೆಯ ತು0ಬಿಸೋ ಛಲ.
ಇದನೇರಡು ಸೆರೆ ಹಿಡಿದು ಕುಡಿಸಿ
ಮನಸುಗಳ  ಸೆರಿಸೋ ಅಬಲ ..

ಇವೇ ನನ್ನೆದೆಯ ಪ್ರೀತಿಯ ಮೋಕ್ಷಕ್ಕೆ ಮೂಲ
ಬಲ ,ಅಬಲ,ಪ್ರಬಲ,ಪ್ರ(ದೀಪ)
ಇದುವೇ ಮನುಜನ ಕುಲ 

ಇದೋ ಪ್ರೀತಿ ಅದೋ ಪ್ರೇಮ
ಇದನೆರಡು  ಬಯಸಿ ಮನದ ಮನೆಯಲ್ಲಿ ಗೇದ್ದೇನೆಂಬ ಅಬ್ಬರ 

- ಪ್ರದೀಪ.ಮ.ಪಾಡಮುಖೆ

14 Feb 2017, 12:29 am

ಪ್ರೀತಿ

ನಾನು ಪ್ರೀತಿಸುವ ಪ್ರೀತಿಗೆ ನನ್ನಲ್ಲಿ ವಲವಿಲ್ಲ , ನನ್ನನ್ನು ಪ್ರೀತಿಸುವ ಪ್ರೀತಿಗೆ ನನ್ನಲ್ಲಿ ಬೆಲೆ ಇಲ್ಲ ,

ಮಗ್ಗಲು ಬದಲಿಸುವ ಪ್ರೀತಿ ಗೆದ್ದಲು ಹಿಡಿಯುವುದು ಎಂದು ಗೊತ್ತಿದ್ದರೂ, ಪ್ರೀತಿಯ ಮೇಲಿನ ಪ್ರೀತಿಗೇನೂ ಕಮ್ಮಿ ಇಲ್ಲ ,
-ಬಿ.ಸಿ ಬಸವರಾಜ

- ಬಿ.ಸಿ ಬಸವರಾಜ

13 Feb 2017, 10:45 pm

ಬಡವ - ಶ್ರೀಮಂತ

ದೊಡ್ಡ ದೊಡ್ಡ ಬಂಗಲೆಗಳು
ಆದ್ರೆ ಸಣ್ಣ ಮನಸು
ಇರುವುದು ನಾಲ್ಕು ಜನರಲ್ಲಿ!
ಗುಡಿಸಲಗಳ ಸಾಲು ಇಲ್ಲಿ
ವಿಶಾಲವಾದ ಮನಸ್ಸು
ಹತ್ತಾರು ಮಕ್ಕಳು ಅಂಗಳದಲ್ಲಿ!

ದೊಡ್ಡ ದೊಡ್ಡ ಹೋಟೆಲುಗಳಲ್ಲಿ
ಕುಳಿತಿರುವ ಜನರು
ಎಣಿಕೆಯಷ್ಟು ಅಲ್ಲಿ ಇಲ್ಲಿ!
ಮೊಬೈಲ್ ಹೋಟೆಲ್ ಬೀದಿಯಲ್ಲಿ
ನಿಂತಿದ್ದಾರೆ ಜನರು
ಬಾರಿ ಜನಸಂದಣಿಯಲ್ಲಿ!

ದೊಡ್ಡ ಮನೆಯ ಮಕ್ಕಳು
ಓಡಾಡುವುದು AC ಕಾರಿನಲ್ಲಿ
ಒಂಟಿಯಾಗಿ!
ನಮ್ಮಂಥ ಬಡವರಿಗೆ
ಎಲ್ಲಿಂದ ಬರಬೇಕು ಕಾರು
ಸೈಕಲ್ಲೆ ಅಂಬಾರಿ ನಮಗಿಲ್ಲಿ!

ದೊಡ್ಡ ಮನೆಯ ಮಕ್ಕಳಿಗೆ
ಪ್ರಿತಿಯಂದ್ರೆ ಅರ್ಥ
ಬಾರಿನಲ್ಲಿ ಕುಡಿದು ಕುಣಿಯುವುದು!
ನಮಗೆ ಪ್ರಿತಿಯಂದರೆ ದೇವರಂತೆ
ಪಕ್ಕದ ಬೀದಿಯ ಪಾರ್ಕ್
ದೇವಾಲಯದಂತೆ!

ಹೆಚ್ಚಚ್ಚು ಓದಿದ ನೀವು
ಮದುವೆಯಾದ ಒಂದು ವರ್ಷಕ್ಕೆ
ವಿಚ್ಚೇದನ ಎನ್ನುವರು ನೀವು!
ಹೆಚ್ಚು ಓದದ ನಾವು
ಕಷ್ಟವೋ, ನಷ್ಟವೋ, ಕೊಪವೋ, ತಾಪವೋ
ಕೊನೆವರೆಗೂ ಜೊತೆಗೆ ಇರುವವರು ನಾವು!

ಜೀವನಕ್ಕೆ ಎಷ್ಟು ವರ್ಷ ಎಂಬುದು
ಮುಖ್ಯವಲ್ಲ
ಎಷ್ಟು ವರ್ಷಕ್ಕೆ ಜೀವ ಕೊಟ್ಟೆವು
ಎಂಬುದು ಮುಖ್ಯ!

- ಕುಮಾರ ಸಿದ್ದರಾಜ

13 Feb 2017, 09:37 pm

ನಗುವ ಚಲ್ಲದಿರು

ನಗುವ ಚಲ್ಲದಿರು ನೀನು
ಹೀಗೆ ಮಲ್ಲಿಗೆಯ ಹಾಗೇ
ನನ್ನೆದುರು !

ನಿನ್ನನ್ನು ಸ್ವಾಗತಿಸುವುದೇನೋ
ಬಹಳ ಸುಲಭ!

ಕಷ್ಟ ಆರಂಭವಾಗುವುದು "ಗೆಳತಿ"
ನಿನ್ನನ್ನು ಕಳಿಸಿಕೊಡುವಾಗ !

- ಕುಮಾರ ಸಿದ್ದರಾಜ

13 Feb 2017, 08:48 pm

ಸದಾ ನಗುತಿರು ಎಂದಿಗೂ ಅಳದಿರು

ನಿನ್ನ ನಗು ಹಾಗೂ ನಿನ್ನ ಅಳು ನನ್ನ ಮನಸ್ಸಿನಲ್ಲಿ ಎಂತಹ ಭಾವನೆಗಳ ಮೂಡಿಸುವುದು ಎಂಬುದನ್ನು ಪ್ರಾಸದೂಂದಿಗೆ ವಿವರಿಸಿದ್ದೇನೆ ...ನನ್ನ ಕಣ್ಣಿನಿಂದ ಓದಿ ಅರ್ಥೈಸಿಕೋ .‌‌‌.......ಓ ಗೆಳತಿ

ನಿನ್ನ ನಗು ಮುಂಜಾನೆಯ ಮಂಜು
ನಿನ್ನ ಅಳು ಮುಸ್ಸಂಜೆಯ ಮಂಕು
ನಿನ್ನ ನಗು ತಾರೆಗಳ ಮಿನುಗು
ನಿನ್ನ ಅಳು ತಂಗಾಳಿಯ ಕೊರಗು
ನಿನ್ನ ನಗು ಚಿಟ್ಟೆಗಳ ಕಲರವ
ನಿನ್ನ ಅಳು ದುಂಭಿಯ ಪರಾಭವ
ನಿನ್ನ ನಗು ಹೂಮೇಲಿನ ಇಬ್ಬನಿ
ನಿನ್ನ ಅಳು ಹೂ ಎಸಳಿನ ಕಂಬನಿ
ನಿನ್ನ ನಗು ನವಿಲಿನ ನರ್ತನ
ನಿನ್ನ ಅಳು ಕಗ್ಗತ್ತಲ ಕಾನನ
ನಿನ್ನ ನಗು ಕೋಮಲವಾದ ಕಮಲ
ನಿನ್ನ ಅಳು ಕೆಸರಿನ ತುಮುಲ
ನಿನ್ನ ನಗು ಹುಣ್ಣಿಮೆಯ ಬೆಳಕು
ನಿನ್ನ ಅಳು ಅಮಾವಾಸ್ಯೆಯ ಸಿಡುಕು
ನಿನ್ನ ನಗು ಹಕ್ಕಿಯ ಇಂಚರ
ನಿನ್ನ ಅಳು ಕಾರ್ಮೋಡದ ಸಂಚಾರ
ನಿನ್ನ ನಗು ಮಧುರ ಅನುಭೂತಿ
ನಿನ್ನ ಅಳು ವೀಣೆಯ ಹರಿದ ತಂತಿ
ನಿನ್ನ ನಗು ಕೋಗಿಲೆಯ ಧನಿ
ನಿನ್ನ ಅಳು ಕರ್ಕಶದ ಮಾರ್ಧನಿ

ನಿನ್ನ ನಗು ಬಳ್ಳಿಯ ಬಳುಕು
ನಿನ್ನ ಅಳು ದುಃಖದ ಮೆಲುಕು
ನಿನ್ನ ನಗು ಶಾಂತವಾದ ಕಡಲು
ನಿನ್ನ ಆರ್ಭಟಿಸುವ ಸಿಡಿಲು
ನಿನ್ನ ನಗು ಮಲ್ಲಿಗೆಯ ಸುವಾಸನೆ
ನಿನ್ನ ಅಳು ಸಾವಿನ ಆಶ್ವಾಸನೆ
ನಿನ್ನ ನಗು ದುಗುಡಗಳ ನಿರ್ಗಮನ
ನಿನ್ನ ಅಳು ನೋವಿನ ಆಗಮನ
ನಿನ್ನ ನಗು ನವಿರಾದ ನಾದಸ್ವರ
ನಿನ್ನ ಅಳು ಅಸಹನೀಯ ಅಪಸ್ವರ
ನಿನ್ನ ನಗು ಬಣ್ಣಿಸಲಾಗದ ಸೌಂದರ್ಯ
ನಿನ್ನ ಅಳು ಬೇಸರದ ಸತ್ಕಾರ್ಯ
ನಿನ್ನ ನಗು ಅದ್ವಿತೀಯ ಆನಂದ
ನಿನ್ನ ಅಳು ಸಾವಿನ ನಿನಾದ
ನಿನ್ನ ನಗು ಗೆಲುವಿನ ಮಹೋತ್ಸವ
ನಿನ್ನ ಅಳು ಸೋಲಿನ ಜಯಂತ್ಯೋತ್ಸವ
ನಿನ್ನ ನಗು ಸೌಂದರ್ಯದ ಶ್ಲಾಘನೆ
ನಿನ್ನ ಅಳು ಕಣ್ಣೀರಿನ ಆಚರಣೆ

- ಅಕವಿ

13 Feb 2017, 08:03 pm

ಮಂಕು ಕವಿದಿರಲು.....

ಮಂಕು ಕವಿದಿದೆ ಮಾನವ ಸಂಕುಲಕೆ
ಏನ ಹೇಳುವುದು ಇವರ ಮರುಳತನಕೆ||

ಕತ್ತಲಲಿ ನಿಂತು ಬೆಳಕ ಹುಡುಕುವರು
ಹಿತ್ತಿಲಲೆ ಮದ್ದಿರಲು ಸುತ್ತೆಲ್ಲ ತಡಕಾಡುವರು||

ನೈಜ ಸೊಬಗಿನ ಮಹಿಮೆ ತಿಳಿಯದವರಿಗೆ
ಅಂಧಾನುಕರಣೆಯೇ ನಾಶವು ನಾಡಿಗೆ||

ತುಂಬಿಹುದು ಪ್ರತಿ ಮನದಿ ಮೋಹ ಮದ ಮಾತ್ಸರ್ಯ
ಸತ್ಯವನು ಸಾರುತಿರೆ ಪಡುತಿಹರು ಆಶ್ಚರ್ಯ||

ತೊಲಗಲಿ ಮನದಲ್ಲಿ ತುಂಬಿರುವ ಅಜ್ಞಾನ
ಬೆಳಗಲಿ ಜ್ಯೋತಿಯ ತೆರದಿ ಸುಜ್ಞಾನ||

- ನಮಿತ ಗಟ್ಟಿ

13 Feb 2017, 07:38 pm

ಪಯಣ

ಕವಿಯಲ್ಲ ನಾನು
ಬರೆಯಲು ಕವನ
ಸುಮ್ಮನೆ ಗಿಚುತಿರುವೆ
ಮಾಡಲು ಕಾಲಹರಣ !

ಏನು ಬರೆಯಲಿ
ಒಂದು ತಿಳಿಯೆ ನಾ
ಪ್ರಿತಿಸಿಲ್ಲ ಯಾರನ್ನು
ಆಗಲು ಮನಸು ತಲ್ಲಣ !

ಹೃದಯ ಮಿಡಿಯುತಿದೆ
ಎಂದಿನಂತೆ ಈ ದಿನ
ಯಾವ ಹೂಸತನವಿಲ್ಲ
ಯಾರನ್ನು ಪ್ರಿತಿಸದ ಕಾರಣ !

ಪ್ರೀತಿಸಲೇ ಬೇಕು ಅಂತಿಲ್ಲ
ಸಾಗಲು ಜೀವನ
ಜೊತೆಗಿದ್ದರೆ ಒಬ್ಬರು
ಸುಗಮ ಬಾಳಿನ ಪಯಣ !

- ಕುಮಾರ ಸಿದ್ದರಾಜ

13 Feb 2017, 05:53 pm