Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಿಟ್ಟು ಹೋದ ಹುಡುಗಿ ಮತ್ತೆ ಬರುವಳೇ?
ಕೆಟ್ಟು ಹೋದ ಮನಸ್ಸು ಮತ್ತೆ ಸರಿಹೋಗುವುದೇ?
ಸುಟ್ಟು ಹೋದ ಹೃದಯ ಮತ್ತೆ ತಣ್ಣಗಾಗುವುದೇ?
ಪಟ್ಟು ಬಿಡದೇ ಕಾಡುತಿದೆ ಈ ಪ್ರಶ್ನೆಗಳು
ಕೊಟ್ಟು ಬಿಡಬಾರದೇ ಉತ್ತರಗಳು.............
- ಅಕವಿ
21 Feb 2017, 11:57 am
ನೀ....
ಬಿಟ್ಟು ಹೋದೆ ಗೆಳತಿ
ಪ್ರೀತಿಯ ಘಂಟುಮೂಟೆ ಕಟ್ಟಿ...
ನಿನ್ನ ನೆನಪಲ್ಲಿ ನಾ ಸುರಿಸಿದ
ಹನಿ ಹನಿ ಕಣ್ಣೀರೂ... ಆಯ್ತು
ಹನಿ ನೀರಾವರಿಗೆ ಸ್ಫೂರ್ತಿ....
...ಪಿ ಅನಿ...
21- 2-17
- ಪಿ ಅನಿ...
21 Feb 2017, 10:20 am
ಜಡೆ ಎತ್ತಿ ಗುಲಾಬಿ
ಮುಡಿಸಬೇಕೆಂದವನ
ಕೈಯಲ್ಲಿ ಷರಾಬು
ಕೊಟ್ಟವಳದ್ದು ಕನಿಷ್ಟ
ಪಾಪವೆಂದು ಮನ್ನಿಸಿ
ಬಿಡು ಖುದಾ....
•••
ಮೆಹರ್ ಏನು ಬೇಕೆಂದು
ಕೇಳಿದ್ದು ನನ್ನ ತಪ್ಪೇ ಬಿಡು
ನಿಖಾಹ್ ಆದರೆ ಮೆಹರ್
ಕೊಡೋದೆಂದು ಮರೆತಿತ್ತು
ಆಗ...
•••
ಅವಳು ಜಾಣೆಯು
ಪ್ರಸನ್ನಳು,ದಿನಂಪ್ರತಿ
ಮೊಗ್ಗುಗಳನ್ನೇ ಮುಡಿ
ಯುತ್ತಿದ್ದಳು ನಾನೊಬ್ಬ
ಏನೂ ಅರಿಯದವನು..
•••
ಇಶ್ಕ್ ನ ಚಾಂದ್ ಅವಳು
ಕಿಮ್ಮತ್ತು ಕಟ್ಟಲಾಗದ
ಇಬ್ಲೀಸನ ಆಲೋಚನೆ
ಗಳಿಂದ ಅವಳನ್ನು
ರಕ್ಷಿಸಿ ಬಿಡು ..!!
•••
ಖುದಾ ನ ಕೋರ್ಟಿನಲ್ಲಿ
ಅಪರಾಧಿಯು ನಾನು
ನಿನ್ನ ಸುಂದರ ಸುಳ್ಳುಗಳು
ಎಷ್ಟಿದ್ದರೂ ನನ್ನಲ್ಲೇ
ಉದುರಿಬಿಡಲಿ ನಿರ್ಲಿಪ್ತತೆಯಲ್ಲಿ ಆಲಿಸಿ ಬಿಡುವೆನು ಹುಡುಗೀ..
ಅವಿಜ್ಞಾನಿ
- ಅವಿಜ್ಞಾನಿ
21 Feb 2017, 08:17 am
ನಿಮ್ಮ ಪುಟ್ಟ ಮೆದುಳಲ್ಲಿ ಉತ್ಪತ್ತಿಯಾಗುವ ಯೋಚನೆಯ ಮೇಲಾಣೆ ಪ್ರೀತಿ ಇದೆ
ಕನಸು ಕಾಣಲೆಂದೇ ನಿದ್ರೆಗೆ ಜಾರುವ ಕಣ್ಣುಗಳ ಮೇಲಾಣೆ ಪ್ರೀತಿ ಇದೆ
ಸದಾ ಬಡಿಯುವ ಚಿರಯುವ ಹೃದಯದ ಮೇಲಾಣೆ ಪ್ರೀತಿ ಇದೆ
ರಸ ವಿಷಯಗಳ ಮಾತು ಹೊರ ಗೆಡವುವ ನಾಲಿಗೆ ಮೇಲಾಣೆ ಪ್ರೀತಿ ಇದೆ
ಪ್ರೀತಿಯಿದೆ ಅಂಬಾ ಎನ್ನುವ ಕರುವಿನ ತಾಯಿಯಲ್ಲಿ
ಮುಳ್ಳು ಚುಚ್ಚಿದಾಗ ಅವ್ವಾ ಎನ್ನುವ ಮಗುವಿನ ಬಾಯಿಯಲ್ಲಿ
ನಾಳೆ ಊಟಕೆ ಇಂದಿನ ನಿದಿರೆ ಬಿಟ್ಟ ಪ್ರತೀ ಅಪ್ಪಂದ್ದಿರಲ್ಲಿ
ಹೊಟ್ಟೆ ತುಂಬಿಸಿ ಕೆಲವು ದಿನಗಳಾದರೂ ಹಸಿವಿಲ್ಲವೆನ್ನುವ ತಾಯಂದಿರಲ್ಲಿ
ಪ್ರೀತಿ ಇದೆ ಕಂಕುಳದಿ ಪುಟ್ಟಾ ತಂಗಿಯ ಹೊತ್ತು ಭಿಕ್ಷೆ ಕೇಳುವ ಅಣ್ಣನಲ್ಲಿ
ಹೆಚ್ಚೇ ಪ್ರೀತಿಯಿದೆ ಪುಟ್ಪಾತಿನ ರಾತ್ರಿ ಕಳೆಯುವ ತಂಗಿಯ ಚಳಿಗೆ ಪೇಪರ್ ಮುಚ್ಚುವ ದೀದಿಯಲ್ಲಿ
ಯಾರಿಲ್ಲವೆಂದರೂ ಪ್ರೀತಿಯಿದೆ ಉಸಿರುಗಟ್ಟಿ ದೇಶ ಕಾಯುವ ನಮ್ಮ ಯೋಧನಲ್ಲಿ
ನಿಮ್ಮ ಸುಖ ನಿದ್ರೆಗಾಗಿ ತನ್ನ ನಿದಿರೆ ಬಿಡುವ ಗೂರ್ಖನಲ್ಲಿ
ಪ್ರೀತಿಯಿದೆ ಪ್ರೀತಿಗೊಂದು ದಿನವೂ ಇದೆ ಪ್ರಣಯವಿದೆ ನಿರ್ದಿಷ್ಟ ನಿಯಮವೂ ಇದೆ
ಪ್ರೀತಿಯಿದೆ ಮನಸು ಮುನಿಸು ಹಂಚಿಕೊಳ್ಳಬೇಕೆನ್ನುವವಳ ಕೆಂಗುಲಾಬಿಯಲ್ಲಿ....
ಅವಿಜ್ಞಾನಿ
- ಅವಿಜ್ಞಾನಿ
21 Feb 2017, 08:04 am
ಅದೇ ದಾರಿಯಲ್ಲಿ ನಾನು ನಡೆಯುವಾಗ ಗೆಜ್ಜೆ ಸದ್ದೊಂದು ಹೇಳಕೇಳದೇ ಕಿಂಕಿಣಿಸಿ ಮರೆಯಾಗುತ್ತದೆ
ಪ್ರೇಮಿಗಳ ದಿನದ ಉಲ್ಲಾಸವಿರಬಹುದೆಂಬ ಸಂಶಯ ಮೂಡುತ್ತೆ ಆಗ..
ಖಾಲಿ ಬಿಂದಿಗೆ ಸೊಂಟದಲ್ಲಿ ನಾಟ್ಯವಾಡುತ್ತಾ ಮುಂದೆ ಸಾಗುತ್ತಿರುತ್ತದೆ ಹದಿನಾಲ್ಕರ ಚಂದ್ರನ ಬಿಂಬ ಮೂಡುವಂತಿರುತ್ತದೆ ನಡೆತ
ಗಳಿಗೆಗೊಮ್ಮೆ ನೆನಪು ಮಾಡುವ ನೆಪಕೆ ವಿರಹಿಗಳೆಲ್ಲಾ ಪ್ರೇಮವೆನ್ನುತ್ತಾರೆ
ಜುಮುಕಿಯ ತೂಗಾಟಕ್ಕೆ ಸಿಕ್ಕ ಮುಡಿಗಳನ್ನು ಬೇರ್ಪಡಿಸುವುದು ನನಗಂತೂ ಸುಗ್ಗಿಯ ಕಾಲ
ಕೊನೆ ಬಾರಿ ಕತ್ತು ಉಬ್ಬಿಸಿ ನೋಡುವ ಪ್ರಯತ್ನಕ್ಕೆ ಕೈ ಹಾಕುವಾಗ
ಕೆಂಗುಲಾಬಿಯ ಎಸಳುಗಳಿಂದ ಒಂದ್ಹೆಸರ ಚಿತ್ತಾರ ಹುಟ್ಟು ಪಡೆಯುತ್ತದೆ
ಕೇಳದಿರಿ ಯಾರಾಕೆ ಶೃಂಗಾರಿಯೆಂದು ಇನ್ನೂ ಮಾಸದ ಗಾಯ ಅದು
ನೋಡದಿರಿ ಬಿಂಕಗಳ ಒಟ್ಟಾರೆ ಅರುಣನ ಕೆನ್ನಾಲೆಯ ನೋಟವದು
ಹಲ್ಕಾ ಸಾಲಿಗೆ ಅಕ್ಷರ ಮತ್ತು ಹಲ್ಕಾ ಕವನದ ಹುಮ್ಮಸ್ಸು
ಅವಿಜ್ಞಾನಿ
ಹಲ್ಕಾ ಕವನ
- ಅವಿಜ್ಞಾನಿ
21 Feb 2017, 08:03 am
ಪ್ರೇಮಿಗಳ ದಿನದ ವಿಶೇಷ .!
ಒಡಕು ಮಡಿಕೆಗೊಂದು ತೇಪೆ ಹಾಕಿ ಮಾಡಬೇಕು ಪ್ರೇಮಿದಿನ
ಸಿಡುಕು ಮೊಗಕೆ ನಗು ಬುಕ್ಕೆ ಕೊಟ್ಟು ಮಾಡ ಬೇಕು ಪ್ರೇಮಿದಿನ
ಹರೆಯ ಕಾಲದ ನವಿರು ನೆನಪುಗಳು ಮೂಡುವುದು ಸಹಜ
ಎಳೆಯ ಮನಸಿನ ಮೇರು ಬಯಕೆಗೊಂದು ರೂಪ ಕೊಟ್ಟು ಮಾಡಬೇಕು ಪ್ರೇಮಿದಿನ
ಸಕಲ ಒಡಲ ಒಳಗೂ ಜನ್ಮವೆತ್ತುವ ಸಹಜ ಬೀಜ ವಲ್ಲವೇ
ಸಾಥಿಗೊಂದು ಸಾರಥಿಯಾಗಿ ಸಾಗಬೇಕು ಪ್ರೇಮ ಅನುದಿನ
ಜಟಿಲ ಕಷ್ಟವಿದ್ದರು ಹಸನ್ಮುಖಿಯ
ಕಂಡರಂತು ಸಮಾಧಾನ
ಜವಾನರ ಜಾತಿಗೆ ಜಪದ ರೀತಿಯಾಗಿದೆ ಪ್ರೇಮದಿನ
ಸರ್ವದಿನ ಪ್ರೇಮಮಯ ದಿನ
ಒಂದಕ್ಕೆ ಸೀಮಿತವಲ್ಲ
ನಗುತ ಮಾಡು 'ಅವಿಜ್ಞಾನಿ'ಯೇ ಕ್ಷಣ ಕ್ಷಣವು ಪ್ರೇಮಿದಿನ
ಅವಿಜ್ಞಾನಿ
- ಅವಿಜ್ಞಾನಿ
21 Feb 2017, 08:03 am
ಹುಡುಕಿ ಕೊಡಿ...!
ಹೊಲಿಗೆ ಇರದ ಬಾಯಿಯೆದುರು ಹರಿದ ಎದೆಯನ್ನು ತೆರೆದಿಟ್ಟ ಮೇಲೇ
ನನ್ನ ಪ್ರತಿಬಿಂಬವು ಕಾಣೆಯಾಗಿದೆ
ಕನ್ನಡಿಯೊಡೆದು ಬಿಂಬವು
ನಕ್ಕು ನಾರುತಿದೆ ....!!
ಇನ್ನೊಮ್ಮೆ ಹುಡುಕಿ ಕೊಡಿ...!!
ಅನೈತಿಕತೆಯಲ್ಲಿ ನಗ್ನವಾದ ನೈತಿಕತೆಯನ್ನು..!!
ಕಾಸಿಗೆ ಶೀಲ ಬಿಚ್ಚಿಹೋದ ಗುಣದ ಬಟ್ಟೆಯನ್ನು..
ಎಲ್ಲಿದೆಯೋ ಹುಡುಕಿ ಕೊಡಿ..!!
ಹುಡುಕುವವರೇ ಇತ್ತ ಕೇಳಿ,
ನೇಣು ಹಾಕಿದ ನಿವೇದನೆಯ ಸಾರವನ್ನು...!!
ಬಂಜೆಯಾದ ಗರ್ಭದಲ್ಲಿ ಹುಟ್ಟದೇ ವೇದನಿಸುತ್ತಿರುವ ಅವನ ಬಯಕೆಯನ್ನು...!!!
ಕೊಳೆತ ಕೊಚ್ಚೆಯಲ್ಲಿ ಹರಿದು ಹೋದ ವಿಜ್ಞಾಪನೆಯ ಅರ್ಥವನ್ನು..!!
ಹುಡುಕುವುದಾದರೇ ಹುಡುಕಿ ಕೊಡಿ..!!
ಅವಿಜ್ಞಾನಿ
- ಅವಿಜ್ಞಾನಿ
21 Feb 2017, 07:57 am
ನಸುಕ ನಂಬಿಬಂದೆ
ತಂಪನೆನೆದು ಮನದಲ್ಲಿ,
ಇಳಿಸಂಜೆಯ ಬಾನ ರಂಗು
ಸುಖವನೀಡಿದೆ ಎದೆಯಲ್ಲಿ,
ನಾಳೆ ಮತ್ತೆ ಹುಟ್ಟಲಿ
ಹುಟ್ಟಿ ಹೂವನಗಿಸಲಿ,
ಭಾಸ್ಕರನ ಶಿಸ್ತಿನಾಟ
ಬಾಳಿಗೊಂದು ದಿವ್ಯಪಾಠ.
ಚಂದ್ರ ತಂಪನಂಬಿಬಂದೆ
ಇರುಳ ಶಬ್ಧದಲ್ಲಿ ದಟ್ಟತೆ,
ಹುರುಪು ಹೊಂದಿ,
ನಗೆಯ ತೋರಿ,
ತಾರೆಗೂಡಿ ತೋರಿದೆ,
ಶಶಿಯ ಸೊಬಗು ಮೂಡಿದೆ.
ಮರಳಿ ಮರಳಿ ಉಬ್ಬನೆತ್ತಿ ನೋಡಿ
ದಣಿವ ಕಳೆದಿವೆ ನಯನವೆರಡು ನಲಿದಿವೆ.
-ಕನ್ನಡದ ಭಕ್ತ ಕಿರಣ್
- ಕನ್ನಡದ ಭಕ್ತ
21 Feb 2017, 02:56 am
ಅಂಕಗಳ ಹೆಸರು ಹೇಳಿ
ಹಗ್ಗ ಏನೇದರು .
ಕೊರಳಿಗಾಕಿ ಬಿಗಿದುಬಿಟ್ಟು
ಸಾಯಿ ಎಂದರು .
ಜೀವನ ಬರೀ ಓದಿನಲ್ಲಿ
ಅಡಗಿಲ್ಲ .
ಓದಿನಲ್ಲೇ ಜೀವನವೆಲ್ಲ
ಮುಗಿದು ಹೋಗಲ್ಲ .
ನನ್ನಲ್ಲಿರುವ ಪ್ರತಿಭೆಯನ್ನು
ಗುರ್ತಿಸುವುದಿಲ್ಲ.
ನೊoದಾಗ ಧೈರ್ಯ
ನೀಡುವುದಿಲ್ಲ .
ಜನರ ಈ ದೋರಣಿ
ನನಗಿಡಿಸುವುದಿಲ್ಲ .
ಇವೆಲ್ಲಕ್ಕೂ ಹೆದರಿ
ನಾನು ಹಿಮ್ಮೆಟ್ಟುವುದಿಲ್ಲ .
- ಚುಕ್ಕಿ
20 Feb 2017, 10:19 pm
ಹೆಜ್ಜೆ ಸದ್ಧು ಕೇಳುವಾಗಲೆಲ್ಲ ನನ್ನ ಒಂಟಿತನ ವಯಸ್ಸಿಗೆ ಬರುತ್ತದೆ..!!
ಹಳೆಯ ಹಾಡಿಗೆ ಗೀರಿದ ಕಡ್ಡಿಯು ನೋವಿನ ನೆಂಟಸ್ತಿಕೆ ಬೆಳೆಸುತ್ತದೆ...!!
ಕಾಯುವಿಕೆಯು ಮಾಸವಾದರೆ ಅವಳೊಂದು ಶಿಲೆ ಆಗುತ್ತಾಳೆ..!!
ನನ್ನವಳೆಂದೇ ಮುದ್ರೆ ಒತ್ತುವಾಗ ಆಷಾಡಕ್ಕೆ ಕಲೆಯಾಗುತ್ತಾಳೆ...!!
ಬೆರಗು ಪದದ ಮುಖವನ್ನೊಮ್ಮೆ ಸುಮ್ಮನೇ ನೋಡಿ ಬಿಡುತ್ತೇನೆ....!!
ಇನ್ನೂ ಬೇಕೆಂಬ ಅಹವಾಲಿನ ಪಟ್ಟಿಯೊಂದು ಕಣ್ಣಿನಲ್ಲೇ ಮೆತ್ತಿ ಹೋಗುತ್ತಾಳೆ...!!
ನವಿರು ಜಪಕೆ ಹೆಸರು ಆಗಲು ಕಾದಿರುವಂತೆ ಸೋಲಿಸುತ್ತಾಳೆ...!!
ಬೇಡವೆಂದು ತೊದಲಿ ಹೋಗುವಾಗ ಹಗ್ಗ ಕಡಿದ ಹಲಿಗೆಯನ್ನು ಕೊಟ್ಟು ಹೋಗುತ್ತಾಳೆ ..!!
ಅವಿಜ್ಞಾನಿ
- ಅವಿಜ್ಞಾನಿ
20 Feb 2017, 06:50 pm