Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಣ್ಣು ಏಕೆ ?ಬೇಡ

ಮಮತೆಗೆ ಬೇಕು ಹೆಣ್ಣು ತಾಯಿಯಾಗಿ
ಪ್ರೀತಿಗೆ ಬೇಕು ಹೆಣ್ಣು
ಮಡದಿಯಾಗಿ
ಕರುಣಿಗೆ ಬೇಕು ಹೆಣ್ಣು
ಅಕ್ಕ ,ತಂಗಿಯಾಗಿ
ಪ್ರೇಮಕ್ಕೆ ಬೇಕು ಹೆಣ್ಣು
ಪ್ರೇಮಿಯಾಗಿ
ಸ್ನೇಹಕ್ಕೆ ಬೇಕು ಹೆಣ್ಣು
ಸ್ನೇಹಿತೆಯಾಗಿ
ಇದಕ್ಕೆ ವಿಪರ್ಯಾಸವಾಗಿ
ಹೆಣ್ಣು ಏಕೆ ? ಬೇಡ ಮಗಳಾಗಿ .
-ಬಿ .ಸಿ ಬಸವರಾಜ

- ಬಿ.ಸಿ ಬಸವರಾಜ

15 Feb 2017, 12:28 pm

ಅಪ್ಪ....ಎಲ್ಲಿರುವೆ?

ಅಪ್ಪನ ಮುದ್ದಿನ ಮಗಳಾದೆ..
ಮಗಳಾಗಿ ಅಪ್ಪನ ಜೊತೆಯಾದೆ..
ಅಕ್ಕರೆ ತೋರುವ ಅಪ್ಪನಿಗೆ..
ಪ್ರೀತಿಯ ಕಾಣಿಕೆ ತಂದಿರುವೆ..
ಅಪ್ಪನೆ ಎಲ್ಲಿರುವೆ?..
ಕಾದಿರುವೆ ನಾನಿಲ್ಲಿ..
ಕಾಣಿಕೆ ಜೊತೆಯಲ್ಲಿ..

ಅಪ್ಪನು ನನಗೆ ತೋರಿಸಿದ..
ಮಮತೆಯು ಎಲ್ಲಿ ಮರೆಯಾಗಿದೆ..
ಆಡಿದ ಆಟ ಪಾಠಗಳು..
ಅಪ್ಪನೆ ನಿನ್ನ ಕರೆಯುತಿದೆ..
ಅಪ್ಪನೆ ನಿನ್ನಯ ತೋಳಿನಲಿ..
ಜಗವನೆ ಮರೆತೆ ನಿನ್ನ ಒಲವಿನಲಿ..
ನೀನುಣಿಸಿದ ಪ್ರೀತಿಯ ತುತ್ತೊಂದನ್ನು..
ಮತ್ತೊಮ್ಮೆ ತಿನ್ನುವ ಆಸೆಯಲಿ..
ಕಾದಿರುವೆ ನಾನಿಲ್ಲಿ....ಅಪ್ಪ
ನಿನ್ನದೆ ನೆನಪಲ್ಲಿ..

- B.Shree

15 Feb 2017, 10:44 am

......... ಮನವೆ.........

ಮತ್ತೊಮ್ಮೆ ನೂಕಿದೆ ಮನವೆ
ಪ್ರೇಮವೆಂಬ ಗುಂಡಿಗೆ
ಅಲ್ಲಿ ಹಗಲಿರುಳು ಕಾಣದು
ಬರಿ ನೋವೊಂದೆ ಎದುರಾಗುವುದು

ಕೈಮುಗಿದೆ ಪ್ರೀತಿಗಿಂದು
ಈ........
ಮನವ ಮುರಿದುಕೊಂಡು

ಪಿ ಅನಿ
15-2-17

- ಪಿ ಅನಿ...

15 Feb 2017, 07:45 am

ಕನ್ನಡ ಶಾಯರಿ

ಸುಟ್ಟುಹೋದ ನನ್ನ ಕನಸುಗಳ ಹೊಗೆ ಇನ್ನು ಇದೆ
ಬದುಕುವ ಅಸೆ ಇಲ್ಲದ ದೇಹದಲ್ಲಿ ಉಸಿರು ಇನ್ನು ಇದೆ
ನನ್ನ ಈ ಸ್ಥಿತಿ ನೋಡಿ ಅವಳ ಕಣ್ಣಲ್ಲಿ ಕಂಬನಿ ಜಾರಿದೆ
ಅಂದರೆ ಅವಳ ಮನದ ಮೂಲೆಯಲಿ ನನ್ನ ನೆನಪು ಇನ್ನು ಇದೆ. !

- ಕುಮಾರ ಸಿದ್ದರಾಜ

14 Feb 2017, 09:15 pm

ತಾಯಿಯ ಗೋಳು.

ಹುಟ್ಟಿನಲ್ಲಿ ಸುಖವಿಲ್ಲ, ಬಾಳಲ್ಲಿ ಬೆಲೆಯಿಲ್ಲ..
ಕಟ್ಟಿಕೊಂಡೋನು ನೋವ ಅರಿಯಲಿಲ್ಲ..
ಹುಟ್ಟಿದೋರು ನನ್ನ ಕಡೆ ನೋಡಲಿಲ್ಲ..
ನಾನು ಅಸಹಾಯಕಳಲ್ಲ, ಆದರೂ..
ಕೈಮುಗಿದು ಬೇಡುವೆ, ನನ್ನ ಹೊಟ್ಟೆ ಉರಿಸಬೇಡಿ...

- Ananth

14 Feb 2017, 09:15 pm

ಕನ್ನಡ ಶಾಯರಿ

ನಿಲ್ಲಿಸಿರಿ ನನ್ನ ಶವಯಾತ್ರೆಯನ್ನ
ಮರಳಿ ನನಗೆ ಜೀವ ಬಂದಿದೆ
ಹಿಂದಿರುಗಿ ನೋಡಿರಿ ಗೆಳೆಯರೇ
ಸರಾಯಿ ಅಂಗಡಿ ಬಾಗಿಲು ಮತ್ತೇ ತೆರೆದಿದೆ!

- ಕುಮಾರ ಸಿದ್ದರಾಜ

14 Feb 2017, 09:08 pm

ಮರೆಯಲಿ ಹೇಗೆ..

ಮರೆಯಲಿ ಹೇಗೆ ನಿನ್ನ
ಮರೆತು ಬದುಕಲಿ ಹೇಗೆ ನಿನ್ನ
ಪ್ರೀತಿಯ ಸವಿ ಇಟ್ಟವಳು ನೀನು
ಹೊಂಗನಸಿನ ಹಂದರವ ಕಟ್ಟಿದವಳು ನೀನು
ಮರೆಯಲಿ ಹೇಗೆ ನಿನ್ನನು /

ಮನಸಿನ ಮೊದಲ ಪ್ರೇಮ ನೀನು
ಕನಸಿನ ಮೊದಲ ಮೆಟ್ಟಿಲು ನೀನು
ಉಸಿರಿನಲಿ ನಿನ್ನ ಹೆಸರ ಬರೆದು
ಎದೆಯಲ್ಲಿ ಪ್ರೀತಿಯ ಪಲ್ಲವಿಯ ಬರೆದು
ಮರೆತು ಬೀಡು ಎಂದರೆ ಹೇಗೆ...

ಕನಸುಗಳ ರಂಗವಲ್ಲಿ ಕಣ್ಣಲಿ ಬಿಡಿಸಿ
ಅಂತರಂಗದ ಆಕಾಶಕ್ಕೆ ಕಾಮನಬಿಲ್ಲಾಗಿ
ನಾನಿಟ್ಟ ಹೆಜ್ಜೇಯ ಮೇಲೆ
ನೀ ಹೆಜ್ಜೆ ಇಡುತ ಜೊತೆ ನಡೆದು
ದುರಾದರೆ ಹೇಗೆ...

ಆಸೆಗಳು ನೂರು ಹೂವಾಗಿ ಅರಳಿ
ಕಾಯುತಿವೆ ನಿನ್ನ ಬರುವಿಗಾಗಿ
ನನ್ನ ಮನದ ಜೊತೆಗೆ
ಪ್ರೀತಿಯ ಕೊಲಾಟವಾಡಿದ ಚಲುವೆ
ದುರಾಗುವ ಯೋಚನೆ ಏಕೆ...

ನನ್ನ ಪ್ರೀತಿಗೆ ಪಲ್ಲವಿ ನೀನಾದೆ
ಚರಣ ಬರಿಯುವ ಮೊದಲೇ
ನನ್ನ ಹೃದಯವ ಒಡೆದು
ನೀ ಹೊರಟಿರುವೇ ಎಲ್ಲಿಗೆ
ಎಲ್ಲಿಗೆ... ಎಲ್ಲಿಯವರೆಗೆ.../

- ಕುಮಾರ ಸಿದ್ದರಾಜ

14 Feb 2017, 08:47 pm

ರವಿ ಉದಯಿಸಿದ....

ಜಗದೊಳು ಜಡತನ ತುಂಬಿರಲು
ಮನ ಮನೆಯಂಗಳ ಬೆಳಗಿಸಲು
ಕವಿದಿಹ ಕತ್ತಲ ಹೊಡೆದೋಡಿಸಲು
ಬಂದನು ಉದಯದ ಗಾನವ ಪಾಡಲು||

ಪ್ರಖರತೆಯೆಂಬ ತೇರನು ಏರಿ
ಕಿರಣಗಳೆಂಬ ಹೊನ್ನಿನ ದಾರಿ
ಬಂದಿತು ಭಾನುವಿನ ಕುದುರೆ ಸವಾರಿ
ಮಾನವ ಕುಲಕೆ ಶುಭವನು ಕೋರಿ||

ಹಕ್ಕಿಗಳ ಆ ಚಿಲಿಪಿಲಿ ಗಾನ
ಕರಗಿತು ಧರೆಯೊಳು ಅಡಗಿದ್ದ ಮೌನ
ದಶ ದಿಕ್ಕುಗಳಲಿ ದೇವರ ಧ್ಯಾನ
ಸನಿಹ ಸುಳಿಯದು ದುಃಖ ದುಮ್ಮಾನ||

- ನಮಿತ ಗಟ್ಟಿ

14 Feb 2017, 08:13 pm

.. ಪ್ರೀತಿ ಸಂಗೋಪನೆ..

ಹೃದಯದಿ ಪ್ರೀತಿ ಸಂಗೋಪನೆ
ಇದು ನಿನ್ನದೆ ಆರಾಧನೆ
ನಲ್ಲೆ ಕಾಣದಿರೆ ವೇದನೆ
ನೀಡು ಪ್ರೀತಿಗೆ ಅನುಮೋದನೆ

ನಗು ಬೆಳದಿಂಗಳ ಚೆಲುವೆ
ಮಿಂಚಿ ಮರೆಯಾದರೆ ತರವೆ
ದೀವಿಗೆಯ ಬೆಳಕಾಗು ಸಾಕೆ
ಸುಡುವ ಸೂರ್ಯನು ಯಾಕೆ

ಆಗುವೆ ನಿನ್ನ ತವರು
ನೋಡುವೆ ಬರದಂತೆ ಬೆವರು
ಜಾರ ಬಿಡೆನು ಉಸಿರು
ಇರುವತನಕ ನನ್ನ ಉಸಿರು...

ಹೃದಯದಿ ಪ್ರೀತಿ ಸಂಗೋಪನೆ
ಇದು ನಿನ್ನದೆ ಆರಾಧನೆ
ನೀಡು ಪ್ರೀತಿಗೆ //ಅನುಮೋದನೆ//

ಪಿ ಅನಿ
14-2-17

- ಪಿ ಅನಿ...

14 Feb 2017, 07:25 pm

ಮೊದಲ ಕಣ್ಣನೋಟ

ಗೆಳೆಯರ ಜೊತೆ ಗಲ್ಲಿಯಲ್ಲಿ ಕುಳಿತು ಹರಟ್ಟೆ ಒಡೆಯಲು ಹೋದರೆ,ಆ ದಿನ ನನ್ನ ಹೃದಯ
ಹಾರಾಡುವಂತೆ ಮಾಡಿದ ಆ... ಕಣ್ಣುಗಳು
ನನ್ನ ಎದೆಯ... ಬಡ್ಡಿದು, ನನ್ನ ಹೃದಯ...
ತೆರೆದ... ಕ್ಷಣ

ಕಣ್ಣಲೆ ಕನಸು ಭೀತಿದ ಬಿಸಿ ಉಸಿರೇ...
ಬಯಸಿದೆ ಹೃದಯ ನಿನ್ನ ಹೆಸರೇ...
ಆಗು ಬಾ ಬಾಳು ಆಸರೇ...
ಪ್ರದೀಪ್. ಡಿ ಸೊಬಗು

- ಪ್ರದೀಪ್.ಡಿ

14 Feb 2017, 09:51 am