Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೂರ್,
ಮೌನ ಕತ್ತಲಾದರೆ
ಮಾತು ಬೆಳಕು..!
*
ನೂರ್,
ಅವಳೆದೆಯೂರಿಗೆ ನನ್ನ
ಕನಸಿನ ಪಯಣ ನಿರಂತರ
ಇರೋದು ಮಾತ್ರ ಒಂದಿಷ್ಟು
ನಿದಿರೆಗಳ ಅಂತರ!
*
ನೂರ್,
ವಿರಹವನ್ನು ನಾ ಪ್ರೀತಿಸಿಲ್ಲ
ವಿರಹ ನನ್ನನ್ನು
ಬಿಟ್ಟುಕೊಡುತ್ತಿಲ್ಲ ಅಷ್ಟೇ
*
ನೂರ್,
ನಿನ್ಹೆಸರಲ್ಲಿ ಮಹಲ್
ಕಟ್ಟಿರುವೆ ತೋರಿಸ ಬರಲೆಂದರೆ
ಹದಿಮೂರು ಕಲ್ಲುಗಳ ಅಡಿಯಲ್ಲಿರುವೆ.!
*
ನೂರ್,
ಪಡೆದ ಒಂದೇ ರೋಜಾ
ಜೋಪಾನ
ಗೋರಿಗೆ ಬೇಕಾಗಿದೆ
*
ನೂರ್,
ಇಂತಿಷ್ಟೇ ಪ್ರೀತಿಸಬೇಕೆಂದು
ಕರಾರು ಮಾಡದ್ದು ನಿನ್ನ ತಪ್ಪು
ನಾ ವಿರಹಿ!
*
ನೂರ್,
ಎದೆ ಬಡಿತದಲ್ಲಿ
ಹೆಸರು ಮಿಡಿಯುವುದಕ್ಕೂ
ಸುಂಕ ಕೇಳದಿರು
ಮೊದಲೇ ಸಾಲಗಾರ.!
*
ನೂರ್,
ನಿನ್ನ ಅತ್ತರಿನ
ಘಮದೊಳಗೆ
ನನ್ನಂದಿನ ಬೆವರ
ವಾಸನೆ ಮಾಸಿಹೋಗಲಿ
*
ನೂರ್,
ನೀ ಬೊಟ್ಟು ಮಾಡಿದ
ದಾರಿಯಲ್ಲೇ ಮಸಣವಿದೆ.!
*
ನೂರ್,
ಪಾದವನ್ನಿಟ್ಟು
ಕನಸೊಳಗೆ ಕಾಲಿಡು
ಕಾಲ್ಗಿತ್ತು ಓಡದಂತೆ
ಕನಸ್ಸಲ್ಲಾದರೂ ಹಿಡಿದಿರುವೆ
*
ನೂರ್,
ಎದೆಗೀರಿನ ಲೆಕ್ಕ
ಸರಿಯಾಗಿ ನೆನಪಿಡು
ಕನಸ್ಸಲ್ಲೇ ತೀರಿಸಲಿದೆ
*
ನೂರ್,
ನನ್ನ ಕನಸೆಲ್ಲ
ಸತ್ತಿದ್ದು ಮೊದಲು
ನೀ ಮೆಹಂದಿ
ಮುಟ್ಟಿದಾಗ.!
ಅವಿಜ್ಞಾನಿ
- ಅವಿಜ್ಞಾನಿ
26 Feb 2017, 08:27 am
ಮನಸೆಂಬ ನಾವಿಕನಿಲ್ಲದ ದೋಣಿಯ ಪಯಣದಲಿ
ಕನಸೆಂಬ ಕುದುರೆಯನೆರುವುದ ಮರೆತೆ..
ಜೋತೆಯಾಗಿ ಮಾಡಿದ ಪಯಣ
ಈಗ ಬರಿ ಭಾವ ತೀರ ಯಾನ.
- KBD
26 Feb 2017, 08:19 am
ನಿನ್ನ ನೆನಪು
ಮಂದ ಬೆಳಕು ಬೀರೋ
ಪುಟ್ಟ ಲಾಂದ್ರದ ಹಾಗೆ
ಕಗ್ಗತ್ತಲ್ಲಲ್ಲೂ
ಕೈಹಿಡಿದು ಮುನ್ನಡೆಸೋ
ದಾರಿ ದೀಪ!
- basavarajsirnayakpreethu
26 Feb 2017, 08:08 am
ಖಾಲಿ ಖಾಲಿ ಏಕಾಂತ
ಈ ನನ್ನ ಮೌನಗಳು,
ಮಾತಾಡುವ ನೀರೀಕ್ಷೆಗಳು,
ಅಂದು ನಸು ನಕ್ಕು ಪಿಸುಗುಟ್ಟಿದ
ಪಿಸುಮಾತುಗಳ ಕಚಗುಳಿ
ಇನ್ನು ನನ್ನೆದೆಯಲ್ಲಿದೆ
ಹೇಯ್ ಹುಡುಗಿ
ನಾ ಒಂಟಿಯಲ್ಲ ಕಣೆ
ನೀ ಬಿಟ್ಟುಹೋದ ನಿನ್ನ ಬೇಡಗಳು
ಇನ್ನು ನನ್ನ ಜೊತೆಯಲ್ಲೇ ಜೊತೆಯಾಗಿವೆ...
ಒಲವೇ ನೀನೆಲ್ಲಿರುವೆ...???
- basavarajsirnayakpreethu
25 Feb 2017, 11:52 pm
ಬರೆದೆನೊಂದು ಕವಿತೆಯ, ನೆನೆಯುತ ನಿನ್ನ ಮೋರೆಯ
ತೋರಿ ನಿನ್ನ ಮೋರೆಯ, ತೀರಿಸೆಯ ನನ್ನ ಆಸೆಯ
ತಾಳಲಾರೆನು ಇನ್ನ, ಈ ವಿರಹ ವೇದನೆಯ
ಕಲ್ಪಿಸಿ ನಿನ್ನ ಭೇಟಿಯ, ತೆಗೆದುಕೋ ನನ್ನ ಈ ವಂದನೆಯ
ಪ್ರೀತಂ
- basavarajsirnayakpreethu
25 Feb 2017, 11:42 pm
ಸಾವಿರಾರು ಸೂತ್ರಗಳು
ಹತ್ತಾರು ಹಂತಗಳು
ತಲೆ ಕೆಡಿಸುವ ಸೂಚನೆಗಳು
ನೆನಪಾಗದ ನoಬರ್ಗಳು .
ಯಾರೋ ಕಂಡುಹಿಡಿದರು
ಈ ತೆಲೆನೋವು ಸಬ್ಜೇಕ್ಟನ್ನು
ಇರುವ ಬುದ್ದಿಯಲ್ಲಾ ಉಪಯೋಗಿಸಿದರೂ
ಒಂದು ಲೆಕ್ಕವೂ ಬರ್ತಿಲ್ಲಾ .....
ಇರುವ ಜ್ಞಾನೇಂದ್ರಿಯಗಳೆಲ್ಲಾ
ನಿನಗೆ ಅರ್ಪಿಸಿದರೂ
ನೀನು ಮಾತ್ರ ಒಲಿಯುವುದಿಲ್ಲ.
ನೀನೇನು ಮಾಡಿದ್ರು
ನಾ ನಿನ್ನ ಬಿಡುವುದಿಲ್ಲ .........!!!!!!!
- ಚುಕ್ಕಿ
25 Feb 2017, 07:40 pm
ನನ್ನ ಮುದ್ದು ಚೆಲುವೆ
ನಿನ್ನ ಮೊದಲನಗುವು ಮರೆಯದ ಕ್ಷಣ
ನನ್ನ ಚೆಲುವ ಮೊಗವೆ
ನಿನ್ನ ಸೆಳೆವ ಕಣ್ಣೋಟ ರಮ್ಯಲಮಣೀಯ
ನನ್ನ ಬಾಳಿನ ಬೆಳಕೆ
ನಿನ್ನ ಭರವಸೆಯ ಮಾತುಗಳೆ ಜೀವಂತ
ನನ್ನ ಮಾನದ ಅರಸಿ
ನಿನ್ನ ಅಕ್ಕರೆಯ ಪರಿಯೆ ಶಾಶ್ವಾತ
ನನ್ನ ಬಣ್ಣದ ಬಂಗಾರಿ
ನಿನ್ನ ಸಮ್ಮೋಹಿತ ಮೌನ ಅಮ್ರುತ
ನನ್ನ ಒಲವ ಗೀತೆ
ನಿನ್ನ ತಾಳ್ಮೆಯ ನುಡಿ ಸಂಗೀತ
ನನಗೆ ನೀನು ನಿನಗೆ ನಾನು ಹಾಲುಜೇನು
ಕೂಡಿಬಾಳುವಭಾವಯಾನದಲಿ ನಾನುನೀನು
- shree
25 Feb 2017, 06:00 pm
ಅಂಕಗಣಿತ, ಬೀಜಗಣಿತ, ರೇಖಾಗಣಿತ
ಲೆಕ್ಕಗಳಿಗೆ ಉತ್ತರ ಸಿಗುವುದು
ಸರಳವಾಗಿ ಗುಣಿಸುತ,
ಅಂಕಿಗಳನ್ನು ಕೂಡಿಸುತ,
ಸಂಖ್ಯೆಗಳನ್ನು ಕಳೆಯುತ,
ರೇಖೆಗಳನ್ನು ಎಳೆಯುತ,
ಸಾಗುವುದು ಸುಂದರ ಗಣಿತ.
ಎಲ್ಲ ಭಾಷೆಗೂ ಒಂದೆ ಸೂತ್ರ ತೋರುವ ಅಧ್ಭುತ,
ಜಗದೆಲ್ಲೆಡೆ ತುಂಬಿದೆ, ಸರಳ ದಾರಿ ತೋರುತ.
- ರವೀಂದ್ರಬಾಪೂರ(GNL)
25 Feb 2017, 04:50 pm
ನಾನು ಜೀವಿಸುತ್ತಿರುವೇ
ಒಂದು ಸುಂದರ ಲೋಕದಲ್ಲಿ
ಅದರ ಹೆಸರು ಕವನ ......
ಇಲ್ಲಿ ನನ್ನ ಯಾರು ಬೈಯಲ್ಲ,
ಕೇಳಲ್ಲ ,ಹೋಡಿಯಲ್ಲ ......
ಇಲ್ಲಿ ನನಗೆ ಸಾವಿರಾರು
ಮಿತ್ರರು ಅವರ ಹೆಸರೆ
ಭಾವನೆಗಳು...................
ನಗುವಾದರು ಅವರ ಜೊತೆ
ಅಳುವಾದರು ಅವರ ಜೊತೆ .
ಇಲ್ಲಿ ನಾನು ಎಂದಿಗೂ ಒಂಟಿಯಲ್ಲ
ನನ್ನ ಸ್ನೇಹಿತರು ಎಲ್ಲಿಗೂ ಬಿಟ್ಟು
ಹೋಗಲ್ಲ .........................
ಈ ಕವನ ಓದುವವರೇಲ್ಲ ನನ್ನ
ಸ್ನೆಹಿತರೆ ಯಾಕೇಂದರೇ ಇದೆ
ನನ್ನ ಕವನ ಲೋಕವೆಲ್ಲವೆ.......
- ಚುಕ್ಕಿ
25 Feb 2017, 03:40 pm
ಮಾತು ದೂರವಾಗಿ ಬಾವನೆ ಮೌನವಾಗಿ
ದೂರವಾಯಿತೆನ್ನ ಒಂದಾರ......
ಮಗುಳ್ನಗೆ ಕಂಡು ಬಾವನೆಗಳು ಬಳಿಬಂದು
ನನ್ನತ್ತಿರ ಬಂದಾಯ್ತೆನ್ನ ಒಂದಾರ.........
ಚಲಿಸುತ್ತಿದೆ ಮತ್ತೋಮ್ಮೆ ಮಾತೆ ಇಲ್ಲದ
ಬಾವನೆಗಳು ಎಲ್ಲಿಗೋ ಕಾಣೆಯಾದಂತೆ
ನನ್ನ ಕಣ್ಣುಗಳಲ್ಲಿಯೇ ಕಾಣದಂತೆ....
ಕಾಣದಾಚೆಗೆ ಸಾಗುತ್ತಿದೆ ಇಂದೆನ್ನ
ಒಂದಾರ.............................
- ಅಗಸ್ತ್ಯ
25 Feb 2017, 03:37 pm